ಜನನ ಪ್ರಮಾಣ ಪತ್ರವನ್ನು ಆನ್ಲೈನ್ ನಲ್ಲಿ ಡೌನ್ಲೋಡ್ ಮಾಡುವ ಸುಲಭ ವಿಧಾನ.!

 

ಜನನ ಪ್ರಮಾಣ ಪತ್ರ ಎನ್ನುವುದು ಈಗ ವ್ಯಕ್ತಿಗೆ ತನ್ನ ಜೀವನಪರ್ಯಂತ ಬೇಕಾಗುವ ಅಗತ್ಯ ದಾಖಲೆ. ಆಧಾರ್ ಕಾರ್ಡ್ ಮಾಡಿಸಲು, ಮಗುವನ್ನು ಶಾಲೆಗೆ ಸೇರಿಸಲು ಬೇಕಾಗುವ ಈ ಜನನ ಪ್ರಮಾಣ ಪತ್ರ ನಂತರ ಅನೇಕ ಖಾಸಗಿ ಹಾಗೂ ಸರ್ಕಾರಿ ವಲಯದ ಕೆಲಸಗಳಿಗಾಗಿ ಬೇಕಾಗುತ್ತದೆ.

ಇಂತಹ ಜನನ ಪ್ರಮಾಣ ಪತ್ರ ಕೆಲವೊಮ್ಮೆ ಕಳೆದುಹೋಗುತ್ತದೆ ಅಥವಾ ಹೆಚ್ಚಿನ ಪ್ರತಿ ಬೇಕಾಗುತ್ತದೆ ಅಂತಹ ಸಮಯದಲ್ಲಿ ಸುಲಭವಾಗಿ ಆನ್ಲೈನಲ್ಲಿ ಡೌನ್ಲೋಡ್ ಮಾಡಿಕೊಳ್ಳುವ ವಿಧಾನವನ್ನು ತಿಳಿಸಿ ಕೊಡುತ್ತಿದ್ದೇವೆ. ಇದಕ್ಕಾಗಿ ರಿಜಿಸ್ಟರ್ ನಂಬರ್ ಮರೆತು ಹೋಗಿದ್ದರೂ ಮಗುವಿನ ಹೆಸರು, ಹುಟ್ಟಿದ ದಿನಾಂಕ, ತಂದೆ ತಾಯಿ ಹೆಸರಿನ ಮೂಲಕ ಸುಲಭವಾಗಿ ಇದನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.

● ಗೂಗಲ್ ಅಲ್ಲಿ ನ್ಯಾಷನಲ್ ಪೋರ್ಟಲ್ ಆಫ್ ಇಂಡಿಯಾ ಎಂದು ಸರ್ಚ್ ಮಾಡಿ ಒಂದು ಲಿಂಕ್ ಬರುತ್ತದೆ ಅದನ್ನು ಕ್ಲಿಕ್ ಮಾಡಿ ಅಫೀಷಿಯಲ್ ಪೇಜ್ ಗೆ ಹೋಗಿ.
● ಮೆನು ಬಾರ್ ಅಲ್ಲಿ ಬರ್ತ್ ಸರ್ಟಿಫಿಕೇಟ್ ಎನ್ನುವ ಆಪ್ಷನ್ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.
● ರಾಜ್ಯಗಳ ಲಿಂಕ್ ಲಿಸ್ಟ್ ಇರುತ್ತವೆ. ಆ ಲಿಸ್ಟ್ ಅಲ್ಲಿ ನಿಮ್ಮ ರಾಜ್ಯವನ್ನು ಸೆಲೆಕ್ಟ್ ಮಾಡಿ.

● ಅಪ್ಲಿಕೇಶನ್ ಫಾರ್ ಬರ್ತ್ ಸರ್ಟಿಫಿಕೇಟ್ ಕರ್ನಾಟಕ ಎನ್ನುವುದರ ಮೇಲೆ ಕ್ಲಿಕ್ ಮಾಡಿ.
● ಸಿಟಿಜನ್ ಸರ್ವಿಸ್ ಎನ್ನುವುದು ಓಪನ್ ಆಗುತ್ತದೆ, ಅದರಲ್ಲಿ ಬರ್ತ್ ಸರ್ಟಿಫಿಕೇಟ್ ಅಪ್ಲೈ ಆನ್ಲೈನ್ ಆಪ್ಷನ್ ಇರುತ್ತದೆ ಕ್ಲಿಕ್ ಮಾಡಿ.
● ಈಗಾಗಲೇ ರಿಜಿಸ್ಟ್ರರ್ ಆಗಿದ್ದರೆ ಮೊಬೈಲ್ ನಂಬರ್ ಹಾಕಿ ಕ್ಯಾಪ್ಚಾ ಎಂಟ್ರಿ ಕೊಟ್ಟು ಲಾಗ್ ಇನ್ ಆಗಿ, ಇಲ್ಲವಾದಲ್ಲಿ ಆಧಾರ್ ನಂಬರ್ ಕೊಟ್ಟು OTP ಪಡೆದು ಮೊದಲು ರಿಜಿಸ್ಟರ್ ಆಗಿ ನಂತರ ಲಾಗಿನ್ ಆಗಿ.

● ಆರ್ಥಿಕ ಮತ್ತು ಸಾಂಖ್ಯಿಕ ನ್ಯಾಯಾಲಯದ ಅಧಿಕೃತ ವೆಬ್ಸೈಟ್ ಗೆ ಭೇಟಿ ಕೊಡುತ್ತಿರಿ, ಎಡಭಾಗದ ಮೆನು ಅಲ್ಲಿ ಅಪ್ಲೈ ಫಾರ್ ಸರ್ವಿಸಸ್ ಇರುತ್ತದೆ ಅದರ ಮೇಲೆ ಕ್ಲಿಕ್ ವಿವ್ಯು ಆಲ್ ಸರ್ವೀಸಸ್ ಎನ್ನುವುದನ್ನು ಸೆಲೆಕ್ಟ್ ಮಾಡಿ.
● ಸರ್ಚ್ ಬಾರ್ ಮೇಲೆ ಬರ್ತ್ ಎಂದು ಟೈಪ್ ಮಾಡಿ ಅಪ್ಲಿಕೇಶನ್ ಫಾರ್ ಬರ್ತ್ ಸರ್ಟಿಫಿಕೇಟ್ ಎನ್ನುವುದು ಬರುತ್ತದೆ ಅದನ್ನು ಕ್ಲಿಕ್ ಮಾಡಿ.

● ನಿಮ್ಮ ಬಳಿ ರಿಜಿಸ್ಟ್ರೇಷನ್ ನಂಬರ್ ಇದೆಯಾ ಎಂದು ಆಪ್ಷನ್ ಕೇಳುತ್ತದೆ ಇದ್ದರೆ YES ಎಂದು ಕ್ಲಿಕ್ ಮಾಡಿ ರಿಜಿಸ್ಟರ್ ನಂಬರ್ ಹಾಕಿದರೆ ನಿಮ್ಮ ಮಗುವಿನ ಬಸ್ ಸರ್ಟಿಫಿಕೇಟ್ ಸಿಗುತ್ತದೆ. ಒಂದು ವೇಳೆ ನೀವು ರಿಜಿಸ್ಟರ್ ನಂಬರ್ ಕಳೆದುಕೊಂಡಿದ್ದರೆ NO ಎಂದು ಕ್ಲಿಕ್ ಮಾಡಿ.
● ನೋ ಎಂದು ಕ್ಲಿಕ್ ಮಾಡಿದ ಮೇಲೆ ನಿಮಗೆ ಹಲವು ಆಪ್ಷನ್ ಬರುತ್ತದೆ ಅದೆಲ್ಲವನ್ನು ತುಂಬಿಸಿ ಮಗುವಿನ ಡೇಟ್ ಆಫ್ ಬರ್ತ್, ನೇಮ್ ಆಫ್ ದ ಚೈಲ್ಡ್ ಫಾದರ್ ನೇಮ್ ಮತ್ತು ಮದರ್ ನೇಮ್ ಗಳನ್ನು ತುಂಬಿಸಬೇಕು.

● ಆಗ ಚೈಲ್ಡ್ ಇನ್ಫರ್ಮೇಷನ್ ಬರುತ್ತದೆ ನಿಮ್ಮ ಮಗುವಿನ ಬರ್ತ್ ಸರ್ಟಿಫಿಕೇಟ್ ರಿಜಿಸ್ಟ್ರೇಷನ್ ನಂಬರ್, ಮಗುವಿನ ಹೆಸರು, ಲಿಂಗ, ತಂದೆ ತಾಯಿಯ ಹೆಸರು ಎಲ್ಲವೂ ಬರುತ್ತದೆ. ಇದೆಲ್ಲವೂ ಸರಿ ಇದ್ದರೆ ಸೆಲೆಕ್ಟ್ ರೆಕಾರ್ಡ್ ಫಾರ್ ಪ್ರಿಂಟ್ ಎಂದು ಇರುತ್ತದೆ ಅಲ್ಲಿ YES ಎಂದು ಆಯ್ಕೆ ಕೊಡಿ ಮತ್ತು ಎಷ್ಟು ಪ್ರಿಂಟ್ ಬೇಕು ಎನ್ನುವ ಆಪ್ಷನ್ ಇರುತ್ತದೆ ಅದರಲ್ಲಿ ನಂಬರ್ ಸೆಲೆಕ್ಟ್ ಮಾಡಿ. ಕೆಳಕ್ಕೆ ವರ್ಡ್ ವೆರಿಫಿಕೇಷನ್ ಇರುತ್ತದೆ ಅದನ್ನು ಎಂಟ್ರಿ ಮಾಡಿ ಸಬ್ಮಿಟ್ ಕೊಡಿ.

● ನಂತರ ಮೇಕ್ ಪೇಮೆಂಟ್ ಆಯ್ಕೆ ಬರುತ್ತದೆ, ಕ್ಲಿಕ್ ಮಾಡಿ ಪೇಟಿಎಂ ಆರ್ ಬಿಲ್ ಪೇಮೆಂಟ್ ಇದರಲ್ಲಿ ನಿಮ್ಮ ಆಯ್ಕೆ ಯಾವುದು ಅದನ್ನು ಸೆಲೆಕ್ಟ್ ಮಾಡಿ. ಅಪ್ಲಿಕೇಶನ್ ಫೀ ಐದು ರೂಪಾಯಿ ಇರುತ್ತದೆ ನಿಮಗೆ ಎಷ್ಟು ಪ್ರಿಂಟ್ ಬೇಕು ಅದರ ಆಧಾರದ ಮೇಲೆ ಹಣ ಪಾವತಿ ಮಾಡಿ.
● ಪೇಮೆಂಟ್ ಸಕ್ಸಸ್ಫುಲ್ ಆದಮೇಲೆ ಅಕ್ನೋಲೆಜ್ಮೆಂಟ್ ಬರುತ್ತದೆ, ಅದನ್ನು ಇಟ್ಟುಕೊಳ್ಳಿ ಸಕಾಲ ಸ್ವೀಕೃತಿ ಸಂಖ್ಯೆ ಇರುತ್ತದೆ, ಅದನ್ನು ತಪ್ಪದೆ ನೋಟ್ ಮಾಡಿ ಇಟ್ಟುಕೊಳ್ಳಿ ಮುಂದೆ ನಿಮ್ಮ ಮಗುವಿನ ಬರ್ತ್ ಸರ್ಟಿಫಿಕೇಟ್ ಡೌನ್ಲೋಡ್ ಮಾಡಲು ಇದು ಬೇಕಾಗುತ್ತದೆ.

● ನೀವು ಬ್ಯಾಕ್ ಬಂದು ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದ ಮುಖಪುಟದ ಎಡ ಭಾಗದ ಮೆನುವಿನಲ್ಲಿ ವಿವ್ಯೂ ಸ್ಟೇಟಸ್ ಆಫ್ ಅಪ್ಲಿಕೇಶನ್ಸ್ ಎನ್ನುವುದನ್ನು ಕ್ಲಿಕ್ ಮಾಡಿ. ಮೊದಲ ಆಪ್ಷನ್ ಅಲ್ಲಿ
ಟ್ರ್ಯಾಕ್ ಅಪ್ಲಿಕೇಶನ್ ಸ್ಟೇಟಸ್ ಎಂದು ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.
● ಸೇವಾಸಿಂಧು ಪೇಜ್ ಓಪನ್ ಆಗುತ್ತದೆ. ಅದರಲ್ಲಿ ಅಪ್ಲಿಕೇಶನ್ ರೆಫರ್ ನಂಬರ್ ಎಂದು ಕೇಳಲಾಗುತ್ತದೆ. ಆಗ ಈ ಹಿಂದೆ ಬರೆದಿಟ್ಟುಕೊಂಡ ಸಕಾಲ ಸ್ವೀಕೃತಿ ನಂಬರ್ ಅನ್ನು ಫಿಲ್ ಮಾಡಿ ಗೆಟ್ ಡೇಟಾ ಎನ್ನುವುದರ ಮೇಲೆ ಕ್ಲಿಕ್ ಮಾಡಿ.

● ನೀವು ಅಪ್ಲಿಕೇಶನ್ ಹಾಕಿರುವ ಸರ್ವಿಸ್ ದಿನಾಂಕ ಎಲ್ಲವೂ ಬರುತ್ತದೆ ಅದರಲ್ಲಿ ಸ್ಟೇಟಸ್ ಡಿಲಿವರ್ಡ್ ಇರುತ್ತದೆ ಅದನ್ನು ಕ್ಲಿಕ್ ಮಾಡಿ, ಮುಂದಿನ ಪೇಜ್ ಅಲ್ಲಿ ಔಟ್ಪುಟ್ ಸರ್ವಿಸ್ ಎನ್ನುವ ಆಪ್ಷನ್ ಇರುತ್ತದೆ ಅದನ್ನು ಕ್ಲಿಕ್ ಮಾಡಿ. ಆಗ ಸರ್ಟಿಫಿಕೇಟ್ PDF ಫಾರ್ಮ್ ಅಲ್ಲಿ ಡೌನ್ಲೋಡ್ ಆಗುತ್ತದೆ, ನಂತರ ಅದನ್ನು ಪ್ರಿಂಟ್ ಔಟ್ ತೆಗೆದುಕೊಳ್ಳಿ.

Leave a Comment

%d bloggers like this: