ಆಟೋ ಚಾಲಕರು ಆರ್ಥಿಕ ವ್ಯವಸ್ಥೆಯ ಬಹುಮುಖ್ಯಭಾಗ ಎನ್ನಬಹುದು. ಯಾಕೆಂದರೆ ಅವರು ಹಾಕಿಸಿಕೊಳ್ಳುವ ಡೀಸೆಲ್, ಪೆಟ್ರೋಲ್ ಮೂಲಕ ಸರ್ಕಾರಕ್ಕೆ ಟ್ಯಾಕ್ಸ್ ಕಟ್ಟುತ್ತಾರೆ. ಇವರುಗಳು ಮಾಡಿಸಿಕೊಳ್ಳುವ ಸರ್ವಿಸ್ಗಳು ಮತ್ತು ತೆಗೆದುಕೊಳ್ಳುವ ಗಾಡಿ ಪಾರ್ಟ್ಸ್ ಗಳ ಮೂಲಕ ಸರ್ಕಾರಕ್ಕೆ ಟ್ಯಾಕ್ಸ್ ಹೋಗುತ್ತದೆ. ಜೊತೆಗೆ ಸಂಚಾರಿ ನಿಯಮಗಳ ಉಲ್ಲಂಘನೆ ಆದಾಗಲೂ ಕೂಡ ಫೈನ್ ಕಟ್ಟುತ್ತಾರೆ.
ಅವುಗಳ ಮೂಲಕವೂ ಕೂಡ ಸರ್ಕಾರಕ್ಕೆ ಆದಾಯ ಬರುತ್ತದೆ. ಇವುಗಳ ಜೊತೆಗೆ ಒಬ್ಬ ವ್ಯಕ್ತಿಯ ಕುಟುಂಬ ನಿರ್ವಹಣೆಗೆ ಆತನ ಮಕ್ಕಳ ವಿದ್ಯಾಭ್ಯಾಸಕ್ಕೆ ಆಟೋ ನೆರವಾಗುತ್ತದೆ. ಹೀಗೆ ಜೀವನೋಪಾಯವನ್ನು ಆಟೋ ಮೂಲಕ ಕಂಡುಕೊಂಡಿರುವವರು ತಮ್ಮ ಕುಟುಂಬದ ಜೊತೆಗೆ ಸಾಮಾಜಿಕ್ಕೂ ಕೂಡ ಕೊಡುಗೆ ಕೊಡುತ್ತಿದ್ದಾರೆ ಎನ್ನುವುದನ್ನು ನಾವು ಒಪ್ಪಿಕೊಳ್ಳಲೇ ಬೇಕು. ಆದರೆ ಇವರಿಗೆ ಸಾಕಷ್ಟು ತೊಂದರೆಯಾಗುತ್ತಿದೆ.
ಲೋನ್ ಗಳಲ್ಲಿ ಆಟೋ ತೆಗೆದುಕೊಳ್ಳುವವರಿಗೆ ಬಹು ದೊಡ್ಡ ಅನ್ಯಾಯವೇ ಆಗುತ್ತಿದೆ. ಬಹುತೇಕ ಆಟೋ ಚಾಲಕರಿಗೆ ದಾಖಲೆಗಳಲ್ಲಿ ವ್ಯತ್ಯಾಸವಿರುವ ಕಾರಣ ಅಥವಾ ಇನ್ಯಾವುದೋ ಕಾರಣದಿಂದ ಸರ್ಕಾರಿ ಸಂಸ್ಥೆಗಳು ಲೋನ್ ಕೊಡುವುದಿಲ್ಲ. ಆಗ ಅವರು ಖಾಸಗಿ ಫೈನಾನ್ಸ್ ಕಂಪನಿಗಳ ಮೊರೆ ಹೋಗುತ್ತಾರೆ. ಆದರೆ ಈ ಫೈನಾನ್ಸ್ ಕಂಪನಿಗಳು ಸಾಲ ಕೊಟ್ಟು ಆಟೋ ಚಾಲಕನನ್ನು ಸುಲಿಗೆ ಮಾಡುತ್ತವೆ RBI ಈ ರೀತಿ ಸಾಲ ಕೊಡುವ ಸಂಸ್ಥೆಗಳಿಗೆ ತನ್ನದೇ ಆದ ಗೈಡ್ ಲೈನ್ಸ್ ನೀಡಿದೆ.
ಖಾಸಗಿ ಹಣಕಾಸು ಸಂಸ್ಥೆಯಾಗಲಿ ಅಥವಾ ಸರ್ಕಾರದ ಹಣಕಾಸು ಸಂಸ್ಥೆ ಆಗಲಿ ಹಣಕಾಸು ಸಾಲ ನೋಡುವುದಕ್ಕೆ ತನ್ನದೇ ಆದ ನಿಯಮಗಳನ್ನು RBI ಕಟ್ಟುಕೊಟ್ಟಿದೆ. ಎಲ್ಲವೂ ಕೂಡ ಅದರ ಚೌಕಟ್ಟಿನ ಒಳಗಡೆ ನಡೆಯಬೇಕು ಎನ್ನುವ ಕಟುವಾದ ನಿಯಮವು ಇದೆ. ಇವುಗಳ ಉಲ್ಲಂಘನೆ ಆದಾಗ ಗ್ರಾಹಕರು ಕಾನೂನು ನೆರವು ತೆಗೆದುಕೊಳ್ಳಬಹುದು.
ಈಗ ಆಟೋ ಚಾಲಕರ ವಿಚಾರವೇ ಹೇಳುವುದಾದರೆ ಆಟೋ ಚಾಲಕರಿಗೆ ಬಹಳ ದೊಡ್ಡ ಮೋಸವು ಖಾಸಗಿ ಫೈನಾನ್ಸ್ ಕಂಪನಿಗಳ ಮೂಲಕ ಆಗುತ್ತಿದೆ. ಉದಾಹರಣೆ ಬೆಂಗಳೂರಿನಲ್ಲಿ ಸೇಠ್ ಫೈನಾನ್ಸ್ ಎನ್ನುವ ಕಂಪನಿಗಳು ಇವೆ. ಇವು ಯಾವುದೇ ರೀತಿಯ ಬೋರ್ಡ್ ಹಾಕಿಕೊಂಡಿರುವುದಿಲ್ಲ, ಚಿನ್ನ ಗಿರವಿ ಇಟ್ಟುಕೊಳ್ಳುವ ಲೈಸನ್ಸ್ ಅಲ್ಲಿ ವಾಹನಗಳ ಲೋನ್ ಕೊಡುತ್ತವೆ ಅಥವಾ ಬಟ್ಟೆ ಅಂಗಡಿ ಲೈಸೆನ್ಸ್ ಅಲ್ಲಿ ಈ ರೀತಿ ಫೈನಾನ್ಸ್ ನಡೆಸುತ್ತವೆ.
ಇವು ಲೋನ್ ಕೊಟ್ಟು ತಮ್ಮಿಷ್ಟದ ಬಡ್ಡಿಯನ್ನು ವಸೂಲಿ ಮಾಡುತ್ತವೆ. RBI ನಿಯಮದ ಪ್ರಕಾರ ಎಲ್ಲಾ ಚಾರ್ಜ್ಗಳನ್ನು ಒಳಪಟ್ಟು 16% ಬಡ್ಡಿದರ ಮೀರುವಂತಿಲ್ಲ. ಆದರೆ ಇವು 35% ತನಕವೂ ಕೂಡ ಬಡ್ಡಿಯನ್ನು ಹೀರುತ್ತವೆ. ಇದರಿಂದ ಆಟೋ ಚಾಲಕ ಜೀವನಪೂರ್ತಿ ಸಾಲ ಕಟ್ಟುವುದೇ ಆಗುತ್ತದೆ. ಚಾಲಕನು ಸಾಲ ಪಡೆದ ಮೊತ್ತಕ್ಕಿಂತ ಬಡ್ಡಿ ಮೊತ್ತ ಹೆಚ್ಚಾಗುವಂತಿಲ್ಲ ಎಂದು RBI ನಿಯಮ ಇದೆ.
ಆದರೆ ಕಂಪನಿಗಳು ಸಾಲ ಪಡೆದುಕೊಳ್ಳುವಾತನಿಗೆ ಯಾವುದೇ ಪಾಸ್ ಬುಕ್ ನೀಡದ ಕಾರಣ ಆತ ಎಷ್ಟು ಸಾಲ ವಾಪಸ್ ಕೊಟ್ಟಿದ್ದಾನೆ, ಎಷ್ಟು ಬಡ್ಡಿ ಕಟ್ಟುತ್ತಿದ್ದಾನೆ ಅಥವಾ ಆತ ತೆಗೆದುಕೊಂಡಿದ್ದ ಸಾಲದ ಮೊತ್ತ ಎಷ್ಟಿತ್ತು ಎನ್ನುವುದರ ವಿವರವೇ ಇರುವುದಿಲ್ಲ. ಈ ಪ್ರಕಾರ ನೋಡುವುದಾದರೆ ಇಂತಹ ಸಾಲಗಳನ್ನು ಪಡೆದುಕೊಂಡರೆ ಅವು ಮಾನ್ಯವಾಗುವುದೇ ಇಲ್ಲ.
ಒಂದು ವೇಳೆ ಆಟೋ ಚಾಲಕ ಕಾರಣಾಂತರಗಳಿಂದ ಸಾಲ ಕಟ್ಟಲು ಆಗದೆ ಹೋದರೆ ಅದನ್ನು ಕೇಳುವ ಅಧಿಕಾರ ಈ ಫೈನಾನ್ಸ್ ಕಂಪನಿಗಳಿಗೆ ಬರುವುದೇ ಇಲ್ಲ. ಇದೆಲ್ಲ ಕಪ್ಪು ಹಣ ಆಗಿರುವ ಕಾರಣ ಯಾವುದೇ ದಾಖಲೆ ಉಳಿಸದಂತೆ ಈ ರೀತಿ ಫೈನಾನ್ಸ್ ಕಂಪನಿಗಳು ಲೂಟಿ ಮಾಡುತ್ತಿವೆ. ಇದರಿಂದ ದೊಡ್ಡ ಮೊತ್ತದ ಹಣವನ್ನು ದರೋಡೆ ಮಾಡುತ್ತಿವೆ. ಹಾಗಾಗಿ ಇವುಗಳನ್ನು ತಡೆಗಟ್ಟಲು ಯಾವುದೇ ಗ್ರಾಹಕರು ಫೈನಾನ್ಸ್ ಕಂಪನಿಗಳ ಮೊರೆ ಹೋಗುವುದನ್ನು ನಿಲ್ಲಿಸಬೇಕು. ಇದರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.