ಒಂದು ಲಕ್ಷ ಖರ್ಚಿನಲ್ಲಿ ಕಟ್ಟಿರುವ ಮನೆ ಇದು, ಸಣ್ಣ ಫ್ಯಾಮಿಲಿ ಇರೋದಕ್ಕೆ, ಬಾಡಿಗೆಗೆ ಕೊಡೋದಕ್ಕೆ ಸೂಕ್ತವಾದ ಮನೆ.!

 

WhatsApp Group Join Now
Telegram Group Join Now

ಮನೆ (House) ಕಟ್ಟುವುದು ಎಷ್ಟು ಕಷ್ಟಕರವಾದ ವಿಷಯ ಎನ್ನುವುದು ಪ್ರತಿಯೊಬ್ಬರಿಗೂ ಗೊತ್ತು. ಅದರಿಂದ ಎಷ್ಟೋ ಜನ ತಮ್ಮ ಸ್ವಂತ ಸೂರಿನ ಕನಸು ಇದ್ದರೂ ಕೂಡ ಆ ಖರ್ಚಿಗೆ ಹೆದರಿ ಆ ಯೋಜನೆಯನ್ನು ಇನ್ನಷ್ಟು ವರ್ಷಗಳ ಕಾಲ ಮುಂದಕ್ಕೆ ದೂಡಿರುತ್ತಾರೆ. ಇನ್ನು ಕೆಲವರು ಲೋನ್ ಮಾಡಿ ಮನೆ ಕಟ್ಟಿ ಆ ಸಾಲ ತಿಳಿಸಲಾಗದ ಪರಿಸ್ಥಿತಿಯಲ್ಲಿ ಒದ್ದಾಡುತ್ತಿರುತ್ತಾರೆ.

ಇದೆಲ್ಲದರ ನಡುವೆ ಕೈಯಲ್ಲಿ ಇರುವ ಸ್ವಲ್ಪ ಹಣದಲ್ಲಿಯೇ ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು ಎನ್ನುವ ರೀತಿ ಮೂಲಭೂತ ಸೌಕರ್ಯಗಳನ್ನು ಒಳಗೊಂಡ ಒಂದು ಪುಟ್ಟ ಮನೆಯನ್ನು ಮಾಡಿಕೊಳ್ಳಬೇಕೆನ್ನುವ ಪ್ಲಾನಿಂಗ್ ಅಲ್ಲಿ ಇರುತ್ತಾರೆ. ಈ ರೀತಿಯಾಗಿ ನೀವೇನಾದರೂ ಅತಿ ಕಡಿಮೆ ಖರ್ಚಿನಲ್ಲಿ ಅಂದರೆ 1 ಲಕ್ಷ ಖರ್ಚಿನಲ್ಲಿ ಮನೆ ಕಟ್ಟಿಕೊಂಡು (low budget house) ವಾಸ ಮಾಡಬೇಕು ಎಂದರೆ ಈಗ ನಾವು ಹೇಳುವ ಈ ಉದಾಹರಣೆಯನ್ನು ನೋಡಿ ನಿರ್ಧಾರ ಮಾಡಿ.

ಶೂನ್ಯ ವಿದ್ಯುತ್ ಬಿಲ್ ಗೆ ಕಾಯುತ್ತಿದ್ದವರಿಗೆ ನಿರಾಸೆ 100 ಯೂನಿಟ್ ಬಳಸಿದ್ರೂ ಕೂಡ ಕರೆಂಟ್ ಬಿಲ್ ಕಟ್ಟಬೇಕಾಗುತ್ತೆ. ಯಾಕೆ ಗೊತ್ತ.?

1 ಲಕ್ಷ ಬಜೆಟ್ ಅಲ್ಲಿ ಮಾಡಬೇಕು ಎಂದರೆ ಕೆಲವು ಕಾಂಪ್ರಮೈಸ್ ಗಳನ್ನು ಕೂಡ ಮಾಡಿಕೊಳ್ಳಬೇಕಾಗುತ್ತದೆ. ಆದರೆ ವಾಸಿಸಲು ಯೋಗ್ಯವಾದ ಅನುಕೂಲಕರ ಮನೆಯನ್ನು ಖಂಡಿತವಾಗಿ ಮಾಡಿಕೊಳ್ಳಬಹುದು. 23×22 ಸೈಜ್ ಶೀಟ್ ಮನೆ (Sheet house) ಉದಾಹರಣೆಯೊಂದಿಗೆ ಇದನ್ನು ನಾವು ತಿಳಿಸುತ್ತಿದ್ದೇವೆ. ಮನೆ ಹೊರಗಡೆಯಿಂದ ಬಹಳ ಸಿಂಪಲ್ ಆಗಿ ಕಾಣಿಸಿದರೂ ಒಳಗಿನಿಂದ ಲುಕ್ ಚೆನ್ನಾಗಿರುತ್ತದೆ.

ಒಂದು ಚಿಲ್ಡ್ರನ್ ಬೆಡ್ರೂಮ್ (children bedroom), ಒಂದು ಬೆಡ್ರೂಮ್ bedroom) ಹಾಗೂ ವಿಸ್ತಾರವಾದ ಹಾಲ್ (hall) ಮತ್ತು ಕಿಚನ್ (kitchen) ಒಳಗೊಂಡ ಮನೆ ಮತ್ತು ಮನೆಯ ಹೊರ ವಲಯದಲ್ಲಿ ಟಾಯ್ಲೆಟ್ (toilet) ಅಟ್ಯಾಚ್ ಬಾತ್ರೂಮ್ (attach bathroom) ನಿರ್ಮಾಣ ಮಾಡಲಾಗಿದೆ. ಹೊರಗೆ 10ft ವೆರಾಂಡ ಇದೆ, ಇದಕ್ಕೆ ಟೈಲ್ಸ್ (tiles) ಹಾಕಲಾಗಿದ್ದು ಕವರ್ ಮಾಡಲಾಗಿದೆ.

ಗೃಹಲಕ್ಷ್ಮಿ ಯೋಜನೆಗೆ ಮತ್ತೆ 8 ಕಂಡಿಷನ್ ಹಾಕಿದ ಸರ್ಕಾರ.! ಇಂಥವರಿಗೆ 2000 ಸಿಗಲ್ಲ.!

ಮನೆ ಒಳಾಂಗಣವನ್ನು ಸಿಮೆಂಟ್ ಶೀಟ್ ಗಳನ್ನು ಬಳಸಿ ಕಟ್ಟಿದ್ದಾರೆ. ಇದು ಬಜೆಟ್ ಅನ್ನು ಕಡಿಮೆ ಮಾಡುತ್ತದೆ. ಮನೆ ಪೂರ್ತಿ ನೆಲಕ್ಕೆ ಟೈಲ್ಸ್ ಗಳನ್ನು ಬಳಸಲಾಗಿದೆ ಬಹಳ ಡಿಸೈನ್ ಆಗಿರುವ ಟೈಲ್ಸ್ ಗಳು ಡೋರ್ ಗಳು ಬಳಸಿರುವುದರಿಂದ ಮನೆ ಒಳಾಂಗಳೆ ಬಹಳ ಲುಕ್ ಆಗಿ ಕಾಣಿಸುತ್ತದೆ. ಮುಖ್ಯದ್ವಾರ ಹಾಗೂ ಎರಡು ಬಾಗಿಲುಗಳು ಮತ್ತು ಕಿಟಕಿಗಳಿಂದ 25,000 ಖರ್ಚಾಗುತ್ತದೆ. ಇದರಲ್ಲಿ ಮನೆ ಮುಖ್ಯದ್ವಾರವು ಮರದಿಂದ ಮಾಡಿದ್ದಾಗಿದ್ದು, ಡಿಸೈನ್ ಇಂದ ಕೂಡಿರುತ್ತದೆ.

ಒಳಗಿನ ರೂಮ್ ಗಳ ಡೋರ್ ಗಳು ಸಿಂಪಲ್ ಆದ PVC ಡೋರ್ ಗಳಾಗಿದ್ದರು ಕಲರ್ ಫುಲ್ ಆಗಿರುವ ಒಳ್ಳೆ ಡಿಸೈನ್ ಡೋರ್ಗಳನ್ನು ಸೆಲೆಕ್ಟ್ ಮಾಡಲಾಗಿದೆ. ರೂಮ್ ಗಳಲ್ಲಿ ಕಬೋರ್ಡ್ ವ್ಯವಸ್ಥೆ ಮಾಡಲಾಗಿದ್ದು ಇವುಗಳನ್ನು ಸಿಮೆಂಟ್ ಇಂದಲೇ ಮಾಡಿಸಲಾಗಿದೆ ಇದರಿಂದ ಕೂಡ ಖರ್ಚು ಕಡಿಮೆ ಆಗುತ್ತದೆ. ಚಿಲ್ಡ್ರನ್ ರೂಮ್ ನಲ್ಲೂ ಕೂಡ ಪುಸ್ತಕಗಳು ಇಟ್ಟುಕೊಳ್ಳುವ ರ್ಯಾಕ್ ಅನ್ನು ಸಿಮೆಂಟ್ ಇಂದ ಕಟ್ಟಲಾಗಿದೆ.

ಕೃಷಿ ಭೂಮಿಯಲ್ಲಿ ಕರೆಂಟ್ ಕಂಬ ಅಥವಾ ಟಿಸಿ ಇದ್ದವರಿಗೆ ಗುಡ್ ನ್ಯೂಸ್ ಸರ್ಕಾರದಿಂದ ಸಿಗಲಿದೆ ತಿಂಗಳಿಗೆ 5 ರಿಂದ 10 ಸಾವಿರ ಹಣ.!

7×10 ವಿಸ್ತಾರದಲ್ಲಿ ಕಿಚನ್ ಮಾಡಲಾಗಿದ್ದು ಕಿಚನ್ ಅಲ್ಲೂ ಕೂಡ ಸಾಮಾಗ್ರಿಗಳನ್ನು ಇಟ್ಟುಕೊಳ್ಳಲು ಶೆಲ್ಫ್ ವ್ಯವಸ್ಥೆ ಮಾಡಿಕೊಡಲಾಗಿದೆ ವೈಟ್ ಟೈಲ್ಸ್ ಬಳಸಿರುವುದರಿಂದ ಕಿಚನ್ ಗೆ ಕೂಡ ಹೆಚ್ಚು ಲುಕ್ ಬಂದಿದೆ. ಈ ವಿಡಿಯೋವನ್ನು ನೋಡಿ ನಿಮ್ಮ ಅನಿಸಿಕೆಯನ್ನು ತಿಳಿಸಿ ಹಾಗೂ ಇದೇ ಐಡಿಯಾಗಳನ್ನು ಉಪಯೋಗಿಸಿ ನೀವು ಸಹ ಕಡಿಮೆ ಖರ್ಚಿನಲ್ಲಿ ಮನೆಯನ್ನು ನಿರ್ಮಾಣ ಮಾಡಿಕೊಳ್ಳಿ. ನೀವು ವಾಸಿಸಲು ಅಥವಾ ಯಾರಿಗಾದರೂ ಗಿಫ್ಟ್ ಆಗಿ ಕೊಡಲು ಅಥವಾ ಬಾಡಿಗೆ ಕೊಡಲು ಈ ಮನೆಗಳು ಸೂಕ್ತವಾಗಿರುತ್ತವೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now