ಬ್ಯಾಂಕ್ ನಿಂದ 6000ರೂ. ಬಹುಮಾನ. ಈ ಮೆಸೇಜ್ ನಿಮಗೂ ಬಂದಿದೆಯಾ? ಇದರ ಅಸಲಿಯತ್ತೇನು ಗೊತ್ತಾ.? ಬ್ಯಾಂಕ್ ಸಿಬ್ಬಂದಿಗಳ ಸೋಗಿನಲ್ಲಿ ಗ್ರಾಹಕರ ಹಣ ಎಗರಿಸುವುದು ಅಥವಾ ಅವರ ಖಾತೆಯನ್ನು ಹ್ಯಾಕ್ ಮಾಡುವುದು ಅವರ ವೈಯಕ್ತಿಕ ವಿವರಗಳನ್ನು ಕದಿಯುವ ವಂಚನೆಯ ಪ್ರಕರಣ ದೇಶದಾದ್ಯಂತ ಸಾಕಷ್ಟು ವರದಿಯಾಗಿದೆ. ಪ್ರತಿ ವರ್ಷದಿಂದ ವರ್ಷಕ್ಕೆ ಈ ಸೈಬರ್ ಕಳ್ಳರ ವಂಚನೆ ಆಟ ಹೆಚ್ಚಾಗುತ್ತಿದ್ದು, ಪ್ರತಿ ಬಾರಿ ಕೂಡ ಏನಾದರೂ ಹೊಸ ರೀತಿಯ ಪ್ಲಾನ್ ಅಮಾಯಕರನ್ನು ಯಾಮಾರಿಸುತ್ತಿದ್ದಾರೆ.
ಈ ಹಿಂದೆ ಇದೇ ರೀತಿ SBI, HDFC, ಕೆನರಾ ಬ್ಯಾಂಕ್ ಗಳನ್ನೂ ಕೂಡ ಬಿಡದೆ ಕಾಡಿದ್ದ, ಆ ಬ್ಯಾಂಕ್ ಗಳ ಹೆಸರುಗಳನ್ನು ಹೇಳಿಕೊಂಡು ಗ್ರಾಹಕರಿಂದ ಲಕ್ಷಾಂತರ ರೂಪಾಯಿ ಲಪಟಾಯಿಸಿದ್ದ ಖದೀಮರ ಕಣ್ಣು ಇದೀಗ PNB ಅಂದ್ರೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ಗ್ರಾಹಕರ ಮೇಲೆ ಬಿದ್ದಿದೆ. ಹೊಸದೊಂದು ಹುನ್ನಾರ ಹಾಕಿ ಈ ಬಾರಿ ಗಾಳ ಹಾಕಿದ್ದಾರೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ 130 ನೇ ಸರ್ಕಾರದ ಹಣಕಾಸು ಯೋಜನೆಯ ಅಡಿ 6,000 ಬಹುಮಾನ ನೀಡುತ್ತಿದೆ, ಇದನ್ನು ಪಡೆದುಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ ಎಂದು ಲಿಂಕ್ ಒಂದನ್ನು ಕಳಿಸಿರುವ ಸಂದೇಶಗಳು ಗ್ರಾಹಕರನ್ನು ಕನ್ಫ್ಯೂಸ್ ಮಾಡಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಇಂದ 6,000 ರೂಪಾಯಿ ಮೌಲ್ಯದ ಸಬ್ಸಿಡಿ ಗೆಲ್ಲುವ ಅವಕಾಶ ಎಂದು ಎಲ್ಲಡೆ ಹರಿದಾಡುತ್ತಿರುವ ಸಂದೇಶಗಳು ದೇಶದಾದ್ಯಂತ ಸಂಚಲವನ್ನು ಸೃಷ್ಟಿ ಮಾಡಿದೆ.
ಈ ಸುದ್ದಿ ಹೆಚ್ಚು ಚರ್ಚೆ ಆಗುತ್ತಿದ್ದಂತೆ ಸರ್ಕಾರ ಈ ಬಗ್ಗೆ ಗ್ರಾಹಕರನ್ನು ಎಚ್ಚರಿಸುತ್ತದೆ. ಯಾವುದೇ ಕಾರಣಕ್ಕೂ ಪಂಜಾಬ್ ನ್ಯಾಷನಲ್ ಬ್ಯಾಂಕ್ ಈ ರೀತಿಯ ಯಾವುದೇ ಸಬ್ಸಿಡಿ ಬಹುಮಾನ ನೀಡುತ್ತಿಲ್ಲ ಇದೊಂದು ಸ್ಕ್ಯಾಮ್ ಆಗಿದೆ ಗ್ರಾಹಕರು ಎಚ್ಚರದಿಂದ ಇರಬೇಕು ಎಂದಿದೆ. ಈ ರೀತಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಹೆಸರು ಹೇಳಿಕೊಂಡು SMS ಮೂಲಕ ಅಥವಾ ವಾಟ್ಸಪ್ ಸಂದೇಶಗಳನ್ನು ಕಳಿಸುವ ಮೂಲಕ ಯಾವುದಾದರೂ ಲಿಂಕ್ ಅನ್ನು ಕ್ಲಿಕ್ ಮಾಡಿ ಎಂದು ಹೇಳಿದರೆ ತಕ್ಷಣವೇ ಆ ಮೆಸೇಜ್ ಗಳನ್ನು ಡಿಲೀಟ್ ಮಾಡಿ, SMS ಗಳನ್ನು ತಕ್ಷಣವೇ ಡಿಲೀಟ್ ಮಾಡಿ.
ಯಾವುದೇ ಅಪರಿಚಿತ ಲಿಂಕ್ಗಳು ಬಂದರೂ ಕೂಡ ಅದನ್ನು ಓಪನ್ ಮಾಡುವ ಮುನ್ನ ಯೋಚಿಸಿ. ಯಾರಾದರೂ ಬ್ಯಾಂಕ್ ಸಿಬ್ಬಂದಿ ಎಂದು ಹೆಸರು ಹೇಳಿಕೊಂಡು ಕರೆ ಮಾಡಿ ಅಥವಾ ಸಂದೇಶ ಕಳುಹಿಸಿ ನಿಮ್ಮ ಹಣಕಾಸಿನ ವಿವರಗಳನ್ನು, ನಿಮ್ಮ ಬ್ಯಾಂಕ್ ಖಾತೆ ವಿಷಯವನ್ನು ಕೇಳಿದರೆ ತಕ್ಷಣ ಹಂಚಿಕೊಳ್ಳಬೇಡಿ. ಯಾಕೆಂದರೆ, ಇದೊಂದು ಸ್ಕ್ಯಾಮ್ ಆಗಿದೆ. ನಿಮ್ಮ ವೈಯುಕ್ತಿಕ ವಿವರಗಳನ್ನು ಅಥವಾ ನಿಮ್ಮ ಗುರುತನ್ನು ಕದಿಯುವ ಉದ್ದೇಶದಿಂದ ಈ ರೀತಿ ಖದೀಮರು ಸಂಚು ಮಾಡಿದ್ದಾರೆ ಜೊತೆಗೆ ನಿಮ್ಮ ಖಾತೆಯಲ್ಲಿನ ಹಣ ಕೂಡ ವಂಚನೆ ಆಗಬಹುದು ಎಚ್ಚರದಿಂದಿರಿ ಎಂದಿದೆ ಸರ್ಕಾರ.
ಹೀಗೆ ಬೇರೆ ಬೇರೆ ಹೇಳಿಕೆಗಳನ್ನು ಹೇಳಿಕೊಂಡು ಪಂಜಾಬ್ ನ್ಯಾಷನಲ್ ಬ್ಯಾಂಕ್ ಹೆಸರನ್ನು ವಂಚನೆ ಮಾಡಲು ಬಳಸಿಕೊಳ್ಳುತ್ತಿದ್ದಾರೆ. ಅದಕ್ಕೂ ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೂ ಯಾವುದೇ ಸಂಬಂಧ ಇರುವುದಿಲ್ಲ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಒಂದೇ ಅಲ್ಲದೆ ಇದೇ ರೀತಿ ಬೇರೆ ಬ್ಯಾಂಕ್ ಹೆಸರನ್ನು ಕೂಡ ಹೇಳಿಕೊಂಡು ಗ್ರಾಹಕರನ್ನು ವಂಚಿಸಬಹುದು. ಆದ್ದರಿಂದ ಬ್ಯಾಂಕ್ ನಿಂದ ಬರುವ ಸಂದೇಶಗಳನ್ನು ಕಣ್ಮುಚ್ಚಿಕೊಂಡು ನಂಬಲು ಹೋಗಬೇಡಿ. ಯಾವುದನ್ನು ಡೌನ್ಲೋಡ್ ಮಾಡಿಕೊಳ್ಳಲು ಹೇಳಿದರು ಕೂಡ ಡೌನ್ಲೋಡ್ ಮಾಡಿಕೊಳ್ಳಬೇಡಿ, ಅವುಗಳಿಗೆ ಉತ್ತರಿಸಬೇಡಿ ನಿಮ್ಮ ಖಾತೆಗಳ ಗೌಪ್ಯತೆಗೆ ನೀವೇ ಜವಾಬ್ದಾರಿ ಆದಷ್ಟು ಎಚ್ಚರದಿಂದಿರಿ ಎನ್ನುವ ಎಚ್ಚರಿಕೆಯನ್ನು ನೀಡಿದೆ