Deprecated: strtolower(): Passing null to parameter #1 ($string) of type string is deprecated in /home/u302298408/domains/rishithepower.com/public_html/wp-content/plugins/taboola/simple_html_dom.php on line 712
ರೈತರಿಗೆ ವರ್ಷಕ್ಕೆ 6,000 ರೂ ಸಹಾಯಧನ ಒದಗಿಸುವ ಪಿಎಂ ಕಿಸಾನ್ ಯೋಜನೆಯ (PM Kisan Yojana) 14ನೇ ಕಂತಿನ ಹಣ ಸದ್ಯದಲ್ಲೇ ಬರುವ ನಿರೀಕ್ಷೆ ಇದೆ. ವರದಿಗಳ ಪ್ರಕಾರ, ಇದೇ ಮೇ ತಿಂಗಳ ಕೊನೆಯ ವಾರದಲ್ಲಿ ಅರ್ಹ ಫಲಾನುಭವಿ ರೈತರಿಗೆ 2,000 ರೂ ಹಣ ಬಿಡುಗಡೆ ಆಗಲಿದೆ. ಈ ಬಗ್ಗೆ ಸರ್ಕಾರದಿಂದ ಯಾವುದೇ ಅಧಿಕೃತ ಘೋಷಣೆ ಆಗಿಲ್ಲ ಆದರೆ, ಮೂಲಗಳಿಂದ ಮಾಹಿತಿ ಉಲ್ಲೇಖಿಸಿ ಕೆಲ ಮಾಧ್ಯಮಗಳು ವರದಿ ಮಾಡಿವೆ.
ಕೇಂದ್ರದಿಂದ 13ನೇ ಕಂತಿನ ಹಣ ಫೆಬ್ರುವರಿಯಲ್ಲಿ ಬಿಡುಗಡೆ ಆಗಿತ್ತು. ಬೆಳಗಾವಿಯ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಿಎಂ ಕಿಸಾನ್ ಯೋಜನೆಯ 13ನೇ ಕಂತಿನ ಹಣ ಬಿಡುಗಡೆ ಆಗಿರುವ ಸಂಗತಿಯನ್ನು ಪ್ರಕಟಿಸಿದ್ದರು. ಇದೀಗ 14ನೇ ಕಂತಿನ ಹಣ ಬಿಡುಗಡೆಗೆ ಕಾಲ ಸನ್ನಿಹಿತವಾಗಿದೆ.
ದೇಶದ ರೈತರನ್ನು ಆರ್ಥಿಕವಾಗಿ ಸದೃಢವಾಗಿಸುವ ನಿಟ್ಟಿನಲ್ಲಿ ಸರ್ಕಾರ ನಿರಂತರವಾಗಿ ಶ್ರಮಿಸುತ್ತಿದೆ. ಹೀಗಾಗಿ, ರೈತರ ನೆರವಿಗೆ ಕೇಂದ್ರ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿ ಆರ್ಥಿಕ ನೆರವಿನ ಜೊತೆಗೆ ರಸಗೊಬ್ಬರ ಪೂರೈಕೆ ಮಾಡಿ ಕೃಷಿ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಮೂಲಕ ಆರ್ಥಿಕ ನೆರವನ್ನು ಕೂಡ ನೀಡುತ್ತಿರುವುದು ಗೊತ್ತಿರುವ ಸಂಗತಿ.
ರೈತರ ನೆರವು ನೀಡುವಲ್ಲಿ ಬಹಳ ಜನಪ್ರಿಯವಾಗಿರುವ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಕೇಂದ್ರ ಸರ್ಕಾರ ಇಲ್ಲಿಯವರೆಗೆ 2,000 ರೂಗಳ 13 ಕಂತುಗಳನ್ನು ಬಿಡುಗಡೆ ಮಾಡಿದೆ. 2019ರ ಫೆಬ್ರವರಿಯಲ್ಲಿ ಜಾರಿ ಮಾಡಿದ ಅನುಸಾರ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಕೂಡ ಒಂದಾಗಿದ್ದು, ಇತ್ತೀಚೆಗಷ್ಟೇ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 13ನೇ ಕಂತಿನ ಹಣ ರೈತರ ಖಾತೆಗೆ ಬಿಡುಗಡೆ ಮಾಡಿದೆ.
ಈ ಯೋಜನೆಯ ಭಾಗವಾಗಿ ಇದುವರೆಗೆ 10 ಕೋಟಿಗೂ ಹೆಚ್ಚು ರೈತರು 12 ಕಂತುಗಳನ್ನು ಪಡೆದಿದ್ದಾರೆ. ಈ ಮೊತ್ತವನ್ನು ಪ್ರತಿ 4 ತಿಂಗಳಿಗೊಮ್ಮೆ ಪ್ರತಿ ವ್ಯಕ್ತಿಗೆ 2,000 ರೂ.ನಂತೆ ಮೂರು ಕಂತುಗಳಲ್ಲಿ ಡಿಬಿಟಿ ಮೂಲಕ ರೈತರ ಖಾತೆಗೆ ವರ್ಗಾಯಿಸಲಾಗುತ್ತದೆ. ಇದರ ಜೊತೆಗೆ ಯೋಜನೆಯ ಭಾಗವಾಗಿ ವಾರ್ಷಿಕ 6 ಸಾವಿರ ರೂಪಾಯಿ ರೈತರ ಖಾತೆಗೆ ರವಾನೆ ಮಾಡಲಾಗಿದೆ.
ಇದೀಗ ಈ ಯೋಜನೆಯ 14 ನೇ ಕಂತಿನ ಹಣಕ್ಕಾಗಿ ಜನರು ಕಾತುರದಿಂದ ಕಾದು ಕುಳಿತಿದ್ದಾರೆ. ಮೇ ತಿಂಗಳ ಅಂತ್ಯದಲ್ಲಿ 14ನೇ ಕಂತಿನ ಪಿಎಂ ಕಿಸಾನ್ ನಿಧಿ ಮೊತ್ತವನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ. ತಮ್ಮ ಹೆಸರಿನಲ್ಲಿ ಸಾಗುವಳಿ ಭೂಮಿ ಹೊಂದಿರುವ, ಜಮೀನು ಹೊಂದಿರುವ ರೈತರು ಈ ಯೋಜನೆಯಡಿ ಲಾಭ ಪಡೆಯಬಹುದಾಗಿದೆ. ಆದರೆ 14ನೇ ಕಂತಿನ ಪಿಎಂ ಕಿಸಾನ್ ಮೊತ್ತ ಪಡೆಯಲು ಕೆಲವರು ಅರ್ಹತೆಯನ್ನು ಹೊಂದಿಲ್ಲ.
ಪಿಎಂ ಕಿಸಾನ್ ಯೋಜನೆಗೆ ಯಾರು ಅರ್ಹರಲ್ಲ?
• ಸಾಂಸ್ಥಿಕ ಭೂಮಿಯನ್ನು ಹೊಂದಿರುವವರು (ವಸತಿ, ಮನೆ).
• ಸಾಂವಿಧಾನಿಕವಾಗಿ ಅರ್ಹತೆಯನ್ನು ಹೊಂದಿರುವ ರೈತ ಕುಟುಂಬಗಳು.
• ರಾಜ್ಯ ಅಥವಾ ಕೇಂದ್ರ ಸರ್ಕಾರದ ಸೇವೆಯಲ್ಲಿರುವ ಅಥವಾ ನಿವೃತ್ತ ಅಧಿಕಾರಿಗಳು ಮತ್ತು ನೌಕರರು ರೈತ ಕುಟುಂಬಗಳು.
• ವೈದ್ಯರು, ಎಂಜಿನಿಯರ್‌ಗಳು ಮತ್ತು ವಕೀಲರಂತಹ ವೃತ್ತಿಪರರು.
• 10 ರೂಪಾಯಿಗಿಂತ ಅಧಿಕ ಮಾಸಿಕ ಪಿಂಚಣಿ ಹೊಂದಿರುವ ನಿವೃತ್ತ ಪಿಂಚಣಿದಾರರು.
PM ಕಿಸಾನ್ 14 ನೇ ಕಂತು ಪಾವತಿ ಬಗ್ಗೆ ತಿಳಿಯುವುದು ಹೇಗೆ?
* PM ಕಿಸಾನ್ 14 ನೇ ಕಂತಿನ ಪಾವತಿ ಸ್ಥಿತಿಯನ್ನು ನೋಡಲು, ಮೊದಲು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
* ಇದರ ನಂತರ ಮುಖಪುಟದಲ್ಲಿ ಸಹೋದರ ಮತ್ತು ಫಲಾನುಭವಿ ಸ್ಥಿತಿಯ ಲಿಂಕ್ ಅನ್ನು ಕ್ಲಿಕ್ ಮಾಡಿ.
* ಫಲಾನುಭವಿ ಸ್ಥಿತಿಯ ಲಿಂಕ್ ಅನ್ನು ಕ್ಲಿಕ್ ಮಾಡಿದ ನಂತರ, ನಿಮ್ಮ ಮುಂದೆ ಹೊಸ ಪುಟ ತೆರೆಯುತ್ತದೆ.
* ಈಗ ಈ ಪುಟದಲ್ಲಿ ನೀವು ನಿಮ್ಮ ಮೊಬೈಲ್ ಸಂಖ್ಯೆ ಅಥವಾ ಖಾತೆ ಸಂಖ್ಯೆಯನ್ನು ನಮೂದಿಸಬೇಕು ಮತ್ತು ಸಲ್ಲಿಸು ಬಟನ್ ಮೇಲೆ ಕ್ಲಿಕ್ ಮಾಡಬೇಕು.
* ನೀವು ಸಲ್ಲಿಸು ಬಟನ್ ಅನ್ನು ಕ್ಲಿಕ್ ಮಾಡಿದ ತಕ್ಷಣ, 14 ನೇ ಕಂತಿನ ಪಾವತಿಯ ಸ್ಥಿತಿಯು ನಿಮ್ಮ ಮುಂದೆ ತೆರೆದುಕೊಳ್ಳುತ್ತದೆ.
* ಈ ರೀತಿಯಾಗಿ, ನಿಮ್ಮ ಪಿಎಂ ಕಿಸಾನ್ ಯೋಜನೆಯ 14 ನೇ ಕಂತಿನ ಹಣವನ್ನು ನಿಮ್ಮ ಮೊಬೈಲ್ ಫೋನ್‌ನಿಂದ ನೀವು ಸುಲಭವಾಗಿ ನೋಡಬಹುದು.
ಪ್ರಮುಖ ದಾಖಲೆಗಳು
ಆಧಾರ್ ಕಾರ್ಡ್, ನಿಮ್ಮ ಹೆಸರಿನ ಜಾಗದ ಪತ್ರ, ನಾಗರಿಕ ಪ್ರಮಾಣಪತ್ರ, ಆದಾಯ ಪ್ರಮಾಣಪತ್ರ, ಬ್ಯಾಂಕ್ ಖಾತೆಯ ವಿವರ, ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ, ಪಾಸ್‌ಪೋರ್ಟ್ ಗಾತ್ರದ ಫೋಟೋ ಇದ್ರೆ ಸಾಕು.