ಈಗ ಟೆಕ್ನಾಲಜಿ ಬಹಳ ಬೆಳದಿದೆ ಸೆಕೆಂಡ್ ಗಳಲ್ಲಿ ನಾವು ವಿಶ್ವದಾದ್ಯಂತ ಯಾವುದೇ ಮೂಲೆಯಲ್ಲಿ ಇರುವವರ ಜೊತೆಗೂ ಕೂಡ ಸಂಪರ್ಕ ಬೆಳೆಸಿ ಮಾತನಾಡಬಹುದು. ಆಡಿಯೋ ಕಾಲಿಂಗ್ ಮಾತ್ರವಲ್ಲ ವಿಡಿಯೋ ಕಾಲಿಂಗ್ ಸೌಲಭ್ಯ ಕೂಡ ಇದೆ. ಆದರೆ ದಶಕಗಳ ಹಿಂದೆ ಪರಿಸ್ಥಿತಿ ಈ ರೀತಿ ಇರಲಿಲ್ಲ, ಅದರಲ್ಲೂ ಎರಡು ದಶಕಗಳ ಹಿಂದೆಯಂತೂ ಸಂಪರ್ಕ ಸಾಧನಕ್ಕೆ ಪತ್ರ ವ್ಯವಹಾರವೇ ಗಟ್ಟಿಯಾಗಿತ್ತು.
ಆಗ ಅಂಚೆ ಇಲಾಖೆಯೇ (Postal Department) ಊರಿಂದ ಊರಿಗೆ ಸಂಬಂಧ ಬೆಸೆಯುವ ಸೇತುವೆಯಾಗಿತ್ತು, ಕಾಲ ಬದಲಾದಂತೆ ಪತ್ರ ವ್ಯವಹಾರದ ಅವಶ್ಯಕತೆ ಕುಂದಿ ಹೋದ ಮೇಲೆ ಅಂಚೆ ಇಲಾಖೆಯು ಹಣಕಾಸಿನ ವ್ಯವಹಾರದ (banking) ಮೂಲಕ ಮುನ್ನಡೆಯಲ್ಲಿ ಇದೆ. ಭಾರತದಾದ್ಯಂತ ನಂಬಿಕಾರ್ಹ ಹಣಕಾಸಿನ ಸಮಸ್ಯೆಗಳ ಪೈಕಿ ಮೊದಲನೇ ಸ್ಥಾನದಲ್ಲಿ ಇದೆ ಎಂದೇ ಹೇಳಬಹುದು.
ಪ್ರತಿ ಗ್ರಾಮಗಳಲ್ಲೂ ಕೂಡ ಅಂಚೆ ಠಾಣೆಗಳು ಇವೆ ಮತ್ತು ಇಲ್ಲಿನ ವ್ಯವಹಾರವೂ ಕೂಡ ಬಹಳ ಸರಳ ರೀತಿಯಲ್ಲಿ ಇರುವುದರಿಂದ ಹಾಗೂ ಕೇಂದ್ರ ಸರ್ಕಾರದ ಅಡಿಯಲ್ಲಿ (Central government) ಅಂಚೆ ಕಛೇರಿಗಳು ಇರುವುದರಿಂದ ಆ ಹಣಕ್ಕೆ ಸರ್ಕಾರವೇ ಭದ್ರತೆ ನೀಡುತ್ತದೆ ಎನ್ನುವ ಕಾರಣದಿಂದ ಜನರು ತಮ್ಮ ಹಣವನ್ನು ಉಳಿತಾಯ ಮಾಡಲು ಹಾಗೂ ಹೂಡಿಕೆ ಮಾಡಲು ಅಂಚೆ ಕಛೇರಿಯತ್ತ ಮನಸ್ಸು ಮಾಡಿದ್ದಾರೆ.
ಉಳಿತಾಯ ಖಾತೆಯ ಹಣದ ಮೇಲೆ 4% ಮತ್ತು ಇನ್ನಿತರ ಹೂಡಿಕೆಗಳ ಮೇಲೆ ಆಕರ್ಷಣೆಯ ಬಡ್ಡಿದರವನ್ನು ಕೂಡ ಅಚೆಕಛೇರಿಯಲ್ಲಿ ನೀಡಲಾಗುತ್ತದೆ. ಅಂಚೆ ಕಛೇರಿಗಳು ಪ್ರತಿಯೊಂದು ವರ್ಗಕ್ಕೂ ಅನುಕೂಲವಾಗುವಂತ ಯೋಜನೆಗಳನ್ನು ಜಾರಿಗೆ ತಂದಿವೆ. ಸುಕನ್ಯಾ ಸಮೃದ್ಧಿ ಯೋಜನೆ, ಅಂಚೆ ಮಾಸಿಕ ಉಳಿತಾಯ ಯೋಜನೆ, ಹಿರಿಯ ನಾಗರಿಕರ ಪೆನ್ಷನ್ ಯೋಜನೆ ಇನ್ನೂ ಮುಂತಾದ ಹಲವು ಯೋಜನೆಗಳು ಅಂಚೆ ಕಚೇರಿಯಲ್ಲಿ ಲಭ್ಯವಿದ್ದು ತಮಗೆ ಅನುಕೂಲ ಆಗುವ ಯೋಜನೆಗಳಲ್ಲಿ ಜನರು ಹಣವನ್ನು ಹೂಡಿಕೆ ಮಾಡಿ ಅತಿ ಹೆಚ್ಚಿನ ಲಾಭವನ್ನು ಪಡೆಯಬಹುದು.
ಈ ಮೇಲೆ ತಿಳಿಸಿದ ಹಲವು ಕಾರಣಗಳಿಂದಾಗಿ ಪ್ರತಿದಿನವೂ ಕೂಡ ಅಂಚೆ ಕಚೇರಿಗಳಲ್ಲಿ ಖಾತೆ ತೆರೆಯುವವರ ಸಂಖ್ಯೆ ಹಾಗೂ ಹೂಡಿಕೆ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇವರಿಗೆಲ್ಲಾ ಅಂಚೆ ಇಲಾಖೆ ಈಗಷ್ಟೇ ಬದಲಾಯಿಸಿರುವ ಒಂದು ಹೊಸ ನಿಯಮದ (New rule) ಬಗ್ಗೆ ತಿಳಿಸಲು ಇಚ್ಛಿಸುತ್ತಿದ್ದೇವೆ. ಕೇಂದ್ರ ವಿತ್ತ ಸಚಿವಾಲಯ (Finance department) ಪೋಸ್ಟ್ ಆಫೀಸ್ ಉಳಿತಾಯ ಖಾತೆ ಸ್ಕೀಮ್ 2023 ಅನ್ನು ಪೋಸ್ಟ್ ಆಫೀಸ್ ನ ಉಳಿತಾಯ ಖಾತೆಗಳ ಮೇಲೆ ಅಳವಡಿಕೆ ಮಾಡಿದೆ.
ಇದಾದ ನಂತರ ಪೋಸ್ಟ್ ಆಫೀಸ್ ನಲ್ಲಿ ಸೇವಿಂಗ್ ಖಾತೆಗಳನ್ನು(Post Office Saving Account) ತೆರೆಯುವುದರ ಬಗ್ಗೆ ನಿಯಮಗಳು ಬದಲಾಗಿದೆ. ಅದೇನೆಂದರೆ, ಜಾಯಿಂಟ್ ಸೇವಿಂಗ್ ಅಕೌಂಟ್ ಓಪನ್ (joint 6saving account open) ಮಾಡುವ ನಿಯಮ ಬದಲಾಗಿದೆ. ಮುಂಚೆ ಕೇವಲ ಇಬ್ಬರು ಮಾತ್ರ ಜಾಯಿಂಟ್ ಅಕೌಂಟ್ ಓಪನ್ ಮಾಡಬಹುದಿತ್ತು ಮತ್ತು ಇಬ್ಬರು ಮಾತ್ರ ಜಂಟಿಯಾಗಿ ಯೋಜನೆಗಳಲ್ಲಿ ಹಣವನ್ನು ಹೂಡಿಕೆ ಮಾಡಬಹುದಾಗಿತ್ತು.
ಬ್ಯಾಂಕ್ ನಲ್ಲಿ ಸಾಲ ಪಡೆದಿದ್ದವರಿಗೆ ಗುಡ್ ನ್ಯೂಸ್ RBI ಕಡೆಯಿಂದ ಮಹತ್ವದ ಘೋಷಣೆ.!
ಹೊಸ ನಿಯಮಗಳ ಪ್ರಕಾರ ಇನ್ಮುಂದೆ ಮೂರು ಜನ ಕೂಡ ಜಾಯಿಂಟ್ ಸೇವಿಂಗ್ ಅಕೌಂಟ್ ನಲ್ಲಿ ಹಣವನ್ನು ಹೂಡಿಕೆ ಮಾಡಬಹುದು. ಪೋಸ್ಟ್ ಆಫೀಸ್ನಲ್ಲಿ ತಮ್ಮ ಸೇವಿಂಗ್ ಅಕೌಂಟ್ ನಿಂದ ಹಣ ಹಿಂಪಡೆಯಲು Form 2 ಅನ್ನು ಭರ್ತಿ ಮಾಡಬೇಕಾಗಿತ್ತು, ಆದರೆ ಇನ್ಮುಂದೆ Form 3 ಅನ್ನು ಭರ್ತಿ ಮಾಡಬೇಕಾಗುತ್ತದೆ. ಇದರೊಂದಿಗೆ ಪಾಸ್ ಬುಕ್ (Passbook) ತೋರಿಸದೆ ಇನ್ನು ಮುಂದೆ ಖಾತೆಯಿಂದ ಹಣ ಪಡೆಯಲು ಆಗುವುದಿಲ್ಲ ಎನ್ನುವ ನಿಯಮವನ್ನು ಹೊಸದಾಗಿ ಅಂಚೆ ಇಲಾಖೆ ಮಾಡಿದೆ.