ಪ್ರಧಾನಮಂತ್ರಿ ಅವರ ಆವಾಸ್ ಯೋಜನೆಯು ಕೇಂದ್ರ ಸರ್ಕಾರದ ಒಂದು ಕನಸಿನ ಕೂಸು. ಇದರ ಅಡಿಯಲ್ಲಿ ಭಾರತದ ಕೋಟ್ಯಾಂತರ ಜನರು ಸ್ವಂತ ಮನೆಯಲ್ಲಿ ವಾಸಿಸುವ ಅನುಕೂಲತೆಯನ್ನು ಪಡೆದುಕೊಂಡಿದ್ದಾರೆ. ಆದರೂ ಸಹ ಇನ್ನು ದೇಶದಲ್ಲಿ ಸ್ವಂತ ವಸತಿ ಸೌಲಭ್ಯ ಇಲ್ಲದ ಸಾಕಷ್ಟು ಬಡ ಜನರು ಇದ್ದಾರೆ. ಬಡವರಿಗೆ ಹಾಗೂ ನಿರ್ಗತಿಕರಿಗೆ 2023 ರ ಒಳಗೆ ಮನೆ ನಿರ್ಮಾಣ ಮಾಡಿಕೊಡಬೇಕೆನ್ನುವ ನಿರ್ಧಾರ ಮಾಡಿದೆ.
ಅದಕ್ಕಾಗಿ ಕೇಂದ್ರ ಸರ್ಕಾರವು ಈ ವರ್ಷ ಮಂಡನೆ ಆದ 2023-24ನೇ ಕೇಂದ್ರ ಸರ್ಕಾರದ ಬಜೆಟ್ ಅಲ್ಲಿ ತನ್ನ ಅನುದಾನದ ಮೊತ್ತವನ್ನು ಹೆಚ್ಚಿಸಿದೆ. ನೀವೂ ಸಹ ಸ್ವಂತ ಮನೆ ಇಲ್ಲದೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರೆ ಸ್ವಂತ ಮನೆ ಹೊಂದಬೇಕು ಎನ್ನುವ ಕನಸನ್ನು ಇಟ್ಟುಕೊಂಡಿದ್ದರೆ ತಪ್ಪದೆ ಈ ಆವಾಸ್ ಯೋಜನೆಯ ಬಗ್ಗೆ ಪೂರ್ತಿ ಮಾಹಿತಿ ತಿಳಿದುಕೊಂಡು ನಿಮ್ಮ ಸ್ವಂತ ಮನೆ ಕಟ್ಟಿಕೊಳ್ಳುವ ಕನಸನ್ನು ಆದಷ್ಟು ಬೇಗ ಪೂರೈಸಿಕೊಳ್ಳಿ.
ಪ್ರಧಾನಮಂತ್ರಿಯವರ ಆವಾಸ್ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರದಿಂದ ಸ್ವಂತ ಜಮೀನು ಅಥವಾ ಜಾಗ ಹೊಂದಿ ಅದರಲ್ಲಿ ಮನೆ ನಿರ್ಮಾಣ ಮಾಡಿಕೊಳ್ಳುವವರಿಗೆ ಹಾಗೂ ಮನೆ ದುರಸ್ತಿ ಕಾರ್ಯ ಮಾಡಿಸಿಕೊಳ್ಳುವವರಿಗೆ 2,50,000ಲಕ್ಷ ಸಹಾಯಧನ ಸಿಗುತ್ತದೆ. ಈ ಸಹಾಯಧನವನ್ನು ಕೆಲವು ಟರ್ಮ್ ಹಾಗೂ ಕಂಡೀಶನ್ಗಳ ಜೊತೆ ಫಲಾನುಭವಿಗಳಿಗೆ ನೀಡಲಾಗುತ್ತದೆ.
ಪ್ರತಿ ಗ್ರಾಮ ಪಂಚಾಯಿತಿಗೂ ಆವಾಸ್ ಯೋಜನೆ ಅಡಿ ಅನುದಾನ ಬಿಡುಗಡೆ ಆಗುತ್ತಿದ್ದು, ಫಲಾನುಭವಿಗಳು ಅರ್ಜಿ ಸಲ್ಲಿಸುವ ಮೂಲಕ ಈ ಯೋಜನೆಯ ಪ್ರಯೋಜನವನ್ನು ಪಡೆಯಬಹುದು. ಯೋಜನೆಗೆ ಅರ್ಜಿ ಸಲ್ಲಿಸಿ ಸರ್ಕಾರದ ಈ ಸಹಾಯಧನ ಪಡೆಯಲು ಆಯ್ಕೆಯಾದ ಪಕ್ಷದಲ್ಲಿ ಮನೆ ನಿರ್ಮಾಣ ಮಾಡಿಕೊಳ್ಳುವವರಿಗೆ ಕಂತುಗಳ ರೂಪದಲ್ಲಿ ಎರಡೂವರೆ ಲಕ್ಷ ಸಹಾಯಧನವು ಸಿಗುತ್ತದೆ.
ಮೊದಲನೇ ಕಂತಿನಲ್ಲಿ 50,000 ಎರಡನೇ ಕಂತಿನಲ್ಲಿ ಒಂದೂವರೆ ಲಕ್ಷ ಹಾಗೂ ಮನೆ ನಿರ್ಮಾಣ ಕಾರ್ಯ ಪೂರ್ತಿಗೊಂಡ ಮೇಲೆ ಮೂರನೇ ಕಂತಿನಲ್ಲಿ 50,000 ಗಳು ನೇರವಾಗಿ ಫಲಾನುಭವಿಗಳ ಖಾತೆಗೆ ವರ್ಗಾವಣೆ ಆಗುತ್ತಿದೆ. ಇದಕ್ಕಿಂತ ಹೆಚ್ಚಿನ ಸಹಾಯಧನವನ್ನು ಬಯಸಿದ ಪಕ್ಷದಲ್ಲಿ ಫಲಾನುಭವಿಗಳು ಮಾರ್ಕೆಟ್ ಅಲ್ಲಿ ಚಾಲ್ತಿ ಇರುವ ಬಡ್ಡಿದರವನ್ನು ತೆರಬೇಕಾಗುತ್ತದೆ. ಆ ಅನುಕೂಲತೆಯನ್ನು ಕೂಡ ಸರ್ಕಾರ ಮಾಡಿಕೊಡುತ್ತಿದೆ.
ಫಲಾನುಭವಿಗಳಿಗೆ ಇರಬೇಕಾದ ಅರ್ಹತೆಗಳು:-
● ಸ್ವಂತ ಭೂಮಿ ಅಥವಾ ಜಾಗವನ್ನು ಹೊಂದಿರಬೇಕು.
● ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತರು ಅಥವಾ ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬದವರು, ಹುತಾತ್ಮ ಸೇನಾ ಸಿಬ್ಬಂದಿ ಕುಟುಂಬದವರು, ನಿವೃತ್ತಿ ಹೊಂದಿರುವ ಉದ್ಯೋಗದಾತರು ಅರ್ಜಿ ಸಲ್ಲಿಸಿ ಈ ಯೋಜನೆಯ ಫಲಾನುಭವಿಗಳಾಗಬಹುದು.
● ಈಗಾಗಲೇ ಸ್ವಂತ ಮನೆಯನ್ನು ಹೊಂದಿರಬಾರದು.
● ಅರ್ಜಿ ಸಲ್ಲಿಸುವ ವ್ಯಕ್ತಿಯು EWS, LIG ಅಥವಾ BPL ವರ್ಗಕ್ಕೆ ಸೇರಿರಬೇಕು.
● ಅರ್ಜಿದಾರರ ಆದಾಯ 3 ಲಕ್ಷದಿಂದ 6 ಲಕ್ಷದ ಒಳಗಿರಬೇಕು.
ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ದಾಖಲೆಗಳು:-
● ಪ್ರಧಾನಮಂತ್ರಿ ಆವಾಸ್ ಯೋಜನೆ ಅರ್ಜಿ ಫಾರಂ
● ಅರ್ಜಿ ಸಲ್ಲಿಸುವ ವ್ಯಕ್ತಿಯ ಆಧಾರ್ ಕಾರ್ಡ್
● ವೋಟರ್ ಐಡಿ
● ಪ್ಯಾನ್ ಕಾರ್ಡ್
● ಕುಟುಂಬದ ರೇಷನ್ ಕಾರ್ಡ್
● ಅರ್ಜಿದಾರರ ನಿವಾಸ ಪ್ರಮಾಣ ಪತ್ರ
● ಬ್ಯಾಂಕ್ ಖಾತೆಯ ವಿವರ
● ನಿರ್ಮಾಣ ವೆಚ್ಚದ ಪ್ರಮಾಣ ಪತ್ರ
● ಮೌಲ್ಯಮಾಪನ ಪ್ರಮಾಣ ಪತ್ರ
● ಬಿಲ್ಡರ್ ಅಥವಾ ಡೆವಲಪರ್ ಜೊತೆಗಿನ ಒಪ್ಪಂದ ಪತ್ರ
● ಆಸ್ತಿ ಹಂಚಿಕೆಯ ಪ್ರಮಾಣ ಪತ್ರ
ಅರ್ಜಿ ಸಲ್ಲಿಸುವ ವಿಧಾನ:-
● ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
● ಹಳ್ಳಿಗಳಲ್ಲಿ ಇರುವವರು ಗ್ರಾಮ ಪಂಚಾಯಿತಿ ಸಹಾಯದ ಮೂಲಕ ಈ ಯೋಜನೆಯ ಫಲಾನುಭವಿಗಳಾಗಬಹುದು.