ಕರ್ನಾಟಕದಾದ್ಯಂತ ಇರುವ ಎಲ್ಲಾ ಉದ್ಯೋಗ ಆಕಾಂಕ್ಷಿಗಳಿಗೆ ಸಿಹಿ ಸುದ್ದಿ ಇದೆ. ಕರ್ನಾಟಕ ಜಿಲ್ಲಾ ಪಂಚಾಯತ್ ರಾಯಚೂರಿನಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ಖಾಲಿ ಇರುವ ಕೆಲ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಅರ್ಹರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿದೆ. ಈ ಹುದ್ದೆಗಳ ಆಯ್ಕೆಗೆ ಸಂಬಂಧಿಸಿದಂತೆ ಪ್ರಕಟಣೆ ಕೂಡ ಹೊರಡಿಸಿ ಅರ್ಜಿ ಆಹ್ವಾನ ಮಾಡಲಾಗಿದೆ.
ಪ್ರಕಟಣೆಯಲ್ಲಿ ಹೊರಡಿಸಿರುವ ಮೂಲಕ ವಿದ್ಯಾರ್ಹತೆ ಹಾಗೂ ವಯೋಮಿತಿ ಹಾಗೂ ಉಳಿದ ಮಾನದಂಡಗಳನ್ನು ಪೂರೈಸಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಉದ್ಯೋಗ ಪಡೆದುಕೊಳ್ಳಲು ಪ್ರಯತ್ನಿಸಬಹುದಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರಿಗೆ ಅನುಕೂಲತೆ ಮಾಡಿಕೊಳ್ಳುವ ಸಲುವಾಗಿ ಹುದ್ದೆಗಳಿಗೆ ಸಂಬಂಧಿಸಿದ ಹಾಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿ ಕೊಡುತ್ತಿದ್ದೇವೆ. ಈ ವಿವರವನ್ನು ತಿಳಿದುಕೊಳ್ಳಲು ಲೇಖನವನ್ನು ಪೂರ್ತಿಯಾಗಿ ಓದಿ.
ಉದ್ಯೋಗ ವಿಭಾಗ:- ಜಿಲ್ಲಾ ಪಂಚಾಯತ್
ಉದ್ಯೋಗ ಸ್ಥಳ:- ರಾಯಚೂರು
ಹುದ್ದೆಗಳ ಸಂಖ್ಯೆ:- 8
ಹುದ್ದೆಗಳ ವಿವರ:-
● ಡಿಸ್ಟ್ರಿಕ್ಟ್ GIS ಎಕ್ಸ್ಪರ್ಟ್ – 02 ಹುದ್ದೆಗಳು
● ಬ್ಲಾಕ್ GIS ಎಕ್ಸ್ಪರ್ಟ್ – 02 ಹುದ್ದೆಗಳು
● ಬ್ಲಾಕ್ NRI ಎಕ್ಸ್ಪರ್ಟ್ – 02 ಹುದ್ದೆಗಳು
● ಬ್ಲಾಕ್ ಲೈವ್ ಲಿ ಹುಡ್ ಎಕ್ಪರ್ಟ್ – 02 ಹುದ್ದೆಗಳು.
ವೇತನ ಶ್ರೇಣಿ:- ಈ ಮೇಲ್ಕಂಡ ಹುದ್ದೆಗಳಿಗೆ ಆಯ್ಕೆ ಆಗುವ ಅಭ್ಯರ್ಥಿಗಳಿಗೆ ಹುದ್ದೆಗಳ ಅನುಸಾರವಾಗಿ ಮಾಸಿಕವಾಗಿ 30,000 ದಿಂದ 35,000 ವೇತನ ಸಿಗುತ್ತದೆ.
ವಯೋಮಿತಿ:-
● ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 18 ವರ್ಷಗಳು.
● ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ 40 ವರ್ಷಗಳು.
ಶೈಕ್ಷಣಿಕ ವಿದ್ಯಾರ್ಹತೆ:-
● ಡಿಸ್ಟ್ರಿಕ್ಟ್ GIS ಎಕ್ಸ್ಪರ್ಟ್ – M.Tec/ M.E / M.Sc/ B.E /B.Tec / ಸ್ನಾತಕೋತ್ತರ ಪದವಿ
● ಬ್ಲಾಕ್ GIS ಎಕ್ಸ್ಪರ್ಟ್ – M.Tec/ M.E / M.Sc/ B.E /B.Tec / ಸ್ನಾತಕೋತ್ತರ ಪದವಿ
●:ಬ್ಲಾಕ್ NRI ಎಕ್ಸ್ಪರ್ಟ್ – B.Tec / ಸಿವಿಲ್ ಇಂಜಿನಿಯರಿಂಗ್/ ಡಿಪ್ಲೋಮಾ ಇನ್ ಸಿವಿಲ್ ಇಂಜಿನಿಯರಿಂಗ್
● ಬ್ಲಾಕ್ ಲೈವ್ ಲಿ ಹುಡ್ ಎಕ್ಪರ್ಟ್ – ಸ್ನಾತಕೋತ್ತರ ಪದವಿ
ಅರ್ಜಿ ಶುಲ್ಕ:- ಈ ಮೇಲ್ಕಂಡ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಯಾವುದೇ ರೀತಿ ಅರ್ಜಿಶುಲ್ಕ ಪಾವತಿಸುವ ಅವಶ್ಯಕತೆ ಇರುವುದಿಲ್ಲ.
ಅರ್ಜಿ ಸಲ್ಲಿಸುವ ವಿಧಾನ:-
● ರಾಯಚೂರು ಜಿಲ್ಲಾ ಪಂಚಾಯತ್ ನಲ್ಲಿ ಖಾಲಿ ಇರುವ ಈ ಹುದ್ದೆಗಳಿಗೆ ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು.
● ಅಭ್ಯರ್ಥಿಗಳು ಜಿಲ್ಲಾ ಪಂಚಾಯತ್ ಅಧಿಕೃತ ವೆಬ್ಸೈಟ್ ಗೆ ಭೇಟಿ ಕೊಟ್ಟು ಅರ್ಜಿ ಸಲ್ಲಿಸುವ ಆಯ್ಕೆಯಲ್ಲಿ ಅರ್ಜಿ ಫಾರ್ಮ್ ಭರ್ತಿ ಮಾಡಿ ಸಲ್ಲಿಸಿ, ಅದಕ್ಕೆ ಪೂರಕವಾದ ಶೈಕ್ಷಣಿಕ ವಿದ್ಯಾರ್ಹತೆ ಮತ್ತು ವಯೋಮಿತಿ, ಕೆಲಸದ ಅನುಭವ ಮುಂತಾದ ಪ್ರಮಾಣ ಪತ್ರಗಳು ಜೊತೆಗೆ ಗುರುತು ಹಾಗೂ ವಿಳಾಸಕ್ಕೆ ಸಂಬಂಧಪಟ್ಟ ಪುರಾವೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.
● ಅಂತಿಮವಾಗಿ ಅರ್ಜಿ ಸಲ್ಲಿಸಿರುವ ಸ್ವೀಕೃತಿ ಪ್ರತಿಯ ಪ್ರಿಂಟ್ ಔಟ್ ಅಥವಾ ರೆಫರೆನ್ಸ್ ನಂಬರನ್ನು ಭವಿಷ್ಯದ ಬಳಕೆಗಾಗಿ ಬರೆದು ಇಟ್ಟಕೊಳ್ಳಬೇಕು.
ಆಯ್ಕೆ ದಿನಾಂಕ:-
ದಾಖಲೆಗಳ ಪರಿಶೀಲನೆ ನಡೆಸಿ ಅದರಲ್ಲಿ ಆಯ್ಕೆ ಆದ ಅಭ್ಯರ್ಥಿಗಳು ಪಡೆದಿರುವ ಶೈಕ್ಷಣಿಕ ಅಂಕಗಳು ಮತ್ತು ಕೆಲಸದ ಅನುಭವದ ಮೇಲೆ ಅರ್ಹತಾ ಪಟ್ಟಿಯನ್ನು ತಯಾರಿಸಿ ಅವರಿಗೆ ಸಂದರ್ಶನ ನಡೆಸಿ ಆಯ್ಕೆ ಮಾಡಿಕೊಳ್ಳಲಾಗುವುದು.
ಪ್ರಮುಖ ದಿನಾಂಕಗಳು:-
● ಅರ್ಜಿ ಸಲ್ಲಿಸಲು ಆರಂಭ ದಿನಾಂಕ – 15.07.2023.
● ಅರ್ಜಿ ಸಲ್ಲಿಸಲು ಕಡೆಯ ದಿನಾಂಕ – 24.07.2023.
● ತಾತ್ಕಾಲಿಕ ಮೆರಿಟ್ ಪಟ್ಟಿ ಪ್ರಕಟ ದಿನಾಂಕ – 10.08.2023.