ಟಾಟಾ ಕಂಪನಿಯು (TATA) ಭಾರತದ ಒಂದು ಹೆಮ್ಮೆ ಅದರಲ್ಲೂ ಬಹಳ ತಯಾರಿಕ ಕಂಪನಿಗಳಲ್ಲಿ ಭಾರತದ ಪ್ರತಿಷ್ಠಿತ ಬ್ರಾಂಡ್ ಆಗಿದ್ದ ಕಂಪನಿ ಟಾಟಾ. ಈ ಮಧ್ಯೆ ಕೆಲವು ದಿನಗಳಲ್ಲಿ ಟಾಟಾ ಕಂಪನಿ ಸಾಕಷ್ಟು ಯೋಜನೆಗಳಲ್ಲಿ ಬ್ಯುಸಿ ಇದ್ದ ಕಾರಣದಿಂದಾಗಿ ಒಂದು ಹೆಜ್ಜೆ ವಾಹನಗಳ ತಯಾರಿಕೆ ವಿಷಯದಲ್ಲಿ ಹಿಂದೆ ಇದ್ದು ತಯಾರಿ ಶುರು ಮಾಡಿತ್ತು ಎಂದೇ ಹೇಳಬಹುದು.
ಯಾಕೆಂದರೆ, 2009 ರ ವರ್ಷದಲ್ಲಿ ಟಾಟಾ ನ್ಯಾನೋ ಬಿಡುಗಡೆಯು ಭಾರತದ ವಾಹನೋದ್ಯಮದಲ್ಲಿ ಮಹತ್ವದ ಮೈಲಿಗಲ್ಲು ಎಂದು ಗುರುತಿಸಿಕೊಂಡು ದೇಶದಾದ್ಯಂತ ಸದ್ದು ಮಾಡಿತ್ತು. ನಾಲ್ಕು ಚಕ್ರಗಳ ವಾಹನ ಖರೀದಿಯು ಜನಸಾಮಾನ್ಯರಿಗೂ ಸಾಧ್ಯವಾಗಬೇಕು ಎನ್ನುವ ಗುರಿ ಹೊಂದಿದ್ದ ಕಂಪನಿಗೆ ನಂತರ ನಾನಾ ಸಮಸ್ಯೆಗಳು ಎದುರಾಗಿ ಶೀಘ್ರವಾಗಿ ಅದನ್ನು ತಲುಪಲಾಗಲಿಲ್ಲ.
ಈ ಸುದ್ದಿ ಓದಿ:- ಇಂಡಿಯನ್ ಬ್ಯಾಂಕ್‌ನಲ್ಲಿ ಉದ್ಯೋಗವಕಾಶ, ವೇತನ 89,000 ಆಸಕ್ತರು ಅರ್ಜಿ ಸಲ್ಲಿಸಿ.!
ಆರಂಭಿಕ ಉತ್ಸಾಹದಿಂದ ಮುನ್ನುಗ್ಗಿದ್ದ ಟಾಟಾ ನ್ಯಾನೋ ಮಾರುಕಟ್ಟೆಯಲ್ಲಿ ಮಿಶ್ರ ವಿಮರ್ಶೆಗಳನ್ನು ಎದುರಿಸಿ ಮತ್ತು ಅಂತಿಮವಾಗಿ 2019ರಲ್ಲಿ ಅಂದರೆ ಯೋಜನೆ ಶುರುವಾದ ಹತ್ತೇ ವರ್ಷಗಳಲ್ಲಿ ಉತ್ಪಾದನೆಯನ್ನು ನಿಲ್ಲಿಸುವ ನಿರ್ಧಾರ ತೆಗೆದುಕೊಂಡಿತು. ತನ್ನೊಳಗಿದ್ದ ಗುರಿಯ ಜೊತೆ ಕಾಂಪ್ರಮೈಸ್ ಆಗಲು ಇಚ್ಚಿಸದ ಟಾಟಾ ಈಗ ಮತ್ತೊಂದು ರೂಪದಲ್ಲಿ ಜನಸಾಮಾನ್ಯರ ಎದುರಿಗೆ ಬರುತ್ತಿದೆ.
ಮುಂಬರುವ ದಿನಗಳಲ್ಲಿ ಟಾಟಾ ನ್ಯಾನೋ EV ಯೊಂದಿಗೆ ಜಯೆಮ್ ನಿಯೋ ಎಂದು ಮರುಬ್ರಾಂಡ್ ಆಗಿ ತನ್ನ ಹಿಂದಿನ ಕನಸಿಗೆ ಜೀವ ತುಂಬುತ್ತಿದೆ. ಬಹಳ ನಿರೀಕ್ಷೆ ಇರುವ ಟಾಟಾ ನ್ಯಾನೋ ಎಲೆಕ್ಟ್ರಿಕಲ್ ಕಾರ್ ವೈಶಿಷ್ಟ್ಯದ ಬಗ್ಗೆ ಮತ್ತು ಈ ಕುರಿತು ಸದ್ಯ ಬಿಡುಗಡೆ ಆಗಿರುವ ಅಪ್ಡೇಟ್ ಬಗ್ಗೆ ಈ ಲೇಖನದಲ್ಲಿ ವಿವರಿಸುತ್ತಿದ್ದೇವೆ.
ಈ ಸುದ್ದಿ ಓದಿ:-ಮಹಿಳೆಯರಿಗೆ ಉಚಿತ ಹೋಲಿಗೆ ತರಬೇತಿ.! ಆಸಕ್ತರು ಅರ್ಜಿ ಸಲ್ಲಿಸಿ ನಿಮ್ಮ ಹೆಸರು ನೋಂದಾಯಿಸಿಕೊಳ್ಳಿ.!
ವೈಶಿಷ್ಟ್ಯಗಳು:-
* Android Auto, Apple CarPlay, Bluetooth ಮತ್ತು ಇಂಟರ್ನೆಟ್ ಸಂಪರ್ಕದೊಂದಿಗೆ ಸುಸಜ್ಜಿತವಾಗಿರುವ ಜಯಮ್ ನಿಯೋ ಆಧುನಿಕ ಚಾಲನಾ ಅನುಭವವನ್ನು ನೀಡುತ್ತದೆ.
* 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ದೃಢವಾದ 6 ಸ್ಪೀಕರ್ ಸೌಂಡ್ ಸಿಸ್ಟಮ್, ಪವರ್ ಸ್ಟೀರಿಂಗ್, ಪವರ್ ವಿಂಡೋಸ್, IBS ಮತ್ತು EBD ಇರುವುದು ಸಾಕಷ್ಟು ಅನುಕೂಲತೆ ನೀಡುತ್ತಿದೆ ಮತ್ತು ಸುರಕ್ಷತೆ ವಿಚಾರದಲ್ಲಿ ಆದ್ಯತೆ ನೀಡುತ್ತಿದೆ ಎನ್ನುವುದನ್ನು ಕೂಡ ಖಾತ್ರಿಪಡಿಸುತ್ತದೆ.
* 17 kWh ಬ್ಯಾಟರಿ ಪ್ಯಾಕ್‌ನಿಂದ ತಯಾರಾಗುವ ಟಾಟಾ ನ್ಯಾನೋ EV ಯು ಒಮ್ಮೆಲೆ ಪೂರ್ತಿ ಚಾರ್ಜ್ ಮಾಡಿದರೆ ಪೂರ್ಣ ಚಾರ್ಜ್‌ನಲ್ಲಿ 300 ಕಿಲೋಮೀಟರ್‌ಗಳ ಸಾಗುವ ಸಾಮರ್ಥ್ಯ ಹೊಂದಿದೆ, ಇದು ಹತ್ತಿರದ ಪ್ರಯಾಣಕ್ಕೆ ಮಾತ್ರವಲ್ಲದೇ ದೂರದ ನಗರ ಪ್ರಯಾಣಕ್ಕೂ ಕೂಡ ಸೂಕ್ತವಾಗಿದೆ.
ಈ ಸುದ್ದಿ ಓದಿ:-ಹೊಸ ಬೈಕ್ ಅಥವಾ ಕಾರು ಖರೀದಿ ಮಾಡುವವರಿಗೆ ಬೇಸರದ ಸುದ್ದಿ, ವಾಹನಗಳ ಮೇಲೆ ತೆರಿಗೆ ಇನ್ನಷ್ಟು ಹೆಚ್ಚಳ.!
* ಗಂಟೆಗೆ 80 ಕಿಲೋಮೀಟರ್ ಗರಿಷ್ಠ ವೇಗ ಮತ್ತು ಗಂಟೆಗೆ 100 ಕಿಲೋಮೀಟರ್ ತಲುಪುವ ಸಾಮರ್ಥ್ಯವಿರುವ 40 kWh ಎಲೆಕ್ಟ್ರಿಕ್ ಮೋಟರ್ ಹೊಂದಿದೆ.
* ಹಸ್ತಚಾಲಿತ ಮತ್ತು ಸ್ವಯಂಚಾಲಿತ ಗೇರ್ ಶಿಫ್ಟಿಂಗ್ ಆಯ್ಕೆಗಳನ್ನು ನೀಡುವ ಜಯೆಮ್ ನಿಯೋ ವೈವಿಧ್ಯಮಯ ಚಾಲನಾ ಆದ್ಯತೆಗಳನ್ನು ಒದಗಿಸುತ್ತದೆ
* ಎಲ್ಲದಕ್ಕಿಂತ ಸಮಾಧಾನಕರ ಸಂಗತಿ ಏನೆಂದರೆ ದೇಶದ ಸಾಮಾನ್ಯ ವ್ಯಕ್ತಿಗೂ ಕೂಡ ಕೈಗೆಟಕುವ ಬೆಲೆಯಲ್ಲಿ ಇದನ್ನು ಮಾರುಕಟ್ಟೆಗೆ ಪರಿಚಯಿಸಲು ಕಂಪನಿ ಗುರಿ ಹೊಂದಿದೆ ಎನ್ನುವುದು. ಸದ್ಯಕ್ಕಿರುವ ಮಾಹಿತಿಯ ಪ್ರಕಾರವಾಗಿ 5 ಲಕ್ಷದ ಆಸುಪಾಸಿನಲ್ಲಿ ಈ ಎಲೆಕ್ಟ್ರಿಕಲ್ ವಾಹನವನ್ನು ಖರೀದಿಸುವ ಅವಕಾಶವನ್ನು ಕಂಪನಿ ನೀಡುತ್ತಿದೆ. ಆದಷ್ಟು ಬೇಗ ಇದು ಸಾಧ್ಯವಾಗಲಿ ಕೂಡಲೇ ಅಧಿಕೃತವಾಗಿ ಕಂಪನಿ ಈ ಟಾಟಾ ನ್ಯಾನೋ ಎಲೆಕ್ಟ್ರಿಕಲ್ ಕಾರ್ ಪರಿಚಯಿಸಿ ಅಧಿಕೃತವಾಗಿ ಘೋಷಿಸುವಂತಾಗಲಿ ಎಂದು ನಾವು ಬಯಸೋಣ.
ಈ ಸುದ್ದಿ ಓದಿ:-ಸಾರಿಗೆ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ, ಆಸಕ್ತರು ಅರ್ಜಿ ಸಲ್ಲಿಸಿ.! ವೇತನ 62,600