ಕೇಂದ್ರ ಸರ್ಕಾರದ (Central Government) ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ದೇಶದಾದ್ಯಂತ ಇರುವ ಪ್ರತಿ ಕುಟುಂಬಕ್ಕೂ ಕೂಡ ಪಡಿತರ ಚೀಟಿಯನ್ನು (Ration Card) ವಿತರಿಸುವ ಜವಾಬ್ದಾರಿ ಹೊತ್ತುಕೊಂಡಿದೆ. ಬಡತನ ರೇಖೆಗಿಂತ ಮೇಲಿರುವ ಕುಟುಂಬಗಳು ಹಾಗೂ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು ಮತ್ತು ಆರ್ಥಿಕವಾಗಿ ಬಹಳ ಹಿಂದಿರುವ ಕುಟುಂಬಗಳನ್ನು ಗುರುತಿಸಿ APL / BPL / AAY ಎನ್ನುವ ಮೂರು ಮಾದರಿಯ ಪಡಿತರ ಚೀಟಿಯನ್ನು ನೀಡುತ್ತಿದೆ.
ಈ ಪಡಿತರ ಚೀಟಿಯ ಆಧಾರದ ಮೇಲೆ ಕೇಂದ್ರ ಸರ್ಕಾರದ ಹಲವು ಯೋಜನೆಗಳು ರೂಪುಗೊಂಡಿದ್ದು ಮತ್ತು ಆಯಾ ರಾಜ್ಯ ಸರ್ಕಾರಗಳು ಕೂಡ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ನೆರವಾಗುವ ದೃಷ್ಟಿಯಿಂದ ವಿಶೇಷ ಸವಲತ್ತುಗಳನ್ನು ಪಡಿತರ ಚೀಟಿ ಆಧಾರವಾಗಿ ನೀಡುತ್ತಿವೆ. ಪಡಿತರ ಚೀಟಿಯ ಮುಖ್ಯ ಉದ್ದೇಶವು ಈ ಮೇಲೆ ತಿಳಿಸಿದ ಯೋಜನೆಗಳೊಂದಿಗೆ ಪ್ರತಿ ತಿಂಗಳು ಕುಟುಂಬಗಳಿಗೆ ಉಚಿತವಾಗಿ ಅಥವಾ ಅತ್ಯಂತ ಕನಿಷ್ಠ ಬೆಲೆಗೆ ಪ್ರತಿನಿತ್ಯ ಬಳಕೆಗೆ ಬೇಕಾದ ಮುಖ್ಯ ಆಹಾರ ಧಾನ್ಯಗಳನ್ನು ತಲುಪಿಸುವುದಾಗಿದೆ.
ಈ ಸುದ್ದಿ ಓದಿ:- ರೈತರಿಗೂ ಇನ್ಮುಂದೆ ಸಿಗಲಿದೆ 25,000 ಸಹಾಯಧನ.! ಸರ್ಕಾರದಿಂದ ಹೊಸ ಸ್ಕೀಮ್ ಜಾರಿ.!
ಆ ಪ್ರಕಾರವಾಗಿ ಈಗ ಕೇಂದ್ರ ಸರ್ಕಾರದ ಕಡೆಯಿಂದ ಉಚಿತವಾಗಿ ಅಕ್ಕಿ, ಗೋಧಿ, ರಾಗಿ, ಕಡಲೆ ಕಾಳು, ಬೇಳೆ ಕಾಳು ಮುಂತಾದ ಧಾನ್ಯಗಳು ವಿತರಣೆ ಆಗುತ್ತಿವೆ ಮತ್ತು ಒಂದು ನೇಶನ್ ಒಂದೇ ರೇಷನ್ ಕಾನ್ಸೆಪ್ಟ್ ನಡಿ ದೇಶದ ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ತನ್ನ ಕುಟುಂಬದ ಪಾಲಿನ ಪಡಿತರ ಪಡೆಯುವ ಅವಕಾಶ ಮಾಡಿಕೊಟ್ಟಿರುವುದರಿಂದ ಕೋಟ್ಯಾಂತರ ಕುಟುಂಬಗಳಿಗೆ ನೆರವಾಗಿ ಪ್ರತಿ ವ್ಯಕ್ತಿಗೂ ಆತನ ಪಾಲಿನ ರೇಷನಾ ಸಿಗುತ್ತಿದೆ.
ಇನ್ನು ನಮ್ಮ ರಾಜ್ಯದ ಮಟ್ಟಿಗೆ ಹೇಳುವುದಾದರೆ ಕಳೆದ ಬಾರಿ ವಿಧಾನಸಭಾ ಚುನಾವಣೆ – 2023 (Assembly Election – 2023) ವೇಳೆ ಕಾಂಗ್ರೆಸ್ ಪಕ್ಷವು (Congress Party) ಘೋಷಿಸಿದ್ದ ಗ್ಯಾರಂಟಿಗಳಲ್ಲಿ (Annabhagya gyaranty Scheme ) ಒಂದಾಗಿ ಅನ್ನಬಾಗ್ಯ ಯೋಜನೆಯ ವಿಷಯವನ್ನು ಕೂಡ ಸೇರಿಸಲಾಗಿತ್ತು.
ಈ ಸುದ್ದಿ ಓದಿ:- ಶೌಚಾಲಯ ನಿರ್ಮಾಣಕ್ಕೆ ಸರ್ಕಾರದಿಂದ ಸಿಗಲಿದೆ 12,000 ಸಹಾಯಧನ ಆಸಕ್ತರು ಅರ್ಜಿ ಸಲ್ಲಿಸಿ.!
ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಕೇಂದ್ರದಿಂದ ನೀಡುತ್ತಿರುವ 5Kg ಪಡಿತರವನ್ನು 10Kgಗೆ ಏರಿಸಲಾಗುವುದು ಎನ್ನುವ ಭರವಸೆ ನೀಡಿದ್ದ ಪ್ರಕಾರ ಇಂದು ಪ್ರತಿ ಸದಸ್ಯನಿಗೂ 10KG ಪಡಿತ ನೀಡಲಾಗುತ್ತಿದೆ. ದಾಸ್ತಾನು ಕೊರತೆ ಉಂಟಾಗಿರುವುದರಿಂದ 5KG ಅಕ್ಕಿ ಜೊತೆ ಉಳಿದ 5KG ಅಕ್ಕಿ ಬದಲಿಗೆ ಪ್ರತಿಯೊಬ್ಬ ಸದಸ್ಯನಿಗೆ ರೂ.170 ರಂತೆ ಆ ಕುಟುಂಬದ ಮುಖ್ಯಸ್ಥನ ಖಾತೆಗೆ DBT ಮೂಲಕ ವರ್ಗಾವಣೆ ಮಾಡಲಾಗುತ್ತಿದೆ.
ಈಗ ಇಂತಹದ್ದೇ ಮತ್ತೊಂದು ವಿಶೇಷ ಯೋಜನೆಯನ್ನು ದೇಶದ ಮತ್ತೊಂದು ರಾಜ್ಯ ಸರ್ಕಾರವು ಜಾರಿಗೆ ತರಲು ಚಿಂತನೆ ನಡೆಸುತ್ತಿದೆ, ಇದು ದೇಶದ ಎಲ್ಲರ ಗಮನ ಸೆಳೆದಿದೆ. ಉತ್ತರ ಪ್ರದೇಶದ ಸರ್ಕಾರವು (U.P Government) ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಉಚಿತ ಪಡಿತರದಲ್ಲಿ ಅಕ್ಕಿ ರಾಗಿ ಗೋಧಿ ಜೊತೆಗೆ ಇನ್ನು 46 ವಸ್ತುಗಳನ್ನು ಉಚಿತವಾಗಿ ಹಂಚಲು ಪಟ್ಟಿ ತಯಾರಿಸಿದೆ. ಆ ಪ್ರಕಾರವಾಗಿ ಯಾವೆಲ್ಲಾ ವಸ್ತುಗಳು ಈ ಪಟ್ಟಿಯಲ್ಲಿ ಸೇರಿವೆ ಎನ್ನುವುದರ ಲಿಸ್ಟ್ ಹೀಗಿದೆ ನೋಡಿ.
ಈ ಸುದ್ದಿ ಓದಿ:- BMTC ಕಂಡಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ಪರೀಕ್ಷಾ ಪ್ರಾಧಿಕಾರದಿಂದ ಡೈರೆಕ್ಟ್ ಅರ್ಜಿ ಲಿಂಕ್ ಬಿಡುಗಡೆ, ಮೊಬೈಲ್ ನಲ್ಲೇ ಹೀಗೆ ಅರ್ಜಿ ಸಲ್ಲಿಸಿ.!
* ಟೀ ಪ್ಯಾಕೆಟ್ಗಳು
* ಕಾಫಿ, ಹಾಲು ಮತ್ತು ಹಾಲಿನ ಪ್ಯಾಕೆಟ್ಗಳು
* ಶಾಂಪೂ
* ಸೋಪು
* ಟೂತ್ಪೇಸ್ಟ್
* ನಮ್ಕೀನ್
* ಬಿಸ್ಕತ್ತುಗಳು
* ಬ್ರೆಡ್
* ಒಣ ಹಣ್ಣುಗಳು
* ಮಸಾಲೆಗಳು
* ಸಿಹಿತಿಂಡಿಗಳು
* ಪ್ಯಾಕ್ ಮಾಡಿದ ಹಾಲಿನ ಪುಡಿ
* ಬೇಬಿ ಬಟ್ಟೆಗಳು
* ಹೊಸೈರಿ
* ಆಡಳಿತ ಸಾಮಗ್ರಿಗಳು
* ರಾಜ್ಮಾ
* ಕ್ರೀಮ್
* ಸೋಯಾ ಬೀನ್
* ಹಾಲು ಎಲೆ
* ಕನ್ನಡಿ
* ಬಾಚಣಿಗೆ
* ಬೀಗ
* ಛತ್ರಿ
* ಪೊರಕೆ
* ಮಾಪ್
* ವಾಲ್ ಹ್ಯಾಂಗರ್
* ರೇನ್ಕೋಟ್
* ವಾಷಿಂಗ್ ಪೌಡರ್
* ಟೂತ್ ಬ್ರಷ್
* ಧೂಪದ್ರವ್ಯ
* 5 KG ಗ್ಯಾಸ್ ಸಿಲಿಂಡರ್
* ಸೊಳ್ಳೆ ಪರದೆ
* ಪಾತ್ರೆ ತೊಳೆಯುವ ಬಾರ್
* ಟಾರ್ಚ್
* ವಿದ್ಯುತ್ ಪರಿಕರಗಳು
* ಗೋಡೆ ಗಡಿಯಾರ
* ಬೆಂಕಿಕಡ್ಡಿಗಳು
* ಬೂಟುಗಳು
* ನೈಲಾನ್ / ಪ್ಲಾಸ್ಟಿಕ್ ಹಗ್ಗ
* ನೀರಿನ ಪೈಪ್
* ಖನಿಜಯುಕ್ತ ನೀರು
* ಕೈ ತೊಳೆಯುವುದು
* ಪ್ಲಾಸ್ಟಿಕ್
* ಬಾತ್ರೂಮ್ ಕ್ಲೀನರ್
* ಶೇವಿಂಗ್ ಕ್ರೀಮ್
* ಬೇಬಿ ಕೇರ್ ಉತ್ಪನ್ನಗಳು
* ಸಾಬೂನುಗಳು
* ಡೈಪರ್ಗಳು
* ಮಸಾಜ್ ಎಣ್ಣೆಗಳು
* ಸ್ಯಾನಿಟರಿ ನ್ಯಾಪ್ಕಿನ್ಗಳು
* ಕಾಂಡೋಮ್ ಗಳು
* ವೈಬ್ಸ್ ಬಾಡಿ ಲೋಷನ್ ಗಳು.