ಈ ಶ್ರಮ ಕಾರ್ಡ್ ಇದ್ದವರಿಗೆ ಸರ್ಕಾರದಿಂದ ಸಿಗಲಿದೆ 2 ಲಕ್ಷ ಹಣ ಆಸಕ್ತರು ಅರ್ಜಿ ಸಲ್ಲಿಸಿ.!

 

WhatsApp Group Join Now
Telegram Group Join Now

ಇ-ಶ್ರಮ್ ಕಾರ್ಡ್ ದೇಶದಾದ್ಯಂತ ಎಲ್ಲ ಜನರಿಗೂ ಪರಿಚಿತವಾಗಿರುವ ಒಂದು ಗುರುತಿನ ಚೀಟಿ ಆಗಿದೆ. ಅಸಂಘಟಿತ ವಲಯದ ಕಾರ್ಮಿಕರಾದ ತರಕಾರಿ ಮಾರಾಟಗಾರರು, ಸಣ್ಣ ರೈತರು, ಕೃಷಿ ಕಾರ್ಮಿಕರು, ಕಟ್ಟಡ ಕೆಲಸಗಾರರು, ಮನೆ ಕೆಲಸದವರು ಈ ರೀತಿ ಅಸಂಘಟಿತ ವಲಯದಲ್ಲಿ ದುಡಿಯುವ ಎಲ್ಲಾ ಕಾರ್ಮಿಕರು ಪಡೆಯುವಂತಹ ಗುರುತಿನ ಚೀಟಿ ಆಗಿದೆ.

ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದಿಂದ ಅಸಂಘಟಿತ ವಲಯದ ಕಾರ್ಮಿಕರನ್ನು ಗುರುತಿಸುವ ಸಲುವಾಗಿ ಹಾಗೂ ಅವರಿಗಾಗಿ ಯೋಜನೆಗಳನ್ನು ರೂಪಿಸಿದಾಗ ಶೀಘ್ರವಾಗಿ ಅವರಿಗೆ ತಲುಪಿಸಲು ಸರ್ಕಾರ ಇ-ಶ್ರಮ್ ಕಾರ್ಡ್ ಗೆ ಮಾನ್ಯತೆ ನೀಡುತ್ತದೆ. ನೀವು ಕೂಡ ಕಾರ್ಮಿಕರಾಗಿದ್ದು ಇ-ಶ್ರಮ್ ಕಾರ್ಡ್ ಹೊಂದಿದ್ದರೆ ನಿಮಗೆ ಕಷ್ಟಕಾಲದಲ್ಲಿ 2 ಲಕ್ಷಗಳ ಹಣಕಾಸಿನ ನೆರವು ಮತ್ತು ಇನ್ನಿತರ ಅನುಕೂಲತೆಗಳು ಸಿಗಲಿದೆ. ಇದರ ಬಗ್ಗೆ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಿಕೊಡುತ್ತಿದ್ದೇವೆ.

ಲೇಬರ್ ಕಾರ್ಡ್ ಹೊಂದಿರುವ ಕಾರ್ಮಿಕರಿಗೆ ಸಿಗುವ ಪ್ರಯೋಜನಗಳು:-
● ಇ-ಶ್ರಮ್ ಕಾರ್ಡ್ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸುವ ಪ್ರತಿಯೊಬ್ಬ ವ್ಯಕ್ತಿಗೆ ಸರ್ಕಾರದಿಂದ ಪ್ರತಿ ತಿಂಗಳು 1000ರೂ. ಆರ್ಥಿಕ ನೆರವು ಸಿಗುತ್ತದೆ.
● ನೋಂದಣಿಯಾಗಿ ಇ-ಶ್ರಮ್ ಕಾರ್ಡ್ ಹೊಂದಿರುವ ಎಲ್ಲಾ ವ್ಯಕ್ತಿಗಳಿಗೆ 2 ಲಕ್ಷದವರೆಗಿನ ಅಪಘಾತ ವಿಮೆಯನ್ನು ನೀಡುತ್ತದೆ. ಅಪಘಾತದಿಂದ ವ್ಯಕ್ತಿ ಮೃ.ತ ಪಟ್ಟರೆ ಸರ್ಕಾರದಿಂದ 2 ಲಕ್ಷದವರೆಗೆ ನೆರವು ನೀಡಲಾಗುತ್ತದೆ.

● ಕಾರ್ಮಿಕರ ಮಕ್ಕಳ ಶಿಕ್ಷಣದ ವೆಚ್ಚ ಸೇರಿದಂತೆ ಅನೇಕ ಸೌಲಭ್ಯವನ್ನು ಓದಗಿಸಲಾಗುತ್ತದೆ. ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ.
● ಭವಿಷ್ಯದಲ್ಲಿ ಅಸಂಘಟಿತ ವಲಯದಲ್ಲಿ ದುಡಿಯುವ ಕಾರ್ಮಿಕರಿಗಾಗಿ ರೂಪಿಸುವ ಯೋಜನೆಯಗಳಲ್ಲಿ ಮೊದಲು ಈ ಇ-ಶ್ರಮ್ ಕಾರ್ಡ್ ಹೊಂದಿರುವವರಿಗೆ ಆಧ್ಯತೆ ನೀಡಲಾಗುತ್ತದೆ.
● ಶ್ರಮ ಯೋಗಿ ಮನ್ ಧನ್ ಯೋಜನೆಯಡಿ ಹೂಡಿಕೆ ಮಾಡಿದರೆ ಭವಿಷ್ಯದಲ್ಲಿ ಪಿಂಚಣಿ ಸೌಲಭ್ಯವನ್ನು ನೀಡಬಹುದು.
● ಕಾರ್ಮಿಕ ಕಾರ್ಡ್ ಹೊಂದಿರುವವರಿಗೆ ಸರ್ಕಾರದಿಂದ ಆರೋಗ್ಯ ಮತ್ತು ಚಿಕಿತ್ಸೆಗಾಗಿ ಆರ್ಥಿಕ ನೆರವು ನೀಡಲಾಗುವುದು.

ಇ-ಶ್ರಮ್ ಕಾರ್ಡ್ ಮಾಡಿಸಲು ಬೇಕಾಗುವ ದಾಖಲೆಗಳು:-
● ಆಧಾರ್ ಕಾರ್ಡ್ ಜೆರಾಕ್ಸ್
● ಮತದಾರರ ಚೀಟಿ‌
● ಬ್ಯಾಂಕ್ ಖಾತೆ ವಿವರಗಳು
● ಕುಟುಂಬ ಸದಸ್ಯರ ವಿವರಗಳು
● ಗುರುತಿನ ಪುರಾವೆ
● ವಿಳಾಸ ಪುರಾವೆ
● ಪಡಿತರ ಚೀಟಿ
● ಪಾಸ್ಪೋರ್ಟ್ ಗಾತ್ರದ‌ 4 ಫೋಟೋ
● ಮೊಬೈಲ್ ನಂಬರ್‌
● ಪ್ಯಾನ್‌ ಕಾರ್ಡ್‌ ಜೆರಾಕ್ಸ್‌
● ವಾಸಸ್ಥಳ ಪ್ರಮಾಣ ಪತ್ರ

ಇ-ಶ್ರಮ್ ಕಾರ್ಡ್ ಪಡೆಯಲು ಇರುವ ಕಂಡೀಶನ್ಗಳು:-
● ಅರ್ಜಿದಾರರು ಭಾರತೀಯ ನಿವಾಸಿಯಾಗಿರುವುದು ಕಡ್ಡಾಯವಾಗಿದೆ.
● ಅರ್ಜಿದಾರರ ವಯಸ್ಸು 18 ವರ್ಷಕ್ಕಿಂತ ಹೆಚ್ಚಿರಬೇಕು ಮತ್ತು 59 ವರ್ಷಕ್ಕಿಂತ ಕಡಿಮೆಯಿರಬೇಕು.
● ಅರ್ಜಿದಾರರು ಹಾಗೂ ಕುಟುಂಬದವರು ಯಾವುದೇ ರೂಪದಲ್ಲಿ ಆದಾಯ ತೆರಿಗೆ ಪಾವತಿದಾರರಾಗಿರಬಾರದು.
● ಅರ್ಜಿದಾರರ ಆಧಾರ್ ಕಾರ್ಡ್ ಅನ್ನು UIDAI ಅಧಿಕೃತ ವೆಬ್‌ಸೈಟ್‌ನಲ್ಲಿ ನೋಂದಾಯಿಸಿಕೊಳ್ಳಬೇಕು.
● ಅರ್ಜಿದಾರರು ಅಥವಾ ಅವರ ಕುಟುಂಬದ ಯಾರಾದರೂ ಸರ್ಕಾರಿ ಉದ್ಯೋಗವನ್ನು ಹೊಂದಿರಬಾರದು.
● ಆರ್ಥಿಕವಾಗಿ ಹಿಂದೂಳಿದವರಿಗೆ ಹಾಗೂ ನಿರ್ಗತಿಕ ಕಾರ್ಮಿಕರಿಗೆ ಮಾತ್ರ ಇ-ಶ್ರಮ್ ಕಾರ್ಡ್ ಸೌಲಭ್ಯವನ್ನು ನೀಡಲಾಗುತ್ತದೆ.
● EPFO, ESIC ಸೌಲಭ್ಯಗಳನ್ನು ಪಡೆದಿರಬಾರದು.

https://eshram.gov.in  ಗೆ ಭೇಟಿ ನೀಡಿ ಪೂರಕ ದಾಖಲೆಗಳನ್ನು ಸಲ್ಲಿಸುವ ಮೂಲಕ ಇ-ಶ್ರಮ್ ಕಾರ್ಡ್ ಪಡೆದುಕೊಳ್ಳಬಹುದು. ನಂತರ ಇ-ಶ್ರಮ್ ಕಾರ್ಡ್ ಯಾವುದೇ ಯೋಜನೆ ಸಹಾಯವನ್ನು ಪಡೆಯಲು ಇದೇ ವೆಬ್ಸೈಟ್ ಗೆ ಬಂದು ಅರ್ಜಿ ಫಾರಂ ಓಪನ್ ಮಾಡಿ ಸಂಬಂಧ ಪಟ್ಟ ದಾಖಲೆಗಳನ್ನು ಮಾಡುವ ಮೂಲಕ ಅರ್ಜಿ ಸಲ್ಲಿಸಿ ಅಸಂಘಟಿತ ವಲಯದ ಕಾರ್ಮಿಕರಿಗೆ ಇರುವ ಎಲ್ಲಾ ಯೋಜನೆಗಳ ಪ್ರಯೋಜನಗಳನ್ನು ಪಡೆಯಬಹುದು.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now