ನಮ್ಮ ದೇಶ ಸಂಸ್ಕೃತಿ, ಸಂಪ್ರದಾಯ, ಪದ್ಧತಿ ಹಾಗೂ ಶಾಸ್ತ್ರಗಳನ್ನು ನಂಬಿರುವ ದೇಶ. ಸಹಸ್ರಾರು ವರ್ಷಗಳಿಂದ ಇವುಗಳನ್ನು ಅಚ್ಚುಕಟ್ಟಾಗಿ ಪಾಲನೆ ಮಾಡುತ್ತಾ ಬಂದಿದ್ದೇವೆ. ಇತ್ತೀಚೆಗೆ ನಮ್ಮ ನೂತನ ಸಂಸತ್ತು ಭವನ ಉದ್ಘಾಟನೆ ನಡೆಯಿತು. ಇದು ಎಷ್ಟು ಶಾಸ್ತ್ರೋಕ್ತವಾಗಿ ನಡೆಯಿತು ಎನ್ನುವುದು ಶಾಸ್ತ್ರಕ್ಕಿರುವ ಶಕ್ತಿಯನ್ನು ಸಾರುತ್ತದೆ.
ವಿಧಾನ ಸೌಧದಲ್ಲಿಯೂ ಅಧಿಕಾರ ಸಿಕ್ಕ ಕೂಡಲೇ ಅದೃಷ್ಟದ ಸಂಖ್ಯೆಯ ಕೊಠಡಿ ಸೇರುವುದು ಅಥವಾ ಅದೃಷ್ಟದ ದಿಕ್ಕಿಗೆ ಬಾಗಿಲು ಬದಲಾಯಿಸಿಕೊಳ್ಳುವುದು ತುಂಬಾ ಪ್ರಾಕ್ಟಿಕಲ್ ಆಗಿರುವವರು ಕೂಡ ವಾಸ್ತು ಶಾಸ್ತ್ರವನ್ನು ಎಷ್ಟು ನಂಬುತ್ತಾರೆ ಎನ್ನುವುದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ.
ಸರ್ಕಾರಿ ಜಾಗದಲ್ಲಿ ಕೃಷಿ ಮಾಡುತ್ತಿರುವವರು ಹಾಗೂ ಮನೆ ನಿರ್ಮಿಸಿಕೊಂಡಿರುವವರಿಗೆ ಗುಡ್ ನ್ಯೂಸ್.!
ನಾವು ಆಸ್ಪತ್ರೆಗೆ ಹೋದರು ಕೂಡ ವೈದ್ಯರ ಬಾಯಿಯಲ್ಲೂ ಕೂಡ ದೇವರ ಬಗೆಗಿನ ನಂಬಿಕೆ. ಆಚಾರ ವಿಚಾರದ ಬಗ್ಗೆ ಮಾತುಗಳನ್ನು ಕೇಳುತ್ತೇವೆ ಇದು ಇದಕ್ಕೆಲ್ಲ ಎಷ್ಟು ಶಕ್ತಿ ಇದೆ ಎನ್ನುವುದನ್ನು ಸಾರಿ ಹೇಳುತ್ತದೆ. ಎಲ್ಲವೂ ಕೂಡ ಮೂಢನಂಬಿಕೆಯಲ್ಲ, ಹಿರಿಯರು ಎಲ್ಲವನ್ನು ಕುಲಂಕುಶವಾಗಿ ಲೆಕ್ಕಾಚಾರ ಹಾಕಿಯೇ ಇವುಗಳನ್ನು ಉಲ್ಲೇಖಿಸಿ ಹೋಗಿರುವುದು.
ಹಾಗೆಯೇ ವಾಸ್ತು ಶಾಸ್ತ್ರದಲ್ಲಿ ಕೂಡ ಮನೆಯ ವಾಸ್ತು ಹೇಗಿರಬೇಕು, ಮನೆಗೆ ಎಷ್ಟು ಬಾಗಿಲು ಇರಬೇಕು, ಕಿಟಕಿ ಯಾವ ರೀತಿ ಇರಬೇಕು, ಯಾವ ರೀತಿ ಬಾಗಿಲು ಇದ್ದರೆ ಮನೆಗೆ ಒಳಿತಾಗುತ್ತದೆ, ಕೆಡುಕಾಗುತ್ತದೆ, ಯಾವ ದಿಕ್ಕಿನಲ್ಲಿ ಬಾಗಿಲು ಇರಬಾರದು, ಹೀಗೆ ಮನೆಯ ಮೂಲೆ ಮೂಲೆ ಹಾಗೂ ದಿಕ್ಕು ದಿಕ್ಕುಗಳ ವಿಷಯವನ್ನು ಸಂಕ್ಷಿಪ್ತವಾಗಿ ಕಾರಣ ಸಮೇತ ತಿಳಿಸಿದ್ದಾರೆ.
ರೈತರಿಗೆ ಗುಡ್ ನ್ಯೂಸ್ ಇನ್ಮುಂದೆ ಹಗಲಿನಲ್ಲಿ ವಿದ್ಯುತ್ ನೀಡಲು ಹೊಸ ಯೋಜನೆ ಜಾರಿ.!
ಇದನ್ನು ನಾವು ಕಂಡ ಉದಾಹರಣೆಗಳೊಂದಿಗೆ ತಾಳೆ ಹಾಕಿ ನೋಡಿದಾಗ ಮಾತ್ರ ನಮಗೆ ಸತ್ಯದರ್ಶನವಾಗುತ್ತದೆ. ಸದ್ಯಕ್ಕೆ ಈಗ ಅದರಲ್ಲಿ ಅತ್ಯಂತ ಮುಖ್ಯ ವಿಷಯವಾದ ಮನೆ ಬಾಗಿಲನ ವಿಚಾರದ ಕುರಿತು ಕೆಲ ಪ್ರಮುಖ ಅಂಶವನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ. ಮನುಷ್ಯನಿಗೆ ಬಾಯಿ ಎಷ್ಟು ಮುಖ್ಯವೋ ಮನೆ ಒಂದಕ್ಕೆ ಬಾಗಿಲು ಕೂಡ ಅಷ್ಟೇ ಮುಖ್ಯ.
ನಮ್ಮ ದೇಹದ ಆರೋಗ್ಯ ಹೇಗೆ ನಾವು ಬಾಯಿಯಿಂದ ತಿನ್ನುವ ಆಹಾರದ ಮೂಲಕ ಹಾಗೂ ನಮ್ಮ ವ್ಯಕ್ತಿತ್ವ ನಮ್ಮ ಬಾಯಿಯಲ್ಲಿ ಬರುವ ವಿಚಾರಗಳಿಂದ ಬಿಂಬಿತವಾಗುತ್ತದೆಯೋ ಹಾಗೆ ಮನೆಯೊಂದರ ಏಳಿಗೆ ಅದೃಷ್ಟ ದುರಾದೃಷ್ಟ ಎಲ್ಲವೂ ಕೂಡ ಆ ಮನೆಯ ಮುಖ್ಯದ್ವಾರದಿಂದ ನಿರ್ಧಾರವಾಗುತ್ತದೆ.
ಆಹಾರ ಇಲಾಖೆಯಿಂದ ಮತ್ತೊಮ್ಮೆ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ.!
ಅದಕ್ಕಾಗಿ ಇದನ್ನು ಸಿಂಹದ್ವಾರ ಎಂದು ಕೂಡ ಕರೆಯುತ್ತಾರೆ ಈ ಮುಖ್ಯದ್ವಾರ ಅದೃಷ್ಟದ ದಿಕ್ಕಿನಲ್ಲಿ ಇರಬೇಕು, ಯಾವ ರಾಶಿ ಹಾಗೂ ಯಾವ ನಕ್ಷತ್ರದವರಿಗೆ ಯಾವ ದಿಕ್ಕಿನ ಮನೆ ಆಗಿಬರುತ್ತದೆ ಎಂದು ವಾಸ್ತುಶಾಸ್ತ್ರಗಳಲ್ಲಿ ಹೇಳಲಾಗಿದೆ, ಇವುಗಳನ್ನು ಮೀರಿ ಎಲ್ಲ ರಾಶಿಯವರಿಗು ಕೂಡ ಆಗಿಬರುವ ಕೆಲ ದಿಕ್ಕಿನ ಬಾಗಿಲುಗಳು ಕೂಡ ಇವೆ.
ವಾಸ್ತು ಶಾಸ್ತ್ರದ ಪ್ರಕಾರ ಪೂರ್ವ ದಿಕ್ಕಿನಲ್ಲಿ ಮುಖ್ಯ ದ್ವಾರ ಇದ್ದರೆ ಜಯ, ಪಶ್ಚಿಮ ದಿಕ್ಕಿಗಿದ್ದರೆ ಶಾಂತಿ, ಉತ್ತರಕ್ಕೆ ಇದ್ದರೆ ಸಂಪತ್ತು ಹಾಗೂ ದಕ್ಷಿಣದ ದ್ವಾರ ಮೋಕ್ಷ ಎಂದು ಹೇಳಲಾಗುತ್ತದೆ. ಮನೆ ಕಟ್ಟಿಸುವವರು, ಖರೀದಿಸುವವರು ಮಾತ್ರವಲ್ಲದೆ ಮನೆ ಬಾಡಿಗೆಗೆ ಹೋಗುವಾಗಲೂ ಕೂಡ ವಾಸ್ತುವನ್ನು ನೋಡುತ್ತಾರೆ.
ಈ ರೀತಿ ಎಲ್ಲ ರಾಶಿಯವರಿಗೂ ಸೂಕ್ತವಾಗಿರುವ ಒಂದು ದಿಕ್ಕು ಎಂದರೆ ಅದು ಉತ್ತರ ದಿಕ್ಕು. ಉತ್ತರ ದಿಕ್ಕಿನ ದಿಕ್ಕನ್ನು ಕುಬೇರನ ದಿಕ್ಕು ಎಂದು ಹೇಳುತ್ತಾರೆ ಹಾಗಾಗಿ ಪ್ರಧಾನ ದ್ವಾರ ಉತ್ತರಕ್ಕೆ ಇರುವ ಮನೆಗಯು ಎಲ್ಲರಿಗೂ ಆಗಿಬರುತ್ತದೆ. ಇನ್ನು ಒಂದು ಮನೆಗೆ ಎಷ್ಟು ಬಾಗಿಲಿರಬೇಕು, ಎಷ್ಟು ಬಾಗಿಲು ಇದ್ದರೆ ಏನು ಫಲ ಎನ್ನುವುದರ ವಿವರ ಹೇಗಿದೆ.
ಒಂದು ಬಾಗಿಲು ಶುಭ, ಎರಡು ಒಳ್ಳೆಯದು, ಮೂರು ಕಲಹ ಹಾಗೂ ಶತ್ರು ವೃದ್ಧಿ , ನಾಲ್ಕು ಆಯಸ್ಸು, ಐದು ರೋಗ ಹಾಗೂ ಮೃ.ತ್ಯು. ಆರು ಪುತ್ರ ಪ್ರದ, ಏಳು ಮೃತ್ಯು , ಎಂಟು ಚಿರ ಭಾಗ್ಯ, ಒಂಬತ್ತು ದೇಹ ಪೀಡೆ ಮತ್ತು ನಾಶ, ಹತ್ತು ವ್ಯಾಪಾರಾಭಿವೃದ್ಧಿ ಎಂದು ಹೇಳಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ನೋಡಿ.!