ಪ್ರಧಾನಮಂತ್ರಿಯವರು ದೇಶದ ಏಳಿಗೆಗಾಗಿ ನಾನಾ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ವಿದ್ಯಾರ್ಥಿಗಳು, ರೈತರು, ಕಟ್ಟಡ ಕಾರ್ಮಿಕರು ಮಹಿಳೆಯರು ಹೀಗೆ ವರ್ಗದವರ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ. ದೇಶದ ಹೇಳಿಕೆ ವಿಚಾರದಲ್ಲಿ ಕುಟುಂಬ ಎನ್ನುವ ಸಣ್ಣ ಘಟಕ ಕೂಡ ಪ್ರಮುಖವಾದದ್ದು ಎನ್ನುವುದನ್ನು ಮನ ಕಂಡಿರುವ ಪ್ರಧಾನ ಮಂತ್ರಿಗಳು ಅವರಿಗಾಗಿಯೂ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ.
ಅದರಲ್ಲಿ ಗೃಹಿಣಿಯರಿಗೆ ಹೊಗೆ ಮುಕ್ತ ವಾತಾವರಣ ನಿರ್ಮಿಸಬೇಕು ಜೊತೆಗೆ ಸ್ವಚ್ಛ ಭಾರತ ಮತ್ತು ಆರೋಗ್ಯಕರ ಭಾರತ ನಿರ್ಮಿಸಬೇಕು ಎನ್ನುವ ಮಹಾಭಿಲಾಷೆ ಹೊಂದಿರುವ ಪ್ರಧಾನಮಂತ್ರಿ ಮೋದಿ ಅವರು ಉಚಿತ ಗ್ಯಾಸ್ ಸಂಪರ್ಕ ಯೋಜನೆಯನ್ನು ನೀಡಿದ್ದಾರೆ. ಇದಕ್ಕಾಗಿ ಉಜ್ವಲ ಯೋಜನೆ ಹೆಸರಿನಲ್ಲಿ ಯೋಜನೆಯನ್ನು ಜಾರಿಗೆ ತರಲಾಗಿದ್ದು ಉಜ್ವಲ್ ಯೋಜನೆ ಮೂಲಕ ಉಚಿತ ಗ್ಯಾಸ್ ಸಿಲಿಂಡರನ್ನು ದೇಶದ ಮಹಿಳೆಯರಿಗೆ ನೀಡಲಾಗುತ್ತಿದೆ.
ಈಗ ಉಜ್ವಲ್ ಯೋಜನೆ 2.0 ಗೆ ಅರ್ಜಿ ಆಹ್ವಾನಿಸಲಾಗಿದ್ದು ಅರ್ಹರು ಅರ್ಜಿ ಸಲ್ಲಿಸಿ ಈ ಯೋಜನೆಯ ಫಲಾನುಭವಿಗಳಾಗಬಹುದು.
ಉಜ್ವಲ್ 2.0 ಯೋಜನೆಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು :-
●ಈ ಯೋಜನೆಗೆ ಮನೆಯ ಗೃಹಿಣಿಯರು ಅಥವಾ ಹೆಣ್ಣು ಮಕ್ಕಳು ಮಾತ್ರ ಅರ್ಜಿ ಸಲ್ಲಿಸಬಹುದು.
●ಅರ್ಜಿದಾರರ ವಯಸ್ಸು 18 ವರ್ಷ ಪೂರ್ಣಗೊಂಡಿರಬೇಕು.
●ಒಂದು ಕುಟುಂಬ ಒಂದು ಬಾರಿ ಮಾತ್ರ ಅರ್ಜಿ ಸಲ್ಲಿಸಬಹುದು.
●ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಮಹಿಳೆ, ಪ್ರಧಾನಮಂತ್ರಿ ಆವಾಸ್ ಯೋಜನೆಯ ಫಲಾನುಭವಿಗಳಾದ ಮಹಿಳೆ, ಬುಡ ಕಟ್ಟು ವರ್ಗದವರು, ನದಿ ದ್ವೀಪಗಳಲ್ಲಿ ವಾಸಿಸುತ್ತಿರುವವರು, ಹಿಂದುಳಿದ ವರ್ಗದವರು ಹೀಗೆ ಭಾರತದ ಯಾವುದೇ ವಯಸ್ಕ ಮಹಿಳೆ ಅರ್ಜಿ ಸಲ್ಲಿಸಬಹುದು.
ಉಜ್ವಲ್ ಯೋಜನೆ 2.0 ಗೆ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು :-
●ಕಡ್ಡಾಯವಾಗಿ ಅರ್ಜಿದಾರದ ಇ-ಕೆವೈಸಿ ಆಗಿರಬೇಕು
●ಅರ್ಜಿದಾರಲು ಆಧಾರ್ ಕಾರ್ಡ್, ಗುರುತಿನ ಪುರಾವೆ, ಪಡಿತರ ಚೀಟಿ ,ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಬ್ಯಾಂಕ್ ಖಾತೆ ಪಾಸ್ ಪುಸ್ತಕ ಈ ದಾಖಲೆಗಳನ್ನು ಹೊಂದಿರಬೇಕು.
●ಆಧಾರ್ ಕಾರ್ಡ್ ನಲ್ಲಿ ಇರುವ ವಿಳಾಸದಲ್ಲಿಯೇ ವಾಸಿಸುತ್ತಿರಬೇಕು.
ಅರ್ಜಿ ಸಲ್ಲಿಸುವ ವಿಧಾನ :-
●ಉಜ್ವಲ್ ಯೋಜನೆ ಫಲಾನುಭವಿಗಳಾಗಲು ಆನ್ಲೈನ್ ಮೂಲಕ ಅಧಿಕೃತ ವೆಬ್ಸೈಟ್ಗೆ ಹೋಗಿ ನೋಂದಣಿ ಮಾಡಿಸಬೇಕು.
●ವೆಬ್ ಸೈಟ್ ನ ಮುಖಪುಟಕ್ಕೆ ಬಂದ ನಂತರ ಉಜ್ವಲ ಯೋಜನೆ 2023 ಆಯ್ದುಕೊಂಡು ಕ್ಲಿಕ್ ಮಾಡಬೇಕು. ಹೊಸ ಪುಟ ತೆರೆಯುತ್ತದೆ ಅಲ್ಲಿ ನೀವು ಯಾವ ಸರಕು ಕಂಪನಿಯಿಂದ HP ಅಥವಾ ಇಂಡಿಯನ್ ಹೀಗೆ ಯಾವ ಗ್ಯಾಸ್ ಪಡೆಯಬೇಕು ಎನ್ನವುದನ್ನು ಆಯ್ಕೆ ಮಾಡಿ.
●ಸಂಪರ್ಕದ ಪ್ರಕಾರ ಮತ್ತು ಇತರ ಮಾಹಿತಿಯನ್ನು ತುಂಬಿಸಿ
●ನಿಮ್ಮ ರಾಜ್ಯ, ಜಿಲ್ಲೆ ಇತ್ಯಾದಿಗಳನ್ನು ಆರಿಸಿ ಸಬ್ಮಿಟ್ ಬಟನ್ ಕ್ಲಿಕ್ ಮಾಡಿದಾಗ ಪುಟ ಮುಂದಕ್ಕೆ ಹೋಗುತ್ತದೆ.
●ಆಗ ನೀವು ನಿಮ್ಮ ಹತ್ತಿರದ ಗ್ಯಾಸ್ ಡಿಸ್ಟ್ರಿಬ್ಯೂಟರ್ ಆಯ್ಕೆ ಮಾಡಿ ಮುಂದುವರಿಸಿ.
●ಅರ್ಜಿ ಫಾರಂ ಓಪನ್ ಆಗುತ್ತದೆ ಅದನ್ನು ಸರಿಯಾದ ಮಾಹಿತಿಗಳ ಜೊತೆ ತುಂಬಿಸಿ ಮತ್ತು ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
ಈ ಯೋಜನೆಯಿಂದ ಸಿಗುವ ಪ್ರಯೋಜನಗಳು :- ಪ್ರಧಾನ ಮಂತ್ರಿಗಳ ಈ ಉಜ್ವಲ ಯೋಜನೆ ಪ್ರತಿ ಮನೆಗೂ ಉಚಿತ ಗ್ಯಾಸ್ ಸಂಪರ್ಕ ದೊರೆಯುತ್ತದೆ. ಜೊತೆಗೆ ನೋಂದಣಿಗೆ ಭಾರತ ಸರ್ಕಾರವು 14.2kg ಸಿಲಿಂಡರ್ ಗೆ 1150ರೂ. ಮತ್ತು 16.5kg ಸಿಲಿಂಡರ್ ಗೆ 1150 ನಗದು ಸಹಾಯವನ್ನು ಒದಗಿಸುತ್ತದೆ. ಯೋಚನೆ ಕುರಿತು ಹೆಚ್ಚಿನ ಮಾಹಿತಿಗಾಗಿ ಉಜ್ವಲ್ ಯೋಜನೆಯ ಅಧಿಕೃತ ವೆಬ್ಸೈಟ್ ಭೇಟಿ ಮಾಡಿ ತಿಳಿದುಕೊಳ್ಳಿ.