ಕರ್ನಾಟಕ ರಾಜ್ಯದ ಮಹಿಳೆಯರಿಗೆ ಮಹತ್ವದ ಸುದ್ದಿಯೊಂದನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ. ಅದೇನೆಂದರೆ, ರೇಷನ್ ಕಾರ್ಡ್ ಹೊಂದಿರುವ 1.17 ಕೋಟಿ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅರ್ಹರಾಗಿ (Gruhalakshmi Scheme) ಪ್ರತಿ ತಿಂಗಳು ಸರ್ಕಾರದಿಂದ ರೂ.2000 ಸಹಾಯಧನ ಪಡೆಯುತ್ತಿದ್ದೀರಿ.
ಈಗಾಗಲೇ ಯೋಜನೆಗೆ ಅರ್ಹರಾಗಿದ್ದರು ಹಣ ಪಡೆಯಲಾಗದ ಮಹಿಳೆಯರಿಗೆ ಗೃಹಲಕ್ಷ್ಮೀ ಕ್ಯಾಂಪ್ ಏರ್ಪಡಿಸಿ ಸಮಸ್ಯೆ ಬಗೆಹರಿಸಿ ಕೊಡಲಾಗುತ್ತಿದೆ. ಇಷ್ಟಾದರೂ ಕೂಡ ಐದನೇ ಕಂತಿನಲ್ಲಿ 26,000 ಮಹಿಳೆಯರು ಹಣ ಪಡೆಯಲು ಆಗಿಲ್ಲ, ಅವರಿಗೆ 6ನೇ ತಿಂಗಳಲ್ಲಿ ಕೂಡ ಹಣ ಪಡೆಯಲು ಆಗುವುದಿಲ್ಲ ಎನ್ನುವ ವಿಷಯವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆಯಾದ ಲಕ್ಷ್ಮಿ ಹೆಬ್ಬಾಳ್ಕರ್ (Minister Lakshmi Hebbalkar) ಅವರು ತಿಳಿಸಿದ್ದಾರೆ.
ಈ 26,000 ಮಹಿಳೆಯರಿಗೆ ಹಣ ಯಾಕೆ ಸಿಗುತ್ತಿಲ್ಲ ಎಂದರೆ ಗೃಹಲಕ್ಷ್ಮಿ ಯೋಜನೆಗೆ ಇದ್ದ ಒಂದೇ ಒಂದು ಕಂಡಿಷನ್ ಏನೆಂದರೆ, ಅರ್ಜಿ ಸಲ್ಲಿಸುವವರು ಆದಾಯ ತೆರಿಗೆ ಪಾವತಿದಾರರಾಗಿರಬಾರದು, ಕುಟುಂಬದಲ್ಲಿ ಯಾರು ಕೇಂದ್ರ ಅಥವಾ ರಾಜ್ಯ ಸರ್ಕಾರದ ಉದ್ಯೋಗಿಯಾಗಿರಬಾರದು ಎನ್ನುವುದಾಗಿತ್ತು.
ಈ ಸುದ್ದಿ ಓದಿ:- ಹೊಸ ವೋಟರ್ ID ಗೆ ಅರ್ಜಿ ಹಾಕಲು ಮತ್ತು ತಿದ್ದುಪಡಿ ಮಾಡಿಕೊಳ್ಳಲು ಅವಕಾಶ.! ಮೊಬೈಲ್ ನಲ್ಲಿ ಅಪ್ಲೈ ಮಾಡುವ ವಿಧಾನ.!
ಇದನ್ನು ಮೀರಿ 80,000 ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ ಅವರುಗಳನ್ನು ಪತ್ತೆ ಹಚ್ಚಿ ಯೋಜನೆಯಿಂದ ಕೈ ಬಿಡಲಾಗುತ್ತಿದೆ. ಆದರೆ ಅರ್ಜಿ ಪರಿಶೀಲನೆ ವೇಳೆ ಟೆಕ್ನಿಕಲ್ ತೊಂದರೆಗಳಾಗಿ 26,000 ಮಹಿಳೆಯರು GST ಪೇಯರ್ಸ್ ಹಾಗೂ ಸರ್ಕಾರಿ ಹುದ್ದೆಯಲ್ಲಿ ಇಲ್ಲದವರ ಕುಟುಂಬದವರಾಗಿದ್ದರು ಅವರ ಹೆಸರು ಕೂಡ ಸೇರ್ಪಡೆಯಾಗಿ ಬಿಟ್ಟಿದೆ.
ಈಗ ಅವರ ಹೆಸರುಗಳನ್ನು ತೆಗೆದುಹಾಕುವ ಕಾರ್ಯ ಸರ್ಕಾರದ ಕಡೆಯಿಂದ ನಡೆಯುತ್ತಿದ್ದು, ಆ ಕಾರಣಕ್ಕಾಗಿ ಇವರಿಗೆ 5ನೇ ಮತ್ತು 6ನೇ ಕಂತಿನ ಹಣವನ್ನು ತಡೆಹಿಡಿಯಲಾಗಿದೆ ಮತ್ತು ಈ 26,000 ಮಹಿಳೆಯರು 7ನೇ ಕಂತಿನಲ್ಲಿ ಒಟ್ಟಿಗೆ ಮೂರು ಕಂತುಗಳ ಹಣವನ್ನು ಕೂಡ ಪಡೆಯಲಿದ್ದಾರೆ ಎನ್ನುವ ಭರವಸೆಯನ್ನು ಕೂಡ ಸಚಿವೆ ನೀಡಿದ್ದಾರೆ.
ಫೆಬ್ರವರಿ ತಿಂಗಳಿನಲ್ಲಿ 6ನೇ ಕಂತಿನ ಹಣ ಬಿಡುಗಡೆ ಆಗಲಿದೆ. ಆಗ ಈ 26,000 ಮಹಿಳೆಯರಿಗೆ ಅವರ ತಪ್ಪಿಲ್ಲದಿದ್ದರೂ ಸರ್ಕಾರ ಎಡವಟ್ಟಿನಿಂದ ಹಣ ಪಡೆಯಲು ಆಗುವುದಿಲ್ಲ ಆದರೆ ಮುಂದೆ ಮಾರ್ಚ್ ನಲ್ಲಿ 7ನೇ ಕಂತಿನಲ್ಲಿ ಖಂಡಿತವಾಗಿಯೂ ಒಟ್ಟಿಗೆ ಹಣ ಸಿಗಲಿದೆ.
ಈ ಸುದ್ದಿ ಓದಿ:- ಮನೆ ಮಾಲೀಕರೆ ಎಚ್ಛರ, ಈ ನಿಯಮ ಪಾಲಿಸದೆ ಇದ್ದಲ್ಲಿ ಬಾಡಿಗೆದಾರರೇ ಮನೆ ಮಾಲೀಕರಾಗಿ ಬಿಡಬಹುದು…
ಒಂದು ವೇಳೆ ಆ ಸಮಯದಲ್ಲೂ ಕೂಡ ಹಣ ಬಂದಿಲ್ಲ ಎಂದರೆ ತಾಲೂಕಿನಲ್ಲಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿಗೆ ಹೋಗಿ, CDPO ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಬಹುದು. ಅವರು ಮತ್ತೊಮ್ಮೆ ನಿಮ್ಮ ಅರ್ಜಿಯನ್ನು ಪರಿಶೀಲನೆ ಮಾಡಿ ನೀವು ಗೃಹಲಕ್ಷ್ಮಿ ಯೋಜನೆಗೆ ಅರ್ಹರಾಗಿದ್ದೀರಿ ಎನ್ನುವುದರ ದೃಢಪಡಿಸಿಕೊಂಡು ಸಮಸ್ಯೆ ಬಗೆಹರಿಸಿ ಕೊಡುತ್ತಾರೆ.
ನೀವು ಕೂಡ ಈ 26,000 ಮಹಿಳೆಯರಲ್ಲಿ ಒಬ್ಬರಾಗಿರಬಹುದು, ನಿಮಗೂ ಆ ಅನುಮಾನ ಇದ್ದರೆ ನಿಮ್ಮ ಕುಟುಂಬದಲ್ಲಿ ಯಾರು ಆದಾಯ ಪಾವತಿದಾರರು ಮತ್ತು ಸರ್ಕಾರಿ ಉದ್ಯೋಗದಲ್ಲಿ ಇಲ್ಲದೆ ಇದ್ದರೂ ತಾಂತ್ರಿಕ ತೊಂದರೆಗಳಿಂದಾಗಿ ನಿಮ್ಮ ಹೆಸರು ಆ ಲಿಸ್ಟ್ ನಲ್ಲಿ ಸೇರಿದೆ ಎನ್ನುವುದನ್ನು ತಿಳಿದುಕೊಳ್ಳಬೇಕಿದ್ದರೆ ಈ ವಿಧಾನದಲ್ಲಿ ನಿಮ್ಮ ಗೃಹಲಕ್ಷ್ಮಿ ಯೋಜನೆ ಸ್ಟೇಟಸ್ ತೆಗೆದುಕೊಳ್ಳಿ.
* ನಿಮ್ಮ ಮೊಬೈಲ್ ಫೋನ್ನಲ್ಲಿ ಗೂಗಲ್ (google)ಗೆ ಹೋಗಿ ಮಾಹಿತಿ ಕಣಜ(Mariti Kanaja) ಎಂದು ಟೈಪ್ ಮಾಡಿ, ಮಾಹಿತಿ ಕಣಜ ಎನ್ನುವುದು ಸರ್ಕಾರದ ವೆಬ್ಸೈಟ್ ಆಗಿದೆ.
* ಅಧಿಕೃತ ವೆಬ್ಸೈಟ್ ಕಾಣುತ್ತದೆ ಆ ಲಿಂಕ್ ಕ್ಲಿಕ್ ಮಾಡಿದರೆ ಮಾಹಿತಿ ಕಣಜ ಸಾರ್ವಜನಿಕರ ಮಾಹಿತಿ ವ್ಯವಸ್ಥೆ ಮುಖಪುಟ ಬರುತ್ತದೆ.
ಈ ಸುದ್ದಿ ಓದಿ:- ಚೀಟಿ ವ್ಯವಹಾರಕ್ಕೆ ಖಾಲಿ ಚೆಕ್ ಕೊಡುವುದು ಎಷ್ಟು ಡೇಂಜರ್ ಗೊತ್ತಾ.? ಚೀಟಿ ವ್ಯಾವರ ಮಾಡೋರು ತಪ್ಪದೆ ಈ ವಿಚಾರ ತಿಳಿದುಕೊಳ್ಳಿ.!
* ನೀವು ಡೈರೆಕ್ಟ್ ಆಗಿ https://mahitikanaja.karnataka.gov.in ಲಿಂಕ್ ಕ್ಲಿಕ್ ಮಾಡುವ ಮೂಲಕ ಕೂಡ ಮಾಹಿತಿ ಕಣಜ ಪೋರ್ಟೆಲ್ ಗೆ ಹೋಗಬಹುದು.
* ಸೇವೆಗಳು ಎನ್ನುವ ಆಪ್ಷನ್ ಕ್ಲಿಕ್ ಮಾಡಿದರೆ ಸರಕಾರದ ಎಲ್ಲಾ ಇಲಾಖೆ ಯೋಜನೆಗಳ ವಿವರದ ಪಟ್ಟಿ ಕಾಣುತ್ತದೆ. ಅದರಲ್ಲಿ ನೀವು ಗೃಹಲಕ್ಷ್ಮಿ ಅಪ್ಲಿಕೇಶನ್ ಸ್ಥಿತಿ ಎಂದು ಇರುವ ಆಯ್ಕೆಯನ್ನು ಕ್ಲಿಕ್ ಮಾಡಿ
* Deatails of Gruhalakshmi Status ಎನ್ನುವ ಆಪ್ಷನ್ ಬರುತ್ತದೆ ಮತ್ತು ನಿಮ್ಮ ರೇಷನ್ ಕಾರ್ಡ್ ಸಂಖ್ಯೆ (Check Gruhalakshmi through Gruhalakshmi) ಕೇಳಲಾಗಿರುತ್ತದೆ ನಿಮ್ಮ ರೇಷನ್ ಕಾರ್ಡ್ ಸಂಖ್ಯೆ ಹಾಕಿ ಸಬ್ಮಿಟ್ ಎನ್ನುವುದರ ಮೇಲೆ ಕ್ಲಿಕ್ ಮಾಡಿ.
* ಇಷ್ಟು ಮಾಡುತ್ತಿದ್ದಂತೆ ನಿಮ್ಮ ಗೃಹಲಕ್ಷ್ಮಿ ಯೋಜನೆ ಕುರಿತ ಸಂಪೂರ್ಣ ಮಾಹಿತಿ ಬರುತ್ತದೆ.
* ನಿಮ್ಮ ನೀವು ಅರ್ಜಿ ಸಲ್ಲಿಸಿದ ದಿನಾಂಕ (Application date), ನಿಮ್ಮ ಅರ್ಜಿಯ ಸ್ಥಿತಿ (application Status), ನಿಮ್ಮ ಅರ್ಜಿ ಸ್ವೀಕೃತಿಯಾದ ದಿನಾಂಕ (approved Status), Progress date and amount ಆಪ್ಷನ್ ನಲ್ಲಿ details ಎಂದು ಇರುತ್ತದೆ.
ಈ ಸುದ್ದಿ ಓದಿ:- ರೈತರ ಖಾತೆಗೆ ಬಂತು ಬರ ಪರಿಹಾರ ಉಚಿತ ರೂ.2,000 ಹಣ, ನಿಮ್ಮ ಮೊಬೈಲ್ ನಲ್ಲೇ ಚೆಕ್ ಮಾಡಿ.! ಹಣ ಬರದೇ ಇದ್ದವರು ಚಿಂತೆ ಮಾಡಬೇಡಿ ಈ ದಿನಾಂಕದಂದು ನಿಮಗೂ ಬರುತ್ತೆ.!
ಸ್ಟೇಟಸ್ ನಲ್ಲಿ Approved ಎಂದು ಇದ್ದರೆ ಯಾವುದೇ ಸಮಸ್ಯೆ ಇಲ್ಲ ಎಂದರ್ಥ ಒಂದು ವೇಳೆ GST Payers ಎಂದು ತೋರುತ್ತಿದ್ದರೆ ಸ್ವಲ್ಪ ದಿನ ಕಾದು ನೋಡಿ ಸಮಸ್ಯೆ ಬಗ್ಗೆ ಹರಿಯಲಿದೆ ಇಲ್ಲವಾದಲ್ಲಿ ಈ ಮೇಲೆ ತಿಳಿಸಿದಂತೆ ತಾಲೂಕಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿಗೆ ಭೇಟಿ ನೀಡಿ.