ನರಗಳ ಬಲಹೀನತೆ, ನಿಶ್ಯಕ್ತಿ, ಪುರುಷರ ಶಕ್ತಿ ಹೆಚ್ಚಿಸಿಕೊಳ್ಳಲು ರಾಮಬಾಣ ಈ ಔಷಧಿ.!

ನಮ್ಮ ಹಿರಿಯರು ಎಲ್ಲಾ ಆರೋಗ್ಯ ಸಮಸ್ಯೆಗೂ ಕೂಡ ಆಯುರ್ವೇದಿಕ್ ಔಷಧಿಗಳನ್ನೇ ಸೇವಿಸುತ್ತಿದ್ದರು. ನಮ್ಮ ಮನೆಯ ಹಿತ್ತಲುಗಳಲ್ಲಿ, ಹೊಲಗದ್ದೆಗಳ ಬೇಲಿಗಳಲ್ಲಿ ಬೆಳೆಯುವ ಅನೇಕ ಸೊಪ್ಪುಗಳು, ಕಾಯಿಗಳು, ಹೂವುಗಳು, ಬಳ್ಳಿಗಳೇ ಮನುಷ್ಯನ ಅನೇಕ ಕಾಯಿಲೆಗಳಿಗೆ ಔಷಧಿಗಳಾಗಿರುತ್ತವೆ.

WhatsApp Group Join Now
Telegram Group Join Now

ಆದರೆ ಅದನ್ನು ಗುರುತಿಸಲು ಎಲ್ಲರಿಗೂ ತಿಳಿದಿರುವುದಿಲ್ಲ ಇವುಗಳ ಪ್ರಭಾವ ಎಷ್ಟಿರುತ್ತದೆ ಎಂದರೆ ಯಾವುದೇ ಇಂಗ್ಲಿಷ್ ಮೆಡಿಸಿನ್ ಗೂ ಕಡಿಮೆ ಇಲ್ಲದಂತೆ ಕಾರ್ಯನಿರ್ವಹಿಸುತ್ತವೆ, ಜೊತೆಗೆ ಅಡ್ಡ ಪರಿಣಾಮಗಳು ಕೂಡ ಇರುವುದಿಲ್ಲ ಈಗೀಗ ಜನರು ಮತ್ತೆ ಈ ರೀತಿ ಆಯುರ್ವೇದಿಕ್ ಔಷಧಿಗಳ ಬಗ್ಗೆ ಆಸಕ್ತಿ ತೋರುತ್ತಿದ್ದಾರೆ.

ಅದಕ್ಕೆ ತಕ್ಕ ಹಾಗೆ ದೊಡ್ಡ ದೊಡ್ಡ ಆಸ್ಪತ್ರೆಗಳಲ್ಲಿ ಗುಣವಾಗದೆ ಎಷ್ಟು ಕಾಯಿಲೆಗಳಿಗೆ ಆಯುರ್ವೇದದಿಂದ ಗುಣವಾಗಿದೆ. ಅಂತಹದ್ದೇ ಒಂದು ಅದ್ಭುತ ಔಷಧಿ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ. ದಾಂಪತ್ಯದ ಸಮಸ್ಯೆಯು ಸಂಬಂಧದ ನಡುವೆ ದೊಡ್ಡ ಕಂದಕವನ್ನೇ ಸೃಷ್ಟಿಸಿ ಬಿಡುತ್ತವೆ.

ಪುರುಷರ ಬಲಹೀನತೆಯು ಸಂತಾನ ಹೀನತೆಗೆ ಪ್ರಮುಖ ಕಾರಣವಾಗಿ  ಅನೇಕ ಸಮಸ್ಯೆಗಳಿಗೆ ಎಡೆ ಮಾಡಿಕೊಡುತ್ತದೆ. ಇದು ಕುಟುಂಬದ ಸೌಖ್ಯವನ್ನು ಹಾಳು ಮಾಡುವುದು ಮಾತ್ರವಲ್ಲದೆ ಮಾನಸಿಕವಾಗಿ ಮನೆ ಮಂದಿಯ ನೆಮ್ಮದಿಯನ್ನು ಕಸಿದುಕೊಳ್ಳುತ್ತದೆ. ಇದಕ್ಕೆ ಈಗಿನ ವೈದ್ಯಕೀಯ ಲೋಕ ಹತ್ತಾರು ವಿಧದ ಔಷಧಿ ಮತ್ತು ಚಿಕಿತ್ಸೆ ಕೊಟ್ಟು ಗುಣಪಡಿಸುತ್ತದೆಯಾದರು ನಮ್ಮ ಹಿರಿಯರು ಆಯುರ್ವೇದವೇ ಬೆಸ್ಟ್ ಎಂದು ನಂಬುತ್ತಾರೆ.

ಹಾಗಾಗಿ ಆಯುರ್ವೇದದಲ್ಲಿ ಈ ರೀತಿ ಪುರುಷರ ಬಲಹೀನತೆ, ನರದೌರ್ಬಲ್ಯ, ನಿಶಕ್ತಿ ಇವುಗಳಿಗೆ ಅದ್ಭುತ ಔಷಧಿಯಾಗಿರುವ ಒಂದು ಗಿಡಮೂಲಿಕೆ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸುತ್ತಿದ್ದೇವೆ. ಈ ಔಷಧಿ ಬಗ್ಗೆ ತಿಳಿದುಕೊಂಡು  ಇದೇ ವಿಧಾನದಲ್ಲಿ ಬಳಸಿದರೆ ಉತ್ತಮ ಪರಿಣಾಮಗಳನ್ನು ಕಂಡು ಚಮತ್ಕಾರಿ ರೀತಿಯಲ್ಲಿ ನಿಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು.

ನಸುಗುನ್ನಿ ಇದೊಂದು ಸಸ್ಯವಾಗಿದ್ದು, ಇದು ಹಳ್ಳಿಗಳಲ್ಲಿ ಗಿಡ ಮರಗಳ ಸುತ್ತ ಹಬ್ಬಿರುವುದನ್ನು ಕಾಣಬಹುದು. ನೀರಿರುವ ಕೆರೆದಂಡೆಗಳಲ್ಲಿ ಹೆಚ್ಚಾಗಿ ಈ ಗಿಡವು  ಕಾಣಸಿಗುತ್ತದೆ. ನಸುಗುನ್ನಿ ಸಸ್ಯದ ಕಾಯಿಯನ್ನು ಕೂಡ ಇದೇ ಹೆಸರಿನಿಂದ ಕರೆಯುತ್ತಾರೆ. ಇದು ನೋಡಲು ಸುಂದರವಾಗಿರುವ ಕಾಯಿಯಾಗಿದೆ, ಈ ಕಾಯಿ ನೋಡಲು ಇಂಗ್ಲಿಷ್ ನ ಎಸ್ ಆಕಾರವನ್ನು ಹೊಂದಿರುತ್ತದೆ.

ಈ ಗಿಡ ನೀಲಿ ಬಣ್ಣದ ಹೂವುಗಳನ್ನು ಬಿಡುತ್ತದೆ ಮತ್ತು ಪ್ರಭಾವ ಶಾಲಿಗಳಾಗಿರುವ ಎಲೆಗಳನ್ನು ಕೂಡ ಹೊಂದಿರುತ್ತದೆ. ನಸುಗುನ್ನಿಯ ಬಲಿತ ಕಾಯಿಗಳ ಮೇಲೆ ರೋಮ ಇರುತ್ತದೆ, ಎಲೆ ಮತ್ತು ಕಾಂಡದ ಮೇಲೂ ರೋಮ ಇರುತ್ತದೆ. ಈ ಕಾಯಿಯ ರೋಮ ಯಾರಿಗಾದರೂ ಸೋಕಿದರೆ ಅಲರ್ಜಿಗಿಂತಲೂ ಭಯಂಕರವಾಗಿ ಕಡಿತ ಬರುತ್ತದೆ, ಬಹಳ ಹೊತ್ತಿನವರೆಗೆ ಈ ತುರಿಕೆ ಇರುತ್ತದೆ.

ಆದ್ದರಿಂದ ಈ ಕಾಯಿಯನ್ನು ಬಳಸುವಾಗ ಎಚ್ಚರಿಕೆ ವಹಿಸಬೇಕು. ಈ ಗಿಡವನ್ನು ಅಡುಗೆಗೆ ಬಳಸುತ್ತಾರೆ. ಇದರ ಎಲೆ ಕಾಯಿಯನ್ನು ಸಾಂಬಾರು, ಪಲ್ಯ ಮಾಡಿಕೊಂಡು ಸೇವಿಸುತ್ತಾರೆ. ಈ ನಸುಗುನ್ನಿಯ ಕಾಯಿಯಲ್ಲಿರುವ ಬೀಜವನ್ನು ತುಪ್ಪದಲ್ಲಿ ಹುರಿದು ಹಾಲಿನಲ್ಲಿ ಬೇಯಿಸಿ ಪೌಡರ್ ಮಾಡಿ ಪುರುಷರು ಸೇವಿಸಿದರೆ ವೀರ್ಯ ಹೆಚ್ಚುತ್ತದೆ, ಈ ಮೇಲೆ ತಿಳಿಸಿದ ಎಲ್ಲ ಸಮಸ್ಯೆಗಳು ಪರಿಹಾರವಾಗುತ್ತವೆ.

ಇದರಿಂದ ಮನಸ್ಸು ಖುಷಿಯಾಗಿದ್ದು ಆರೋಗ್ಯದ ಜೊತೆಗೆ ಆನಂದದಿಂದಿರುತ್ತಾರೆ. ನಸುಗುನ್ನಿ ಪುರುಷರ ವೀರ್ಯವನ್ನು ಹೆಚ್ಚಿಸುವ ಮೂಲಕ ವಿರ್ಯವರ್ಧಕವಾಗಿ ಕೆಲಸ ಮಾಡುತ್ತದೆ. ಶುಂಠಿ ಮತ್ತು ಅಮೃತ ಬಳ್ಳಿ, ನಸುಗುನ್ನಿ ಸೇರಿಸಿ ಕಷಾಯ ಮಾಡಿ ಕುಡಿಯುವುದರಿಂದ ಕೂಡ ಅನೇಕ ರೋಗಗಳು ನಿವಾರಣೆಯಾಗುತ್ತದೆ.

ದಾಂಪತ್ಯ ಜೀವನದಲ್ಲಿ ಬರುವ ಹಲವು ಸಮಸ್ಯೆಗಳಿಗೆ ಈ ನಸುಗುನ್ನಿ ಔಷಧಿ ಉತ್ತಮವಾಗಿದೆ. ನಸಗುನ್ನಿ ಬೀಜದ ಪೌಡರ್ ಸೇವನೆಯಿಂದ ದಾಂಪತ್ಯ ಜೀವನದಲ್ಲಿ ಪುರುಷರು ಎದುರಿಸುವ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now