Deprecated: strtolower(): Passing null to parameter #1 ($string) of type string is deprecated in /home/u302298408/domains/rishithepower.com/public_html/wp-content/plugins/taboola/simple_html_dom.php on line 712
ಈಗಿನ ಕಾಲದಲ್ಲಿ ಯಾರಿಗೂ ಕೂಡ ಪ್ರತಿದಿನವೂ ಕೂಡ ಮಾರ್ಕೆಟ್ಗೆ ಹೋಗಿ ತರಕಾರಿ ತರುವಷ್ಟು ಸಮಯ ಯಾರಿಗೂ ಇಲ್ಲ. ಜೊತೆಗೆ ಕೆಲವೊಂದು ವಸ್ತುಗಳನ್ನು ಒಂದೇ ಬಾರಿಗೆ ಪೂರ್ತಿಯಾಗಿ ಉಪಯೋಗಿಸಲು ಆಗುವುದಿಲ್ಲ. ಹೀಗಾಗಿ ಅವುಗಳು ಬಹಳ ದಿನದವರೆಗೆ ಫ್ರೆಶ್ ಆಗಿ ಇರಬೇಕು ಎನ್ನುವ ಕಾರಣಕ್ಕೆ ನಾವೆಲ್ಲರೂ ಫ್ರಿಜ್ ಗಳ ಮೊರೆ ಹೋಗುತ್ತೇವೆ. ಆದರೆ ಅವುಗಳನ್ನು ಬಹಳ ದಿನ ಬಾಳಿಕೆ ಬರಲು ಸರಿಯಾಗಿ ಮೈನ್ಟೈನ್ ಮಾಡಬೇಕು. ಹಾಗಾಗಿ ಫ್ರಿಡ್ಜ್ ಗಳ ಬಾಳಿಕೆ ಹೆಚ್ಚಿಸಲು ನಾವು ಕೆಲ ಟಿಪ್ಸ್ ಗಳನ್ನು ಕೊಡುತ್ತೇವೆ. ಇವುಗಳನ್ನು ಫಾಲೋ ಮಾಡಿ.
● ಫ್ರಿಡ್ಜ್ ಗಳ ಗ್ಯಾಸ್ಕೆಟ್ ಸ್ಥಿತಿಯು ಫ್ರಿಡ್ಜ್ ಗಳ ಕಾರ್ಯನಿರ್ವಹಣೆ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಒಂದು ವೇಳೆ ಗ್ಯಾಸ್ಕೆಟ್ ಹಾಳಾಗಿದ್ದರೆ ಹೆಚ್ಚು ಹೊತ್ತು ಫ್ರಿಡ್ಜ್ ಕೂಲಿಂಗ್ ಇರುವುದಿಲ್ಲ, ಒಳಗಿರುವ ಪದಾರ್ಥಗಳು ಕೆಟ್ಟು ಹೋಗುತ್ತಿರುತ್ತವೆ. ಹಾಗಾಗಿ ಗ್ಯಾಸ್ಕೆಟ್ ಸರಿಯಾಗಿದೆಯಾ ಎಂದು ಚೆಕ್ ಮಾಡಿ, ಒಂದು ಪೇಪರ್ ಅನ್ನು ಅರ್ಧ ಫ್ರಿಡ್ಜ್ ಒಳಗಿರುವಂತೆ ಅರ್ಧ ಹೊರಗಿರುವಂತೆ ಮಾಡಿ ನಿಧಾನವಾಗಿ ಅದನ್ನು ಎಳೆದು ನೋಡಿದಾಗ ಪೇಪರ್ ಹೊರಗೆ ಬಂದರೆ ಅಥವಾ ಮೂವ್ ಆಗುತ್ತಿದ್ದರೆ ಗ್ಯಾಸ್ಕೆಟ್ ಸಡಿಲವಾಗಿದೆ ಎಂದರ್ಥ ಆಗ ಗ್ಯಾಸ್ಕೆಟ್ ಬದಲಾಯಿಸಿ ಮತ್ತು ಗ್ಯಾಸ್ಕೆಟ್ ಅನ್ನು ಆಗಾಗ ಕ್ಲೀನ್ ಆಗಿ ಇಟ್ಟುಕೊಳ್ಳುತ್ತಿರಿ ಇದರಿಂದ ಫ್ರಿಡ್ಜ್ ದೀರ್ಘಕಾಲ ಬಾಳಿಕೆಗೆ ಬರುತ್ತದೆ.
● ಕಂಡೆನ್ಸರ್ ಗಳನ್ನು ಕೂಡ ಮೈನ್ಟೈನ್ ಮಾಡೋದು ಮುಖ್ಯ. ಫ್ರಿಡ್ಜ್ ಹಿಂದೆಗಡೆ ಕಂಡೆನ್ಸರ್ ಇರುತ್ತದೆ ಅದರ ಮೇಲೆ ಧೂಳು, ಕೂದಲು ಬೀಳುತ್ತಿರುತ್ತದೆ. ಇದರಿಂದಲೂ ಕೂಲಿಂಗ್ ಕಡಿಮೆಯಾಗುತ್ತದೆ. ಪ್ರತಿ ಆರು ತಿಂಗಳಿಗೊಮ್ಮೆ ಫ್ರಿಡ್ಜ್ ಆಫ್ ಮಾಡಿ ಒಣ ಬಟ್ಟೆಯಿಂದ ಇವುಗಳನ್ನು ನೀಟಾಗಿ ಕ್ಲೀನ್ ಮಾಡಿಕೊಳ್ಳುವುದರಿಂದ ಫ್ರಿಜ್ ಸರಿಯಾಗಿ ಕೆಲಸ ಮಾಡುತ್ತದೆ.
● ಸೀಸನ್ ಗಳಿಗೆ ತಕ್ಕ ಹಾಗೆ ಫ್ರಿಡ್ಜ್ ಟೆಂಪರೇಚರ್ ಸೆಟ್ ಮಾಡುವುದು ಮುಖ್ಯ. ಇದರಿಂದ ಸರಿಯಾದ ಕೂಲಿಂಗಲ್ಲಿ ಫ್ರಿಡ್ಜ್ ಕೆಲಸ ಮಾಡುತ್ತದೆ.
● ಫ್ರಿಡ್ಜ್ ಒಳಗಿರುವ ಏರ್ ವೆಂಟ್ ಮುಂದೆ ಏನನ್ನು ಇಡಬಾರದು, ಏರ್ ಮೆಂಟ್ ಮುಂದೆ ಪದಾರ್ಥಗಳು ಹೆಚ್ಚಿಗೆ ಇಟ್ಟಷ್ಟು ಕೂಲಿಂಗ್ ಕಡಿಮೆ ಆಗಿ ಕೂಲಿಂಗ್ ಹೆಚ್ಚು ಮಾಡುವುದಕ್ಕಾಗಿ ಹೆಚ್ಚು ಪವರ್ ಬಳಕೆ ಆಗುತ್ತದೆ ಇದರ ಬಗ್ಗೆ ಗಮನ ಕೊಡಿ.
● ಆಗಾಗ ಫ್ರಿಜ್ ಗಳನ್ನ ಡೀಪ್ ರೋಸ್ಟ್ ಮಾಡಿ.
● ಗೋಡೆ ಮತ್ತು ಫ್ರಿಡ್ಜ್ ನ ನಡುವೆ ಸಾಕಷ್ಟು ಅಂತರ ಇರಬೇಕು. ಗೋಡೆಗೆ ಸೇರಿಸಿ ಫ್ರಿಜ್ ಇಡುವುದರಿಂದ ಅದರ ಉಷ್ಣಾಂಶದಲ್ಲಿ ವ್ಯತ್ಯಾಸವಾಗುತ್ತದೆ. ಫ್ರಿಡ್ಜ್ ನಲ್ಲಿ ಉತ್ಪತ್ತಿಯಾದ ಉಷ್ಣಾಂಶ ಹೊರ ಹೋಗಬೇಕು ಎಂದರೆ ಗೋಡೆ ಮತ್ತು ಫ್ರಿಡ್ಜ್ ನಡುವೆ ಗ್ಯಾಪ್ ಇರಬೇಕು. ಇಲ್ಲವಾದಲ್ಲಿ ಕೂಲಿಂಗ್ ಕಡಿಮೆ ಯಾಗುತ್ತದೆ.
● ಫ್ರಿಜ್ ಅಲ್ಲಿ ಇಡುವ ತರಕಾರಿಗಳು ಹಾಗೂ ಹಣ್ಣುಗಳು ಯಾವಾಗಲೂ ಫ್ರೆಶ್ ಆಗಿರಬೇಕು ಮತ್ತು ಫ್ರಿಡ್ಜಿ ನಲ್ಲಿ ಕೆಟ್ಟ ವಾಸನೆ ಹೋಗಬೇಕು ಎಂದರೆ ತರಕಾರಿ ಮತ್ತು ಹಣ್ಣುಗಳು ಇಡುವುದರ ಜೊತೆ ಒಂದು ಚಮಚ ಉಪ್ಪನ್ನು ಒಂದು ಕಪ್ ಒಳಗೆ ಹಾಕಿ ಇಟ್ಟುಬಿಡಿ. ಈ ಟಿಪ್ಸ್ ಫಾಲೋ ಮಾಡಿದರೆ ಹೆಚ್ಚು ದಿನ ವೆಜಿಟೇಬಲ್ಸ್ ಫ್ರೆಶ್ ಆಗಿರುತ್ತದೆ. ಫ್ರಿಜ್ ಅಲ್ಲಿರುವ ಬ್ಯಾಡ್ ಸ್ಮೆಲ್ ಕೂಡ ಹೋಗುತ್ತದೆ. ಮರೆಯದೇ 15 ದಿನಕ್ಕೊಮ್ಮೆ ಈ ಉಪ್ಪನ್ನು ಚೇಂಜ್ ಮಾಡುತ್ತಿರಿ. ಮತ್ತು ಈ ಉಪಯುಕ್ತ ಮಾಹಿತಿಯನ್ನು ಹೆಚ್ಚು ಜನರ ಜೊತೆ ಹಂಚಿಕೊಳ್ಳಿ.