ಸೆಪ್ಟೆಂಬರ್ 30ರ ನಂತರ ಬಂದ್ ಆಗಲಿದೆ LIC ಈ ಪಾಲಿಸಿ.! LIC ಮಾಡಿಸಿರುವವರು ತಪ್ಪದೆ ನೋಡಿ.!

 

WhatsApp Group Join Now
Telegram Group Join Now

LIC ಭಾರತದಲ್ಲಿ ಅತಿ ನಂಬಿಕಸ್ಥ ವಿಮೆ ಕಂಪನಿಯಾಗಿದೆ. ದೇಶದಾದ್ಯಂತ ಕೋಟ್ಯಾಂತರ ಸಂಖ್ಯೆಯ ಗ್ರಾಹಕರನ್ನು ಹೊಂದಿರುವ LIC ಸಂಸ್ಥೆ ತನ್ನ ವಿಶೇಷವಾದ ಪ್ಲಾನ್ ಗಳುಳ್ಳ ಪಾಲಿಸಿಗಳ ಮೂಲಕ ಬಹಳ ಫೇಮಸ್ ಆಗಿದೆ. ಕಾಲ ಕಾಲಕ್ಕೆ ತಕ್ಕ ಹಾಗೆ ವಿಭಿನ್ನ ಮಾದರಿಯ ಯೋಜನೆಗಳನ್ನು ಜಾರಿಗೆ ತಂದಿರುವ LIC ಯ ಒಂದು ಪಾಲಿಸಿ ಇದೇ ಸೆಪ್ಟೆಂಬರ್ 30ಕ್ಕೆ ಅಂತ್ಯಗೊಳ್ಳಲಿದೆ.

LIC ಧನ್ ವೃದ್ಧಿ ಯೋಜನೆ (LIC Dhan vruddi Scheme) ಎನ್ನುವ ಹೆಸರಿನ ಯೋಜನೆಯ ಖರೀದಿಯ ಗಡವು ಸೆಪ್ಟೆಂಬರ್ 30 ಕ್ಕೆ ಮುಗಿಯಲಿದ್ದು ಅಷ್ಟರೊಳಗೆ ಆಸಕ್ತರು ಇದನ್ನು ಖರೀದಿಸಬೇಕಾಗಿದೆ. ಈ ಕುರಿತಾದ ಒಂದು ಅಪ್ಡೇಟ್ ನ್ನು ಸ್ವತಃ LIC ಕೂಡ ತನ್ನ X ಜಾಲತಾಣ ಖಾತೆಯಲ್ಲಿ ಹಂಚಿಕೊಂಡು ಈ ಯೋಜನೆ ಮೂಲಕ ಹಣದ ಉಳಿತಾಯ ಮತ್ತು ಹಣಕ್ಕೆ ಭದ್ರತೆ ಬಯಸುವವರು ಕೂಡಲೇ LIC ಏಜೆಂಟ್ ಅಥವಾ ಶಾಖೆ ಸಂಪರ್ಕಿಸಿ ಎಂದು ಹೇಳಿದೆ.

60 ವರ್ಷ ಮೇಲ್ಪಟ್ಟ ಎಲ್ಲರಿಗೂ ಸಿಗಲಿದೆ ಪ್ರತಿ ತಿಂಗಳು 2 ಲಕ್ಷ ಪಿಂಚಣಿ.! ತಪ್ಪದೇ ಅರ್ಜಿ ಸಲ್ಲಿಸಿ.!

LIC ಧನ್ ವೃದ್ಧಿ ಯೋಜನೆ ಬಗ್ಗೆ ವಿವರಣೆ ಕೊಡುವುದಾದರೆ, ಓನ್ ಟೈಮ್ ಪೇಯ್ಡ್ ಯೋಜನೆಯಾಗಿದೆ, ಒಮ್ಮೆ ಹಣವನ್ನು ಹೂಡಿಕೆ ಮಾಡಿದರೆ ನಿಮ್ಮ ಜೀವನದುದ್ದಕ್ಕೂ ಈ ಯೋಜನೆಯ ಲಾಭವನ್ನು ನೀವು ಪಡೆದು ಕೊಳ್ಳಬಹುದು. ಈ ಯೋಜನೆ ವಿಶೇಷತೆಯೇನೆಂದರೆ ಇದರಲ್ಲಿ ಗ್ರಾಹಕರು ಜೀವ ರಕ್ಷಣೆಯ ಜೊತೆಗೆ ಉಳಿತಾಯದ ಲಾಭವನ್ನೂ ಸಹ ಪಡೆಯಲಿದ್ದಾರೆ.

ವೈಯಕ್ತಿಕ, ಉಳಿತಾಯ ಮತ್ತು ಏಕ ಪ್ರೀಮಿಯಂ ಜೀವನ ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡಿ ಲಾಭ ಮಾಡಲು ಪ್ಲಾನ್ ನಲ್ಲಿ ಇರುವವರಿಗೆ LIC ಧನ್ ವೃದ್ಧಿ ಯೋಜನೆ ಬೆಸ್ಟ್ ಆಪ್ಷನ್ ಆಗಿದೆ. ಈ ಯೋಜನೆಯನ್ನು LIC ಜೂನ್ 23 ರಂದು ಪ್ರಾರಂಭಿಸಿದ್ದು, ಸೆಪ್ಟೆಂಬರ್ 30 ರವರೆಗೆ ಮಾತ್ರ ಈ ಯೋಜನೆಯಲ್ಲಿ ಹೂಡಿಕೆ ಮಾಡುವುದಕ್ಕೆ ಅವಕಾಶ ನೀಡಿದೆ. ಇನ್ನು ನಾಲ್ಕು ದಿನಗಳಲ್ಲಿ ಯೋಜನೆಯು ಬಂದ್ ಆಗಲಿದ್ದು ಆಸಕ್ತರು ಈ ಅವಕಾಶವನ್ನು ಮಿಸ್ ಮಾಡಿಕೊಳ್ಳದಿರಿ.

ಗೃಹಲಕ್ಷ್ಮಿಯ ಎರಡನೇ ಕಂತಿನ ಹಣ ಬಿಡುಗಡೆ ಯಾವಾಗ.? ಇನ್ನು ಯಾರಿಗೆಲ್ಲಾ ಗೃಹಲಕ್ಷ್ಮಿ ಯೋಜನೆ ಮೊದಲನೇ ಕಂತಿನ ಹಣ ಬಂದಿಲ್ಲ ರೇಷನ್ ಕಾರ್ಡ್ ನಲ್ಲಿ ಈ ಒಂದು ತಪ್ಪನ್ನು ಸರಿಪಡಿಸಿ.!

LIC ಧನ್ ವೃದ್ಧಿ ಯೋಜನೆಯು ಮೆಚ್ಯುರಿಟಿ ಅವಧಿ ಆರಿಸಲು ಮೂರು ಆಯ್ಕೆಗಳಿವೆ. ನೀವು 10 ವರ್ಷಗಳಿಗೆ, 15 ವರ್ಷಗಳಿಗೆ ಮತ್ತು 18 ವರ್ಷಗಳ ಅವಧಿಯನ್ನು ಹೊಂದಿದೆ. ನೀವು ಆರಿಸಿದ ಅವಧಿಗೆ ಅನ್ವಯವಾಗುವ ಬಡ್ಡಿದರದ ಆಧಾರದ ಮೇಲೆ ನಿಮಗೆ ಲಾಭ ಸಿಗುತ್ತದೆ. ಈ ಯೋಜನೆಗೆ ಇರುವ ಅತಿ ಮುಖ್ಯವಾದ ಕಂಡಿಷನ್ ಏನೆಂದರೆ ಕನಿಷ್ಠ 3 ತಿಂಗಳಿಂದ 8 ವರ್ಷದ ಒಳಗಿನವರು ಮಾತ್ರ ಈ ಯೋಜನೆಗೆ ಅರ್ಹರು.

ಹಾಗಾಗಿ ನೀವು ನಿಮ್ಮ ಮನೆಯಲ್ಲಿರುವ ಮಕ್ಕಳ ಹೆಸರಿನಲ್ಲಿ ಈ ಯೋಜನೆಯಲ್ಲಿ ಖರೀದಿಸಬಹುದಾಗಿದೆ. ಈ ಯೋಜನೆಯಡಿ, ನೀವು 80C ಅಡಿಯಲ್ಲಿ 1.5 ಲಕ್ಷದ ವರೆಗೆ ತೆರಿಗೆ ವಿನಾಯಿತಿಯ ಪ್ರಯೋಜನವನ್ನು ಸಹ ಪಡೆಯುತ್ತೀರಿ. LIC ಧನ್ ವೃದ್ಧಿ ಯೋಜನೆಯಲ್ಲಿ ಕನಿಷ್ಠ 1,25,000 ರೂ.ಗಳನ್ನು ಹೂಡಿಕೆ ಮಾಡಬಹುದು ಗರಿಷ್ಠ ಯಾವುದೇ ಮಿತಿ ಇರುವುದಿಲ್ಲ.

ನಿಮ್ಮ ಕುಟುಂಬದ ಜಮೀನು, ಮನೆ ಆಸ್ತಿಗಳ ಮೇಲೆ ಬೇರೆ ಯಾರದ್ರು ಸಾಲ ಮಾಡಿದ್ದರೋ ಇಲ್ಲವೋ ಮೊಬೈಲ್ ನಲ್ಲೇ ಚೆಕ್ ಮಾಡುವ ವಿಧಾನ ಇಲ್ಲಿದೆ ನೋಡಿ.!

ಮಕ್ಕಳು ಚಿಕ್ಕ ವಯಸ್ಸಿನವರಿದ್ದಾಗಲೇ ಈ ಪಾಲಿಸಿ ಮಾಡಿಸಿದರೆ ಮುಂದೆ ಅವರ ಹೆಚ್ಚಿನ ವಿದ್ಯಾಭ್ಯಾಸದ ಖರ್ಚಿಗೆ ಅಥವಾ ಮದುವೆ ಖರ್ಚಿಗೆ ಈ ಹಣ ಅನುಕೂಲಕ್ಕೆ ಬರಲಿದೆ, ಈ ಯೋಜನೆ ಖರೀದಿಸುವುದರ ಬಗ್ಗೆ ಯಾವುದೇ ಅನುಮಾನ ಇದ್ದರೂ ಅಥವಾ ಯೋಜನೆಯ ಕುರಿತಾಗಿ ಇನ್ನು ಹೆಚ್ಚಿನ ಮಾಹಿತಿ ಬೇಕಿದ್ದರೆ LICಯ ಅಧಿಕೃತ ವೆಬ್ಸೈಟ್ ಗೆ ಭೇಟಿ ಕೊಟ್ಟು ಹೆಚ್ಚಿನ ಮಾಹಿತಿ ಪಡೆಯಿರಿ ಅಥವಾ ನಿಮ್ಮ ಹತ್ತಿರದಲ್ಲಿರುವ LIC ಶಾಖೆಗೆ ಭೇಟಿ ಕೊಟ್ಟು ಅಥವಾ LIC ಏಜೆಂಟ್ ಮೂಲಕ ಯೋಜನೆ ಬಗ್ಗೆ ಮಾಹಿತಿ ತಿಳಿದುಕೊಂಡು ನೀವು ಕೂಡ ಈ ಯೋಜನೆಯ ಲಾಭ ಪಡೆದುಕೊಳ್ಳಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now