ಮನೆಯಲ್ಲಿ ಅತ್ತೆ ಸೊಸೆ ಇಬ್ಬರೂ ಇದ್ದರೆ ಗೃಹಲಕ್ಷ್ಮಿ ಯೋಜನೆ 2000 ರೂಪಾಯಿ ಯಾರಿಗೆ ಸಿಗಲಿದೆ ಗೊತ್ತಾ.?

 

ಈ ಬಾರಿ ನಡೆದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ 135 ಸೀಟ್ ಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್ ಪಕ್ಷವು ಸ್ಪಷ್ಟ ಬಹುಮತದೊಂದಿಗೆ ಕರ್ನಾಟಕದ ಅಧಿಕಾರ ವಹಿಸಿಕೊಂಡಿದೆ. ಮಾನ್ಯ ಮುಖ್ಯಮಂತ್ರಿಗಳಾಗಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿಗಳಾಗಿ ಡಿ.ಕೆ ಶಿವಕುಮಾರ್ ಅವರು ಪ್ರಮಾಣ ವಚನವನ್ನು ಸ್ವೀಕರಿಸಿ ಸಂಪುಟ ರಚನೆ ಕೂಡ ಮಾಡಿದ್ದಾರೆ.

ಪಕ್ಷವು ಗೆದ್ದು ಸರ್ಕಾರ ರಚಿಸಿ ಸಚಿವರನ್ನು ಕೂಡ ನೇಮಿಸುತ್ತಿದೆ. ಮತ್ತೊಂದು ಕಡೆಯಿಂದ ಕರ್ನಾಟಕ ಜನತೆ ಕಾಂಗ್ರೆಸ್ ಪಕ್ಷವು ಚುನಾವಣೆ ಪ್ರಚಾರದ ವೇಳೆ ತಾವು ಅಧಿಕಾರಕ್ಕೆ ಬಂದರೆ ಗ್ಯಾರಂಟಿಯಾಗಿ ಜಾರಿಗೆ ತರುತ್ತೇವೆ ಎಂದು ಹೇಳಿ ಕಾರ್ಡ್ ವಿತರಣೆ ಮಾಡಿದ್ದ ಐದು ಯೋಜನೆಗಳನ್ನು ಶೀಘ್ರವಾಗಿ ಜಾರಿಗೊಳಿಸುವಂತೆ ಒತ್ತಡ ಏರುತ್ತಿದ್ದಾರೆ.

ಗೃಹಜೋತಿ ಯೋಜನೆ, ಗೃಹಲಕ್ಷ್ಮಿ ಯೋಜನೆ, ನಿರುದ್ಯೋಗ ಭತ್ಯೆ, ಉಚಿತವಾಗಿ 10 ಕೆಜಿ ಅಕ್ಕಿ ಮತ್ತು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಈ ಯೋಜನೆಗಳನ್ನು ಗ್ಯಾರಂಟಿ ಯೋಜನೆಗಳಾಗಿ ಜಾರಿಗೆ ತರುತ್ತೇವೆ ಎಂದು ಚುನಾವಣಾ ಪ್ರಚಾರದ ವೇಳೆ ವೇಳೆ ಪಕ್ಷವು ಹೇಳಿತ್ತು. ಈ ಗ್ಯಾರಂಟಿ ಕಾರ್ಡುಗಳ ಮೇಲೆ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಅವರು ಸಹ ಸಹಿ ಮಾಡಿ ಕೊಟ್ಟಿದ್ದರು.

ಹೋದ ಕಡೆಯಲೆಲ್ಲಾ ಭಾಷಣಗಳಲ್ಲಿ ಇದರ ಬಗ್ಗೆ ಮಾತನಾಡಿದ್ದ ವಿಡಿಯೋಗಳನ್ನು ಜನ ಈಗಲೂ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡುತ್ತಿದ್ದಾರೆ. ಕರ್ನಾಟಕದಲ್ಲಿ ಈಗ ಈ ಗ್ಯಾರಂಟಿ ಕಾರ್ಡ್ ಯೋಜನೆಗಳ ಅನುಷ್ಠಾನದ ಬಗ್ಗೆಯೇ ಚರ್ಚೆ ಹೆಚ್ಚಾಗುತ್ತಿದೆ. ಮುಖ್ಯಮಂತ್ರಿಗಳು ಪ್ರಮಾಣ ವಚನದ ಸ್ವೀಕರಿಸ ದಿನದಂದು ಸಚಿವರ ಜೊತೆ ಚರ್ಚಿಸಿ ಇದಕ್ಕೆ ತಾತ್ವಿಕ ಅನುಮೋದನೆ ನೀಡಿ ಆದೇಶ ಪತ್ರ ಹೊರಡಿಸಿದ್ದನ್ನು ಜನ ಯೋಜನೆಯ ಜಾರಿಯಾಯಿತು ಎನ್ನುವಷ್ಟು ನಂಬಿದ್ದಾರೆ.

ಹಾಗಾಗಿ ಅಲ್ಲಲ್ಲಿ ಮಹಿಳೆಯರು ಬಸ್ಗಳಲ್ಲಿ ಟಿಕೆಟ್ ತೆಗೆದುಕೊಳ್ಳದೆ ಕಂಡಕ್ಟರ್ ಜೊತೆ ವಾದಕ್ಕೆ ಇಳಿದಿರುವುದು, ಮನೆ ಬಳಿ ವಿದ್ಯುತ್ ಬಿಲ್ ಸಂಗ್ರಹಕ್ಕೆ ಬರುವ ಪ್ರತಿನಿಧಿ ಜೊತೆ ಗ್ರಾಮಸ್ಥರುಗಳು ಗಲಾಟೆಗೆ ಇಳಿದಿರುವ ವಿಡಿಯೋಗಳು ಕೂಡ ಹರಿದಾಡುತ್ತಿವೆ. ಇದೇ ರೀತಿ ಗೃಹಲಕ್ಷ್ಮಿ ಯೋಜನೆ ಬಗ್ಗೆ ಮಹಿಳೆಯರು ಬಹಳ ನಿರೀಕ್ಷೆ ಇಟ್ಟುಕೊಂಡಿದ್ದು ಪ್ರತಿ ಕುಟುಂಬದ ಯಜಮಾನಿಗೆ 2000ರೂ. ಸಿಗುವುದರಿಂದ ಮನೆಯಲ್ಲಿ ಹೆಚ್ಚು ಮಹಿಳೆಯರಿದ್ದರೆ ಹೇಗೆ ಎಂದು ಗೊಂದಲಕ್ಕೆ ಒಳಗಾಗಿದ್ದಾರೆ.

ಒಂದು ಮನೆಯಲ್ಲಿ ಅತ್ತೆ ಮತ್ತು ಸೊಸೆ ಇದ್ದರೆ ಈ ಗೃಹಲಕ್ಷ್ಮಿ ಯೋಜನೆಯ 2000 ಯಾರಿಗೆ ಸಿಗುತ್ತದೆ ಎನ್ನುವ ಸ್ಪಷ್ಟತೆ ಇಲ್ಲದೆ ಜನ ಕನ್ಫ್ಯೂಸ್ ಆಗಿದ್ದಾರೆ.

ಜೂನ್ 1 ರಂದು ಕ್ಯಾಬಿನೆಟ್ ಮೀಟಿಂಗ್ ನಡೆಯುತ್ತದೆ, ಅದರಲ್ಲಿ ಗೈಡ್ಲೈನ್ಸ್ ರಿಲೀಸ್ ಆಗುತ್ತದೆ. ತಾಳ್ಮೆಯಿಂದ ಅಲ್ಲಿಯ ತನಕ ಕಾದು ನೋಡಿ. ನಾವು ಕೊಟ್ಟಿದ್ದ ಮಾತಿನಂತೆ ಖಂಡಿತವಾಗಿಯೂ ಗ್ಯಾರಂಟಿ ಕಾರ್ಡ್ ಯೋಜನೆಗಳನ್ನು ಜಾರಿಗೆ ತಂದೇ ತರುತ್ತೇವೆ. ವಿರೋಧ ಪಕ್ಷಗಳು ಸ್ಟ್ರೈಕ್ ಮಾಡುತ್ತೇವೆ ಎಂದು ಹೇಳಿದರೆ ಅದಕ್ಕೆ ನಾವು ಬೇಡ ಎನ್ನುವುದಿಲ್ಲ ನಮ್ಮ ಸರ್ಕಾರಕ್ಕೆ ಈಗಿನ್ನು ಹದಿನೈದು ದಿನ ಅಷ್ಟೇ, ಆ ಮಗುವಿಗೆ ಬಟ್ಟೆ ಒಲಿಸಬೇಕಾದರೆ ಅಳತೆ ಕೊಡಬೇಕು ಬಹಳಷ್ಟು ಬೇರೆ ಕೆಲಸಗಳು ಇವೆ. ಎಂದು ಯೋಜನೆ ಜಾರಿ ಆಗುತ್ತಿರುವುದಕ್ಕೆ ಸಮರ್ಥನೆಯನ್ನು ಕೊಟ್ಟಿದ್ದಾರೆ.

Leave a Comment

%d bloggers like this: