ಒಣ ದ್ರಾಕ್ಷಿ ಒಂದು ಅತ್ಯುತ್ತಮ ಆಹಾರ ಪದಾರ್ಥ. ಮಕ್ಕಳಿಂದ ಹಿಡಿದು ವೃದ್ಧರವರೆಗೆ, ಯುವಕರಿಗೆ ಹೀಗೆ ಎಲ್ಲರಿಗೂ ಸಹ ಒಣ ದ್ರಾಕ್ಷಿ ಸೇವನೆ ಒಳ್ಳೆಯದು ಎಂದೇ ವೈದ್ಯರು ಸೂಚಿಸುತ್ತಾರೆ. ಆದರೆ ಮಧುಮೇಹಿಗಳಿಗೆ ಈ ಬಗ್ಗೆ ಗೊಂದಲ ಇದೆ ಒಣದ್ರಾಕ್ಷಿಯನ್ನು ಸೇವಿಸುವುದರಿಂದ ಅವರ ದೇಹದ ಸಕ್ಕರೆ ಪ್ರಮಾಣ ಹೆಚ್ಚಾಗುತ್ತದೆಯೇ ಎಂದು, ಆದರೆ ಆರ್ಗಾನಿಕ್ ಒಣದ್ರಾಕ್ಷಿಯನ್ನು ತಿನ್ನುವುದರಿಂದ ಈ ರೀತಿ ಸಕ್ಕರೆ ಪ್ರಮಾಣ ಹೆಚ್ಚಾಗಬಾರದು.
ಇತ್ತೀಚಿನ ದಿನಗಳಲ್ಲಿ ಎಲ್ಲಾ ಆಹಾರ ಪದಾರ್ಥಗಳನ್ನು ಬೆಳೆಯುವುದಕ್ಕೆ ಮತ್ತು ಅವುಗಳನ್ನು ಸಂಸ್ಕರಿಸಿ ಇಟ್ಟುಕೊಳ್ಳುವುದಕ್ಕೆ ಕೆಲ ಕೆಮಿಕಲ್ ಬಳಕೆ ಅನಿವಾರ್ಯವಾಗಿರುವುದರಿಂದ ಆ ಕಾರಣದಿಂದ ಒಣದ್ರಾಕ್ಷಿ ಸೇವಿಸಿದಾಗ ಸಕ್ಕರೆ ಪ್ರಮಾಣ ಹೆಚ್ಚಾಗಬಹುದು. ಹಾಗಾಗಿ ಒಣದ್ರಾಕ್ಷಿ ಸೇವನೆ ಆರಂಭಿಸಿದ ಮೇಲೆ ಆಗಾಗ ಶುಗರ್ ಟೆಸ್ಟ್ ಮಾಡಿಸಿಕೊಳ್ಳುವುದು ಒಳ್ಳೆಯದು.
ಒಂದು ವೇಳೆ ನಾರ್ಮಲ್ ಆಗಿ ಇಲ್ಲ ಎಂದಾಗ ಅವರ ಡಯಟ್ ನಲ್ಲಿ ಕಾರ್ಬೋಹೈಡ್ರೇಟ್ ಮತ್ತು ಸಕ್ಕರೆ ಪ್ರಮಾಣವನ್ನು ಹೆಚ್ಚಿಸುವಂತಹ ಇತರ ಆಹಾರ ಪದಾರ್ಥಗಳ ಸೇವನೆಯನ್ನು ತಗ್ಗಿಸಿಕೊಳ್ಳಬೇಕು. ಒಂದು ವೇಳೆ ಒಂದು ದಿನಕ್ಕೆ 15-20 ಒಣದ್ರಾಕ್ಷಿ ಸೇವಿಸುತ್ತಿದ್ದಾರೆ ಎಂದರೆ ಅದನ್ನು 8-10 ಕ್ಕೆ ತಂದುಕೊಳ್ಳುವುದು ಒಳ್ಳೆಯದು. ಇತ್ತೀಚಿನ ದಿನಗಳಲ್ಲಿ ಎಲ್ಲರೂ ಮಾತನಾಡುವ ಪ್ರಾಡಕ್ಟ್ ಹೆಸರು ಜೀನಿ, ನೋನಿ ಮತ್ತು ಹರ್ಬಲ್ ಲೈಫ್ ಪ್ರಾಡಕ್ಟ್.
ಇವುಗಳ ಸೇವನೆ ಬಗ್ಗೆ ಉಂಟಾಗುವ ಗೊಂದಲಗಳ ಬಗ್ಗೆ ಒಂದಿಷ್ಟು ಮಾಹಿತಿಯನ್ನು ತಿಳಿಸುವ ಪ್ರಯತ್ನವನ್ನು ಈ ಅಂಕಣದಲ್ಲಿ ಮಾಡುತ್ತಿದ್ದೇವೆ. ಜೀನಿ ಎನ್ನುವುದು ಸಿರಿಧಾನ್ಯ ಮತ್ತು ಕೆಲವು ಏಕದಳ ಧಾನ್ಯ ಹಾಗೂ ದ್ವಿದಳ ಧಾನ್ಯಗಳನ್ನು ಒಟ್ಟಾರೆಯಾಗಿ ಸೇರಿಸಿ ಮಾಡಿದ ಒಂದು ಆಹಾರ ಪದಾರ್ಥ ಆಗಿದೆ. ಇದರ ಸೇವನೆಯಿಂದ ಯಾವುದೇ ಸೈಡ್ ಎಫೆಕ್ಟ್ ಇಲ್ಲದೆ ಇದ್ದರೂ ಇದೇ ಪದಾರ್ಥಗಳನ್ನು ಉಪಯೋಗಿಸಿಕೊಂಡು ಮನೆಯಲ್ಲಿ ತಯಾರು ಮಾಡಿಕೊಳ್ಳುವುದಾದರೆ ಕಡಿಮೆ ಬೆಲೆಗೆ ಇದನ್ನು ತಯಾರಿಸಿಕೊಳ್ಳಬಹುದು.
ಆದರೆ ಸಮಯದ ಅಭಾವ ಇರುವವರು ಈ ರೀತಿ ಮಾಡಲು ಸಾಧ್ಯವಿಲ್ಲ ಎಂದರೆ ಜೀನಿಯನ್ನು ಖರೀದಿಸಿ ಸೇವಿಸಬಹುದು. ಇದೇ ರೀತಿ ಅಭಿಪ್ರಾಯ ನೋನಿಗೂ ಕೂಡ ಇದೆ. ನೋನಿ ಮಾತ್ರವಲ್ಲದೇ ಇದೇ ಗುಣ ಉಳ್ಳ ಅನೇಕ ಆಹಾರ ಪದಾರ್ಥಗಳು ಇದ್ದರೂ ಕೂಡ ಅದು ಎಲ್ಲರಿಗೂ ದೊರಕದೇ ಇರುವುದು ಅಥವಾ ಅದನ್ನು ಗುರುತಿಸುವುದರಲ್ಲಿ ಸಮಸ್ಯೆ ಆಗುವುದರಿಂದ ನೋನಿಯನ್ನು ಖರೀದಿಸಿ ಸೇವಿಸಿದರೆ ಸಮಸ್ಯೆ ಇಲ್ಲ.
ಇನ್ನು ಹರ್ಬಲ್ ಪ್ರಾಡಕ್ಟ್ಸ್ ಬಗ್ಗೆ ಹೇಳುವುದಾದರೆ ಇತ್ತೀಚಿಗೆ ಹರ್ಬಲ್ ಪ್ರಾಡಕ್ಟ್ ಬಳಸುವವರು ದಿಢೀರ್ ಎಂದು ತೂಕ ಕಳೆದುಕೊಂಡಿರುವುದು ಅಥವಾ ಅವರ ಆರೋಗ್ಯ ಸಮಸ್ಯೆ ದಿಡೀರೆಂದು ವಾಸಿ ಆಗಿರುವುದರ ಬಗ್ಗೆ ಹೇಳುತ್ತಾರೆ. ಜೊತೆಗೆ ಇದನ್ನು ಸೇವಿಸುವವರು ಇದು ಔಷದವಲ್ಲ ಆಹಾರ ಎಂದು ಹೇಳುತ್ತಾರೆ ಆದರೆ ಇದೊಂದು ಪೂರ್ತಿ ಆಹಾರ ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ.
ಯಾಕೆಂದರೆ ಇದರಲ್ಲಿ ಕೆಲವು ಆಹಾರ ಪದಾರ್ಥಗಳ ಪ್ರೋಟೀನ್ ಅಂಶವನ್ನು ಮಾತ್ರ ತೆಗೆದು ಈ ಹರ್ಬಲ್ ಪ್ರಾಡಕ್ಟ್ ತಯಾರಿಸಲಾಗಿರುತ್ತದೆ. ಇವುಗಳ ಅತಿಯಾದ ಸೇವನೆಯಿಂದ ದೇಹದ ತೂಕ ಕಡಿಮೆ ಆಗಿರಬಹುದು ಮತ್ತು ಪ್ರೋಟೀನ್ ಕೊರತೆಯಿಂದ ಬಂದಿದ್ದ ಆರೋಗ್ಯ ಸಮಸ್ಯೆ ಸರಿ ಹೋಗಿರಬಹುದು ಅಷ್ಟೇ. ಆದರೆ ಆಯುರ್ವೇದ ಪದ್ಧತಿಯಲ್ಲಿ ಯಾವುದೇ ಔಷಧಿಯನ್ನು ದೀರ್ಘಾವಧಿ ವರೆಗೆ ಸೇವಿಸುವು ಕಡ್ಡಾಯ ಎನ್ನುವ ನಿಯಮ ಇಲ್ಲ.
ಹಾಗೆಯೇ ಯಾವುದಾದರೂ ಒಂದು ಔಷಧಿಯನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಿದ ತಕ್ಷಣವೇ ಅದರ ಅಡ್ಡ ಪರಿಣಾಮವಾಗಿ ಅವರು ಮೊದಲನೇ ಸ್ಥಿತಿಗೆ ಹೋಗುತ್ತಾರೆ ಎನ್ನುವ ವಿಷಯವೂ ಇಲ್ಲ. ಆದರೆ ಹರ್ಬಲ್ ಪ್ರಾಡಕ್ಟ್ ಆರೋಗ್ಯಕ್ಕೆ ಅಡ್ಡ ಪರಿಣಾಮ ನೀಡುವುದಿಲ್ಲವೇನು ಎಂದು ನಂಬಬಹುದು. ಯಾಕೆಂದರೆ ಆ ರೀತಿ ಸಮಸ್ಯೆ ಆಗಿದ್ದರೆ ಈ ಹೊತ್ತಿಗೆ ಅದು ಮಾಧ್ಯಮಗಳಲ್ಲಿ ವರದಿ ಆಗುತ್ತಿತ್ತು. ಆದ್ದರಿಂದ ಸೈಡ್ ಎಫೆಕ್ಟ್ ಇಲ್ಲದೇ ಸೇವಿಸಲು ಅರ್ಹ ಪ್ರಾಡಕ್ಟ್ ಎಂದು ನಂಬಬಹುದು ಅಷ್ಟೇ.