ಒಂದು ಆಸ್ತಿಯನ್ನು ಆ ವ್ಯಕ್ತಿ ಮತ್ತೊಬ್ಬರಿಗೆ ಕೊಡುವಾಗ ಅಂದರೆ ತನ್ನ ಆಸ್ತಿಯ ಮೇಲಿನ ಹಕ್ಕನ್ನು ಮತ್ತೊಬ್ಬರಿಗೆ ಬಿಟ್ಟು ಕೊಡುವಾಗ ಅದಕ್ಕೆ ಮೂರು ಮಾರ್ಗಗಳಿವೆ. ದಾನ ಪತ್ರದ ಮೂಲಕ, ಕ್ರಯದ ಮೂಲಕ, ವಿಭಾಗದ ಮೂಲಕ ವಿಭಾಗದ ಮೂಲಕ ಒಂದು ಅವಿಭಜಿತ ಕುಟುಂಬದ ಸದಸ್ಯರು ಆ ಕುಟುಂಬದ ಆಸ್ತಿಯನ್ನು ವಿಭಾಗ ಮಾಡಿಕೊಳ್ಳುವುದಾಗಿದೆ.
ಪಿತ್ರಾರ್ಜಿತ ಆಸ್ತಿಯಲ್ಲಿ ಅಥವಾ ಒಬ್ಬ ತಂದೆಯ ಆಸ್ತಿಯಲ್ಲಿ ತಮ್ಮ ಪಾಲಿಗೆ ಬರಬೇಕಾದದ್ದನ್ನು ಆ ಆಸ್ತಿಗೆ ವಾರಸುದಾರರಾಗಿರುವ ಎಲ್ಲರೂ ಒಟ್ಟಿಗೆ ನಿರ್ಧಾರ ತೆಗೆದುಕೊಂಡು ವಿಭಾಗ ಮಾಡಿಕೊಂಡು ಅವರವರ ಹೆಸರಿಗೆ ಮಾಡಿಸಿಕೊಳ್ಳಬಹುದು. ಇನ್ನು ಕ್ರಯ ಪತ್ರದ ಮೂಲಕ ಹೆಚ್ಚಾಗಿ ವ್ಯಾಪಾರ ಮಾಡುವಂತಹ ಸೈಟ್ ಮತ್ತು ಜಮೀನುಗಳು ಮಾರಾಟವಾಗುತ್ತವೆ.
ಎರಡೇ ಗಂಟೆಯಲ್ಲಿ ಹೊಟ್ಟೆ ಬೊಜ್ಜು ಕರಗಿಸಿರುವ ಸುಲಭ ವಿಧಾನದ ಬಗ್ಗೆ ತಿಳಿಸಿಕೊಟ್ಟ ಪರಿಮಳ ಜಗ್ಗೇಶ್.!
ಒಬ್ಬ ವ್ಯಕ್ತಿ ಹಣವನ್ನು ಅಥವಾ ಇನ್ಯಾವುದೇ ರೂಪದ ಕಾಣಿಕೆಯನ್ನು ಪಡೆದುಕೊಂಡು ತನ್ನ ಪಾಲಿನ ಆಸ್ತಿ ಹಕ್ಕನ್ನು ಮತ್ತೊಬ್ಬರಿಗೆ ಬಿಟ್ಟುಕೊಟ್ಟರೆ ಆ ಸಮಯದಲ್ಲಿ ಅದನ್ನು ಕ್ರಯ ಆಗಿದೆ ಎನ್ನುತ್ತಾರೆ. ಇನ್ನು ಮುಖ್ಯವಾದದ್ದು ದಾನ ಪತ್ರ ಒಬ್ಬ ತಂದೆಯು ತನ್ನ ಪಾಲಿನ ಆಸ್ತಿಯನ್ನು ತನ್ನ ಮಗನಿಗೆ ಅಥವಾ ಅದು ಅವರ ಸ್ವಯಾರ್ಜಿತ ಆಸ್ತಿ ಆಗಿದ್ದರೆ ಅದನ್ನು ತನ್ನ ಇಷ್ಟ ಬಂದವರಿಗೆ ನೀಡಲು ಈ ಮಾರ್ಗವನ್ನು ಅನುಸರಿಸುತ್ತಾರೆ.
ಹೆಚ್ಚಾಗಿ ಸ್ವಯಾರ್ಜಿತ ಆಸ್ತಿ ಇರುವವರು ದಾನ ಪತ್ರದ ಮೂಲಕ ತಮ್ಮ ಆಸ್ತಿ ಹಕ್ಕನ್ನು ಮಕ್ಕಳಿಗೆ ಬಿಟ್ಟು ಕೊಡುತ್ತಾರೆ. ದಾನ ಪತ್ರದ ಮೂಲಕ ಆಸ್ತಿಯನ್ನು ವರ್ಗಾವಣೆ ಮಾಡುವುದರಿಂದ ನೋಂದಣಿ ಹಾಗೂ ಮುದ್ರಾಂಕ ಶುಲ್ಕ ಇತ್ಯಾದಿ ಚಾರ್ಜಸ್ ಕೂಡ ಕಡಿಮೆ ಆಗುತ್ತದೆ. ದಾನ ಪತ್ರದಲ್ಲಿ ಬಾಂಡ್ ಪೇಪರ್ ಮೇಲೆ ಬರೆದು ಸಹಿ ಮಾಡಿ ಕೊಟ್ಟಿದ್ದರೆ ಸಾಕಲ್ಲವೇ ಎನ್ನುವುದು ಹಲವರ ಪ್ರಶ್ನೆ ಅದಕ್ಕೆ ಸರಿಯಾದ ಉತ್ತರ ಇಲ್ಲಿದೆ ನೋಡಿ.
ಕರ್ನಾಟಕ ರಾಜ್ಯ ಆಡಳಿತ ಮಂಡಳಿ ನೇಮಕಾತಿ, SSLC ಆಗಿದ್ದರೂ ಸಾಕು ಕೂಡಲೇ ಅರ್ಜಿ ಸಲ್ಲಿಸಿ.!
ಒಂದು ಉದಾಹರಣೆಯೊಂದಿಗೆ ವಿವರಿಸಲು ಬಯಸುತ್ತೇನೆ. ಅದೇನೆಂದರೆ ಒಬ್ಬ ಅಜ್ಜಿ ತನ್ನ ಮಗಳಿಗೆ ತನ್ನ ತಂದೆ ಅಥವಾ ತಾಯಿ ಕಡೆಯಿಂದ ಬಂದಿದ್ದ ಮನೆಯನ್ನು ಕೊಟ್ಟಿರುತ್ತಾರೆ
ಮತ್ತು ಆ ಸಮಯದಲ್ಲಿ ಅದನ್ನು ದಾನಪತ್ರ ಬರೆದು ಕೊಟ್ಟಿರುತ್ತಾರೆ ಹೊರತು ಅದನ್ನು ರಿಜಿಸ್ಟರ್ ಮಾಡಿಸಿರುವುದಿಲ್ಲ ಅಜ್ಜಿಯ ಆಸ್ತಿಯಲ್ಲಿ ಅವರ ಮಗಳು ಮತ್ತು ಮೊಮ್ಮಕ್ಕಳು ಇರುತ್ತಾರೆ.
ಮಗಳು ಕೂಡ ಮೃ’ತ ಪಟ್ಟ ಬಳಿಕ ಮೊಮ್ಮಕ್ಕಳು ಅದೇ ಮನೆಯಲ್ಲಿ ವಾಸವಿರುತ್ತಾರೆ ಆದರೆ ಇದು ರಿಜಿಸ್ಟರ್ ಆಗದ ಕಾರಣ ಇನ್ನೂ ಸಹ ಅಜ್ಜಿ ಹೆಸರಿನಲ್ಲಿ ಮನೆ ಇರುತ್ತದೆ. ಈಗ ಆ ಅಜ್ಜಿಯ ಗಂಡು ಮಕ್ಕಳು ಅಂದರೆ ಈ ಮೊಮ್ಮಕ್ಕಳ ಮಾವಂದಿರು ತಮಗೂ ಅದರಲ್ಲಿ ಪಾಲಬೇಕು ಎಂದು ದಾವೇ ಹೂಡಿದರೆ ಇಂತಹ ಸಂದರ್ಭದಲ್ಲಿ ಏನಾಗುತ್ತದೆ ಎಂದರೆ ಅವರಿಗೂ ಕೂಡ ಪಾಲು ಹೋಗುತ್ತದೆ.
ಅಸ್ತಿ ರಿಜಿಸ್ಟರ್ ಆಗದ ಕಾರಣ ನೀವು ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು ಆಜ್ಜಿ ಮ’ರ’ಣದ ನಂತರ ರಿಜಿಸ್ಟರ್ ಮಾಡಲು ಆಗುವುದಿಲ್ಲ. ಈ ಬಗ್ಗೆ ಕೋರ್ಟ್ ಗೆ ಹೋದರೆ ಕೂಡ ಕೋಟಿನಲ್ಲಿ ಅಜ್ಜಿಯ ಎಲ್ಲಾ ಮಕ್ಕಳಿಗೂ ಕೂಡ ಸಮಾನವಾದ ಪಾಲು ಹೋಗುತ್ತದೆ ಅದರಲ್ಲಿ ತಾಯಿಗೂ ಕೂಡ ಒಂದು ಪಾಲು ಬರುತ್ತದೆ.
ಅಜ್ಜಿಗೆ ಮೂರು ಜನ ಮಕ್ಕಳಿದ್ದು ಆ ತಾಯಿ ಕೂಡ ಒಬ್ಬರಾಗಿರುವುದರಿಂದ ಮೂರರಲ್ಲಿ ಒಂದು ಭಾಗ ತಾಯಿಗೆ ಬರುತ್ತದೆ ಮತ್ತು ತಾಯಿಯ ಒಂದು ಪಾಲಿನಲ್ಲಿ ಅವರ ಪತಿ ಹಾಗೂ ಅವರ ಎಲ್ಲ ಮಕ್ಕಳಿಗೂ ಸಮಾನ ಪಾಲು ಸಿಗುತ್ತದೆ. ಈಗ ಕಾನೂನಿನಲ್ಲಿ 100ರೂ ಬಾಂಡ್ ಪೇಪರ್ ಗಿಂತ ಹೆಚ್ಚಿನ ಮೌಲ್ಯದ ಪತ್ರಗಳು ರಿಜಿಸ್ಟರ್ ಆಗಿರಲೇಬೇಕು ಎನ್ನುವ ನಿಯಮವಿದೆ.