ಮನೆ ಕಟ್ಟುವ ವಿಚಾರದಲ್ಲಿ ಈಗ ಸಾಕಷ್ಟು ರೆವೆಲ್ಯೂಷನ್ ಆಗಿದೆ ಎಂದು ಹೇಳಬಹುದು. ಕಲ್ಲುಗಳನ್ನು ಕೊರೆದು ಗುಹೆಯೊಳಗೆ ವಾಸಿಸುತ್ತಿದ್ದ ಮನುಷ್ಯ ನಿಧಾನವಾಗಿ ಮಣ್ಣಿನ ಮನೆಗಳಲ್ಲಿ ಈಗ ಸಿಮೆಂಟ್ ಕಟ್ಟಡಗಳಲ್ಲಿ ವಾಸಿಸಲು ಶುರು ಮಾಡಿದ್ದಾನೆ. ಮೂಲಭೂತ ಅವಶ್ಯಕತೆಯಾಗಿದ್ದ ಮನೆ ಎನ್ನುವ ವಿಚಾರ ಈಗ ತಮ್ಮ ದೊಡ್ಡಸ್ಥಿಕೆಗಾಗಿ ಭಿನ್ನ ವಿಭಿನ್ನ ಮಾದರಿಯ ಡಿಸೈನ್ ಮಾಡಿಸುವ ದುಬಾರಿ ಬಜೆಟ್ ಹಂತಕ್ಕೆ ತಲುಪಿದೆ.
ಅದೇನೇ ಇರಲಿ ನಮಗೂ ಕೂಡ ಜೀವನದಲ್ಲಿ ಎಲ್ಲರೂ ಮೆಚ್ಚುವಂತಹ ಮತ್ತು ನಮಗೆ ಎಲ್ಲಾ ಅನುಕೂಲತೆ ಇರುವಆದರೆ ಆ ಮನೆ ಕಡಿಮೆ ಖರ್ಚಿನಲ್ಲಿ ಆಗಬೇಕು ಎನ್ನುವ ಆಸೆ ಖಂಡಿತ ಇರುತ್ತದೆ. ನೀವು ಈ ಬಗ್ಗೆ ಚಿಂತೆ ಮಾಡುತ್ತಿದ್ದರೆ ಕೇವಲ ಎರಡು ಲಕ್ಷದಲ್ಲಿ ತಾನೇ ತಯಾರಿಸಿದ ಇಟ್ಟಿಗೆಗಳಿಂದ ಮನೆ ಕಟ್ಟಿಕೊಂಡ ಈ ರೈತನ ಸಾಹಸಗಾಥೆಯನ್ನು ಒಮ್ಮೆ ಓದಿ.
ಈ ಸುದ್ದಿ ಓದಿ:- ಅಟಲ್ ಪೆನ್ಷನ್ ಯೋಜನೆಯಿಂದ ಸಿಗಲಿದೆ 5000 ಪಿಂಚಣಿ, ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್.!
ತುಮಕೂರಿನ ತಿಪಟೂರ್ ಮೂಲದ ರೈತರೊಬ್ಬರು ಕೃಷಿ ಸಲಕರಣೆಗಳನ್ನು ತಯಾರಿಸಿಕೊಡುವ ಮತ್ತು ಇಟ್ಟಿಗೆಗಳನ್ನು ತಯಾರಿಸುವ ಫ್ಯಾಕ್ಟರಿ ಇಟ್ಟುಕೊಂಡು ಬದುಕುತ್ತಿದ್ದಾರೆ ಮೊಟ್ಟಮೊದಲ ಬಾರಿಗೆ ಇಂಟರ್ ಲಾಕ್ ಎನ್ನುವ ಕಾನ್ಸೆಪ್ಟ್ ಮಾಡಿ ಬಹಳ ಇಂಟರೆಸ್ಟ್ ತೋರಿದ ಇವರು ಇದನ್ನು ತಾವು ಕೂಡ ಶುರು ಮಾಡಬೇಕು ಎಂದು ನಿರ್ಧರಿಸಿ, ಅಂದುಕೊಂಡ ಹಾಗೆ ಈ ಹಿಂದಿನ ಕೆಲವು ವರ್ಷಗಳಿಂದ ಈ ಬಿಸಿನೆಸ್ ಆರಂಭಿಸಿ ಯಶಸ್ವಿಯಾಗಿದ್ದಾರೆ.
ಇಂದು ಇಂಟರ್ಲಾಕ್ ಬ್ಲಾಕ್ ಗಳಿಗೆ ಇರುವ ಬೇಡಿಕೆಯಿಂದ ಬಿಸಿನೆಸ್ ಚೆನ್ನಾಗಿ ನಡೆಯುತ್ತಿದೆ ಎನ್ನುತ್ತಿದ್ದಾರೆ ಮತ್ತು ಮೊದಮೊದಲಿಗೆ ತಮ್ಮ ಮೇಲೆ ತಾವೇ ಪ್ರಯೋಗಕ್ಕೆ ಮಾಡಿಕೊಂಡ ಇವರು ತಮಗೂ ವಾಸಕ್ಕೆ ಬೇಕಿದ್ದ ಮನೆಯಲ್ಲಿ ಕೂಡ ಇದೇ ಇಂಟರ್ಲಾಕ್ ಬ್ರಿಕ್ ಗಳಿಂದ ತಯಾರಿಸಿ ಅದನ್ನೇ ಉದಾಹರಣೆಯಾಗೆ ಸಾಕ್ಷಿಯಾಗಿಸಿದ್ದಾರೆ. ಕೇವಲ ರೂ. 2 ಲಕ್ಷದಲ್ಲಿ ಇವರ ಮನೆ ತಯಾರಾಗಿದೆ ಎನ್ನುವುದು ಬಹಳ ಸಮಾಧಾನಕರ ಸಂಗತಿ.
ಈ ಸುದ್ದಿ ಓದಿ:- ಕೇವಲ 399 ರೂಪಾಯಿಗೆ ಸಿಗಲಿದೆ 10 ಲಕ್ಷ ಇನ್ಸೂರೆನ್ಸ್, ಇದು ಅಂಚೆ ಕಚೇರಿಯ ಬಂಪರ್ ಆಫರ್.!
ದಕ್ಷಿಣ ಆಫ್ರಿಕಾ ದಲ್ಲಿ ಈ ರೀತಿ ಇಂಟರ್ ಲಾಕ್ ಬ್ಲಾಕ್ ಗಳ ಬಳಕೆ ಹೆಚ್ಚಾಗಿದೆಯಂತೆ ಆದರೆ ಅಲ್ಲಿ ಇನ್ನು ಸಹ ಮ್ಯಾನುವಲ್ ಆಗಿ ಈ ಇಟ್ಟಿಗೆಗಳನ್ನು ತಯಾರಿ ಮಾಡುತ್ತಿದ್ದಾರಂತೆ ಇದನ್ನು ತಾವು ಕೂಡ ಆರಂಭಿಸಬೇಕು ಎನ್ನುವ ಮನಸು ಮಾಡಿ ತಮ್ಮ ಜಮೀನಿನಲ್ಲಿ ಡೀಸೆಲ್ ಇಂಜಿನ್ ಸಹಾಯದಿಂದ ಮಿಷನ್ ಮಾಡಿ ಇಂಟರ್ಲಾಕ್ ಬ್ಲಾಕ್ ಗಳನ್ನು ತಯಾರಿಸುತ್ತಿದ್ದಾರೆ.
ಇದರ ವೈಶಿಷ್ಟ್ಯಗಳೇನು ಎಂದರೆ ಸುಟ್ಟ ಇಟ್ಟಿಗೆಗಳು ಹಾಗೂ ಸಿಮೆಂಟ್ ಬ್ಲಾಕ್ ಇವುಗಳಿಗೆ ಖರ್ಚು ಮಾಡುವ 40% ಕಡಿಮೆ ಖರ್ಚಿನಲ್ಲಿ ಈ ಇಂಟರ್ಲಾಕ್ ಬ್ಲಾಕ್ ತಯಾರಾಗುತ್ತದೆ. ನೋಡುವುದಕ್ಕೆ ಕೂಡ ಅತ್ಯುತ್ತಮವಾದ ಲುಕ್ ಹೊಂದಿರುತ್ತದೆ ಇದನ್ನು ತಯಾರು ಮಾಡುವಾಗಲೇ ಮರಳು, ಮಣ್ಣು, ಸುಣ್ಣ ಹಾಗೂ M-Sand ಗಳನ್ನು ಬಳಸುವುದರಿಂದ ಯಾವುದೇ ಡೌಟ್ ಬೇಡ ಪಿಲ್ಲರ್ ಸಹಾಯ ಇಲ್ಲದೆ 32 ಫೀಟ್ ವರೆಗೂ ಕೂಡ ಮನೆ ಕಟ್ಟಬಹುದು ಅಷ್ಟು ಸ್ಟ್ರೆಂತ್ ಇದೆ.
ಈ ಸುದ್ದಿ ಓದಿ:- ಈ ತಳಿ ಹಸು ಸಾಕಿದರೆ ದಿನಕ್ಕೆ 10 ಲೀಟರ್ ಹಾಲು ಪಕ್ಕಾ, ನಿಮ್ಮ ಆದಾಯ ಡಬಲ್ ಆಗುವುದು ಗ್ಯಾರಂಟಿ.!
ಈ ಬ್ಲಾಕ್ ನ್ನು ಬಳಸಿ ಮನೆ ಕಟ್ಟುವುದರಿಂದ ಇಟ್ಟಿಗೆಗೆ ಕೊಡುವ ಹಣ ಕೊಡುವುದರ ಜೊತೆಗೆ ಇದಾದ ಮೇಲೆ ಗಿಲಾವು ಮಾಡುವ ಅವಶ್ಯಕತೆ ಕೂಡ ಇಲ್ಲದೆ ಇರುವುದರಿಂದ ಅದರ ಮೇಲೆ ಪೇಂಟಿಂಗ್ ಕೂಡ ಮಾಡಬೇಕಾದ ಅವಶ್ಯಕತೆ ಇಲ್ಲದೆ ಇರುವುದರಿಂದ ಇನ್ನು ಹೆಚ್ಚು ಹಣ ಉಳಿತಾಯ ಆಗುತ್ತದೆ.
ಕಡಿಮೆ ಕಾಸ್ಟ್ ನಲ್ಲಿ ಒಳ್ಳೆಯದು ಎನ್ನುವವರು ಈ ಬ್ಲಾಕ್ ಗಳನ್ನು ಬಳಸಬಹುದು ಎನ್ನುವ ಸಲಹೆ ನೀಡುತ್ತಿದ್ದಾರೆ ಮತ್ತು ಇವು ವಾಟರ್ ಪ್ರೂಫ್ ಆಗಿರುತ್ತವೆ. ಮಣ್ಣಿನ ಇಟ್ಟಿಗೆಗಳು ಎಂದು ನೀರಿಗೆ ಕರಗುತ್ತವೆ ಎನ್ನುವ ಟೆನ್ಶನ್ ಕೂಡ ಬೇಡ. ಇದರ ಬಗ್ಗೆ ಇನ್ನಷ್ಟು ಡೀಟೇಲ್ಸ್ ಗಾಗಿ ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ ಮತ್ತು ನಿಮಗೂ ಕೂಡ ಈ ಬಗ್ಗೆ ಆಸಕ್ತಿ ಇದ್ದರೆ ಈ ಕೆಳಕಂಡ ಸಂಖ್ಯೆಗಳಿಗೆ ಸಂಪರ್ಕಿಸಿ.
BGB Agrotech
7019081446