ಈಗಿನ ಕಾಲದಲ್ಲಿ ಒಂದು ಚಿಕ್ಕದಾದ ಶೀಟ್ ಮನೆ ನಿರ್ಮಿಸಬೇಕು ಎಂದರು ಕನಿಷ್ಠ ಪಕ್ಷ ಐದು ಲಕ್ಷ ಆದರೂ ಮಿನಿಮಮ್ ಬಜೆಟ್ ಬೇಕೇ ಬೇಕು. ಈ ರೀತಿ ಹಣಕಾಸಿನ ತೊಡಕಿನಿಂದಾಗಿ ಅನೇಕರ ಸ್ವಂತ ಮನೆ ಕನಸು ಹಾಗೆ ಉಳಿದು ಹೋಗಿದೆ. ಆದರೆ ಇಲ್ಲೊಂದು ಕಂಪನಿ ಅತಿ ಕಡಿಮೆ ವೆಚ್ಚದಲ್ಲಿ ವಾಸಿಸಲು ಯೋಗ್ಯವಾದ ಎಲ್ಲಾ ಫೆಸಿಲಿಟಿ ಇರುವ ಮತ್ತು ಲುಕ್ ಅಲ್ಲು ಕೂಡ ಯಾವುದೇ ಕಾಂಪ್ರಮೈಸ್ ಇಲ್ಲದೆ ತುಂಬಾ ಅಟ್ರಾಕ್ಟಿವ್ ಆಗಿ ಕಾಣುವ ವಿನ್ಯಾಸದ ಮನೆಯನ್ನು 1500sq.ft ಅಲ್ಲಿ ಎರಡೇ ಲಕ್ಷಕ್ಕೆ ಕಟ್ಟಿ ಕೊಡುತ್ತಿದ್ದಾರೆ.
ಕನಿಷ್ಠ ಎರಡು ಲಕ್ಷ ವೆಚ್ಚದಲ್ಲಿ ಆರಂಭವಾಗುವ ಈ ಮನೆಯನ್ನು ನಿಮ್ಮ ಆಸಕ್ತಿಗೆ ಹಾಗೂ ವಿನ್ಯಾಸಕ್ಕೆ ತಕ್ಕ ಹಾಗೆ ಅನುಕೂಲತೆ ಇದ್ದರೆ ಹೆಚ್ಚು ಹಣ ಕೊಟ್ಟು ಇನ್ನಷ್ಟು ವಿಶಾಲವಾಗಿ ಹಾಗೂ ಸುಂದರವಾಗಿ ಮಾಡಿಕೊಳ್ಳಬಹುದು. ಆಕರ್ಷಣ್ ಇಂಡಸ್ಟ್ರೀಸ್ ಎನ್ನುವ ಕಂಪನಿಯು ಈ ರೀತಿ ಜನರಿಗೆ ಕಡಿಮೆ ವೆಚ್ಚಕ್ಕೆ ಅವರಿಗೆ ಇಚ್ಛೆಗೆ ತಕ್ಕಂತ ಮನೆ ನಿರ್ಮಾಣ ಮಾಡಿಕೊಡುತ್ತಿದ್ದಾರೆ.
ಕರ್ನಾಟಕದಲ್ಲಿ ಪುತ್ತೂರು ಬಳಿ ಅನೇಕ ಮನೆಗಳನ್ನು ಇವರು ನಿರ್ಮಿಸಿದ್ದಾರೆ ಆ ಭಾಗಕ್ಕೆ ಭೇಟಿ ಕೊಟ್ಟರೆ ನೀವು ಲೈವ್ ಆಗಿ ಈ ರೀತಿ ಮನೆಗಳು ಹೇಗೆ ಇರುತ್ತವೆ ಎಂದು ನೋಡಬಹುದು. ಫ್ರೀ ಫ್ಯಾಬ್ರಿಕೇಟೆಡ್ ವಾಲ್ ಗಳಿಂದ ಇಂತಹ ಮನೆಗಳನ್ನು ನಿರ್ಮಿಸಿರುತ್ತಾರೆ. ಆದ ಕಾರಣಕ್ಕೆ ಮೂರೇ ದಿನಗಳಲ್ಲಿ ನಿಮಗೆ ನಿಮ್ಮ ಸ್ವಂತ ಮನೆ ಸಿಕ್ಕಿ ಬಿಡುತ್ತದೆ. ಮೂರೇ ದಿನಗಳಲ್ಲಿ ನಿರ್ಮಾಣ ಆಗಿದೆ ಎನ್ನುವ ಮಾತ್ರಕ್ಕೆ ಇದರ ಗುಣಮಟ್ಟದಲ್ಲಿ ಯಾವುದೇ ಕಾಂಪ್ರಮೈಸ್ ಇಲ್ಲ.
ಸಾಮಾನ್ಯ ಕನ್ಸ್ಟ್ರಕ್ಷನ್ ಮನೆ ಅಷ್ಟೇ ಇದು ಗಟ್ಟಿ ಮುಟ್ಟಾಗಿ ಇರುತ್ತದೆ. ಯಾವುದೇ ಬಿರುಗಾಳಿ ಹಾಗೂ ಸಿಡಿಲಿಗೂ ಜಗ್ಗದ ರೀತಿ ಫ್ರೀ ಫ್ಯಾಬ್ರಿಕೇಟೆಡ್ ವಾಲ್ ಗಳನ್ನು ತಯಾರು ಮಾಡಲಾಗಿರುತ್ತದೆ. ಅದನ್ನು ನಿಮ್ಮ ಇಷ್ಟದ ವಿನ್ಯಾಸಕ್ಕೆ ಜೋಡಿಸುತ್ತಾರೆ ಅಷ್ಟೇ. ಪತಿ ಪತ್ನಿ ಇಬ್ಬರು ಪುಟ್ಟ ಮಕ್ಕಳು ಅಂದರೆ ನಾಲ್ಕು ಜನ ವಾಸವಿರುವವರು ಇಂತಹ ಮನೆಗಳಲ್ಲಿ ನೆಮ್ಮದಿಯಾಗಿ ಬದುಕಬಹುದು. ಒಂದು ಅಡುಗೆ ಮನೆ, ಒಂದು ಅಟ್ಯಾಚ್ ಬಾತ್ರೂಮ್ ಹಾಗೂ ವಿಶಾಲವಾದ ಹಾಲ್ ಮತ್ತು ಒಂದು ಬೆಡ್ರೂಮ್ ಅನ್ನು ಇದು ಹೊಂದಿರುತ್ತದೆ.
ಹಾಲ್ ನಲ್ಲಿ ವಿಶಾಲವಾಗಿ ಕಿಟಕಿಗಳುಳ್ಳ ಮನೆ ಮುಂದೆ ಅಟ್ರಾಕ್ಟಿವ್ ಆಗಿ ಕಾಣುವ ಬಾಲ್ಕನಿ ಇರುವ ಚಂದದ ಮನೆ ನಿಮಗೆ ಈ ವೆಚ್ಚದಲ್ಲಿ ಸಿಗುತ್ತದೆ. ಇದು ಟಿನಿ ಹೌಸ್ ಆಗಿದ್ದು, ನೀವೇನಾದರೂ ಬ್ಯಾಚುಲರ್ಗಳಿಗೆ ಬಾಡಿಗೆ ಕೊಡಲು ಯೋಚಿಸುತ್ತಿದ್ದರೆ ಈ ರೀತಿ ಮನೆ ನಿರ್ಮಿಸಿ ಕೊಡಬಹುದು ಅಥವಾ ನೀವೇ ತೋಟದಲ್ಲಿ, ಜಮೀನಿನಲ್ಲಿ ಮನೆ ನಿರ್ಮಾಣ ಮಾಡಿಕೊಳ್ಳಬೇಕು ಎಂದರೆ ಈ ರೀತಿ ಮನೆ ನಿರ್ಮಾಣ ಮಾಡಿಕೊಳ್ಳಬಹುದು.
ಯಾರಿಗಾದರೂ ಕಡಿಮೆ ವೆಚ್ಚದಲ್ಲಿ ಮನೆ ನಿರ್ಮಿಸಿ ಉಡುಗೊರೆಯಾಗಿ ಕೊಡಬೇಕು ಎಂದಿದ್ದರೆ ಆಗಲು ಕೂಡ ಈ ರೀತಿ ಮನೆ ಕೊಟ್ಟರೆ ಅವರು ಇರುವವರೆಗೂ ಕೂಡ ನಿಮ್ಮನ್ನು ನೆನೆಸಿಕೊಳ್ಳುತ್ತಾರೆ ಅಷ್ಟು ಸುಂದರವಾಗಿ ಹಾಗೂ ಅನುಕೂಲತೆ ಇರುವ ಮನೆ ಇದಾಗಿರುತ್ತದೆ. 06364143375 / 09341557370 / 0934155731 ಈ ಸಂಖ್ಯೆಗಳಿಗೆ ಕರೆ ಮಾಡಿದರೆ ಇಂತಹ ಮನೆಗಳ ಬಗ್ಗೆ ಹೆಚ್ಚು ಮಾಹಿತಿ ಕೊಡುತ್ತಾರೆ. ಆಸಕ್ತಿ ಇದ್ದರೆ ನೀವು ಇರುವ ಸ್ಥಳಕ್ಕೆ ಬಂದು ನಿಮಗೂ ಸಹ ಇಂತಹ ಮನೆಗಳನ್ನು ನಿರ್ಮಿಸಿ ಕೊಡುತ್ತಾರೆ.