ಮೊಬೈಲ್ ಫೋನ್ ಇತ್ತೀಚಿನ ದಿನದಲ್ಲಿ ಪ್ರತಿಯೊಬ್ಬರಿಗೂ ಕೂಡ ಬಹಳ ಅವಶ್ಯಕತೆಯಾಗಿ ಬೇಕಾಗಿರುವ ಒಂದು ಸಾಧನ. ಮೊದಲೆಲ್ಲಾ ಕಮ್ಯುನಿಕೇಷನ್ ಗಾಗಿ ದೂರವಾಣಿ ಬೇಕು ಎಂದು ಹೇಳಲಾಗುತ್ತಿತ್ತು, ಆದರೆ ಕಾಲ ಬದಲಾದಂತೆ ನಮ್ಮ ಬದುಕಿನ ಬಹುಭಾಗವನ್ನು ಮೊಬೈಲ್ ಆವರಿಸಿಕೊಂಡಿದೆ.
ಇಂದು ಬೆಳಗ್ಗೆ ಎದ್ದು ಸಮಯ ನೋಡಲು ಮೊಬೈಲ್ ಬಳಸುವುದರಿಂದ ಹಿಡಿದು ನಮ್ಮ ಸಂದೇಶಗಳು, ಕರೆಗಳು, ಕೆಲಸ, ಅಲರಾಂ, ಬ್ಯಾಂಕಿಂಗ್, ಶಾಪಿಂಗ್, ಎಂಟರ್ಟೈನ್ಮೆಂಟ್ ಎಲ್ಲವೂ ಕೂಡ ಮೊಬೈಲ್ ಆಗಿ ಹೋಗಿದೆ. ಇಂದು ಅದೆಷ್ಟೋ ವಸ್ತುವಿನ ಜಾಗವನ್ನು ಮೊಬೈಲ್ ಒಂದೇ ತುಂಬಿಸುತ್ತದೆ. ಒಂದು ರೀತಿಯಲ್ಲಿ ಇದು ಎಷ್ಟು ಒಳ್ಳೆಯದೋ ಮೊಬೈಲ್ ಕ್ಷೇತ್ರದಲ್ಲಿ ಆಗುತ್ತಿರುವ ಅನ್ವೇಷಣೆಯೂ ಅಷ್ಟೇ ಅಪಾಯಕಾರಿಯೂ ಹೌದು.
ಈಗ ಸ್ಮಾರ್ಟ್ ಫೋನ್ ಯುಗ, ಪ್ರತಿಯೊಬ್ಬರ ಪಾಕೆಟ್ ಅಲ್ಲೂ ಕೂಡ ಸ್ಮಾರ್ಟ್ ಫೋನ್ ಇರುತ್ತದೆ. ಈ ರೀತಿ ಸ್ಮಾರ್ಟ್ ಫೋನ್ ಖರೀದಿಸುವುದು ಮಾತ್ರವಲ್ಲ ಅದನ್ನು ಜೋಪಾನವಾಗಿ ನೋಡಿಕೊಳ್ಳುವುದು ಕೂಡ ಮುಖ್ಯ. ಯಾಕೆಂದರೆ ಈಗ ಎಲ್ಲಾ ವಸ್ತುಗಳು ಕೂಡ ಬಹಳ ದುಬಾರಿ ಆಗಿರುವುದರಿಂದ ಅಷ್ಟು ಹಣ ತೆತ್ತು ಖರೀದಿಸಿದ ಸ್ಮಾರ್ಟ್ ಫೋನ್ ಕೆಲವೇ ದಿನಗಳಲ್ಲಿ ಹಾಳಾಗಿ ಬಿಟ್ಟರೆ ಅದು ಜೇಬಿಗೆ ಬೀಳುವ ಅನಗತ್ಯ ಹೊಡೆತ.
ಹಾಗಾಗಿ ನಾವು ಖರೀದಿಸಿದ ಸ್ಮಾರ್ಟ್ ಫೋನ್ ದೀರ್ಘಕಾಲ ಬಾಳಿಕೆ ಬರಬೇಕು ಎಂದರೆ ಅದರ ಬ್ಯಾಟರಿ ಕುರಿತು ಕನಿಷ್ಠ ಎಚ್ಚರಿಕೆ ಮಾಡಬೇಕು. ಕೆಲವರು ಮೊಬೈಲ್ ಚಾರ್ಜಿಂಗ್ ಹಾಕುವ ಸಮಯದಲ್ಲಿ ಮಾಡುವ ಕೆಲ ತಪ್ಪುಗಳಿಂದ ಅವರ ಮೊಬೈಲ್ ಬ್ಯಾಟರಿ ಹಾಳಾಗುತ್ತದೆ, ಮೊಬೈಲ್ ಕೂಡ ಹಾಳಾಗುತ್ತದೆ. ಜೊತೆಗೆ ಕೆಲವೊಮ್ಮೆ ಮೊಬೈಲ್ ಬ್ಲಾಸ್ಟ್ ಆಗಿ ಪ್ರಾಣಕ್ಕೆ ಅಪಾಯ ಕೂಡ ಆಗುತ್ತದೆ. ಆದ್ದರಿಂದ ಇನ್ನು ಮುಂದೆ ಮೊಬೈಲ್ ಚಾರ್ಜ್ ಗೆ ಹಾಕುವಾಗ ಈ ಎಚ್ಚರಿಕೆಗಳನ್ನು ಪಾಲಿಸಿ.
● ಮೊಬೈಲ್ ಅನ್ನು ಚಾರ್ಜಿಂಗ್ ಇಂದ ತೆಗೆದ ಮೇಲೆ ಪ್ಲಗ್ ಅನ್ನು ಅಲ್ಲೇ ಬಿಡಬೇಡಿ.
● ಮೊಬೈಲ್ ಬ್ಯಾಟರಿ 0% ಆಗುವವರೆಗೂ ಕೂಡ ಮೊಬೈಲ್ ಅನ್ನು ಬಳಸುತ್ತಾ ಇರಬೇಡಿ. ಕನಿಷ್ಠ 30%-40% ಇರುವಾಗಲೇ ಮೊಬೈಲ್ ಅನ್ನು ಚಾರ್ಜ್ ಮಾಡುವ ಅಭ್ಯಾಸ ರೂಢಿಸಿಕೊಳ್ಳಿ.
● ತಡರಾತ್ರಿವರೆಗೂ ಮೊಬೈಲ್ ಬಳಕೆ ಮಾಡಿ ಬಳಿಕ ಚಾರ್ಜ್ ಮುಗಿದ ಮೇಲೆ ಮೊಬೈಲ್ ಫೋನ್ ಅನ್ನು ಚಾರ್ಜಿಗೆ ಹಾಕಿ ರಾತ್ರಿ ಎಲ್ಲಾ ಚಾರ್ಜ್ ಆಗಲಿ ಎಂದು ಹಾಗೆ ಬಿಡಬೇಡಿ.
● ಮೊಬೈಲ್ ಅನ್ನು ಚಾರ್ಜಿಗೆ ಹಾಕಿಯೂ ಬಳಸಬೇಡಿ, ಮೊಬೈಲ್ ಚಾರ್ಜ್ ಗೆ ಹಾಕಿ ಕರೆಗಳನ್ನು ಮಾಡಿ ಮಾತನಾಡುತ್ತಾ ಇರಬೇಡಿ.
● ಮೊಬೈಲ್ ಅಲ್ಲಿ ಚಾರ್ಜ್ ಇದ್ದರೂ ಅಥವಾ ಸ್ವಲ್ಪ ಖಾಲಿಯಾಗಿದ್ದರೂ ಪದೇ ಪದೇ ಮೊಬೈಲ್ ಅನ್ನು ಚಾರ್ಜ್ ಗೆ ಹಾಕುತ್ತಾ ಇರಬೇಡಿ.
● ಹಾಳಾಗಿರುವ ಚಾರ್ಜರ್ಗಳನ್ನು ಬಳಸಿ ಮೊಬೈಲ್ ಅನ್ನು ಚಾರ್ಜಿಗೆ ಹಾಕಬೇಡಿ.
● ಲ್ಯಾಪ್ಟಾಪ್ ಜೊತೆ ಮೊಬೈಲ್ ಅನ್ನು ಚಾರ್ಜಿಗೆ ಹಾಕಬೇಡಿ.
● ಯಾವ ಚಾರ್ಜರ್ ಸಿಕ್ಕಿದರು ಮೊಬೈಲ್ ಗೆ ಆಗುತ್ತದೆ ಎಂದು ಹಾಕಿ ಚಾರ್ಜ್ ಮಾಡಬೇಡಿ, ನೀವು ಮೊಬೈಲ್ ಖರೀದಿಸಿದಾಗ ನಿಮ್ಮ ಸ್ಮಾರ್ಟ್ ಫೋನ್ ಗೆ ಕಂಪನಿ ಅವರು ಯಾವ ಚಾರ್ಜರ್ ಕೊಟ್ಟಿದ್ದರೋ ಅದನ್ನೇ ಮೇನ್ಟೇನ್ ಮಾಡುವ ಪ್ರಯತ್ನ ಮಾಡಿ. ಇಲ್ಲವಾದರೆ ಬ್ಯಾಟರಿ ಲೈಫ್ ಕಡಿಮೆ ಆಗುತ್ತದೆ, ಮೊಬೈಲ್ ಬ್ಯಾಟರಿ ಹಾಳಾಗುತ್ತದೆ.
● ನಿಮ್ಮ ಮೊಬೈಲ್ ಬ್ಯಾಟರಿ 100% ತೋರಿಸುವವರೆಗೂ ಕೂಡ ಮೊಬೈಲ್ ಚಾರ್ಜ್ ಆಗಲಿ ಎಂದು ಕಾಯುತ್ತ ಕೂರಬೇಡಿ. ಕೆಲವರು ಫುಲ್ ಆಗುವವರೆಗೂ ಕೂಡ ಚಾರ್ಜ್ ಮಾಡುತ್ತಾರೆ ಇದು ಕೂಡ ತಪ್ಪು, ಇದರಿಂದಲೂ ಬ್ಯಾಟರಿ ಲೈಫ್ ಹಾಳಾಗುತ್ತದೆ. 80% – 85% ಪರ್ಸೆಂಟ್ ಚಾರ್ಜ್ ಆದರೆ ಸಾಕು.