Deprecated: strtolower(): Passing null to parameter #1 ($string) of type string is deprecated in /home/u302298408/domains/rishithepower.com/public_html/wp-content/plugins/taboola/simple_html_dom.php on line 712
ಸೈಬರ್ ಕ್ರೈಂ (cyber crime) ಎನ್ನುವ ವಿಷಯವನ್ನು ಈಗಿನ ಕಾಲದಲ್ಲಿ ಹೆಚ್ಚಾಗಿ ಕೇಳುತ್ತಿದ್ದೇವೆ. ಅದರಲ್ಲೂ ಸೈಬರ್ ಕ್ರೈಂ ನಲ್ಲಿ ಹ’ಣ’ವಂ’ಚ’ನೆ ಕೇಸ್ ಗಳು ಹೆಚ್ಚಾಗಿ ದಾಖಲಾಗುತ್ತಿವೆ. ನಮ್ಮ ಖಾತೆಯಿಂದ ಹಣ ಹೋಗಿ ನಾವು ಅದನ್ನು ಚೆಕ್ ಮಾಡುವವರೆಗೆ ಅಥವಾ ಅದಕ್ಕೆ ಸಂಬಂಧಿಸಿದ ಹಾಗೆ SMS ಗಳು ಬರುವವರೆಗೂ ಕೂಡ ಈ ರೀತಿ ವಂಚನೆಗೆ ಒಳಗಾಗಿದ್ದೇವೆ ಎನ್ನುವುದರ ಸುಳಿವು ಕೂಡ ಗೊತ್ತಾಗುವುದಿಲ್ಲ. ಆ ರೀತಿ ಖದೀಮರು ಜಾಲ ಸೃಷ್ಟಿಸಿದ್ದಾರೆ.
ಮುಂದುವರೆದು ನಮ್ಮ ಆಧಾರ್ ಕಾರ್ಡ್ ನಂಬರ್ ಬಳಸಿ AEPS BE ಮೂಲಕ ಲೀಲಾಜಾಲವಾಗಿ ಹಣ ಕದಿಯುತ್ತಿದ್ದಾರೆ. ಇದನ್ನು ತಪ್ಪಿಸಲು ಆಧಾರ್ ನಲ್ಲಿ ಬಯೋಮೆಟ್ರಿಕ್ ಲಾಕ್ (biometric lock) ಮಾಡುವುದು ಸೂಕ್ತ. ಈಗ ಬ್ಯಾಂಕ್ ಗಳು ಕೂಡ ಇದರ ಸಂಬಂಧಿತ SMS ಗಳನ್ನು ಕಳುಹಿಸಿ ಎಚ್ಚರಿಸುತ್ತಿವೆ.
My aadhar app ಮೂಲಕ ಅಥವಾ UIDAI ಪೋರ್ಟಲ್ ಗೆ ಭೇಟಿ ಕೊಡುವ ಮೂಲಕ ಅನಧೀಕೃತ ವ್ಯಕ್ತಿಗಳ ಪ್ರವೇಶವನ್ನು ನಾವು ನಿರ್ಬಂಧಿಸಬಹುದು. ಮತ್ತು ಮುಂದಿನ ದಿನಗಳಲ್ಲಿ ನಮಗೆ ಅವಶ್ಯಕತೆ ಇದ್ದಾಗ ಇದನ್ನು ನಾವು ಅನ್ಲಾಕ್ ಕೂಡ ಮಾಡಿಕೊಳ್ಳಬಹುದು.
ಆಧಾರ್ ಕಾರ್ಡ್ ಬಯೋಮೆಟ್ರಿಕ್ ಲಾಕ್ ಮಾಡುವ ವಿಧಾನ:-
uidai.gov.in/ ಅಥವಾ myaadhar.uidai.gov.in ಈ ಲಿಂಕ್ ಕ್ಲಿಕ್ ಮಾಡುವ ಮೂಲಕ ಆಧಾರ್ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ.
* ಮೆನುಬಾರ್ ನಲ್ಲಿ ಎಡಭಾಗದಲ್ಲಿರುವ myaadharಎನ್ನುವ ಆಪ್ಷನ್ ಮೇಲೆ ಕ್ಲಿಕ್ ಮಾಡಿ
* aadhar services list ಕಾಣುತ್ತದೆ ಕೊನೆಯಲ್ಲಿ lock/unlock biometric ಎನ್ನುವ ಆಪ್ಷನ್ ಕಾಣುತ್ತದೆ ಅದನ್ನು ಸೆಲೆಕ್ಟ್ ಮಾಡಿ my aadhar page ಓಪನ್ ಆಗುತ್ತದೆ log in ಕ್ಲಿಕ್ ಮಾಡಿ
* Aadhar number ಮತ್ತು ನೀಡಿರುವ captcha ವನ್ನು ನಮೂದಿಸಿ send otp ಮೇಲೆ ಕ್ಲಿಕ್ ಮಾಡಿ, otp ಹಾಕಿ login ಆಗಿ.
* my aadhar ಗೆ login ಆಗಿರುತ್ತೀರಿ ಸ್ಕ್ರೋಲ್ ಮಾಡಿದರೆ lock/unlock biometrics ಆಪ್ಷನ್ ಕಾಣುತ್ತದೆ, ಅದನ್ನು ಕ್ಲಿಕ್ ಮಾಡಿ ಮುಖಪುಟದಲ್ಲಿ ತೋರಿಸುವ ವಿರಗಳನ್ನು ಓದಿಕೊಂಡು next ಎನ್ನುವ ಆಪ್ಷನ್ ಕ್ಲಿಕ್ ಮಾಡಿ.
* authentication ಓದಿ, lock biometrics ಎನ್ನುವ ಆಪ್ಷನ್ ಸೆಲೆಕ್ಟ್ ಮಾಡಿ. your biometric have been locked succesfully ಎನ್ನುವುದನ್ನು ಕಾಣುತ್ತೀರಿ ಹೀಗಾದರೆ ಲಾಕ್ ಆಗಿದೆ ಎಂದರ್ಥ.
* ಇದು ಸಕ್ಸಸ್ ಆದಮೇಲೆ logout ಆಗಿ.
ನೀವು ಬ್ಯಾಂಕ್ ಗಳಲ್ಲಿ ನಿಮ್ಮ ಆಧಾರ್ ಕಾರ್ಡ್ ನೀಡುವಾಗ ಥಂಬ್ ಇಂಪ್ರೆಶನ್ (thumb impression) ಕೊಡಬೇಕಾದ ಸಂದರ್ಭ ಇದ್ದರೆ ಅಥವಾ ನಿಮ್ಮ ಆಧಾರ್ ಕಾರ್ಡ್ ತಿದ್ದುಪಡಿ ಮಾಡಿಸುವ thumb impression ನೀಡಬೇಕಾದ ಅಥವಾ ಇನ್ಯಾವುದೇ ಸಮಯಗಳಲ್ಲಿ ನಿಮ್ಮ ಬಯೋಮೆಟ್ರಿಕ್ ನೀಡಬೇಕಿದ್ದಾಗ unlock ಮಾಡಬೇಕಾಗುತ್ತದೆ. ಆಗಲು ಕೂಡ ಈ ಮೇಲೆ ತಿಳಿಸಿದ ವಿಧಾನವನ್ನೇ ಬಳಸಿ lock / unlock ಆಪ್ಷನ್ ಗೆ ಹೋಗಿ, ಲಾಕ್ ಆಗಿರುವ ಸಿಂಬಲ್ ಕಾಣಿಸುತ್ತದೆ.
ಕ್ಲಿಕ್ ಮಾಡಿದರೆ temporary unlock or permanent unlock ಎನ್ನುವ ಎರಡು ಆಪ್ಷನ್ ಗಳನ್ನು ಕಾಣುತ್ತೀರಿ. ನೀವೇನಾದರೂ myaadhar ಮೂಲಕ temporary unlock ಸೆಲೆಕ್ಟ್ ಮಾಡಿದರೆ 10 ನಿಮಿಷಗಳ ಕಾಲ ಅವಕಾಶ ಇರುತ್ತದೆ, UIDAI portal ಮೂಲಕ ಟೆಂಪರರಿ ಅನ್ಲಾಕ್ ಮಾಡಿದರೆ ಒಂದು ಗಂಟೆಗಳ ಅವಕಾಶ ಇರುತ್ತದೆ. ಅಷ್ಟರೊಳಗೆ ನೀವು ನಿಮ್ಮ ಬಯೋಮೆಟ್ರಿಕ್ ನೀಡಿ ಆ ಕಾರ್ಯ ಪೂರ್ತಿಗೊಳಿಸಬೇಕು ಇಲ್ಲವಾದಲ್ಲಿ ಆಟೋಮೆಟಿಕ್ ಆಗಿ ಮತ್ತೆ ಆಧಾರ್ ಲಾಕ್ ಆಗುತ್ತದೆ.