ಅಗ್ನಿಸಾಕ್ಷಿ ಧಾರಾವಾಹಿ ಫೇಮ್ ನ ಸನ್ನಿಧಿ ಅಲಿಯಾಸ್ ವೈಷ್ಣವಿ ಗೌಡ ಅವರ ಎಂಗೇಜ್ಮೆಂಟ್ ಬಗ್ಗೆ ಈಗಾಗಲೇ ಸಾಕಷ್ಟು ವಿಷಯಗಳು ಹರಿದಾಡುತ್ತಿದೆ. ವಿರಾಜ್ ಸಿನಿಮಾದ ನಾಯಕ ವಿದ್ಯಾಭರಣ ಎಂಬುವವರ ಜೊತೆ ವೈಷ್ಣವಿಗೆ ನಿಶ್ಚಿತಾರ್ಥ ನೆರವೇರಿತು ಈ ಫೋಟೋದಲ್ಲಿ ನಿವೃತ್ತ ಐಪಿಎಸ್ ಅಧಿಕಾರಿ ಶಂಕರ ಬಿದರಿ ಅವರು ಸಹ ಹಾಜರಿದ್ದರು. ಈ ಫೋಟೋ ವೈರಲ್ ಆದ ಬಳಿಕ ಸ್ಪಷ್ಟನೆ ನೀಡಿರುವ ವೈಷ್ಣವಿ ಎನ್ವಿರಜ್ಮೆಂಟ್ ಆಗಿಲ್ಲ ಹುಡುಗನ ಕಡೆಯವರು ಬಂದು ಹೆಣ್ಣು ನೋಡುವ ಶಾಸ್ತ್ರ ಮುಗಿಸಿದ್ದಾರೆ ಎಂದು ಸ್ಪಷ್ಟನೆ ನೀಡಿದರು ಇದೀಗ ಇದ್ದಕ್ಕಿದ್ದ ಹಾಗೆ ಇಬ್ಬರು ಹುಡುಗಿಯರು ವಿದ್ಯಾಭರಣ ಅವರ ಬಗ್ಗೆ ಮಾತನಾಡಿರುವಂತಹ ಆಡಿಯೋ ಈಗ ಎಲ್ಲಾ ಕಡೆ ವೈರಲ್ ಆಗುತ್ತಿದೆ ಆ ಹುಡುಗಿಯರಿಗೂ ವಿದ್ಯಾಭರಣ ಅವರಿಗು ಏನು ಸಂಬಂಧ ಎನ್ನುವುದು ಸದ್ಯಕ್ಕೆ ಸ್ಪಷ್ಟನೆ ಸಿಗುತ್ತಿಲ್ಲ,
ನಟಿ ವೈಷ್ಣವಿ ಗೌಡ ಅವರ ನಿಶ್ಚಿತಾರ್ಥದ ಬಗ್ಗೆ ಇಬ್ಬರು ಹುಡುಗಿಯರು ಮಾತನಾಡಿರುವ ಆಡಿಯೋ ವೈರಲ್ ಆದ ಬೆನ್ನಲ್ಲೇ ಸಾಕಷ್ಟು ಊಹಾ ಪೋಹಗಳು ಎದ್ದಿದ್ದು ಈ ಬಗ್ಗೆ ವೈಷ್ಣವಿ ಅವರ ತಂದೆ ರವಿಕುಮಾರ್ ಸ್ಪಷ್ಟನೇ ನೀಡಿದ್ದಾರೆ. ಆಡಿಯೋ ವೈರಲ್ ಆದ ನಂತರ ನಮಗೂ ಕೂಡ ಶಾಕ್ ಆಗಿದೆ ನನ್ನ ಮಗಳು ಕೂಡ ಶಾಕ್ ನಲ್ಲಿ ಇದ್ದಾಳೆ ವೈಷ್ಣವಿ ರೂಮ್ ನಿಂದ ಹೊರ ಬಂದಿಲ್ಲ ಮತ್ತು ತಿಂಡಿಯೂ ಕೂಡ ತಿಂದಿಲ್ಲ ಅಷ್ಟಕ್ಕೂ ನಮ್ಮ ಸುತ್ತಮುತ್ತ ಏನಾಗುತ್ತೆ ಎಂಬುದು ಸಹ ನಮಗೆ ತಿಳಿಯುತ್ತಿಲ್ಲ. ಯಾರಾದರೂ ಆಗದೆ ಇರುವವರು ಈ ರೀತಿ ಮಾಡಿದ್ದಾರೆ ಎಂದು ಸಹ ನಮಗೆ ತಿಳಿಯುತ್ತಿಲ್ಲ ಎಂದು ಹೇಳಿಕೆ ನೀಡಿದ್ದಾರೆ ಸದ್ಯ ಮಗಳ ನಿರ್ಧಾರಕ್ಕೆ ನಾವು ಬದ್ಧರಾಗಿರುತ್ತೇವೆ ಅವಳು ಏನು ತೀರ್ಮಾನ ತೆಗೆದುಕೊಳ್ಳುತ್ತಾಳೆ ಎಂದು ಕಾದು ನೋಡುತ್ತೇವೆ
ದೇವರು ಇದ್ದಾನೆ ಎಂದು ನೋಡೋಣ ಎಂದು ಮಾಧ್ಯಮದ ಮುಂದೆ ವೈಷ್ಣವಿ ಅವರ ತಂದೆ ರವಿ ಕುಮಾರ್ ಅವರು ಹೇಳಿಕೆಯನ್ನು ನೀಡಿದ್ದಾರೆ. ಇದೀಗ ಇದ್ದಕ್ಕಿದ್ದಂತೆ ಇಬ್ಬರು ಹುಡುಗಿಯರು ಅಕಾಡಕ್ಕೆ ಇಳಿದಿದ್ದಾರೆ ಆ ಹುಡುಗಿಯರಿಗೆ ಹಾಗೂ ವಿದ್ಯಾಬರಣವರಿಗೂ ಏನು ಸಂಬಂಧ ಎನ್ನುವುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ ಆದರೆ ವಿದ್ಯಾಭರಣ ಬಗ್ಗೆ ಸಾಕಷ್ಟು ಗಂಭೀರ ಆರೋಪಗಳು ಕೇಳಿ ಬರುತ್ತಿದೆ ವೈಷ್ಣವಿ ತುಂಬಾ ಒಳ್ಳೆಯ ಹುಡುಗಿ ಆಕೆಗೆ ಅವನಿಂದ ಮೋಸ ಆಗಬಾರದು. ವೈಷ್ಣವಿ ಜೀವನ ಹಾಳಾಗುವುದಕ್ಕೆ ನಾವು ಬಿಡುವುದಿಲ್ಲ ವೈಷ್ಣವಿ ಅವರಿಗೆ ಮೊದಲು ಈ ಹುಡುಗ ರಿಲೇಶನ್ ಶಿಪ್ ನಲ್ಲಿ ಇದ್ದ. ಅಲ್ಲದೆ ಹುಡುಗಿಯರನ್ನು ಮನೆಗೂ ಸಹ ಕರೆದುಕೊಂಡು ಹೋಗುತ್ತಿದ್ದ.
ಆತನ ಕೃತ್ಯಕ್ಕೆ ಅವರ ತಂದೆ ತಾಯಿ ಫುಲ್ ಸಪೋರ್ಟ್ ಮಾಡುತ್ತಿದ್ದರು ಎಂದು ಇಬ್ಬರು ಅನಾಮಧೇಯ ಹುಡುಗಿಯರು ಆರೋಪ ಮಾಡಿದ್ದಾರೆ. ಈ ರೀತಿಯಾದಂತಹ ಸಾಕಷ್ಟು ಆರೋಪಗಳು ವಿದ್ಯಾಭರಣ ಅವರ ಮೇಲೆ ಕೇಳಿ ಬರುತ್ತಿದ್ದು ಯಾವುದು ನಿಜ ಯಾವುದು ಸುಳ್ಳು ಎನ್ನುವಂತಹದ್ದು ಸದ್ಯಕ್ಕೆ ಯಾರಿಗೂ ಸಹ ತಿಳಿಯುತ್ತಿಲ್ಲ. ಈ ಒಂದು ವಿಚಾರದಿಂದ ನಟಿ ವೈಷ್ಣವಿ ಗೌಡ ಅವರು ಹಾಗೂ ಅವರ ತಂದೆ ತಾಯಿ ತುಂಬಾ ಡಿಪ್ರೆಶನ್ ಗೆ ಹೋಗಿದ್ದಾರೆ ನಟಿ ವೈಷ್ಣವಿ ಗೌಡ ಅವರು ಮನೆಯಿಂದಲೂ ಆಚೆ ಬರಲು ಸಹ ಸಾಧ್ಯವಾಗದಷ್ಟು ನೋವನ್ನು ತುಂಬಿಕೊಂಡಿದ್ದಾರೆ. ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ಸ್ ಮೂಲಕ ತಿಳಿಸಿ.