ಬ್ರೆಸ್ಟ್ ಕ್ಯಾನ್ಸರ್ ನಾ ಲಕ್ಷಣಗಳು ಇವು.! ಹೆಣ್ಣುಮಕ್ಕಳು ಈ ವಿಷಯವನ್ನು ತಿಳಿದುಕೊಂಡಿರಲೇಬೇಕು.!

ಹೆಣ್ಣು ಮಕ್ಕಳನ್ನು (ladies) ಕಾಡುತ್ತಿರುವ ಹಲವು ಮಾ’ರ’ಣಾಂ’ತಿ’ಕ ಕಾಯಿಲೆಗಳಲ್ಲಿ ಬ್ರೆಸ್ಟ್ ಕ್ಯಾನ್ಸರ್ (Breast Cancer) ಕೂಡ ಒಂದು. ಆದರೆ ಇಲ್ಲಿ ಬಹಳ ಖೇ’ದ’ನೀ’ಯ ಸಂಗತಿ ಏನೆಂದರೆ ಇದರ ಬಗ್ಗೆ ಜಾಗೃತಿ ಇಲ್ಲದೆ ಅನೇಕ ಹೆಣ್ಣು ಮಕ್ಕಳು ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

WhatsApp Group Join Now
Telegram Group Join Now

ಯಾವ ಕ್ಯಾನ್ಸರ್ ಕೂಡ ವಂಶವಾಹಿನಿಯಿಂದ (heridity) ಬರುವುದಿಲ್ಲ ಆದರೆ ಸ್ತನ ಕ್ಯಾನ್ಸರ್ ಹೊರತುಪಡಿಸಿ, ತಾಯಿಯ ಸಂಬಂಧಿಕರಲ್ಲಿ ಅಂದರೆ ತಾಯಿ ದೊಡ್ಡಮ್ಮ ಚಿಕ್ಕಮ್ಮ ಅಥವಾ ತಾಯಿ ಕಡೆಯ ಅಜ್ಜಿ ಇವರುಗಳ ಕಡೆಯಲ್ಲಿ ಯಾರಿಗಾದರೂ ಬ್ರೆಸ್ಟ್ ಕ್ಯಾನ್ಸರ್ ಇದ್ದರೆ ಅಂತಯವರು ಎಚ್ಚರಿಕೆಯಿಂದ ಇರಬೇಕು.

ಬ್ರೆಸ್ಟ್ ಕ್ಯಾನ್ಸರ್ ಸ್ಟೇಜ್ 2B ವರೆಗೂ ಕೂಡ ಗುಣಪಡಿಸಬಹುದಾದ ಕಾಯಿಲೆ, ಆದರೆ ಆ ಹಂತ ದಾಟಿದರೆ ಅದು ಅಡ್ವಾನ್ಸ್ ಕ್ಯಾನ್ಸರ್ ಆಗಿಬಿಡುತ್ತದೆ. ಹಾಗಾಗಿ ಹೆಣ್ಣು ಮಕ್ಕಳು ಹೇಗೆ ಈ ಲಕ್ಷಣಗಳನ್ನು ಗುರುತಿಸಬೇಕು ಎನ್ನುವ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.

ಹೆಣ್ಣು ಮಕ್ಕಳಿಗೆ ಎದೆ ಹಾಗೂ ಕಂಕುಳ ಭಾಗದಲ್ಲಿ ಗಂಟುಗಳು (lump) ಆಗಿರುತ್ತವೆ, ಮತ್ತು ಅವರ ನಿಪಲ್ ನಲ್ಲಿ ರಕ್ತ, ಹಾಲು ಅಥವಾ ಹಸಿರು ದ್ರವ ಆಚೆ ಬರುತ್ತಿದ್ದರೆ ಅವರ ಒಳ ವಸ್ತ್ರಗಳಲ್ಲಿ ಯಾವುದೇ ರೀತಿಯ ಕರೆ ಆಗುತ್ತಿದ್ದರೆ ಇದು ಕ್ಯಾನ್ಸರ್ ಲಕ್ಷಣ ಇರಬಹುದು, ಹೆಚ್ಚಿನ ಸಮಯದಲ್ಲಿ ಇದರಲ್ಲಿ ನೋ’ವು ಕೂಡ ಇರುವುದಿಲ್ಲ.

ಹಾಗಾಗಿ ದೇಹದಲ್ಲಿ ಯಾವುದೇ ರೀತಿಯ ಗಂಟುಗಳು ಕಾಣಿಸಿದರು ಅದರಲ್ಲೂ ಹೆಣ್ಣು ಮಕ್ಕಳು ಅವರ ಸ್ತನ ಅಥವಾ ಕಂಕುಳ ಭಾಗದಲ್ಲಿ ಯಾವುದೇ ರೀತಿಯ ಗಂಟು ಕಾಣಿಸಿಕೊಂಡರು ಮೊದಲು ಸೂಕ್ತ ವೈದ್ಯರನ್ನು ಭೇಟಿಯಾಗಿ ಸಲಹೆ ಪಡೆಯಬೇಕು. ಅದು ಕ್ಯಾನ್ಸರ್ ಅಲ್ಲವೋ ಎನ್ನುವುದನ್ನು ಅಲ್ಟ್ರಾ ಸೌಂಡ್ಸ್ ಸ್ಕ್ಯಾನ್, CT ಸ್ಕ್ಯಾನ್, MRI ಸ್ಕ್ಯಾನ್ ಅಥವಾ ಪೆಟ್ ಸ್ಕ್ಯಾನ್ ಮೂಲಕ ವೈದ್ಯರು ಕಂಡುಹಿಡಿಯುತ್ತಾರೆ.

ಕ್ಯಾನ್ಸರ್ ಬರುವುದಕ್ಕೆ ಕಾರಣವೇನೆಂದು ತಿಳಿದುಕೊಂಡರೆ ಆದಷ್ಟು ಇದನ್ನು ದೂರ ಇಡಬಹುದು. ಹೆಣ್ಣುಮಕ್ಕಳು ಹೆಚ್ಚು ದಪ್ಪವಾದಂತೆ ಅನೇಕ ರೋಗಗಳು ಬರುತ್ತವೆ ಅದರಲ್ಲಿ ಇದು ಒಂದು , ಒವರಿ ಕ್ಯಾನ್ಸರ್ ಇದ್ದವರಿಗೆ ನಂತರ ಬ್ರೆಸ್ಟ್ ಕ್ಯಾನ್ಸರ್ ಆಗುವ ಸಾಧ್ಯತೆಗಳು ಇರುತ್ತದೆ, ಹಾಗಾಗಿ ಓವರಿ ಕ್ಯಾನ್ಸರ್ ಇದ್ದವರು ಎಚ್ಚರಿಕೆಯಿಂದ ಇರಿ.

ಹೆಣ್ಣು ಮಕ್ಕಳು ಧೂಮಪಾನ ಹಾಗೂ ಮಧ್ಯಪಾನದಿಂದ ದೂರವಿರಿ ಯಾಕೆಂದರೆ ಧೂಮಪಾನದಲ್ಲಿ ನಿಕೋಟಿನ್ ಜೊತೆ ಕಾರ್ಸಿನೋಜಿನ್ಸ್ (Carcinogens) ಎನ್ನುವ ವಿ’ಷ’ಕಾ’ರಿ ಅಂಶ ಇರುತ್ತದೆ. ಇವು ದೇಹವನ್ನು ಸೇರಿ ಕ್ಯಾನ್ಸರ್ ಉಂಟು ಮಾಡುತ್ತವೆ.

ಕ್ಯಾನ್ಸರ್ ಕಾರಕಗಳಾದ ಕಾರಾಟಿಜೋಸಿನ್ಸ್ ಫಾಸ್ಟ್ ಫುಡ್, ಅವೈಜ್ಞಾನಿಕವಾಗಿ ತಯಾರಾದ ಆಹಾರ ಪದಾರ್ಥಗಳು, ಆರ್ಟಿಫಿಷಿಯಲ್ ಕಲರ್ ಬಳಸಿ ಮಾಡಿರುವ ತಿಂಡಿಗಳು ಇವುಗಳ ಮೂಲಕವೂ ಕೂಡ ದೇಹವನ್ನು ಸೇರುತ್ತವೆ ಮತ್ತೊಂದು ಆಶ್ಚರ್ಯಕರ ವಿಷಯ ಏನೆಂದರೆ ಕೆಲವು ವೈರಸ್ ಗಳ ಮೂಲಕವೂ ಕೂಡ ಕ್ಯಾನ್ಸರ್ ಹರಡುತ್ತದೆ.

ಹೆಣ್ಣು ಮಕ್ಕಳು ಯಾವುದೇ ನಾಚಿಕೆ ಪಡದೆ ತಪ್ಪದೆ ಆಗಾಗ ಸ್ವಯಂ ಪರೀಕ್ಷೆ ಮಾಡಿಕೊಳ್ಳಬೇಕು, ಕೊನೆ ಹಂತಗಳನ್ನು ತಲುಪಿದ ಮೇಲೆ ಪರಿಸ್ಥಿತಿ ಕೈ ಮೀರಿ ಹೋಗಿರುತ್ತದೆ. ಕೆಲವರು ಈ ರೀತಿ ಆಸ್ಪತ್ರೆಗೆ ಹೋದರೆ ಸರ್ಜರಿ ಮಾಡಿಬಿಡುತ್ತಾರೆ ಎಂದು ಹೆದರಿಕೊಳ್ಳುತ್ತಾರೆ. ಆದರೆ ಎಲ್ಲರಿಗೂ ಈ ರೀತಿ ಶಸ್ತ್ರಚಿಕಿತ್ಸೆ ಮಾಡಿ ಸ್ತನ ತೆಗೆಯುವ ಅವಶ್ಯಕತೆ ಇರುವುದಿಲ್ಲ, ಆ ರೀತಿ ಸರ್ಜರಿ ಆದರೂ ಅದಕ್ಕೆ ಮತ್ತೊಂದು ವ್ಯವಸ್ಥೆ ಇದ್ದೇ ಇರುತ್ತದೆ.

ಹಳ್ಳಿಯಲ್ಲಿರುವ ಹೆಣ್ಣು ಮಕ್ಕಳು ವಿಷಯವನ್ನು ಮುಚ್ಚಿಡುತ್ತಾರೆ, ನಾಟಿ ಔಷಧಿ ಹಚ್ಚುತ್ತಾರೆ ಅದು ಕೂಡ ತಪ್ಪು ಅದು ಅಲ್ಸರ್ ಅಥವಾ ಮತ್ತೊಂದು ರೋಗಕ್ಕೆ ಎಡೆ ಮಾಡಿಕೊಡುತ್ತದೆ. ಆರೋಗ್ಯದ ವಿಚಾರದಲ್ಲಿ ಈ ರೀತಿ ಮಾಡದೆ ನಿಮ್ಮ ಆರೋಗ್ಯವನ್ನು ನೀವೇ ಜೋಪಾನ ಮಾಡಿಕೊಳ್ಳಬೇಕು.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now