ಕರ್ನಾಟಕದ ಎಲ್ಲ ನಿರುದ್ಯೋಗಿಗಳಿಗೂ ಹಾಗೂ ಸರ್ಕಾರಿ ಹುದ್ದೆ ಪಡೆಯಬೇಕು ಎಂದು ಶ್ರಮ ಪಡುತ್ತಿರುವ ಆಕಾಂಕ್ಷಿಗಳಿಗೂ ಪೊಲೀಸ್ ಇಲಾಖೆಯಿಂದ ಸಿಹಿಸುದ್ದಿ ಸಿಕ್ಕಿದೆ. ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಬೇಕು ಎನ್ನುವುದು ಯುವ ಜನತೆಯ ಕನಸು. ಈಗ ಅದನ್ನು ಸಾಕಾರ ಮಾಡಿಕೊಳ್ಳುವುದಕ್ಕೆ ಒಂದು ಅವಕಾಶ ಸಿಗುತ್ತಿದೆ. ಪೊಲೀಸ್ ಇಲಾಖೆಯಲ್ಲಿ ಬರೋಬ್ಬರಿ 914 ಹುದ್ದೆಗಳು ಖಾಲಿ ಇದ್ದು ಈ ಹುದ್ದೆಗಳ ಭರ್ತಿಗಾಗಿ ಇಲಾಖೆಯು ಅರ್ಜಿ ಆಹ್ವಾನ ಮಾಡಿದೆ.
ಅಭ್ಯರ್ಥಿಗಳಿಗೆ ನೇಮಕಾತಿ ಕುರಿತಾಗಿ ಅಧಿಸೂಚನೆ ಕೂಡ ಹೊರಡಿಸಿದ್ದು ಆಸಕ್ತರು ಅದರ ಪ್ರಕಾರವಾಗಿ ಅರ್ಜಿ ಸಲ್ಲಿಸಿ, ಪರೀಕ್ಷೆಗಳನ್ನು ಎದುರಿಸಿ ಹುದ್ದೆ ಗಿಟ್ಟಿಸಿಕೊಳ್ಳಬಹುದು. ಈ ಅಂಕಣದಲ್ಲಿ ಆಕಾಂಕ್ಷಿಗಳಿಗೆ ಅನುಕೂಲತೆ ಮಾಡಿಕೊಡುವ ಸಲುವಾಗಿ ಅಧಿಸೂಚನೆಯಲ್ಲಿ ತಿಳಿಸಿರುವ ಹುದ್ದೆಗಳ ಕುರಿತು ಕೆಲ ಪ್ರಮುಖ ಅಂಶಗಳನ್ನು ತಿಳಿಸುವ ಪ್ರಯತ್ನವನ್ನು ಮಾಡುತ್ತಿದ್ದೇವೆ. ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆ ತಪ್ಪದೇ ಹಂಚಿಕೊಳ್ಳಿ.
ಇಲಾಖೆಯ ಹೆಸರು:- ಸಶಸ್ತ್ರ ಸೀಮಾ ಬಲ (SSB).
ಒಟ್ಟು ಹುದ್ದೆಗಳ ಸಂಖ್ಯೆ:- 914.
ಹುದ್ದೆಯ ಹೆಸರು:- ಹೆಡ್ ಕಾನ್ಸ್ಟೇಬಲ್.
ಹುದ್ದೆಗಳ ವಿವರ:-
● ಹೆಡ್ ಕಾನ್ಸ್ಟೇಬಲ್ (ಎಲೆಕ್ಟ್ರಿಷಿಯನ್) – 15
● ಹೆಡ್ ಕಾನ್ಸ್ಟೇಬಲ್ (ಮೆಕ್ಯಾನಿಕ್) – 296
● ಹೆಡ್ ಕಾನ್ಸ್ಟೇಬಲ್ (ಸ್ಟೇವರ್ಡ್) – 2
● ಹೆಡ್ ಕಾನ್ಸ್ಟೇಬಲ್ (ಪಶು ವೈದ್ಯಕೀಯ) – 23
● ಹೆಡ್ ಕಾನ್ಸ್ಟೇಬಲ್ (ಕಾಮನ್) – 578
ಉದ್ಯೋಗ ಸ್ಥಳ:- ಭಾರತದಾದ್ಯಂತ…
ವೇತನ ಶ್ರೇಣಿ:- SSB ಹೊರಡಿಸಿರುವ ಅಧಿಸೂಚನೆ ಪ್ರಕಾರ ಈ ಹುದ್ದೆಗಳಿಗೆ ಆಯ್ಕೆ ಆಗುವ ಅಭ್ಯರ್ಥಿಗಳಿಗೆ ಮಾಸಿಕವಾಗಿ 25,000 – 81,000 ವೇತನ ಸಿಗುತ್ತದೆ.
ವಯಸ್ಸಿನ ಮಿತಿ:-
● ಹೆಡ್ ಕಾನ್ಸ್ಟೇಬಲ್ (ಎಲೆಕ್ಟ್ರಿಷಿಯನ್) – ಕನಿಷ್ಠ 18 ಹಾಗೂ ಗರಿಷ್ಠ 25 ವರ್ಷಗಳು.
● ಹೆಡ್ ಕಾನ್ಸ್ಟೇಬಲ್ (ಮೆಕ್ಯಾನಿಕ್) – ಕನಿಷ್ಠ 21 ಹಾಗೂ ಗರಿಷ್ಠ 27 ವರ್ಷಗಳು.
● ಹೆಡ್ ಕಾನ್ಸ್ಟೇಬಲ್ (ಸ್ಟೇವರ್ಡ್) – ಕನಿಷ್ಠ 18 ಹಾಗೂ ಗರಿಷ್ಠ 25 ವರ್ಷಗಳು.
● ಹೆಡ್ ಕಾನ್ಸ್ಟೇಬಲ್ (ಪಶು ವೈದ್ಯಕೀಯ) – ಕನಿಷ್ಠ 18 ಹಾಗೂ ಗರಿಷ್ಠ 25 ವರ್ಷಗಳು.
● ಹೆಡ್ ಕಾನ್ಸ್ಟೇಬಲ್ (ಕಾಮನ್) – ಕನಿಷ್ಠ 18 ಹಾಗೂ ಗರಿಷ್ಠ 25 ವರ್ಷಗಳು.
ಅರ್ಜಿ ಶುಲ್ಕ:-
● ಸಾಮಾನ್ಯ ವರ್ಗ ಹಾಗೂ OBC ಅಭ್ಯರ್ಥಿಗಳಿಗೆ 100ರೂ.
● SC/ST, ಮಾಜಿ ಸೈನಿಕ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
ಶೈಕ್ಷಣಿಕ ವಿದ್ಯಾರ್ಹತೆ:- ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು SSB ಅಧಿಸೂಚನೆಯಲ್ಲಿ ತಿಳಿಸಿರುವಂತೆ ಮಾನ್ಯತೆ ಪಡೆದ ಯಾವುದೇ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಈ ಕೆಳಕಂಡ ವಿದ್ಯಾರ್ಹತೆಯನ್ನು ಹುದ್ದೆಗಳಿಗೆ ಅನುಸಾರವಾಗಿ ಪೂರ್ತಿಗೊಳಿಸಿರಬೇಕು.
● ಹೆಡ್ ಕಾನ್ಸ್ಟೇಬಲ್ (ಎಲೆಕ್ಟ್ರಿಷಿಯನ್) – 10ನೇ ತರಗತಿ, ಡಿಪ್ಲೋಮೋ.
● ಹೆಡ್ ಕಾನ್ಸ್ಟೇಬಲ್ (ಮೆಕ್ಯಾನಿಕ್) – 10ನೇ ತರಗತಿ, ITI, ಡಿಪ್ಲೊಮೋ.
● ಹೆಡ್ ಕಾನ್ಸ್ಟೇಬಲ್ (ಸ್ಟೇವರ್ಡ್) – 10ನೇ ತರಗತಿ, ಡಿಪ್ಲೊಮೋ.
● ಹೆಡ್ ಕಾನ್ಸ್ಟೇಬಲ್ (ಪಶು ವೈದ್ಯಕೀಯ) – 12ನೇ ತರಗತಿ, ಡಿಪ್ಲೊಮೋ.
● ಹೆಡ್ ಕಾನ್ಸ್ಟೇಬಲ್ (ಕಾಮನ್) – 12ನೇ ತರಗತಿ, ಡಿಪ್ಲೊಮೋ.
ಆಯ್ಕೆ ವಿಧಾನ:-
● ದೈಹಿಕ ದಕ್ಷತೆ ಪರೀಕ್ಷೆ
● ಲಿಖಿತ ಪರೀಕ್ಷೆ
● ಸಂದರ್ಶನ
● ದಾಖಲೆಗಳ ಪರಿಶೀಲನೆ
ಅರ್ಜಿ ಸಲ್ಲಿಸುವ ವಿಧಾನ:- ಆನ್ಲೈನ್ ಮೂಲಕ
ಪ್ರಮುಖ ದಿನಾಂಕಗಳು:-
● ಅರ್ಜಿ ಸಲ್ಲಿಸುವಿಕೆ ಪ್ರಾರಂಭದ ದಿನಾಂಕ – 09 ಮೇ, 2023
● ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 07 ಜೂನ್, 2023.