ರಾಜ್ಯದಲ್ಲಿ ಈ ಬಾರಿ ಬರ ಸಂ’ಕ’ಷ್ಟ (drought) ಎದುರಾಗಿದೆ, ಮಳೆಯನ್ನೆ ಆಧರಿಸಿ ಕೃಷಿ ಮಾಡಿ (agriculture) ಬದುಕುತ್ತಿದ್ದ ರೈತರಿಗೆ (farmers) ಬೆಳೆ ನಷ್ಟವಾಗಿ (crop loss) ಕಂಗಾಲಾಗಿದ್ದಾರೆ. ಸರ್ಕಾರ ಆದಷ್ಟು ಈ ಪರಿಸ್ಥಿತಿ ನಿಭಾಯಿಸಲು ಪ್ರಯತ್ನಿಸುತ್ತದೆ ಹಾಗೂ ಕೇಂದ್ರ ಸರಕಾರಕ್ಕೂ (central government) ಕೂಡ ರೈತರಿಗೆ ಪರಿಹಾರ ನೀಡುವಂತೆ ಮನವಿ ಸಲ್ಲಿಸಿದೆ.
ಈ ಪ್ರಕಾರವಾಗಿ ಕೇಂದ್ರ ಸರ್ಕಾರದ ಕೈಪಿಡಿ ಅನ್ವಯ ನಡೆದ ಸರ್ವೆ ನಲ್ಲಿ ರಾಜ್ಯದ 225 ತಾಲೂಕುಗಳು ಹಂತ ಹಂತವಾಗಿ ಬರಪೀಡಿತ ತಾಲೂಕುಗಳು (drought declaired Thaluks) ಎಂದು ಘೋಷಣೆಯಾಗಿವೆ. ಈಗ ಸರ್ಕಾರವು ಬರ ಪರಿಹಾರ ಹಣ ಬಿಡುಗಡೆ ಮಾಡಲು ಮುಂದಾಗಿದ್ದು ಈ ಕುರಿತಾದ ಒಂದು ವಿಶೇಷವಾದ ಅಪ್ಡೇಟ್ ಅನ್ನು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರೇ (CM Siddaramaih) ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಬೆಳೆ ಪರಿಹಾರ ಸಂಬಂಧ ಕೇಂದ್ರಕ್ಕೆ ಬರೆದ ಪತ್ರಗಳಿಗೆ ಈವರೆಗೆ ಯಾವುದೇ ಪ್ರಕ್ರಿಯೆ ಬಂದಿಲ್ಲ. ರಾಜ್ಯದ ಸಚಿವರು ಮೂರು ಬಾರಿ ಕೇಂದ್ರಕ್ಕೆ ಹೋಗಿ ಸಂಪರ್ಕಿಸಲು ಪ್ರಯತ್ನಸಿದ್ದರು ಸಕಾರಾತ್ಮಕವಾದ ಪ್ರತಿಕ್ರಿಯೆ ಬಂದಿಲ್ಲ ಕೇಂದ್ರ ಸರ್ಕಾರ ರಾಜ್ಯದ ರೈತರಿಗೆ ಪರಿಹಾರ ನೀಡಲು ಪ್ರಾಥಮಿಕ ಸಭೆಯನ್ನೇ ನಡೆಸದ ಹಿನ್ನೆಲೆ ರಾಜ್ಯದಲ್ಲಿ ತುರ್ತು ಕ್ರಮ ಕೈಗೊಳ್ಳಲಾಗಿದ್ದು.
ಮೊದಲನೇ ಕಂತಿನಲ್ಲಿ ಅರ್ಹ ರೈತರಿಗೆ ತಲಾ 2000ರೂ ಬೆಳೆ ಪರಿಹಾರ ಹಣ (compensation) ಬಿಡುಗಡೆ ಮಾಡುತ್ತಿದ್ದೇವೆ, ಬರದ ಸಂಕಷ್ಟದಲ್ಲಿರುವ ರೈತರ ಜೊತೆ ನಾವಿದ್ದೇವೆ ಎಂದು ಘೋಷಿಸಿದ್ದಾರೆ. ಹೀಗೆ ಯಾರೆಲ್ಲ ರೈತರು ಈ ಬೆಳೆ ಪರಿಹಾರದ ಹಣ ಪಡೆಯಲಿದ್ದಾರೆ ಎನ್ನುವ ಪಟ್ಟಿಯೂ(farmers list) ಸಹ ಸಿದ್ದವಾಗಿದೆ. ನೀವು ರೈತರಾಗಿದ್ದು ನಿಮಗೂ ಕೂಡ ಕುತೂಹಲ ನಿಮಗಿದ್ದರೆ ನಿಮ್ಮ ಮೊಬೈಲ್ ಮೂಲಕವೇ ಈ ಕೆಳಗಿನ ವಿಧಾನಗಳನ್ನು ಅನುಸರಿಸಿ ಪರೀಕ್ಷಿಸಿಕೊಳ್ಳಿ.
ಬೆಳೆ ಪರಿಹಾರದ ಹಣ ಬಿಡುಗಡೆ ಪಟ್ಟಿಯಲ್ಲಿ ಫಲಾನುಭವಿಗಳ ಹೆಸರು ಚೆಕ್ ಮಾಡುವ ವಿಧಾನ (How to check through phone):-
* ರೈತರು ಮೊದಲಿಗೆ ಗೂಗಲ್ ಗೆ ಹೋಗಿ ಪರಿಹಾರ (Parihara) ಎಂದು ಟೈಪ್ ಮಾಡಿ
* ಪರಿಹಾರ ಭೂಮಿ ಆನ್ಲೈನ್ ಎನ್ನುವ ಲಿಂಕ್ ಕಾಣುತ್ತದೆ ಅದನ್ನು ಕ್ಲಿಕ್ ಮಾಡಿ.
* ಮುಖಪುಟದಲ್ಲಿ ಪರಿಹಾರ ಸೇವೆಗಳು ಎನ್ನುವ ವಿಭಾಗದಲ್ಲಿ ಹಲವಾರು ಆಪ್ಷನ್ ಗಳನ್ನು ನೀಡಲಾಗಿರುತ್ತದೆ. ನೀವು ಅದರಲ್ಲಿ ಟಾಟಾ ಎಂಟ್ರಿ ಪ್ರಗತಿ ವರದಿ ಎನ್ನುವ ಆಪ್ಷನ್ ಕ್ಲಿಕ್ ಮಾಡಿ
* Parihara Data Entry Progress Report As on dated 05.12.2023 ಎಂದು ಹೆಡ್ ಲೈನ್ ಇರುವ ಮತ್ತೊಂದು ಪೇಜ್ ಓಪನ್ ಆಗುತ್ತದೆ. ಇದರಲ್ಲಿ ವರ್ಷ ಎನ್ನುವಲ್ಲಿ 2023, Select season ಎನ್ನುವಲ್ಲಿ Khariff ಸೆಲೆಕ್ಟ್ ಮಾಡಿ, Select calamity ಎನ್ನುವಲ್ಲಿ flood, Select District ಎನ್ನುವಲ್ಲಿ ನಿಮ್ಮ ಜಿಲ್ಲೆ ಸೆಲೆಕ್ಟ್ ಮಾಡಿ.
* ತಕ್ಷಣ ಸ್ಕ್ರೀನ್ ಮೇಲೆ ಮತ್ತೊಂದು ಪೇಜ್ ಬರುತ್ತದೆ ಅದರಲ್ಲಿ ಜಿಲ್ಲಾವಾರು ಅಪ್ಲಿಕೇಶನ್ ಗಗಳ ವಿವರ ಇರುತ್ತದೆ ಅಪ್ಲಿಕೇಶನ್ ನಂಬರ್ ಮೇಲೆ ಕ್ಲಿಕ್ ಮಾಡಿದರೆ ಯಾವ ರೈತರು ಹಣ ಪಡೆಯಲು ಅರ್ಹರಾಗಿದ್ದರೆ ಅವರ ಹೆಸರು, ತಾಲೂಕು, ಅರ್ಜಿ ಸ್ಟೇಟಸ್ ಮತ್ತು ಡೀಟೇಲ್ಸ್ ಎನ್ರೋಲ್ ಆಗಿರುವುದರ ಕುರಿತು ವಿವರ ಬರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ನೋಡಿ.!
https://youtu.be/SeQcSS2KopI?si=8-KIxAB7a3y-GVAQ