ಆಧಾರ್ ಕಾರ್ಡ್ ಇದ್ದವರು ತಕ್ಷಣ ಈ ಕೆಲಸ ಮಾಡಿ.! ದೇಶದ ಯಾವುದೇ ಮೂಲೆಯಲ್ಲಿ ಇದ್ರೂ ರೇಷನ್ ಪಡೆಯಬಹುದು.!

 

WhatsApp Group Join Now
Telegram Group Join Now

ಕಡ್ಡಾಯ ಆಹಾರ ನೀತಿ ಎನ್ನುವ ಯೋಜನೆಯ ಮೂಲಕ ದೇಶದ ಎಲ್ಲಾ ಜನರು ಕೂಡ ಉಚಿತ ಪಡಿತರ ಪಡೆಯುತ್ತಿದ್ದಾರೆ. ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ (BPL) ಕೇಂದ್ರ ಸರ್ಕಾರವು (Government) ಇಂತಹ ಒಂದು ನೆರವನ್ನು ನೀಡುತ್ತಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು (Narendra Modi) ಕೊರೋನಾ ಸಾಂಕ್ರಾಮಿಕದ ಸಮಯದಲ್ಲಿ ಈ ಆದೇಶವನ್ನು ತಂದರು.

ಬಡತನ ರೇಖೆಗಿಂತ ಕೆಳಗಿರುವ ಪಡಿತರ ಚೀಟಿಗಳನ್ನು ಹೊಂದಿರುವ ಪ್ರತಿಯೊಬ್ಬ ಸದಸ್ಯನೂ ಕೂಡ ಈ ಯೋಜನೆಯ ಮೂಲಕ 5Kg ಉಚಿತಪಡಿತರವನ್ನು ಪಡೆಯಬಹುದು. ಕೆಲವೊಮ್ಮೆ 5Kgಅಕ್ಕಿ ನೀಡಿದರೆ ಇನ್ನೂ ಕೆಲವೊಮ್ಮೆ 3 Kg ಅಕ್ಕಿ ಹಾಗೂ 2Kg ಆಯಾ ಪ್ರದೇಶದಲ್ಲಿ ಬೇಡಿಕೆ ಇರುವ ಗೋಧಿ, ಜೋಳ, ರಾಗಿ ಈ ಧಾನ್ಯಗಳನ್ನು ನೀಡಲಾಗುತ್ತಿದೆ.

ಯೋಜನೆಯ ಮುಂದುವರಿದ ಭಾಗವಾಗಿ ಸರ್ಕಾರವು ಮತ್ತೊಂದು ನಡೆಯನ್ನು ತಂದಿತು. ಒನ್ ನೇಶನ್ ಒನ್ ರೇಷನ್ (One Nation One Ration) ಅಭಿಯಾನದಡಿ ಪಡಿತರ ಚೀಟಿದಾರರು ದೇಶದ ಯಾವುದೇ ರಾಜ್ಯದ ಯಾವುದೇ ಭಾಗದಲ್ಲಿದ್ದರೂ ಕೂಡ ಕೇಂದ್ರ ಸರ್ಕಾರದಿಂದ ಸಿಗುವ ಈ ಉಚಿತ ಪಡಿತರ ವ್ಯವಸ್ಥೆಯನ್ನು ಪಡೆಯಬಹುದು ಎಂದು ಅನುಮತಿ ನೀಡಲಾಯಿತು.

ಯಾಕೆಂದರೆ ಒಬ್ಬ ವ್ಯಕ್ತಿಯು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಉದ್ಯೋಗ ಅಥವಾ ವಿದ್ಯಾಭ್ಯಾಸ ಅಥವಾ ಇನ್ನಿತರ ಕಾರಣಗಳಿಂದ ವಲಸೆ ಹೋಗಬೇಕಾದ ಪರಿಸ್ಥಿತಿ ಇರುತ್ತದೆ. ಇಂತಹ ಸಂದರ್ಭಗಳಲ್ಲಿ ಪಡಿತರದಿಂದ ವಂಚಿತನಾಗಬಾರದು ಎನ್ನುವ ಉದ್ದೇಶದಿಂದ ಈ ಒಂದು ಅನುಕೂಲತೆ ಮಾಡಿಕೊಡಲಾಗಿದೆ.

ಆದರೆ ನೀವು ಈ ರೀತಿ ಒನ್ ನೇಶನ್ ಒನ್ ರೇಷನ್ ಯೋಜನೆಯಲ್ಲಿ ಯಾವುದೇ ಭಾಗದಲ್ಲಾದರೂ ನಿಮ್ಮ ಪಾಲಿಗೆ ಸೇರಿದ ಪಡಿತರವನ್ನು ಪಡೆದುಕೊಳ್ಳಬೇಕು ಎಂದರೆ ಕಡ್ಡಾಯವಾಗಿ ನಿಮ್ಮ ಆಧಾರ್ ಕಾರ್ಡ್ ಪಡಿತರ ಚೀಟಿಗೆ ಲಿಂಕ್ (Adhar link to Ration card) ಆಗಿರಲೇಬೇಕು. ಆಧಾರ್ ಕಾರ್ಡ್ ಪಡಿತರ ಚೀಟಿಗೆ ಲಿಂಕ್ ಆಗಿ ಇ-ಕೆವೈಸಿ ಅಪ್ಡೇಟ್ ಆಗಿದ್ದರೆ ಜೊತೆಗೆ ನಿಮ್ಮ ಕುಟುಂಬದಲ್ಲಿ ಎಷ್ಟು ಸದಸ್ಯರ ಇದ್ದಾರೆ.

ಅವರೆಲ್ಲರೂ ಕೂಡ ತಮ್ಮ ಆಧಾರ್ ಕಾರ್ಡ್ ಮತ್ತು ಬಯೋಮೆಟ್ರಿಕ್ ಮಾಹಿತಿಯನ್ನು ಅಪ್ಡೇಟ್ ಮಾಡಿಸಿದ್ದರೆ ನೀವು ನಿಮ್ಮ ಪಡಿತರ ಚೀಟಿಗೆ ಸೇರಬಹುದಾದ ಪಡಿತರವನ್ನು ದೇಶದ ಯಾವುದೇ ನ್ಯಾಯ ಬೆಲೆ ಅಂಗಡಿಯಲ್ಲಿ ಪಡೆದುಕೊಳ್ಳಬಹುದು. ಇದರಿಂದ ಬೆಂಗಳೂರು, ಹೈದರಾಬಾದ್, ದೆಹಲಿ ಇನ್ನು ಮುಂತಾದ ದೇಶದ ಇತರ ಭಾಗಗಳಿಗೆ ವರ್ಷಗಳ ವರೆಗೆ ಹೋಗುವ ಜನರಿಗೆ ಸಾಕಷ್ಟು ಅನುಕೂಲವಾಗುತ್ತದೆ.

ಪಡಿತರ ಚೀಟಿಗೆ ಆಧಾರ್ ಲಿಂಕ್ ಮಾಡುವ ವಿಧಾನ:-
● ಪಡಿತರ ಚೀಟಿಗೆ ಆಧಾರ್ ಲಿಂಕ್ ಮಾಡಲುನಿಮ್ಮ ರಾಜ್ಯದ PDS ನ ಅಧಿಕೃತ ವೆಬ್‌ ಸೈಟ್‌ ಗೆ ಭೇಟಿ ಕೊಡಬೇಕು.
● ಪಡಿತರ ಚೀಟಿ ಸಂಖ್ಯೆಯನ್ನು ನಮೂದಿಸಿ ನಂತರ ಆಧಾರ್ ಸಂಖ್ಯೆಯನ್ನು ನಮೂದಿಸಿ.
● ಆಧಾರ್‌ನಲ್ಲಿ ನೋಂದಾಯಿಸಲಾದ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು. ಆ ಸಂಖ್ಯೆಗೆ OTP ಬರುತ್ತದೆ, OTP ನಮೂದಿಸಿದರೆ ಆಧಾರ್‌ ಗೆ ಪಡಿತರವನ್ನು ಲಿಂಕ್ ಮಾಡಲು ನಿಮ್ಮ ವಿನಂತಿಯನ್ನು ಸಲ್ಲಿಸಲಾಗುತ್ತದೆ.

● ನಂತರನಿಮ್ಮ ಪಡಿತರ ಚೀಟಿಯನ್ನು ಆಧಾರ್‌ ಗೆ ಲಿಂಕ್ ಆಗಿದೆಯೇ ಅಥವಾ ಇಲ್ಲವೇ ಎಂದು ಆನ್‌ ಲೈನ್‌ ನಲ್ಲಿ ಸುಲಭವಾಗಿ ಪರಿಶೀಲಿಸಿಕೊಳ್ಳಬಹುದು. Mera Ratio ಆಪ್ ಡೌನ್‌ಲೋಡ್ ಮಾಡಿಕೊಂಡು ಆಧಾರ್ ಸೀಡಿಂಗ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ, ಪಡಿತರ ಚೀಟಿ ಸಂಖ್ಯೆಯನ್ನು ನಮೂದಿಸಿ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿದರೆ ತಿಳಿಯುತ್ತದೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now