ನಿಮಗೆ ಬರುತ್ತಿದ್ದ ಪೆನ್ಷನ್ ಸ್ಟಾಪ್ ಆಗಿದೆಯೇ.? ಇದಕ್ಕೆ ಕಾರಣ ಏನು ಮತ್ತೆ ಪೆನ್ಷನ್ ಬರುವಂತೆ ಮಾಡುವುದು ಹೇಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

 

ಸಂಧ್ಯಾ ಸುರಕ್ಷಾ ಯೋಜನೆ, ಅಂಗವಿಕಲ ವೇತನ, ವಿಧವಾ ವೇತನ, ಇಂದಿರಾ ಗಾಂಧಿ ವೃದ್ಯಾಪ್ಯ ವೇತನ, ಮನಸ್ವಿನಿ ಪಿಂಚಣಿ ಇನ್ನು ಮುಂತಾದ ಸಾಮಾಜಿಕ ಭದ್ರತಾ ಯೋಜನೆಗಳಿಂದ ಹಲವರು ಪಿಂಚಣಿ ಪಡೆಯುತ್ತಿರುತ್ತಾರೆ. ಸರ್ಕಾರವು ಇವರಿಗೆ ಕನಿಷ್ಠ ಮೊತ್ತದ ಮಾಸಿಕ ಪಿಂಚಣಿ ನೀಡುವ ಮೂಲಕ ಆರ್ಥಿಕ ನೆರವನ್ನು ನೀಡುತ್ತಿದೆ. ಕಾರಣಾಂತರಗಳಿಂದ ಇದು ಸ್ಥಗಿತಗೊಂಡಿರುತ್ತದೆ.

ಆದರೆ ಅದರ ಕಾರಣಗಳನ್ನು ಅನೇಕರು ತಿಳಿದುಕೊಳ್ಳದೆ ಸಮಸ್ಯೆಗೆ ಒಳಗಾಗಿರುತ್ತಾರೆ. ನಿಮ್ಮ ಕುಟುಂಬದಲ್ಲಿ ಅಥವಾ ಪರಿಚಯಸ್ಥರಲ್ಲಿ ಯಾರಿಗಾದರೂ ಈ ರೀತಿ ಸಮಸ್ಯೆಯಾಗಿದ್ದರೆ ಪಿಂಚಣಿ ವಿಷಯಕ್ಕೆ ಸಂಬಂಧಪಟ್ಟ ದೂರುಗಳಿದ್ದರೆ ಅಥವಾ ಗೊಂದಲಗಳಿದ್ದರೆ 155245 ಈ ಸಂಖ್ಯೆಗೆ ಉಚಿತವಾಗಿ ಕರೆ ಮಾಡಿ ಸಲಹೆ ಪಡೆಯಬಹುದು. ಪಿಂಚಣಿ ಸ್ಥಗಿತಗೊಳ್ಳಲು ಇರುವ ಕೆಲವು ಕಾರಣಗಳು ಮತ್ತು ಪರಿಹಾರಗಳ ಬಗ್ಗೆ ಈ ಅಂಕಣದಲ್ಲಿ ತಿಳಿಸಿಕೊಡುವ ಪ್ರಯತ್ನ ಮಾಡುತಿದ್ದೇವೆ.

● ಸರ್ಕಾರ ಹಿಂದೊಮ್ಮೆ ಪಿಂಚಣಿ ವಿಭಾಗಕ್ಕೆ ನಿಮ್ಮ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ವಿವರ ಸಲ್ಲಿಸಿ ಎಂದು ಕೇಳಿತ್ತು ಆ ಸಮಯದಲ್ಲಿ ನೀವು ಈ ಪ್ರಕ್ರಿಯೆ ಪೂರ್ತಿಗೊಳಿಸದೆ ಇದ್ದರೆ ಸ್ಥಗಿತ ಆಗಿರಬಹುದು ನೀವು ಮರು ಅರ್ಜಿ ಸಲ್ಲಿಸಿ ದಾಖಲೆಗಳನ್ನು ಸಲ್ಲಿಸಿದರೆ ಎಂದಿನಂತೆ ನಿಮಗೆ ಪಿಂಚಣಿ ಬರುತ್ತದೆ.

● ನಿಮ್ಮ ಪಿಂಚಣಿಗೆ ಎರಡು ಬ್ಯಾಂಕ್ ಖಾತೆ ಸೇವ್ ಆಗಿದ್ದರೆ ಆಗಲು ಕೂಡ ಗೊಂದಲಗಳಾಗಿ ಸ್ಥಗಿತಗೊಂಡಿರಬಹುದು. ಇಂತಹ ಸಂದರ್ಭದಲ್ಲಿ ನೀವು ನಿಮ್ಮ ತಹಶೀಲ್ದಾರ್ ಕಚೇರಿಗೆ ಭೇಟಿ ಕೊಟ್ಟು ಪಿಂಚಣಿ ವಿಭಾಗಕ್ಕೆ ಹೋಗಿ ಇದರ ಬಗ್ಗೆ ಚೆಕ್ ಮಾಡಿಸಿ ಪ್ರೆಸೆಂಟ್ ಇರುವ ಬ್ಯಾಂಕ್ ಖಾತೆ ವಿವರವನ್ನು ಸಲ್ಲಿಸಬೇಕು.

● ಒಂದು ವೇಳೆ ನೀವು ಪಿಂಚಣಿಗೆ ಅರ್ಜಿ ಸಲ್ಲಿಸಿದಾಗ ಅಥವಾ ಬ್ಯಾಂಕ್ ಖಾತೆ ಲಿಂಕ್ ಮಾಡಿಸಿದಾಗ ನೆಟ್ವರ್ಕ್ ಸಮಸ್ಯೆಯಿಂದ ನಿಮ್ಮ ಸಲ್ಲಿಕೆ ಪೂರ್ತಿ ಆಗದೇ ಇದ್ದ ಸಂದರ್ಭದಲ್ಲಿ ಕೂಡ ಈ ರೀತಿ ಸಮಸ್ಯೆ ಆಗಿರುತ್ತದೆ.

● ನಿಮ್ಮ ಆಧಾರ್ ಕಾರ್ಡ್ ಮಾಹಿತಿ, ಬ್ಯಾಂಕ್ ಖಾತೆ ವಿವರ ಮತ್ತು ನಿಮಗೆ ಪಿಂಚಣಿ ಮಂಜೂರು ಆಗಿರುವ ಪತ್ರದಲ್ಲಿ ಇರುವ ಹೆಸರು ಮುಂತಾದ ವಿವರಗಳು ಹೊಂದಾಣಿಕೆ ಆಗದೆ ಇದ್ದ ಸಂದರ್ಭದಲ್ಲಿ ಕೂಡ ನಿಮ್ಮ ಪಿಂಚಣಿ ಸ್ಥಗಿತಗೊಂಡಿರುತ್ತದೆ. ಇಂತಹ ಸಂದರ್ಭಗಳಲ್ಲಿ ನೀವು ಇವುಗಳನ್ನು ತಿದ್ದುಪಡಿ ಮಾಡಿಸಿಕೊಂಡು ಮತ್ತೊಮ್ಮೆ ತಹಶೀಲ್ದಾರ್ ಕಚೇರಿಗೆ ಹೋಗಿ ಪಿಂಚಣಿ ವಿಭಾಗದಲ್ಲಿ ಅರ್ಜಿ ಸಲ್ಲಿಸಿದರೆ ಮೊದಲಿನಂತೆ ಪಿಂಚಣಿ ಬರುತ್ತದೆ.

● ನಿಮ್ಮ ಆಧಾರ್ ಕಾರ್ಡ್ ಅಥವಾ ಬ್ಯಾಂಕ್ ಖಾತೆ ವಿವರದಲ್ಲಿ ನೀವು ತಿದ್ದುಪಡಿ ಮಾಡಿಸಿದರೆ ತಪ್ಪದೆ ಪಿಂಚಣಿ ವಿಭಾಗದಲ್ಲೂ ಕೂಡ ಅಪ್ ಡೇಟ್ ಮಾಡಿಸಬೇಕು ಇಲ್ಲವಾದಲ್ಲಿ ಈ ಸಮಸ್ಯೆ ಉಂಟಾಗುತ್ತದೆ.

● 15 ವರ್ಷಗಳ ಹಿಂದಿನಿಂದ ಪಿಂಚಣಿ ಪಡೆಯುತ್ತಿರುವವರು ಆಧಾರ್ ದಾಖಲಾತಿಯನ್ನು ವಿಭಾಗಕ್ಕೆ ಕಡ್ಡಾಯವಾಗಿ ತಲುಪಿಸಬೇಕು, ಇದು ತಪ್ಪಿದಲ್ಲಿ ಸಮಸ್ಯೆ ಆಗಿರುತ್ತದೆ. ಜೊತೆಗೆ ಮೊದಲು ಅಂಚೆ ಕಚೇರಿ ಮೂಲಕ ನಗದು ಪಿಂಚಣಿ ನೀಡಲಾಗುತ್ತಿತ್ತು. ಈಗ ನೇರವಾಗಿ ಬ್ಯಾಂಕ್ ಅಕೌಂಟ್ ಗೆ ಹಾಕುತ್ತಿರುವುದಂದ ಅಕೌಂಟ್ ಇಲ್ಲದೆ ಇದ್ದ ವ್ಯಕ್ತಿಗಳ ಪಿಂಚಣಿ ಸ್ಥಗಿತಗೊಂಡಿರಬಹುದು. ಕೂಡಲೇ ಉಳಿತಾಯ ಖಾತೆ ತೆರೆದು ಆ ವಿವರವನ್ನು ಪಿಂಚಣಿ ವಿಭಾಗಕ್ಕೆ ಸಲ್ಲಿಸಿ.

● ಸುಳ್ಳು ಮಾಹಿತಿಗಳನ್ನು ಕೊಟ್ಟು ನೀವು ಪೆನ್ಷನ್ ಪಡೆಯುತ್ತಿದ್ದರೆ ಆ ಕಾರಣದಿಂದ ಕೂಡ ನಿಮ್ಮ ಪೆನ್ಷನ್ ಸ್ಥಗಿತಗೊಂಡಿರುತ್ತದೆ.
● ಯಾವುದೇ ಕಾರಣಗಳಿಂದ ಪೆನ್ಷನ್ ಬಂದ್ ಆಗಿದ್ದರೂ ನಿಮ್ಮ ತಾಲ್ಲೂಕು ಕಚೇರಿಯಲ್ಲಿ ಪಿಂಚಣಿ ವಿಭಾಗಕ್ಕೆ ಹೋಗಿ ನಿಮಗೆ ಪಿಂಚಣಿ ಮಂಜೂರು ಆಗಿರುವ ಪತ್ರ, ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ವಿವರವನ್ನು ಸಲ್ಲಿಸಿ ಮನವಿ ಸಲ್ಲಿಸಿ ಆಗ ಮೊದಲಿನಂತೆ ಮತ್ತೆ ಪೆನ್ಷನ್ ಬರುತ್ತದೆ.

Leave a Comment

%d bloggers like this: