2,000 ರೂಪಾಯಿ ನೋಟ್ ವಿನಿಮಯ ನಿಯಮದಲ್ಲಿ ಬದಲಾವಣೆ.! ನೋಟ್ ವಿನಿಮಯ ಪ್ರಕ್ರಿಯೆಗೆ ಶುಲ್ಕ ವಿಧಿಸಿದ ಬ್ಯಾಂಕ್ ಗಳು. ಒಂದು ನೋಟ್ ಬದಲಾಯಿಸೋಕೆ ಎಷ್ಟು ಶುಲ್ಕ ‌ನೋಡಿ.!

 

2016ರಲ್ಲಿ ಹಳೆಯ 500 ಹಾಗೂ 1000 ಮುಖಬೆಲೆಯ ನೋಟುಗಳು ಬ್ಯಾನ್ ಆದ ಸಂದರ್ಭದಲ್ಲಿ ಹೊಸದಾಗಿ 2,000ರೂ. ನೋಟ್ ಗಳನ್ನು ಚಲಾವಣೆಗೆ ತರಲಾಗಿತ್ತು. ಅದೇ ಮೊದಲ ಬಾರಿಗೆ ದೇಶದಲ್ಲಿ 2,000 ಮುಖಬೆಲೆಯ ನೋಟನ್ನು ಜಾರಿಗೆ ತಂದಿದ್ದು. ಗುಲಾಬಿ ಬಣ್ಣದ ಬಾಹ್ಯಾಕಾಶಯನದ ಚಿತ್ರ ಹೊಂದಿದ್ದ 2,000 ಮುಖಬೆಲೆಯ ನೋಟ್ ನ ವ್ಯಾಲಿಡಿಟಿ ಕೂಡ ಈಗ ಮುಗಿದಿದೆ.

ಮತ್ತೊಮ್ಮೆ RBI ನೋಟ್ಗಳ ನ್ನು ಹಿಂಪಡೆಯುತ್ತಿದೆ ಇದರ ಬಗ್ಗೆ RBI ಆಜ್ಞೆ ಹೊರಡಿಸಿ ನೋಟ್ ಗಳನ್ನು ಹೊಂದಿರುವವರು ಬ್ಯಾಂಕ್ಗಳಲ್ಲಿ ಇದನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಹಿಂತಿರುಗಿಸಿ ಎಂದು ಹೇಳಿದೆ ಇದಕ್ಕಾಗಿ ಸೆಪ್ಟೆಂಬರ್ 30ರವರೆಗೆ ಕೂಡ ಸುದೀರ್ಘವಾದ ಕಾಲಾವಕಾಶವನ್ನು ಕೊಟ್ಟು ಜನಸಾಮಾನ್ಯರಿಗೆ ಅನುಕೂಲತೆಯನ್ನು ಸಹ ಮಾಡಿಕೊಟ್ಟಿದೆ.

ಈಗ ನೋಟ್ ಬ್ಯಾನ್ ಆಗಿರುವುದಕ್ಕೆ ಯಾವುದೇ ಸ್ಪಷ್ಟ ಕಾರಣಗಳು ಸಿಗದೆ ಇದ್ದರೂ ಜನರಿಗೆ ಚಿಲ್ಲರೆ ಸಮಸ್ಯೆ ಉಂಟು ಮಾಡುತ್ತಿದ್ದು ಎನ್ನುವುದನ್ನು ಹೆಚ್ಚು ಜನ ಮಾತನಾಡಿದ್ದಾರೆ. RBI ಈಗ 2000 ಮುಖಬೆಲೆಯ ನೋಟ್ ಗಳನ್ನು ಬ್ಯಾನ್ ಮಾಡಿ ಹಿಂಪಡೆಯುವ ಆದೇಶವನ್ನು ಈಗ ಕೊಟ್ಟಿದ್ದರೂ ಇದರ ತಯಾರಿ ಈ ಹಿಂದೆಯೇ ಶುರುವಾಗಿತ್ತಾ ಎನ್ನುವ ಅನುಮಾನಗಳು ಕಾಡುತ್ತಿದೆ.

ಯಾಕೆಂದರೆ ವರ್ಷಗಳ ಹಿಂದಿನಿಂದಲೇ ಈ ನೋಟುಗಳು ಹೆಚ್ಚಾಗಿ ಓಡಾಡುತ್ತಿಲ್ಲ. ಜೊತೆಗೆ ಬ್ಯಾಂಕ್‌ಗಳಲ್ಲೂ ಸಹ ಹಣ ಸ್ವೀಕರಿಸುವಾಗ 2000 ಮುಖಬೆಲೆಯ ನೋಟ್ಸ್ ಸ್ವೀಕರಿಸುತ್ತಿದ್ದರು ಹೊರತು ಯಾರೇ ಹಣ ಡ್ರಾ ಮಾಡಿದವರಿಗೆ ಈ ನೋಟನ್ನು ಕೊಡುತ್ತಿರಲಿಲ್ಲ. ಒಂದು ಹಂತದಲ್ಲಿ ಕೇಂದ್ರ ಸರ್ಕಾರ 2000 ನೋಟ್ ಗಳ ಮುದ್ರಣವನ್ನೇ ನಿಲ್ಲಿಸಿದೆ ಎನ್ನುವ ಸುದ್ದಿಗಳು ಕೂಡ ಹರಿದಾಡಿದ್ದವು. ಈಗ ಅಂತಿಮವಾಗಿ RBI 2,000 ಮುಖಬೆಲೆ ನೋಟ್ ಗಳನ್ನು ಬ್ಯಾನ್ ಮಾಡಿ ಇದಕ್ಕೆಲ್ಲ ತೆರೆ ಎಳೆದಿದೆ.

ಜನಸಾಮಾನ್ಯರಿಗೆ ಮೊದಲ ಬಾರಿಗೆ ನೋಟ್ ಬ್ಯಾನ್ ಆದಾಗ ಆದಷ್ಟು ತಾಪತ್ರಯ ಆಗದೆ ಇದ್ದರೂ ಕೆಲವೊಂದು ನಿಯಮಗಳನ್ನು ಪಾಲಿಸಲೇ ಬೇಕಾಗಿದೆ. ಒಬ್ಬರು ಒಂದು ಬಾರಿಗೆ 20 ಸಾವಿರದವರೆಗೆ ನೋಟ್ ಗಳನ್ನು ಬ್ಯಾಂಕಗಳಲ್ಲಿ ವಿನಿಮಯ ಮಾಡಿಕೊಳ್ಳಬಹುದು. ಈ ಹಣವನ್ನು ಅವರ ಉಳಿತಾಯ ಖಾತೆಗೆ ಹಾಕಬಹುದು ಅಥವಾ ನೇರವಾಗಿ ಹಣವನ್ನೇ ಬದಲಾಯಿಸಿಕೊಳ್ಳಬಹುದು ಎಂದು RBI ಹೇಳಿದೆ.

ಆದರೆ ಬ್ಯಾಂಕ್ ಗಳು ಇದರ ಮೇಲೆ ಶುಲ್ಕ ಏರುತ್ತಿರುವುದು ಎಲ್ಲರಿಗೂ ಶಾ’ಕ್ ಉಂಟು ಮಾಡಿದೆ. ಭಾರತದ ಅತಿ ದೊಡ್ಡ ಬ್ಯಾಂಕ್ ಎಂದು ಕರೆಸಿಕೊಂಡಿರುವ SBI ಬ್ಯಾಂಕ್ ತಿಂಗಳಿಗೆ ಮೂರು ಬಾರಿ ಮಾತ್ರ 2,000 ಮುಖ ಬೆಲೆಯ ಹಣ ವಿನಿಮಯಕ್ಕೆ ಅವಕಾಶ, ಅದಕ್ಕಿಂತ ಹೆಚ್ಚಿನ ವಹಿವಾಟಿನ ಮೇಲೆ 5ರೂ.GST ವಿಧಿಸುವುದಾಗಿ ಹೇಳಿದೆ. ಆದರೆ ಮೆಷಿನ್ ಮೂಲಕ ಹಣವನ್ನು ಠೇವಣಿ ಮಾಡುವವರಿಗೆ ಇದು ಅನ್ವಯವಾಗುವುದಿಲ್ಲ.

ICICI ಬ್ಯಾಂಕ್ ಕೂಡ ನೋಟ್ ಗಳನ್ನು ವಿನಿಮಯ ಮಾಡುವುದಕ್ಕೆ ಶುಲ್ಕ ಹೇರಿದ್ದು, ಪ್ರತಿ ವಹಿವಾಟಿಗೆ 150 ರೂಪಾಯಿಯನ್ನು ಚಾರ್ಜ್ ಮಾಡುತ್ತಿದೆ. ಖಾಸಗಿ ವಲಯದ ಕೋಟಕ್ ಬ್ಯಾಂಕ್ ಕೂಡ ಪ್ರತಿ ವಹಿವಾಟಿನ ಮೇಲೆ 150 ರೂಪಾಯಿಗೆ ಶುಲ್ಕ ಹೇರಿದೆ. ನಿಧಾನವಾಗಿ ಎಲ್ಲಾ ಬ್ಯಾಂಕ್ಗಳು ಕೂಡ ತಮ್ಮದೇ ಆದ ನಿಯಮವನ್ನು ರೂಪಿಸುತ್ತಿವೆ. 2,000 ಮುಖಬೆಲೆಯ ನೋಟುಗಳನ್ನು ಹಿಂಪಡೆದ RBI ಮತ್ತೆ 1000ರೂ. ಮುಖಬೆಲೆಯ ನೋಟ್ ಗಳನ್ನು ಹೊಸದಾಗಿ ಮುದ್ರಿಸುತ್ತದೆ ಎನ್ನುವ ಸುದ್ದಿಯು ಇದೆ. ಇದೆಲ್ಲದರ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎನ್ನುವುದನ್ನು ತಪ್ಪದೆ ಕಾಮೆಂಟ್ ಮಾಡಿ ತಿಳಿಸಿ.

Leave a Comment

%d bloggers like this: