ಕಳೆದ ಕೆಲವು ವರ್ಷಗಳ ಹಿಂದೆ ಮಕ್ಕಳು ಓದಿ ವಿದ್ಯಾವಂತರಾದ ಕೂಡಲೇ ಕಚೇರಿ ಕೆಲಸ ಹಿಡಿಯಬೇಕು ಅಥವಾ ಪಟ್ಟಣಕ್ಕೋ ವಿದೇಶಕ್ಕೋ ಹೋಗಿ ಕೆಲಸ ಮಾಡಬೇಕು. ಕೃಷಿ ಕೆಲಸ ಮಾಡಿಕೊಂಡು ಕುರಿಕೋಳಿ ಹಸು ಸಾಕಾಣಿಕೆ ಮಾಡುವುದು ಯಾವುದೇ ಮಹಾನ್ ಕೆಲಸ ಅಲ್ಲ ಯಾವುದಕ್ಕೂ ಉಪಯೋಗಕ್ಕೆ ಬರದೆ ಇದ್ದವರು ಇದನ್ನು ಮಾಡುವುದು ಈ ರೀತಿ ತಾತ್ಸಾರವಾಗಿ ಕಾಣಲಾಗುತ್ತಿತ್ತು.
ಆದರೆ ಈಗ ರೈತನ ಬೆಲೆ ಎಷ್ಟು ಮತ್ತು ಕೃಷಿಗೆ ಇರುವ ಮಹತ್ವ ಏನು ಎನ್ನುವುದು ಪ್ರತಿಯೊಬ್ಬರಿಗೂ ಮನವರಿಕೆ ಆಗಿದೆ. ಹಳ್ಳಿಗಳಿಂದ ಪಟ್ಟಣಕ್ಕೆ ಹೋಗಿ ಅಲ್ಲಿನ ವಾತಾವರಣ ಸೆಟ್ ಆಗದೆ ಪರದಾಡಿ ಮತ್ತು ಬದುಕಲು ಬರುವ ಒಂದು ಉದ್ಯೋಗದ ಆದಾಯ ಸಾಲದೇ ಪಾರ್ಟ್ ಟೈಮ್ ಎಂದು ಬೇರೆ ಕೆಲಸವೂ ಮಾಡಿಕೊಂಡು ದಿನಪೂರ್ತಿ ಕೆಲಸದ ಟೆನ್ಶನ್ ನಲ್ಲಿ ನಮ್ಮವರು ತಮ್ಮವರು ಯಾರು ಇರದೆ ಯಾವುದೋ ಕಾಂಕ್ರೀಟ್ ಕಾಡಿನಲ್ಲಿ ಅಲೆದು ಸುಸ್ತಾದ ಮೇಲೆ ಮಲಗೋ ವೇಳೆ ನಮ್ಮ ಊರು ನೆನಪಾಗದೆ ಇರದು.
ಈ ಸುದ್ದಿ ಓದಿ:- ರೈತರಿಗಾಗಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ 17ನೇ ಕಂತಿನ ಹಣ ಬಿಡುಗಡೆ.!
ಈಗ ಕೃಷಿ ಮಾಡುವುದು ಕೂಡ ಯಾವ ಉದ್ಯಮಕ್ಕಿಂತಲೂ ಕಡಿಮೆ ಇಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತನಾಗಿ ಹಲವಾರು ಯೋಜನೆಗಳ ಅನುಕೂಲತೆ ಮಾಡಿಕೊಟ್ಟಿವೆ ಮತ್ತು ಕೃಷಿ ಮತ್ತು ಕೃಷಿಗೆ ಪೂರಕವಾದ ಕಸುಬುಗಳಾದ ಹೈನುಗಾರಿಕೆಗೂ ಕೂಡ ಹೆಚ್ಚಿನ ಮಹತ್ವ ನೀಡಲಾಗಿದೆ. ಇಂದು ಕೃಷಿ ಭೂಮಿ ರಹಿತ ಕೃಷಿ ಕಾರ್ಮಿಕನು ಎರಡು ಹಸು ಇಟ್ಟುಕೊಂಡೆ ತನ್ನ ಸಂಸಾರವನ್ನು ನೆಮ್ಮದಿಯಾಗಿ ಸಾಕುತ್ತಿದ್ದಾನೆ.
ತಾನು ಕೂಲಿ ಮಾಡಿಕೊಂಡು ಹಸುಗಳನ್ನು ನೋಡಿಕೊಂಡು ತನ್ನ ಮಕ್ಕಳನ್ನು ಒಳ್ಳೆ ಸ್ಥಾನಕ್ಕೆ ತಂದಿರುವ ಸಾಕಷ್ಟು ರೈತರ ಮತ್ತು ರೈತ ಮಹಿಳೆಯರ ಉದಾಹರಣೆ.ನಮಗೆ ನಮ್ಮ ಹಳ್ಳಿಗಳಲ್ಲಿಯೇ ಸಿಗುತ್ತದೆ. ಇದನ್ನೆಲ್ಲ ನೋಡಿ ಇನ್ಸ್ಪೈರ್ ಆದ 23 ವರ್ಷದ ಯುವಕನೊಬ್ಬ ವಿದ್ಯಾಭ್ಯಾಸ ಮುಗಿದ ತಕ್ಷಣ ಯಾವುದೇ ಉದ್ಯೋಗ ಬೇಡ ನಾನು ಹಸು ಸಾಕುವುದನ್ನೇ ಉದ್ಯೋಗ ಮಾಡಿಕೊಳ್ಳುತ್ತೇನೆ ಎಂದು ಡಿಸೈಡ್ ಮಾಡಿ ಯಶಸ್ವಿ ಕೂಡ ಆಗಿದ್ದಾರೆ.
ಈ ಸುದ್ದಿ ಓದಿ:- ಗೃಹಲಕ್ಷ್ಮಿ 8ನೇ ಕಂತಿನ ಹಣ ಈ ದಿನದಂದು ಬಿಡುಗಡೆ, ಇನ್ನು ಸಹ ಒಂದು ಕಂತಿನ ಹಣ ಪಡೆಯಲಾಗದವರು ಈ ರೀತಿ ಮತ್ತೊಮ್ಮೆ ಅರ್ಜಿ ಸಲ್ಲಿಸಿ.!
ಈತ ತನ್ನ ಸುತ್ತಮುತ್ತ ಹಳ್ಳಿಗಳಲ್ಲಿ ವಿಚಾರಿಸಿ ಕೊಂಡುಕೊಂಡ ಎರಡು ಹಸುಗಳು ಇಂದು ಆತನ ಕುಟುಂಬ ನಿರ್ವಹಣೆ ಮಾಡುತ್ತಿವೆ. ಈ ರೀತಿ ಹಸು ಸಾಕುವ ಬಗ್ಗೆ ಯೂಟ್ಯೂಬ್ ನಿಂದಲೇ ನೋಡಿ ಮಾಹಿತಿ ಕಲಿತು ಈಗ ಪ್ರಾಕ್ಟಿಕಲ್ ಆಗಿ ಅಳವಡಿಸಿಕೊಂಡು ಯಾರು ಬೇಕಾದರೂ ಆಸಕ್ತಿ ಇದ್ದರೆ ಏನನ್ನು ಬೇಕಾದರೂ ಮಾಡಬಹುದು ಎನ್ನುವುದನ್ನು ಸಾಧಿಸಿ ತೋರಿಸಿರುವ ಇವರು ಈ ಹಸುಗಳೇ ನಮ್ಮ ಮನೆಯ ಮಹಾಲಕ್ಷ್ಮಿಗಳು ಇವರು ಬಂದ ಮೇಲೆ ನಮ್ಮ ಜೀವನ ಬದಲಾಯಿತು ನಾನು ನಂಬಿಕೆ ಇಟ್ಟ ಹಾಗೆ ಎಲ್ಲವೂ ಕೂಡ ನಡೆಸಿಕೊಟ್ಟರು ಎಂದು ಹೇಳುತ್ತಾರೆ.
ಈ ಎರಡು ಹಸುಗಳನ್ನು ತೆಗೆದುಕೊಳ್ಳುವಾಗ 25 ಲೀಟರ್ ನೀಡುತ್ತವೆ ಎಂದು ಹೇಳಿದರಂತೆ. ಆದರೆ ಇಂದು 2 ರಿಂದ 45 ಲೀಟರ್ ಇಳುವರಿ ಸಿಗುತ್ತಿದೆ. ಹಸಿರು ಹುಲ್ಲಿನ ಜೊತೆಗೆ ಫೀಡ್ ಹೊಟ್ಟುಗಳು ಹಿಂಡಿ ಇತ್ಯಾದಿಗಳನ್ನು ಕೂಡ ಕೊಡಬೇಕು ಮತ್ತು ಅವುಗಳನ್ನು ಕೂಡ ನೀಟಾಗಿ ನೋಡಿಕೊಂಡು ಅವು ಇರುವ ಕೊಟ್ಟಿಗೆ ಕೂಡ ಕ್ಲೀನ್ ಮಾಡುತ್ತಾ ಆರೈಕೆ ಮಾಡಬೇಕು.
ಈ ಸುದ್ದಿ ಓದಿ:- ವಾಹನ ಸವಾರರಿಗೆ ಸರ್ಕಾರದ ಕಡೆಯಿಂದ ಶಾ-ಕಿಂಗ್ ನ್ಯೂಸ್.!
ಅದನ್ನು ನಾವು ಚೆನ್ನಾಗಿ ನೋಡಿಕೊಂಡರೆ ಅವು ಕೂಡ ನಮ್ಮನ್ನು ಸಾಕುತ್ತವೆ ಎಂದು ವಿಸ್ತಾರವಾಗಿ ಅಚ್ಚುಕಟ್ಟಾಗಿ ತಿಳಿಸಿದ್ದಾರೆ. ಯಾವ ಬ್ರೀಡ್ ಹಸುಗಳು ಮತ್ತು ಎಲ್ಲಿ ಕೊಂಡುಕೊಂಡರು ಹಸು ಕೊಂಡುಕೊಳ್ಳುವಾಗ ಯಾವೆಲ್ಲ ವಿಚಾರಗಳನ್ನು ಗಮನದಲ್ಲಿ ಇಟ್ಟುಕೊಂಡಿರಬೇಕು ಮತ್ತು ಯಾವ ಸಮಯದಲ್ಲಿ ಏನನ್ನು ಹಸುಗಳಿಗೆ ತಿನ್ನಲು ಕೊಡಬೇಕು, ಹಸು ಕೊಂಡು ಕೊಳ್ಳುವಾಗ ಯಾವ ಲಕ್ಷಣಗಳನ್ನು ಹೇಗೆ ಗಮನಿಸಬೇಕು ಈ ಎಲ್ಲಾ ಮಾಹಿತಿಯನ್ನು ಯುವಕನ ಕಡೆಯಿಂದ ತಿಳಿದುಕೊಳ್ಳಲು ವಿಡಿಯೋವನ್ನು ಪೂರ್ತಿಯಾಗಿ ನೋಡಿ.