ಕರ್ನಾಟಕ ರಾಜ್ಯ ಸರ್ಕಾರ (Karnataka Government) ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳಲ್ಲಿ ಮಹತ್ತರವಾದ ಯೋಜನೆ ಮಹಿಳೆಯರಿಗಾಗಿ ಮೀಸಲಾದ ಯೋಜನೆಯಾದ ಗೃಹಲಕ್ಷ್ಮಿ ಯೋಜನೆ (Gruhalakshmi Scheme) ಇದುವರೆಗೆ 6 ಕಂತುಗಳನ್ನು ಯಶಸ್ವಿಯಾಗಿ ಪೂರೈಸಿದೆ. 7ನೇ ಕಂತಿನ ಅಂದರೆ ಫೆಬ್ರವರಿ ತಿಂಗಳ ಗೃಹಲಕ್ಷ್ಮಿ ಹಣದ ಬಗ್ಗೆ ಈಗ ಸರ್ಕಾರದಿಂದ ಒಂದು ಅಧಿಕೃತ ಅಪ್ಡೇಟ್ (Update) ಹೊರಬಿದ್ದಿದೆ.
ಅದೇನೆಂದರೆ ಮಾರ್ಚ್ 15ರಂದು ಸರ್ಕಾರದ ಕಡೆಯಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಖಜಾನೆಗೆ ಗೃಹಲಕ್ಷ್ಮಿ ಯೋಜನೆಯ 7ನೇ ಕಂತಿನ ಹಣವನ್ನು ಮಂಜೂರು ಮಾಡಲಾಗಿದೆ. ಆದರೆ ಅಂದೇ ಎಲ್ಲಾ ಮಹಿಳೆಯರ ಖಾತೆಗೂ ಒಂದೇ ಬಾರಿಗೆ ಹಣ ವರ್ಗಾವಣೆ ತಲುವುದಿಲ್ಲ ಇದಕ್ಕೆ RBI ನ ನಿಯಮಗಳು ಅಡ್ಡಿಯಾಗುತ್ತವೆ.
ಈ ಸುದ್ದಿ ಓದಿ:- ಮುಂದಿನ 5 ವರ್ಷ ಉಚಿತ ರೇಷನ್.! ಕೇಂದ್ರ ಸರ್ಕಾರದಿಂದ ಬಂಪರ್ ಕೊಡುಗೆ.!
ಹಂತ ಹಂತವಾಗ ಹಣ ತಲುಪಲಿದ್ದು ಇದರ ಜೊತೆಗೆ ಮತ್ತೊಂದು ಸಿಹಿ ಸುದ್ದಿ ಏನೆಂದರೆ, ಯಾರು ಕಳೆದ ಆರು ತಿಂಗಳಿಂದ ತಮ್ಮಲ್ಲಿರುವ ದಾಖಲೆಗಳ ಸಮಸ್ಯೆ ಅಥವಾ ತಾಂತ್ರಿಕ ದೋಷಗಳಿಂದಾಗಿ ಹಣ ಪಡೆಯಲು ಆಗಲಿಲ್ಲ ಆ ಆರ್ಹ ಫಲಾನುಭವಿಗಳಿಗೂ ಕೂಡ ಕಳೆದ ಆರು ತಿಂಗಳ ಹಣದ ಜೊತೆಗೆ 7 ಕಂತಿನ ಹಣವು ಸೇರಿ ವರ್ಗಾವಣೆ ಆಗುತ್ತಿದೆ, ಮಾರ್ಚ್ 31ರ ಒಳಗೆ ಸಂಪೂರ್ಣವಾಗಿ ಎಲ್ಲ ಗೃಹಲಕ್ಷ್ಮಿ ಫಲಾನುಭವಿಗಳು ಹಣ ಪಡೆಯಲಿದ್ದಾರೆ.
ಒಂದು ವೇಳೆ ಹಣ ಬರದೆ ಇದ್ದಲ್ಲಿ ಏನು ಮಾಡಬೇಕು ಹಣ ಬಂದಿದೆ ಎನ್ನುವ ವಿಚಾರವನ್ನು ಹೇಗೆ ಕನ್ಫರ್ಮ್ ಮಾಡಿಕೊಳ್ಳುವುದು ಮತ್ತು ಯಾವ ಕಾರಣಗಳಿಂದ ಹಣ ಬರದೆ ಇರಬಹುದು ಎನ್ನುವ ಅಗತ್ಯ ಮಾಹಿತಿಯನ್ನು ಕೂಡ ಈ ಲೇಖನದಲ್ಲಿ ಹಂಚಿಕೊಳ್ಳಲು ಇಚ್ಛಿಸುತ್ತಿದ್ದೇವೆ.
ಈ ಸುದ್ದಿ ಓದಿ:-ಉಚಿತ ವಸತಿ ಶಾಲೆ ಪ್ರವೇಶಕ್ಕೆ ಅರ್ಜಿ ಆಹ್ವಾನ.! ಆಸಕ್ತರು ಅರ್ಜಿ ಸಲ್ಲಿಸಿ.!
ಗೃಹಲಕ್ಷ್ಮಿ ಹಣ ಬಂದಿದೆಯೇ ಎಂದು ಚೆಕ್ ಮಾಡುವ ವಿಧಾನ:-
* ಬ್ಯಾಂಕ್ ಖಾತೆಗೆ ಮೊಬೈಲ್ ಸಂಖ್ಯೆ ಲಿಂಕ್ ಆಗಿದ್ದರೆ ಹಣ ವರ್ಗಾವಣೆ ಆದ ಕೂಡಲೇ SMS ಸಂದೇಶ ನಿಮಗೆ ತಲುಪಲಿದೆ
* ಇಲ್ಲವಾದಲ್ಲಿ ನೀವೇ ಮಾರ್ಚ್ 31ರ ಒಳಗೆ ಸಂಪೂರ್ಣವಾಗಿ ಎಲ್ಲಾ ಫಲಾನುಭವಿಗಳಿಗೂ 7ನೇ ಕಂತಿನ ಹಣ ವರ್ಗಾವಣೆ ಆಗುವುದಾಗಿ ಸರ್ಕಾರ ಭರವಸೆ ನೀಡಿರುವುದರಿಂದ ನಂತರ ನೀವು ನಿಮ್ಮ ಬ್ಯಾಂಕ್ ಶಾಖೆಗೆ ಬೇಟಿ ಕೊಟ್ಟು ಪಾಸ್ ಬುಕ್ ಚೆಕ್ ಮಾಡಿಸಿಹಣ ಬಂದಿರುವುದನ್ನ ಕನ್ಫರ್ಮ್ ಮಾಡಿಕೊಳ್ಳಬಹುದು
* ಕರ್ನಾಟಕ ಸರ್ಕಾರದ ಮಾಹಿತಿ ಕಣಜ (Mahithi kanaja) ವೆಬ್ಸೈಟ್ ಗೆ ಭೇಟಿ ಕೊಟ್ಟು ಗೃಹಲಕ್ಷ್ಮಿ ಯೋಜನೆ ವಿಭಾಗವನ್ನು ತಲುಪಿ ರೇಷನ್ ಕಾರ್ಡ್ ನಂಬರ್ (RC No.) ಹಾಕುವ ಮೂಲಕ ಇದುವರೆಗೆ ಎಷ್ಟು ಕಂತಿನ ಹಣ ಜಮೆ ಆಗಿದೆ ಯಾವ ದಿನಾಂಕದಂದು ಜಮೆಯಾಗಿದೆ ಎಲ್ಲವನ್ನು ತಿಳಿದುಕೊಳ್ಳಬಹುದು.
ಈ ಸುದ್ದಿ ಓದಿ:-ಮುರ್ರೆಲ್ ಮೀನು ಸಾಕಾಣಿಕೆ ಮಾಡಿದ್ರೆ ತಿಂಗಳಿಗೆ 2 ಲಕ್ಷ ಆದಾಯ ಗ್ಯಾರಂಟಿ, ಕಂಪನಿಯೇ ಮೀನನ್ನು ಬೈ ಬ್ಯಾಕ್ ಕೂಡ ಮಾಡುತ್ತೆ.!
* ಕರ್ನಾಟಕ ಸರ್ಕಾರ ಪರಿಚಯಿಸಿದ DBT ಕರ್ನಾಟಕ ಆಪ್ (DBT Karnataka app) ಡೌನ್ಲೋಡ್ ಮಾಡಿಕೊಂಡು ಆಧಾರ್ ಸಂಖ್ಯೆ ಹಾಕುವ ಮೂಲಕ ಗೃಹಲಕ್ಷ್ಮಿ ಯೋಜನೆ ಸೇರಿದಂತೆ ಸರ್ಕಾರದಿಂದ ಯಾವೆಲ್ಲ ಅನುದಾನ ಸಿಗುತ್ತದೆ ಎಲ್ಲವನ್ನು ತಿಳಿದುಕೊಳ್ಳಬಹುದು.
ಹಣ ಬರದೇ ಇರಲು ಕಾರಣಗಳು:-
* ಬ್ಯಾಂಕ್ ಅಕೌಂಟ್ ಆಕ್ಟಿವ್ (Account Inactive) ಇಲ್ಲದೆ ಇರುವುದು ಖಾತೆಗೆ ಆಧಾರ್ ಸೀಡಿಂಗ್ NPCI ಮ್ಯಾಪಿಂಗ್ ಆಗದೆ (Aadhar Seeding NPCI Mapping) ಇರುವುದು
* ರೇಷನ್ ಕಾರ್ಡ್ ಇ-ಕೆವೈಸಿ (e-KYC) ಆಗದೆ ಇರುವುದು * ರೇಷನ್ ಕಾರ್ಡ್ ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಪಾಸ್ ಬುಕ್ ನಲ್ಲಿ ಹೆಸರಿನಲ್ಲಿ ವ್ಯತ್ಯಾಸ ಇರುವುದು
* ಆಧಾರ್ ಕಾರ್ಡ್ ಅಪ್ಡೇಟ್ ಆಗದೇ ಇರುವುದು
* ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಯಶಸ್ವಿ ಆಗದೆ ಇರುವುದು (Application failed).
* ಸರ್ಕಾರದಿಂದ ಕೆಲವು ತಾಂತ್ರಿಕ ದೋಷಗಳಾಗಿ (Technical Issues) ಕೂಡ ಕೆಲವರಿಗೆ ಹಣ ತಲುಪಿಲ್ಲ ಈಗ ಅದನ್ನು ಸರಿಪಡಿಸಲಾಗಿದೆ
ಪರಿಹಾರ:-
* ಮೊದಲಿಗೆ ಮೇಲೆ ತಿಳಿಸಿದಂತೆ ಎಲ್ಲ ದಾಖಲೆಗಳು ಸರಿಯಾಗಿ ಇವೆಯೇ ಎನ್ನುವುದನ್ನು ಚೆಕ್ ಮಾಡಿಕೊಳ್ಳಿ ತಪ್ಪಿದ್ದರೆ ತಿದ್ದುಪಡಿ ಮಾಡಿಸಿಕೊಳ್ಳಿ.
* ಎಲ್ಲವು ಸರಿ ಇದ್ದು ಹಣ ಬರುತ್ತಿಲ್ಲ ಎಂದರೆ ಕೂಡಲೇ ನಿಮ್ಮ ತಾಲೂಕಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿಯಲ್ಲಿ ಇರುವ CDPO ಅಧಿಕಾರಿಗಳನ್ನು ಭೇಟಿಯಾಗಿ ಅರ್ಜಿ ಸಲ್ಲಿಸಿ ಮತ್ತು ಈ ಸಂದರ್ಭದಲ್ಲಿ ಆಧಾರ್ ಕಾರ್ಡ್, ರೇಷನ್ ಕಾರ್ಡ್. ಬ್ಯಾಂಕ್ ಪಾಸ್ ಬುಕ್ ಹಾಗೂ ಗೃಹಲಕ್ಷ್ಮಿಗೆ ಅರ್ಜಿ ಸಲ್ಲಿಸಿರುವ ಅರ್ಜಿ ಸ್ವೀಕೃತಿ ಪ್ರತಿಯನ್ನು ಜೊತೆಯಲ್ಲಿ ತೆಗೆದುಕೊಂಡು ಹೋಗಿ.