HDFC ಬ್ಯಾಂಕ್ ಹಾಗೂ HDFC ಬ್ಯಾಂಕ್ ಲಿಮಿಟೆಡ್ ಎರಡು ಹಣಕಾಸಿನ ಕಂಪನಿಗಳು ವಿಲೀನಗೊಳ್ಳುತ್ತಿವೆ. RBI ಕೂಡ ಇದಕ್ಕೆ ಅನುಮತಿ ನೀಡಿದ್ದು 2023-24ನೇ ಆರ್ಥಿಕ ವರ್ಷದಲ್ಲಿ ಈ ಪ್ರಕ್ರಿಯೆ ಆರಂಭಗೊಳಿಸಲು ಆದೇಶ ನೀಡಿದೆ. ಆದರೆ ಜುಲೈ ತಿಂಗಳ ಒಳಗಡೆ ಸಂಪೂರ್ಣವಾಗಿ HDFC ಮತ್ತು HDFC ಬ್ಯಾಂಕ್ ಲಿಮಿಟೆಡ್ ಕಂಪನಿಗಳನ್ನು ಪೂರ್ತಿಯಾಗಿ ಮರ್ಜ್ ಮಾಡುವ ಗುರಿಯನ್ನು ಸಂಸ್ಥೆಯು ಹೊಂದಿದೆ.
ಈ ಪ್ರಕ್ರಿಯೆಗೆ ಇನ್ನು 4-5 ವಾರಗಳು ಮಾತ್ರ ಬಾಕಿ ಉಳಿದಿದೆ. ಮತ್ತೊಂದು ಕಡೆ ವಿಶ್ಲೇಷಕರ ಪ್ರಕಾರ ಈ ಪ್ರಕ್ರಿಯೆ ಪೂರ್ತಿಗೊಳಿಸಲು ಇನ್ನು ಹೆಚ್ಚಿನ ಸಮಯವಕಾಶ ಬೇಕಾಗಬಹುದು ಎನ್ನುವ ಕಾರಣಗಳು ಇವೆ. ಯಾಕೆಂದರೆ ಗ್ರಾಮಾಂತರ ಪ್ರದೇಶಗಳಲ್ಲಿ ಹಾಗೂ ಅರೆ ಪಟ್ಟಣ ಪ್ರದೇಶಗಳಲ್ಲಿ ಕೂಡ HDFC ಬ್ಯಾಂಕ್ ಲಿಮಿಟೆಡ್ ನ ಶಾಖೆಗಳು ಇರುವುದರಿಂದ ವರ್ಷಕ್ಕೆ 1500 ಶಾಖೆಗಳನ್ನು ಮರ್ಜ್ ಮಾಡುವ ಗುರಿ ಹಾಕಿಕೊಂಡರೆ 4-5 ವರ್ಷಗಳಲ್ಲಿ ಇದು ಪೂರ್ತಿ ಆಗಬಹುದು ಎನ್ನುವ ಮಾತುಗಳು ಕೂಡ ಇದೆ.
ಈ ರೀತಿಯ ನಿರ್ಧಾರವನ್ನು ಮ್ಯಾನೇಜ್ಮೆಂಟ್ ತೆಗೆದುಕೊಳ್ಳಲು ಅನೇಕ ಕಾರಣಗಳು ಇವೆ. ಅವುಗಳನ್ನು ಪರೀಕ್ಷಿಸಿ RBI ಇಂತಹದೊಂದು ಮಹತ್ವದ ನಿಲುವಿಗೆ ಆದೇಶವನ್ನು ಕೂಡ ನೀಡಿದೆ. HDFC ಬ್ಯಾಂಕ್ ಲಿಮಿಟೆಡ್ ಮತ್ತು HDFC ವಿಲೀನವಾದರೆ ಭಾರತದಲ್ಲಿ ಮೂರನೇ ಅತಿ ದೊಡ್ಡ ಹಣಕಾಸಿನ ಸಂಸ್ಥೆಯಾಗಿ HDFC ಹೊರ ಹೊಮ್ಮಲಿದೆ. ಇದರಿಂದ HDFC ಗ್ರಾಹಕರಿಗೆ ತಮ್ಮ ಠೇವಣಿಗಳ ಮೇಲೆ ಅತಿ ಹೆಚ್ಚಿನ ಬಡ್ಡಿದರ ಪಡೆಯಲು ಹಾಗೂ ಅತಿ ಕಡಿಮೆ ಬಡ್ಡಿದರಕ್ಕೆ ರೈತರು ಮತ್ತು ವ್ಯಾಪಾರಸ್ಥರು ಸಾಲ ಪಡೆಯಲು ಅವಕಾಶಗಳು ಸಿಗುತ್ತದೆ.
HDFC ಬ್ಯಾಂಕ್ ಲಿಮಿಟೆಡ್ ಜೊತೆ HDFC ವಿಲೀನಗೊಂಡರೆ ಪ್ರೊಸೆಸಿಂಗ್ ಫೀಗಳು ಮತ್ತು ಎರಡು ಬ್ಯಾಂಕ್ ಗಳಲ್ಲೂ ಕೂಡ ಹಣಕಾಸು ಚಟುವಟಿಕೆ ನಡೆಸುವವರಿಗೆ ಅವರ ಆರ್ಥಿಕ ಚಟುವಟಿಕೆ ಮೇಲೆ ಬ್ಯಾಂಕ್ ಇಂದ ವಿಧಿಸಲಾಗುವಂತಹ ಚಾರ್ಜಸ್ ಗಳು ಮುಂತಾದವುಗಳೆಲ್ಲ ಕಡಿಮೆ ಆಗಲಿದೆ. ಒಂದೇ ಸೂರಿನ ಅಡಿಯಲ್ಲಿ HDFC ಬ್ಯಾಂಕ್ ಲಿಮಿಟೆಡ್ ಮತ್ತು HDFC ಬ್ಯಾಂಕಿನ ಎರಡು ಸೇವೆಗಳನ್ನು ಕೂಡ ಗ್ರಾಹಕರು ಪಡೆಯಲು ಅನುಕೂಲತೆಯು ದೊರೆಯಲಿದೆ.
HDFC ಬ್ಯಾಂಕ್ ಲಿಮಿಟೆಡ್ 1977ರಲ್ಲಿಯೇ ಆರಂಭಗೊಂಡಿತು, 1996ರ ನಂತರ HDFC ಬ್ಯಾಂಕ್ ಜಾರಿಗೆ ಬಂತು. ಇವೆರಡು ವಿಲನಗೊಳ್ಳುತ್ತಿರುವುದು ಭಾರತದ ಆರ್ಥಿಕ ಭವಿಷ್ಯದಲ್ಲಿ ಮಹತ್ತರದ ಬದಲಾವಣೆಯನ್ನು ತರಬಹುದೆನ್ನುವ ಭರವಸೆಯನ್ನು ನೀಡುತ್ತಿದೆ. ಈ ರೀತಿ HDFC ಬ್ಯಾಂಕ್ ಲಿಮಿಟೆಡ್ ಮತ್ತು HDFC ಬ್ಯಾಂಕ್ ಎರಡು ವಿಲೀನಗೊಳ್ಳುವುದರಿಂದ ಸಂಸ್ಥೆಗೆ ಕೂಡ ಅನುಕೂಲತೆ ಇದೆ ಎರಡು ಕಂಪನಿಗಳಲ್ಲಿ ಸಾಲ ಪಡೆಯುವವರು ಕಡಿಮೆ ಆಗುವುದರಿಂದ ಅಸುರಕ್ಷಿತ ಸಾಲದ ಹೊರೆಗಳು ಬ್ಯಾಂಕಿಗೆ ಕಡಿಮೆ ಆಗಲಿದೆ.
ಆದ್ಯತೆ ವಲಯವನ್ನು ಗುರುತಿಸಿ ಹೆಚ್ಚಿನ ಸಾಲವನ್ನು ಶೀಘ್ರವಾಗಿ ನೀಡಲು ಸರಿಯಾದ ಮಾಹಿತಿ ತಕ್ಷಣಕ್ಕೆ ಮತ್ತು ಸುಲಭವಾಗಿ ಸಿಗಲಿದೆ. ಈ ಎರಡು ಹಣಕಾಸಿನ ಸಂಸ್ಥೆಗಳ ವಿಲೀನದ ಕಾರಣದಿಂದ ಗ್ರಾಹಕರಿಗೆ ಹೆಚ್ಚೇನು ಸಮಸ್ಯೆ ಆಗುವುದಿಲ್ಲ. ಸಾಕಷ್ಟು ಬ್ಯಾಂಕ್ ಗಳು ಈ ರೀತಿ ಮರ್ಜ್ ಆಗಿವೆ ಆದರೆ ಈಗ HDFC ಯು ಅಂಗ ಸಂಸ್ಥೆಯೊಂದು HDFC ಸಂಸ್ಥೆ ಜೊತೆ ವಿಲೀನವಾಗುತ್ತಿರುವುದು ಗ್ರಾಹಕರ ಮಟ್ಟಿಗೆ ಹೆಚ್ಚಿನ ಗೊಂದಲವನ್ನುಂಟು ಮಾಡುವುದಿಲ್ಲ ಎಂದು ಹೇಳಬಹುದು.