ತೆಂಗಿನಕಾಯಿ ಒಂದು ಪರಿಪೂರ್ಣ ಫಲ ಎಂದೇ ಹೇಳಬಹುದು. ಯಾಕೆಂದರೆ, ತೆಂಗಿನಕಾಯಿ ಮತ್ತು ತೆಂಗಿನ ಮರದ ಒಂದು ಚೂರು ಅಂಶವು ಕೂಡ ವೇಸ್ಟ್ ಆಗುವುದಿಲ್ಲ. ತೆಂಗಿನ ಗರಿ, ಹೊಂಬಾಳೆ, ತೆಂಗಿನಕಾಯಿ, ಎಳನೀರು, ಕೊನೆಗೆ ತೆಂಗಿನ ಚಿಪ್ಪು, ಕೂಡ ಉಪಯೋಗಕ್ಕೆ ಬರುತ್ತದೆ ಹೀಗಾಗಿ ಇದನ್ನು ಕಲ್ಪವೃಕ್ಷ ಎಂದು ಕೂಡ ಕರೆಯುವುದು.
ಈ ತೆಂಗಿನ ಬೆಳೆಯು ನಮ್ಮ ಆರ್ಥಿಕ ವ್ಯವಸ್ಥೆಯಲ್ಲಿ ಬಹು ಮುಖ್ಯಪಾತ್ರ ವಹಿಸುತ್ತದೆ. ಯಾಕೆಂದರೆ ಕೊಬ್ಬರಿ ಎಣ್ಣೆ, ಸಿಹಿ ಪದಾರ್ಥಗಳು, ತಯಾರಾಗುವಂತಹ ದೊಡ್ಡ ದೊಡ್ಡ ಕಾರ್ಖಾನೆಗಳು ಕೈಗಾರಿಕೆಗಳಿಂದ ಹಿಡಿದು ಚಿಕ್ಕ ಪುಟ್ಟ ತೆಂಗಿನ ಕಾಯಿ, ಎಳನೀರು, ವ್ಯಾಪಾರ ಮಾಡುವ ಸಾಮಾನ್ಯರು ಮತ್ತು ತೆಂಗಿನ ಮರ ಬೆಳೆಸುವ ರೈತ ಮತ್ತು ಅದಕ್ಕೆ ಕೆಲಸ ಮಾಡುವವರು ತೆಂಗಿನ ಕಾಯಿ ಎಳನೀರನ್ನು ಪಟ್ಟಣಕ್ಕೆ ಸೇರಿಸುವ ಸಾಗಣೆ ವಾಹನ ಓಡಿಸುವ ಡ್ರೈವರ್ ಹೀಗೆ ಒಂದು ದೊಡ್ಡ ಉದ್ಯೋಗ ಸೃಷ್ಟಿಯೇ ಆಗಿದೆ.
ಈ ಸುದ್ದಿ ಓದಿ:- ಒಂದು ಬಾರಿ ಹೂಡಿಕೆ ಮಾಡಿ ಸಾಕು, ಪ್ರತಿ ತಿಂಗಳು 1 ಲಕ್ಷ ಪಿಂಚಣಿ ಪಡೆಯಬಹುದು LIC ಜೀವನ್ ಉತ್ಸವ್ ಪ್ಲಾನ್
ಪಟ್ಟಣದಲ್ಲಿ ಒಂದು ಎಳನೀರಿನ ಅಂಗಡಿಯಲ್ಲಿ ಇಟ್ಟು ತನ್ನ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿರುವ ವ್ಯಾಪಾರಿ ಉದಾಹರಣೆ ಸಾಕಷ್ಟು ಸಿಗುತ್ತದೆ. ಹಾಗೆ ಹಳ್ಳಿಗಳ ಕಡೆಯಲ್ಲಿ ತೆಂಗಿನ ತೋಟ ಹೊಂದಿರುವ ರೈತಗಿರುವ ಬೆಲೆಯೇ ಬೇರೆ, ಇನ್ನು ಕೊಬ್ಬರಿ ವ್ಯಾಪಾರವಂತೂ ಎಂದೂ ಕೂಡ ಕೈತುಂಬ ಆದಾಯ ತರುವ ವ್ಯಾಪಾರವಾಗಿದೆ.
ಇದೆಲ್ಲವೂ ನೇರವಾಗಿ ಅವಲಂಬಿಸಿರುವುದು ತೆಂಗಿನ ಇಳುವರಿಯನ್ನೇ ಹಿಂದಿನ ಕಾಲದಲ್ಲಿ ಸಾಂಪ್ರದಾಯಿಕ ವಿಧಾನದಲ್ಲಿ ತೆಂಗಿನ ಮರಗಳನ್ನು ಬೆಳೆಸಿ ಮನೆ ಬಳಕೆಗೆ ಮಾತ್ರ ಮಾಡಿಕೊಳ್ಳಲಾಗುತ್ತಿತ್ತು, ಕಾಲ ಬದಲಾದಂತೆ ಈ ಮೇಲೆ ತಿಳಿಸಿದ ಒಂದು ದೊಡ್ಡ ಚೇನ್ ಲಿಂಕ್ ತೆಂಗಿನ ಇಳುವರಿಯತ್ತಾ ಸುತ್ತುಕೊಂಡಿದೆ.
ಈ ಸುದ್ದಿ ಓದಿ:- ಲೇಬರ್ ಕಾರ್ಡ್ ಸ್ಕಾಲರ್ಶಿಪ್ ಗೆ ಅರ್ಜಿ ಆಹ್ವಾನ ಆಸಕ್ತರು ಅರ್ಜಿ ಸಲ್ಲಿಸಿ.! 50 ಸಾವಿರದವರೆಗೆ ಸಹಾಯಧನ ಪಡೆಯಿರಿ.!
ಹಾಗಾಗಿ ಇಳುವರಿ ಹೆಚ್ಚಾಗಿಸಿದರೆ ಮಾತ್ರ ರೈತನಿಂದ ಹಿಡಿದು ಅದನ್ನು ನಂಬಿ ಜೀವನ ಸಾಗುತ್ತಿರುವ ಇಷ್ಟು ಕುಟುಂಬಗಳಿಗೆ ಅನುಕೂಲವಾಗುವುದು. ಹೀಗಾಗಿ ಇಂದು ನಾವು ಈ ಅಂಕಣದಲ್ಲಿ ರೈತನು ಯಾವ ರೀತಿ ತೆಂಗಿನ ಇಳುವರಿ ಎಂದು ಹೆಚ್ಚಿಸಿಕೊಳ್ಳಬಹುದು ಎನ್ನುವುದನ್ನು ತಿಳಿಸಿಕೊಡುತ್ತಿದ್ದೇವೆ.
ಇದನ್ನು ಪಾಲಿಸದೇ ವಾರ್ಷಿಕವಾಗಿ 300 ಕಾಯಿಗಳನ್ನು ಪಡೆಯಬಹುದಾದಂತಹ ತೆಂಗಿನ ಮರದಲ್ಲಿ ಕೇವಲ 70-80 ಕಾಯಿ ಪಡೆದುಕೊಂಡು ನಷ್ಟಕ್ಕೆ ಒಳಗಾಗುತ್ತಿದ್ದಾನೆ ಎನ್ನುವುದನ್ನು ತಿಳಿಸುತ್ತಿದ್ದೇವೆ. ಈ ರೀತಿ ಇಳುವರಿ ಕಡಿಮೆ ಆಗುವುದರಿಂದಲೇ ಮಾರುಕಟ್ಟೆಯಲ್ಲಿ ತೆಂಗಿನಕಾಯಿ ಅಭಾವ ಸೃಷ್ಟಿಯಾಗಿ ಜನಸಾಮಾನ್ಯನು ಬೆಳಗೆದ್ದರೆ ಅಡುಗೆ ಬಳಸಲೇಬೇಕಾದ ಈ ಪದಾರ್ಥದ ಬೆಲೆ ಏರಿಕೆ ತಲೆಬಿಸಿ ಮಾಡುತ್ತಿದೆ.
ಈ ಸುದ್ದಿ ಓದಿ:- ಒಂದು ಕ್ಯಾಪ್ಸೂಲ್ ಒಂದು ಮೂಟೆ ಗೊಬ್ಬರಕ್ಕೆ ಸಮ, ಕೇವಲ ರೂ.100 ರ ಈ ಕ್ಯಾಪ್ಸೂಲ್ ನಿಂದ ನಿಮ್ಮ ಬೆಳೆಯ ಇಳುವರಿ ದುಪ್ಪಟ್ಪಾಗುತ್ತದೆ.!
ಆದ್ದರಿಂದ ಇದೆಲ್ಲದಕ್ಕೂ ಪರಿಹಾರ ತೆಂಗಿನ ಕಾಯಿ ಇಳುವರಿ ಹೆಚ್ಚಿಸುವುದು. ನೀವು ತೆಂಗಿನ ಬೆಳೆಗಾರರಾಗಿದ್ದರೆ ಇಂದಿನಿಂದಲೇ ನಾವು ಹೇಳುವ ಈ ಸುಲಭ ಕ್ರಮಗಳನ್ನು ಅನುಸರಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ.
* ತೆಂಗಿನ ಮರದ ತ್ಯಾಜ್ಯವನ್ನು ಅಂದರೆ ಗರಿ, ಕುಂಟೆ ಮತ್ತು ಇತರೇ ಕಸವನ್ನು ಸುಡದೇ ಮರದ ಬುಡದ ಸುತ್ತಲೂ ಹರಡಬೇಕು.
* ತೆಂಗಿನ ಮರದ ಪೂರ್ವಕ್ಕೆ ಮತ್ತು ಪಶ್ಚಿಮ ಭಾಗಕ್ಕೆ ಎರಡು ಗೊಬ್ಬರ ಗಿಡಗಳನ್ನು ಹಾಕಬೇಕು. ಈ ಮಿಶ್ರ ಗೊಬ್ಬರವು ಮಣ್ಣನ್ನು ಸ್ಥಿರಗೊಳಿಸುತ್ತದೆ. ಈ ಗೊಬ್ಬರದ ಗಿಡವನ್ನು ವರ್ಷದಲ್ಲಿ ಎರಡು ಮೂರು ಬಾರಿ ಕತ್ತರಿಸಿ ಅದೇ ತೆಂಗಿನ ಮರದ ಬುಡದಲ್ಲಿ ಹಾಕಬೇಕು.
* ಗೊಬ್ಬರ ಗಿಡ ಮತ್ತು ತೆಂಗಿನ ತ್ಯಾಜ್ಯದಿಂದ ಉತ್ಪತ್ತಿಯಾಗುವ ಸೂಕ್ಷ್ಮಜೀವಿಗಳು ಮತ್ತು ಎರೆಹುಳುಗಳು ಒಳ್ಳೆಯ ಸಾವಯವ ಗೊಬ್ಬರವನ್ನು ಸೃಷ್ಟಿಸುತ್ತದೆ, ಇದು ತೆಂಗಿನ ಮರಕ್ಕೆ ಪೋಷಕಾಂಶವಾಗಿ ಇಳುವರಿ ಹೆಚ್ಚಾಗುತ್ತದೆ.