ಹೆಣ್ಣು ಮಕ್ಕಳ ಆಭರಣಗಳಲ್ಲಿ ಮಿಂಚುವ ಮುತ್ತಿಗೆ ಸದಾ ಕಾಲ ಡಿಮ್ಯಾಂಡ್ ಇದ್ದೇ ಇದೆ. ಸಮುದ್ರದ ಆಳದಲ್ಲಿ ಉಪ್ಪು ನೀರಿನಲ್ಲಿ ಕಪ್ಪೆ ಚಿಪ್ಪಿನ ಒಳಗೆ ಸಿಗುತ್ತಿದ್ದ ಈ ಮುತ್ತನ್ನು ಮನೆಯಂಗಳದ ಸಿಹಿ ನೀರಿನಲ್ಲಿ ಕೂಡ ಕೃಷಿ ಮಾಡಿ ಪಡೆಯಬಹುದು ನೀವೇನಾದರೂ ಈಗ ಮುತ್ತಿನ ಕೃಷಿ ಮಾಡಲು ಬಯಸಿದರೆ ಸರ್ಕಾರವು ಕೂಡ ನಿಮಗೆ ಸಹಾಯ ಮಾಡುತ್ತದೆ.
50%ರಷ್ಟು ಮುತ್ತಿನ ಕೃಷಿ ಮಾಡುವ ರೈತರಿಗೆ ಸರ್ಕಾರದಿಂದ ಸಬ್ಸಿಡಿ ಪಡೆಯುತ್ತಾರೆ. ಇದನ್ನು ಪಡೆಯುವುದು ಹೇಗೆ? ಮುತ್ತಿನ ಕೃಷಿ ಯಾವ ರೀತಿ ಮಾಡುತ್ತಾರೆ? ಇದಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಹೀಗಿದೆ ನೋಡಿ ಭಾರತದಲ್ಲಿ 52 ಬಗೆಯ ಕಪ್ಪೆಚಿಪ್ಪುಗಳಿವೆ, ಇದರಲ್ಲಿ 3ರಲ್ಲಿ ಮಾತ್ರ ಮುತ್ತುಗಳು ಸಿಗುವುದು. ಇನ್ನು ಈ ಕೃಷಿ ಮಾಡುವುದರ ಬಗ್ಗೆ ಹೇಳುವುದಾದರೆ ಬಹಳ ಸುಲಭವಾಗಿ ಮುತ್ತಿನ ಕೃಷಿ ಮಾಡಬಹುದು.
ಇದರ ಬಗ್ಗೆ ಸ್ವಲ್ಪ ಮಾಹಿತಿ ಹಾಗೂ ತರಬೇತಿ ಅವಶ್ಯಕತೆ ಇದೆ ಅಷ್ಟೇ. ಭಾರತ ದೇಶವು ಹೊರದೇಶಗಳಿಂದ ಮುತ್ತನ್ನು ಆಮದು ಮಾಡಿಕೊಳ್ಳುತ್ತದೆ ಮತ್ತು ನಮ್ಮ ದೇಶದಲ್ಲಂತೂ ಬಹಳ ವಿರಳ ಸಂಖ್ಯೆಯಲ್ಲಿ ಮುತ್ತಿನ ಕೃಷಿ ಅನುಸರಿಸುತ್ತಾರೆ ಹಾಗಾಗಿ ಸದಾ ಕಾಲ ಬೇಡಿಕೆಯಲ್ಲಿರುವ ಮುತ್ತಿನ ಕೃಷಿ ಮಾಡುವುದರಿಂದ ಕೈತುಂಬ ಆದಾಯ ಆಗುವುದಂತೂ ಗ್ಯಾರಂಟಿ.
ಈ ಸುದ್ದಿ ಓದಿ:- ಹೊಸ ಫ್ರಿಜ್ ಖರೀದಿ ಮಾಡುವವರು & ಮನೆಯಲ್ಲಿ ಫ್ರಿಜ್ ಇರುವವರು ಈ ರೀತಿ ತಪ್ಪು ಮಾಡಬೇಡಿ.!
ಜಪಾನಿನ ಸಂಶೋಧಕ ಕೊಕಿಚಿ ಮಿಕಿಮೊಟೋ ಸಿಹಿ ನೀರಿನಲ್ಲಿ ಮುತ್ತಿನ ಕೃಷಿ ಮಾಡಬಹುದು ಎನ್ನುವುದನ್ನು ಕಂಡು ಹಿಡಿದರು.ಈ ಸಿಹಿನೀರಿನಲ್ಲಿ ಕೂಡ ಮುತ್ತಿನ ಕೃಷಿ ಮಾಡುವ ಪದ್ಧತಿಯು ಜಪಾನ್ ಆಸ್ಟ್ರೇಲಿಯಾ ಫಿಲಿಫೈನ್ಸ್ ಮತ್ತು ಚೀನಾದಲ್ಲಿ ಪ್ರಮುಖ ಉದ್ಯಮವಾಗಿದೆ ನಿಮ್ಮ ಮನೆಯ ಸುತ್ತಮುತ್ತಲಿನ ಖಾಲಿ ಜಾಗದಲ್ಲಿ ಮುತ್ತಿನ ಕೃಷಿ ಮಾಡಲು ಸೆಟ್ ಅಪ್ ರೆಡಿ ಮಾಡಿಕೊಳ್ಳಬಹುದು.
ಆದರೆ ನೀರು ಹರಿದು ಬಾರದೆ ಇರುವ ಭೂಭಾಗವನ್ನು ಸೆಲೆಕ್ಟ್ ಮಾಡಿಕೊಳ್ಳಬೇಕು. 3.5ಮೀಟರ್ ಆಳದ 8 ಫೀಟ್ ಅಗಲದ ಗುಂಡಿಯನ್ನು ಮಾಡಿಕೊಳ್ಳಬೇಕು. ಈ ಅಳತೆಯ ಗುಂಡಿಯಲ್ಲಿ ಸುಮಾರು 2000 ಲೀಟರ್ ನೀರನ್ನು ಸ್ಟೋರ್ ಮಾಡಬಹುದು. ಸ್ಟೋರ್ ಮಾಡಿದ ನೀರು ಇಂಗದಂತೆ ತಡೆಯಲು ಟಾರ್ಪಲ್ ಹೊದಿಕೆ ಹಾಕಬೇಕು.
ಈ ಸೆಟ್ ಆಫ್ ಮಾಡಿದ ಒಂದು ವಾರದ ನಂತರ ಕಪ್ಪೆ ಚಿಪ್ಪುಗಳನ್ನು ಬಿಡಬೇಕು. ಈ ವಿಸ್ತೀರ್ಣದ ಗುಂಡಿಯಲ್ಲಿ 200 ಜೋಡಿ ಕಪ್ಪೆಚಿಪ್ಪುಗಳನ್ನು ಬಿಡಬಹುದು, ಒಂದೊಂದು ಸಿಂಪಿಯಲ್ಲಿ ನ್ಯೂಕ್ಲಿಯಸ್ ಹಾಕಿ ನೀರಿನಲ್ಲಿ ಬಿಡಬೇಕು, ಒಂದು ಕಪ್ಪೆಚಿಪ್ಪಿನ ಒಳಗೆ ಎರಡು ಮುತ್ತು ಬೆಳೆಯುತ್ತದೆ ಒಟ್ಟಾರೆಯಾಗಿ ಅರ್ಧ ಬೆಳೆ ಬಂದರೂ ಕೂಡ ನೀವು ಲಕ್ಷಾಧಿಪತಿಗಳಾಗುವುದರಲ್ಲಿ ಅನುಮಾನವೇ ಇಲ್ಲ.
ಈ ಸುದ್ದಿ ಓದಿ:- ಸೈಟ್, ಜಮೀನು ವ್ಯಾಜ್ಯ ಕೋರ್ಟ್ ನಲ್ಲಿ ಇದ್ದಾಗ ಕಟ್ಟಡ ಕಾಮಗಾರಿ ಮಾಡಬಹುದ.?
ಮುತ್ತಿನ ಬೆಳೆ ಚೆನ್ನಾಗಿ ಬರಬೇಕು ಅಂದರೆ ನಾವು ಯಾವ ತಡೆಯನ್ನು ಹಾಕುತ್ತಿದ್ದೇವೆ ಎನ್ನುವುದರಿಂದ ಹಿಡಿದು ನೀರಿನ ಮಟ್ಟ ಅದಕ್ಕೆ ನೀಡುವ ಆಹಾರ, ನೀರಿನ pH ಲೆವೆಲ್, ಅಮೋನಿಯ ಪ್ರಮಾಣ ಎಷ್ಟಿದೆ ಎನ್ನುವುದು ಎಲ್ಲವೂ ಮುಖ್ಯವಾಗುತ್ತದೆ. ಇದರ ಜೊತೆಗೆ ನೀರನ್ನು ಆಗಾಗ ಶುದ್ಧೀಕರಿಸಬೇಕಿರುತ್ತದೆ.
ಮುತ್ತಿನ ಗುಣಮಟ್ಟದ ಆಧಾರದ ಮೇಲೆ ಮಾರುಕಟ್ಟೆಯಲ್ಲಿ ಒಂದು ಮುತ್ತಿಗೆ 100 ರಿಂದ 1000 ರುಪಾಯಿ ಬೆಲೆ ಇದೆ ಹಾಗಾಗಿ ಈ ಕೃಷಿ ಕೈಹಿಡಿಯುವುದು ಪಕ್ಕ. ಈ ಮುತ್ತಿನ ಕೃಷಿ ಬಗ್ಗೆ ಇನ್ನಷ್ಟು ಮಾಹಿತಿಯನ್ನು ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.