ನ್ಯಾಯಾಲಯಗಳನ್ನು ನ್ಯಾಯದೇಗುಲ ಎಂದು ಕರೆಯಲಾಗುತ್ತದೆ. ಇಂತಹ ಜಾಗಗಳಲ್ಲಿ ಉದ್ಯೋಗ ಮಾಡಬೇಕು ಎನ್ನುವುದು ಹಲವರ ಇಚ್ಛೆ. ಕೋರ್ಟ್ ನಲ್ಲಿ ನ್ಯಾಯಾಧೀಶರು, ನ್ಯಾಯವಾದಿ ಮಾತ್ರವಲ್ಲದೆ ಇನ್ನು ಅನೇಕ ಸಿಬ್ಬಂದಿಗಳಿಗೆ ಉದ್ಯೋಗವಕಾಶ ಇರುತ್ತದೆ. ಅತಿ ಕಡಿಮೆ ವಿದ್ಯಾಭ್ಯಾಸ ಹೊಂದಿದವರು ಕೂಡ ಹುದ್ದೆ ಮಾಡಲು ಅವಕಾಶ ಇದೆ.
ಈ ರೀತಿ ನ್ಯಾಯಾಂಗದ ಒಂದು ಭಾಗವಾಗಿ ಕೆಲಸ ಮಾಡಬೇಕು ಎಂದು ಬಯಸುವವರಿಗೆ ಕರ್ನಾಟಕ ರಾಜ್ಯ ಆಡಳಿತ ಮಂಡಳಿ ಕಡೆಯಿಂದ ಸಿಹಿ ವಿಚಾರ ಇದೆ. ನ್ಯಾಯಾಂಗ ಮಂಡಳಿಯಲ್ಲಿ ಖಾಲಿ ಇರುವ ಬೆರಳಚ್ಚುಗಾರರ ಹುದ್ದೆಗಳಿಗೆ ಸೂಕ್ತ ಅಭ್ಯರ್ಥಿಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿದ್ದ.
ಇದಕ್ಕೆ ಕೇಳಲಾಗಿರುವ ಅರ್ಹತಮಾನದಂಡಗಳನ್ನು ಪೂರೈಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಪರೀಕ್ಷೆಗಳನ್ನು ಎದುರಿಸಿ ಈ ಉದ್ಯೋಗಗಳನ್ನು ಗಿಟ್ಟಿಸಿಕೊಳ್ಳಬಹುದಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಅನುಕೂಲತೆ ಮಾಡಿಕೊಡುವ ಸಲುವಾಗಿ ಅಧಿಸೂಚನೆಯಲ್ಲಿರುವ ಪ್ರಮುಖ ಅಂಶಗಳ ಬಗ್ಗೆ ಮಾಹಿತಿ ತಿಳಿಸುತ್ತಿದ್ದೇವೆ…
ಉದ್ಯೋಗ ಸಂಸ್ಥೆ:- ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ
ಹುದ್ದೆ ಹೆಸರು:- ಬೆರಳಚ್ಚುಗಾರರು (Typist)
ಒಟ್ಟು ಹುದ್ದೆಗಳ ಸಂಖ್ಯೆ:- 06
ಉದ್ಯೋಗ ಸ್ಥಳ:-
ಈ ಮೇಲ್ಕಂಡ ಹುದ್ದೆಗಳಿಗೆ ಆಯ್ಕೆ ಆಗುವ ಅಭ್ಯರ್ಥಿಗಳು ಬೆಂಗಳೂರಿನ ಪ್ರಧಾನ ಪೀಠ ಅಥವಾ ಕಲ್ಬುರ್ಗಿ ಪೀಠ ಅಥವಾ ಬೆಳಗಾವಿ ಪೀಠದಲ್ಲಿ ಕರ್ತವ್ಯ ನಿರ್ವಹಿಸಲು ಸಿದ್ಧರಿರಬೇಕು.
ಕರ್ನಾಟಕ ಗ್ರಾಮ ಪಂಚಾಯಿತಿಯಲ್ಲಿ ಹೊಸ ಹುದ್ದೆಗಳ ನೇಮಕಾತಿ, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ.!
ವೇತನ ಶ್ರೇಣಿ:-
● ಈ ಹುದ್ದೆಗಳಿಗೆ ಆಯ್ಕೆ ಆಗುವ ಅಭ್ಯರ್ಥಿಗಳಿಗೆ ಮಾಸಿಕವಾಗಿ 21,000ರೂ. ದಿಂದ 42,000ರೂ. ವೇತನ ಇರುತ್ತದೆ.
● ಕಾಲಕಾಲಕ್ಕೆ ಅನುಗುಣವಾಗಿ ಪರಿಷ್ಕೃತವಾಗುತ್ತಿರುತ್ತದೆ
ಶೈಕ್ಷಣಿಕ ವಿದ್ಯಾರ್ಹತೆ:-
● ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಮಾನ್ಯತೆ ಪಡೆದ ಯಾವುದೇ ಮಂಡಳಿಯಿಂದ SSLC ಅಥವಾ ತತ್ಸಮಾನ ಪರೀಕ್ಷೆ ಉತ್ತೀರ್ಣರಾಗಿರಬೇಕು.
● ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ನಡೆಸುವ ಕನ್ನಡ ಮತ್ತು ಆಂಗ್ಲ ಭಾಷೆಯ ಬೆರಳಚ್ಚು ಪರೀಕ್ಷೆ ಪ್ರೌಢ ದರ್ಜೆ (Senior grade) ಅಥವಾ ಡಿಪ್ಲೋಮಾ ಇನ್ ಕಮರ್ಷಿಯಲ್ ಪ್ರಾಕ್ಟೀಸ್ ಅಂತಿಮ ವರ್ಷವನ್ನು ಉತ್ತೀರ್ಣರಾಗಿರಬೇಕು.
ವಯೋಮಿತಿ:-
● ಕನಿಷ್ಠ 18 ವರ್ಷಗಳು
● ಗರಿಷ್ಠ 35 ವರ್ಷಗಳು
ವಯೋಮಿತಿ ಸಡಿಲಿಕೆ:-
● SC / SC ಮತ್ತು ಪ್ರವರ್ಗ 1 ಅಭ್ಯರ್ಥಿಗಳಿಗೆ 05 ವರ್ಷಗಳು
● OBC ಅಭ್ಯರ್ಥಿಗಳಿಗೆ 03 ವರ್ಷಗಳು
ಅರ್ಜಿ ಶುಲ್ಕ:-
● SC / ST ಪ್ರವರ್ಗ ಒಂದು ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
● ಇನ್ನುಳಿದ ಅಭ್ಯರ್ಥಿಗಳು 150ರೂ. ಗಳನ್ನು ಡಿಡಿ ಮೂಲಕ ವಿಲೇಖನಾಧಿಕಾರಿ, ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿ, ಕಂದಾಯ ಭವನ, 7ನೇ ಮಹಡಿ, K.G ರಸ್ತೆ ಬೆಂಗಳೂರು – 09 ಇವರ ಹೆಸರಿಗೆ ಬೆಂಗಳೂರಿನಲ್ಲಿ ಸಂದಾಯವಾಗುವಂತೆ ಪಡೆದು ಅರ್ಜಿಯೊಂದಿಗೆ ಸಲ್ಲಿಸಬೇಕು.
ಅಕ್ಟೋಬರ್ ತಿಂಗಳಲ್ಲಿ ಕರೆಯಲಾದ ಸರ್ಕಾರಿ ಹುದ್ದೆಗಳು, 10ನೇ ತರಗತಿ ಆದವರಿಗೂ ಇದೆ ಅವಕಾಶ, ತಪ್ಪದೇ ಅರ್ಜಿ ಸಲ್ಲಿಸಿ.!
ಅರ್ಜಿ ಸಲ್ಲಿಸುವ ವಿಧಾನ:-
ಅಜ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅಧಿಕೃತ ವೆಬ್ ಸೈಟ್ ಗೆ ಭೇಟಿ ಕೊಟ್ಟು ಅರ್ಜಿ ಫಾರಂ ಡೌನ್ಲೋಡ್ ಮಾಡಿಕೊಂಡು ವೈಯಕ್ತಿಕ ವಿವರಗಳನ್ನು ಸರಿಯಾಗಿ ಭರ್ತಿ ಮಾಡಬೇಕು.
ಕೇಳಲಾಗಿರುವ ಶೈಕ್ಷಣಿಕ ವಿದ್ಯಾರ್ಹತೆ, ಶುಲ್ಕ ಪಾವತಿ, ವಯೋಮಿತಿ ಸಡಿಲಿಕೆ ಇವುಗಳಿಗೆ ಸಂಬಂಧಿಸಿದ ಪೂರಕ ದಾಖಲೆಗಳ ಪ್ರತಿಗಳನ್ನು ಲಗತ್ತಿಸಿ, ಖುದ್ದಾಗಿ ಕಛೇರಿಗೆ ಬಂದು ಅಥವಾ ಅಂಚೆ ಮೂಲಕ ಅರ್ಜಿ ಸಲ್ಲಿಸಬೇಕು.
ಆಯ್ಕೆ ಪದ್ಧತಿ:-
● ಸ್ಕಿಲ್ ಟೆಸ್ಟ್
● ಸಂದರ್ಶನ
● ದಾಖಲೆಗಳ ಪರಿಶೀಲನೆ.
ರಾಜ್ಯದ ಈ 7 ಜಿಲ್ಲೆಯವರಿಗೆ ಮನೆ ಕಟ್ಟಲು ಸರ್ಕಾರದ ವತಿಯಿಂದ ಉಚಿತ ಸೈಟ್ ವಿತರಣೆ.!
ಪ್ರಮುಖ ದಿನಾಂಕಗಳು:-
● ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 26.09.2023
● ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 31.10.2023