ಸರ್ಕಾರದ ಗ್ಯಾಂಟಿ ಕಾರ್ಡ್ ಯೋಜನೆಗಳಲ್ಲಿ (Gyarantee Scheme) ಒಂದಾದ ಗೃಹಲಕ್ಷ್ಮಿ ಯೋಜನೆ (Gruhalakshmi Scheme) ಆದೇಶ ಹೊರಬಿದ್ದ ದಿನದಿಂದಲೂ ಕೂಡ ಒಂದಲ್ಲ ಒಂದು ಕಾರಣಕ್ಕಾಗಿ ಈ ಯೋಜನೆಯ ಸಂಬಂಧಿತ ದಿನಾಂಕಗಳು ಮುಂದಕ್ಕೆ ಹೋಗುತ್ತಲೇ ಇದೆ ಮೊದಲಿಗೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆಗೆ ಬಹಳ ಬಾರಿ ದಿನಾಂಕವನ್ನು ಮುಂದೂಡಲಾಗಿತ್ತು.
ಅಂತಿಮವಾಗಿ ಜುಲೈ 19 ರಿಂದ ಸರ್ಕಾರವು ಕುಟುಂಬದ ಯಜಮಾನಿಯರಿಗೆ (Head Women of the family) ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಟ್ಟಿದೆ. ಇವತ್ತಿನ ದಿನಾಂಕದವರೆಗೆ ಕರ್ನಾಟಕದಲ್ಲಿ 1.23 ಕೋಟಿಗಿಂತಲೂ ಹೆಚ್ಚು ಮಹಿಳೆಯರು ಅರ್ಜಿ ಸಲ್ಲಿಸಿದ್ದಾರೆ ಎನ್ನುವ ಮಾಹಿತಿ ಇದೆ.
ಇನ್ನು ಸಹ ಲಕ್ಷಾಂತರ ಮಹಿಳೆಯರು ಅರ್ಜಿ ಸಲ್ಲಿಸುವುದು ಬಾಕಿಯಿದ್ದು ಅವರ ಪಡಿತರ ಚೀಟಿ ಸಂಖ್ಯೆ ಮತ್ತು ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಮಾಹಿತಿಯಲ್ಲಿ ಹೊಂದಾಣಿಕೆ ಆಗದ ಕಾರಣಕ್ಕಾಗಿ ತಿದ್ದುಪಡಿ ಆಗುವವರೆಗೂ ಅವರು ಕಾಯಬೇಕಾಗಿದೆ. ಗೃಹಲಕ್ಷ್ಮಿ ಯೋಜನೆಯ ಹಣ ವರ್ಗಾವಣೆ (Gruhalaksmi launch) ಆಗುವ ದಿನಾಂಕದ ಬಗ್ಗೆಯೂ ಕೂಡ ಇದೇ ರೀತಿ ದಿನಾಂಕಗಳು ಮುಂದೆ ಹೋಗುತ್ತಲೇ ಇದೆ.
ಆದೇಶ ಪತ್ರ ಹೊರ ಬಿದ್ದ ದಿನದಂದು ಮಾನ್ಯ ಮುಖ್ಯಮಂತ್ರಿಗಳು (CM) ಸ್ವತಂತ್ರ ದಿನಾಚರಣೆ ಪ್ರಯುಕ್ತ (Independence day) ಆಗಸ್ಟ್ 15ರಂದು ಯೋಜನೆ ಲಾಂಚ್ ಮಾಡಲಿದ್ದಾರೆ ಎಂದು ತಿಳಿಸಲಾಗಿತ್ತಾದರೂ ಪದೇ ಪದೇ ಈ ದಿನಾಂಕ ಬದಲಾವಣೆಯಾಗಿದೆ. ಅಂತಿಮವಾಗಿ ಬೆಳಗಾವಿಯಲ್ಲಿ (Belaghavi) ಆಗಸ್ಟ್ 27ರಂದು ಅದ್ದೂರಿಯಾಗಿ ಕಾರ್ಯಕ್ರಮ ನಡೆಸಿ AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjuna Kharge) ಮತ್ತು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ (Soniya Gandhi) ಅವರಿಂದ ಯೋಜನೆ ಲಾಂಚ್ ಮಾಡಿಸಲಾಗುವುದು.
ರೈತರಿಗೆ ಗುಡ್ ನ್ಯೂಸ್, ರಸಗೊಬ್ಬರಗಳ ಬೆಳೆ ಇಳಿಕೆ, ಯೂರಿಯ ಹಾಗೂ DAP ಬೆಲೆ ಎಷ್ಟಾಗಿದೆ ನೋಡಿ.!
ಆಗಸ್ಟ್ 28ರಂದು ಫಲಾನುಭವಿಗಳ ಖಾತೆಗೆ DBT ಹಣ ವರ್ಗಾವಣೆಯಾಗುತ್ತದೆ ಎಂದು ಇತ್ತೀಚಿಗಷ್ಟೇ ಒಂದು ಸುದ್ದಿಗೋಷ್ಠಿಯಲ್ಲಿ ಮಾನ್ಯ ಉಪಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ (DCM D.K Shivakumar) ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ (Minister Lakshmi Hebbalkar) ಅವರು ತಿಳಿಸಿದ್ದರು.
ಆದರೆ ಈಗ ಆ ದಿನಕ ಕೂಡ ಮುಂದೆ ಹೋಗಿದೆ ಈ ಕಾರ್ಯಕ್ರಮವು ಇನ್ನೆರಡು ದಿನಗಳ ಕಾಲ ಮುಂದೆ ಹೋಗುವ ಸಾಧ್ಯತೆ ಇತ್ತು ಸಹಜವಾಗಿ ಮಹಿಳೆಯರ ಖಾತೆಯ ಹಣ ವರ್ಗಾವಣೆ ಯಾಗುವುದು ಕೂಡ ಮುಂದೆ ಹೋಗಲಿದೆ. ಇದರ ಜೊತೆಗೆ ಯಾರೆಲ್ಲಾ ಗೃಹಲಕ್ಷ್ಮಿ ಯೋಜನೆಗೆ ಅನರ್ಹರಾಗಿದ್ದಾರೆ (Disqualified list) ಎನ್ನುವ ಪಟ್ಟಿಯನ್ನು ಸರ್ಕಾರ ಬಿಡುಗಡೆ ಮಾಡಿದೆ ಈಗ ನಾವು ಹೇಳುವ ಈ ವಿಧಾನದ ಮೂಲಕ ನೀವು ಕೂಡ ಆ ಪಟ್ಟಿಯಲ್ಲಿ ಇದ್ದೀರಾ ಎಂದು ಚೆಕ್ ಮಾಡಿಕೊಳ್ಳಬಹುದು.
ಹೃದಯಘಾ-ತ ಉಂಟು ಮಾಡುವ ಅಪಾಯಕಾರಿ ಅಂಶಗಳು ಇವು, ಒಮ್ಮೆ ಡಾಕ್ಟರ್ ಅಂಜನಪ್ಪ ಅವರ ಮಾತು ಕೇಳಿ.!
● ನೇರವಾಗಿ https://ahara.kar.nic.in/Home/EServices ಲಿಂಕ್ ಕ್ಲಿಕ್ ಮಾಡಿ.
● ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ ಓಪನ್ ಆಗುತ್ತದೆ ಎಡ ಭಾಗದಲ್ಲಿ ಮೂರು ಕೆರೆಗಳು ಕಾಣುತ್ತದೆ, ಅದರ ಮೇಲೆ ಕ್ಲಿಕ್ ಮಾಡಿ.
● e-Ration Card ಎಂಬ ಆಯ್ಕೆ ಸಿಗುತ್ತದೆ, ಅದರಲ್ಲಿ Show Cancelled /Suspended ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ.
● ನಿಮಗೆ ಲಿಸ್ಟ್ ಓಪನ್ ಆಗುತ್ತದೆ ಅದರಲ್ಲಿ ನಿಮ್ಮ ಜಿಲ್ಲೆ, ತಿಂಗಳು ಹಾಗೂ ತಾಲೂಕನ್ನು ಆಯ್ಕೆ ಮಾಡಿಕೊಳ್ಳಿ.
● ನೀವು ಅನರ್ಹರ ಪಟ್ಟಿಯನ್ನು ನೋಡಬಹುದು, ಅದರಲ್ಲಿ ರದ್ದಾಗಿರುವ ರೇಷನ್ ಕಾರ್ಡ್ ಗಳಲ್ಲಿ ಇಷ್ಟು ಮತ್ತು ಅದಕ್ಕೆ ಕಾರಣ ಕೂಡ ಇರುತ್ತದೆ. ಆ ರೇಷನ್ ಕಾರ್ಡ್ ಕುಟುಂಬದ ಯಜಮಾನಿಯು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಸಾಧ್ಯವಾಗುವುದಿಲ್ಲ.
● show Cancelled / Suspended list ಬದಲು show village list ಮೇಲೆ ಕ್ಲಿಕ್ ಮಾಡಿ ನಂತರ ಕಾಣುವ ಲಿಸ್ಟ್ ಅಲ್ಲಿ ನಿಮ್ಮ ಜಿಲ್ಲೆ, ತಾಲೂಕು ಮತ್ತು ಗ್ರಾಮದ ಹೆಸರನ್ನು ಸೆಲೆಕ್ಟ್ ಮಾಡಿದರೆ ನಿಮ್ಮ ಗ್ರಾಮದಲ್ಲಿ ಯಾರೆಲ್ಲ ಪಡಿತರ ಚೀಟಿ ಹೊಂದಿದ್ದಾರೆ ಎನ್ನುವ ಲಿಸ್ಟ್ ಬರುತ್ತದೆ. ಆ ಕುಟುಂಬದ ಯಜಮಾನಿ ಮಹಿಳೆ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಯಾಗಬಹುದು.