ಕಳೆದ ವರ್ಷ ರಾಜ್ಯದಲ್ಲಿ ಉಂಟಾದ ಭೀಕರ ಬರಗಾಲದ ಪರಿಸ್ಥಿತಿ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಹಿಂದೆಂದೂ ಕಂಡು ಕೇಳರಿಯದಂತಹ ಭೀಕರ ಬರಗಾಲಕ್ಕೆ ಕರ್ನಾಟಕ ರಾಜ್ಯ ಅಕ್ಷರಶಃ ನಲುಗಿ ಹೋಗಿತ್ತು. ಉಳಿದ ಎಲ್ಲಾ ಕ್ಷೇತ್ರಕ್ಕಿಂತಲೂ ಕೃಷಿ ಕ್ಷೇತ್ರಕ್ಕೆ ಇದು ಹೆಚ್ಚಿನ ಹೊಡೆತ ನೀಡಿ ರಾಜ್ಯದ ರೈತರ ಪರಿಸ್ಥಿತಿಯನ್ನು ದಯಾಹೀನವಾಗಿಸಿತ್ತು.
NDRF ಕೈಪಿಡಿಯ ಅನ್ವಯ ನಮ್ಮ ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳ 220ಕ್ಕೂ ಹೆಚ್ಚು ತಾಲೂಕುಗಳು ಬರಪೀಡಿತ ಎಂದು ಘೋಷಣೆಯಾಗಿತ್ತು. ರೈತರ ಆರ್ಥಿಕ ನಷ್ಟವನ್ನು ಸ್ವಲ್ಪ ಮಟ್ಟದಲ್ಲಿ ಪರಿಹರಿಸುವ ಉದ್ದೇಶದಿಂದ ಕೇಂದ್ರ ಸರ್ಕಾರದಿಂದ ಬರ ಪರಿಹಾರದ ಹಣ ಬಿಡುಗಡೆ ಮಾಡಲಾಗಿದೆ.
ಆದರೆ ಇದು ವಿಳಂಬವಾಗಿದ್ದ ಕಾರಣ ಜನವರಿ ತಿಂಗಳಿನಲ್ಲಿಯೇ ರಾಜ್ಯ ಸರ್ಕಾರವು ರೈತರ ಸ್ಥಿತಿ ಅರಿತು ಮೊದಲನೇ ಕಂತಿನ ಹಣವಾಗಿ ರೂ.2000 ಹಣವನ್ನು ಎಲ್ಲಾ ಅರ್ಹ ಫಲಾನುಭವಿಗಳ ಖಾತೆಗೆ DBT ಮೂಲಕ ವರ್ಗಾವಣೆ ಮಾಡಿತ್ತು. ಮುಂದುವರೆದು ಈಗ ಅಂದರೆ ಏಪ್ರಿಲ್ ತಿಂಗಳ ಅಂತ್ಯದಲ್ಲಿ ಕೇಂದ್ರ ಸರ್ಕಾರದಿಂದ ಎರಡನೇ ಕಂತಿನಲ್ಲಿ ಹಣ ಬಿಡುಗಡೆ ಆಗಿದೆ ಆದರೆ ಈಗಲೂಶಅದೆಷ್ಟೋ ರೈತರು ಇನ್ನು ಹಣ ಬಂದಿದೆಯೋ ಇಲ್ಲವೋ ಎಂದು ಗೊಂದಲಕ್ಕೊಳಗಾಗಿದ್ದಾರೆ.
ಈ ಸುದ್ದಿ ಓದಿ:- ಎಲ್ಲಾ ಸಾರ್ವಜನಿಕರಿಗೆ ಜೂನ್ 1 ಅಂದರೆ ನಾಳೆಯಿಂದ 5 ಹೊಸ ರೂಲ್ಸ್.!
ಭೂಮಿ-ಪರಿಹಾರ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ರೈತರು ವೈಯಕ್ತಿಕವಾಗಿ ಅಥವಾ ತಮ್ಮ ಗ್ರಾಮದಲ್ಲಿ ಬರ ಪರಿಹಾರ ಹಣ ಪಡೆದ ರೈತರ ಪಟ್ಟಿ ಪರಿಶೀಲಿಸಿ ಇದನ್ನು ಕನ್ಫರ್ಮ್ ಮಾಡಿಕೊಳ್ಳಬಹುದು. ಒಂದು ವೇಳೆ ನೀವು ಮೊದಲೆರಡು ಕಂತುಗಳ ಹಣದಿಂದ ವಂಚಿತರಾಗಿದ್ದರೆ ಸರ್ಕಾರದಿಂದ ನಿಮಗೆ ಒಂದು ಅಪ್ಡೇಟ್ ಇದೆ.
ಈಗಾಗಲೇ ಮಾನ್ಯ ಕಂದಾಯ ಸಚಿವರು ಈ ಎರಡು ಕಂತುಗಳಲ್ಲಿ ಹಣ ಜಮೆ ಆಗದೆ ವಂಚಿತರಾಗಿರುವ ರೈತರಿಗೆ ಮಾರ್ಗಸೂಚಿಗಳನ್ನು ತಿಳಿಸಿ ಯಾವ ಕಾರಣದಿಂದ ಹೀಗಾಗಿರಬಹುದು ಎನ್ನುವುದನ್ನು ವಿವರಿಸಿದ್ದಾರೆ. ಈಗ ಮುಂದುವರೆದು ಸರ್ಕಾರದಿಂದ ಈ ಕುರಿತು ಮತ್ತೊಂದು ಅಪ್ಡೇಟ್ ಇದೆ. ಅದೇನೆಂದರೆ, ಶೀಘ್ರವಾಗಿಯೇ ಮೂರನೇ ಕಂತಿನ ಹಣ ವರ್ಗಾವಣೆ ಆಗುತ್ತಿದೆ.
ಯಾವ ರೈತರು ಕಳೆದೆರಡು ಕಂತುಗಳಲ್ಲಿ ಹಣ ಪಡೆಯಲಾಗದೆ ವಂಚಿತರಾಗಿದ್ದರು ಅಂತಹ ರೈತರಿಗೆ ಮೂರನೇ ಕಂತಿನ ಹಣ ವರ್ಗಾವಣೆ ಆಗುತ್ತದೆ. ಆದರೆ ಈ ಹಣ ವರ್ಗಾವಣೆ ಆಗುವುದಕ್ಕೂ ಮುನ್ನ ನೀವು ಈ ಕೆಳಗೆ ತಿಳಿಸಲಾದ ದಾಖಲೆಗಳು ಸರಿ ಇದೆಯೇ? ನೀವು ಸರಿಯಾದ ವಿಧಾನದಲ್ಲಿ ಅರ್ಜಿ ಸಲ್ಲಿಸಿದ್ದೀರಿ ಎನ್ನುವುದನ್ನು ಪರಿಶೀಲಿಸಿ ಕೊಳ್ಳಿ ಎಂದು ಸರ್ಕಾರ ತಿಳಿಸಿದೆ.
ಈ ಸುದ್ದಿ ಓದಿ:-ಈ ರೈತರಿಗೆ 3ನೇ ಕಂತಿನ ಬೆಳೆ ಹಾನಿ ಪರಿಹಾರ ಬಿಡುಗಡೆ, ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ತಿಳಿಯಲು ಈ ರೀತಿ ಚೆಕ್ ಮಾಡಿ.!
ಹಣ ವರ್ಗಾವಣೆ ಆಗದಿರಲು ಕಾರಣಗಳು ಮತ್ತು ಪರಿಹಾರಗಳು:-
* ಈ ಮೊದಲೇ ಸರ್ಕಾರವು ಬರ ಪರಿಹಾರದ ಹಣ ಪಡೆದುಕೊಳ್ಳಲು ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಾಯಿಸಿಕೊಂಡು FID ಪಡೆಯುವುದು ಕಡ್ಡಾಯ ಎಂದು ಸೂಚಿಸಿದೆ. ರೈತರು ಹತ್ತಿರದ CSC ಕೇಂದ್ರಗಳಿಗೆ ಅಥವಾ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿಕೊಟ್ಟು ಇ-ಕೆವೈಸಿ ಮಾಡಿಸಿ, FID ಪಡೆಯಿರಿ.
* ನಿಮ್ಮ ಬ್ಯಾಂಕ್ ಶಾಖೆಗೆ ಭೇಟಿಕೊಟ್ಟು ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್- NPCI ಮಾಪಿಂಗ್ ಆಗಿದೆ ಎನ್ನುವುದನ್ನು ಕನ್ಫರ್ಮ್ ಮಾಡಿಕೊಳ್ಳಿ. ಇದರಲ್ಲಿ ಸಮಸ್ಯೆ ಇದ್ದರೂ ಕೂಡ ಹಣ ವರ್ಗಾವಣೆ ಆಗುವುದಿಲ್ಲ. ಹಾಗೆಯೇ IFSC ಕೋಡ್ ಸರಿ ಇದೆಯೇ ಎನ್ನುವುದನ್ನು ಕೂಡ ಪರಿಶೀಲಿಸಿ.
ಈ ಸುದ್ದಿ ಓದಿ:- 11 ಕೋಟಿ ಪಾನ್ ಕಾರ್ಡ್ ರದ್ದು.! ನಿಮ್ಮ ಹೆಸರಿದಿಯೇ ಚೆಕ್ ಮಾಡಿಕೊಳ್ಳಿ
* ಇನ್ನಿತರ ಯಾವುದೇ ದಾಖಲೆಗಳಲ್ಲಿ ರೈತನ ಹೆಸರಿನಲ್ಲಿ ವ್ಯತ್ಯಾಸವಿದೆಯೇ ಎನ್ನುವುದನ್ನು ಪರಿಶೀಲಿಸಿ ತಿದ್ದುಪಡಿ ಮಾಡಿಸಿ
* ನೀವು ಬರ ಪರಿಹಾರಕ್ಕೆ ಅರ್ಜಿ ಸಲ್ಲಿಸಿದ್ದು ಅನುಮೋದನೆ ಆಗಿದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಿ ಸಾಧ್ಯವಾದರೆ ಮರು ಅರ್ಜಿ ಸಲ್ಲಿಸಿ.