ಡ್ಯಾನ್ಸ್ ಕಿಂಗ್ ಅಂತಾನೇ ಹೆಸರುವಾಸಿಯಾಗಿರುವ ವಿನೋದ್ ರಾಜ್ ಯಾಕೆ ಡ್ಯಾನ್ಸಿಂಗ್ ಶೋಗೂ ಜಡ್ಜ್ ಆಗಿಲ್ಲ ಗೊತ್ತ.?

ಕನ್ನಡ ಚಿತ್ರರಂಗದಲ್ಲಿ ಕೆಲವೊಂದು ಸಿನಿಮಾಗಳನ್ನು ಕಾಣಿಸಿಕೊಂಡಿರುವ ವಿನೋದ್ ರಾಜ್ ಅವರ ನಟನೆ ಎಲ್ಲರಿಗೂ ಸಹ ಇಷ್ಟವಾಗುತ್ತಿತ್ತು. ಎಲ್ಲರಿಗೂ ಗೊತ್ತಿರುವ ಹಾಗೆ ನಟಿ ಲೀಲಾವತಿ ಅವರ ಮಗ ವಿನೋದ್ ರಾಜ್ ಅವರು ಕನ್ನಡದಲ್ಲಿ ಕೆಲವೊಂದಷ್ಟು ಸಿನಿಮಾಗಳನ್ನು ಮಾಡುವ ಮೂಲಕ ಪರಿಚಿತರಾಗಿದ್ದಾರೆ ಇನ್ನು ಲೀಲಾವತಿಯವರು 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಕನ್ನಡದ ಟಾಪ್ ಹೀರೋಯಿನ್ ಗಳಲ್ಲಿ ಒಬ್ಬರಾಗಿದ್ದರು. ಒಂದು ಕಾಲದಲ್ಲಿ ಸಿನಿಮಾ ಇಂಡಸ್ಟ್ರಿಯಲ್ಲಿ ಸಾಕಷ್ಟು ನೋವನ್ನು ಅನುಭವಿಸಿದಂತಹ ಲೀಲಾವತಿ ಅವರಿಗೆ ತಮ್ಮ ಮಗ ಸಿನಿಮಾ ಇಂಡಸ್ಟ್ರಿಗೆ ಹೋಗಬಾರದು ಎನ್ನುವಂತಹ ಉದ್ದೇಶ ಇತ್ತು. ವಿನೋದ್ ರಾಜ್ ಅವರು ಡಾನ್ಸನ್ನು ಅಭ್ಯಾಸ ಮಾಡಿ ಚಿತ್ರರಂಗಕ್ಕೆ ಪ್ರವೇಶ ಮಾಡಬೇಕು ಎನ್ನುವಂತಹ ಉತ್ಸಾಹದಲ್ಲಿ ಇರುತ್ತಾರೆ ಆದರೆ ತಾಯಿಯ ಮಾತಿಗೆ ಕಟ್ಟು ಬಿದ್ದು ಹಿಂದೆ ಉಳಿದಿರುತ್ತಾರೆ.

WhatsApp Group Join Now
Telegram Group Join Now

ಹೀಗಿರುವಾಗ ವಿನೋದ್ ರಾಜ್ ಅವರಿಗೆ 21 ವರ್ಷ ವಯಸ್ಸಿರುವಾಗ ದ್ವಾರಕೀಶ್ ಅವರು ಸಿನಿಮಾ ಗೆ ಅವಕಾಶ ಕೊಡ್ತಾರೆ ‘ಡಾನ್ಸ್ ರಾಜ ಡಾನ್ಸ್’ ಎನ್ನುವಂತಹ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ವಿನೋದ್ ರಾಜ್ ರವರು ಎಂಟ್ರಿ ಅನ್ನು ಕೊಡುತ್ತಾರೆ ಲೀಲಾವತಿ ಅವರು ಎಷ್ಟೇ ವಿರೋಧವನ್ನು ವ್ಯಕ್ತಪಡಿಸಿದರು ಸಿನಿಮಾದಲ್ಲಿ ನಟಿಸುತ್ತಾರೆ ಆ ಸಿನಿಮಾ ಒಂದು ಹಂತಕ್ಕೆ ಹಿಟ್ ಆಗುತ್ತದೆ ವಿನೋದ್ ರಾಜ್ಯವರು ಪ್ರಖ್ಯಾತಿಯನ್ನು ಪಡೆದುಕೊಳ್ಳುತ್ತಾರೆ. ವಿನೋದ್ ರಾಜ್ ಅವರಿಗೆ ನಟನೆಯಲ್ಲಿ ಅಷ್ಟೇ ಅಲ್ಲದೆ ಡ್ಯಾನ್ಸ್ ನಲ್ಲಿ ವಿಶೇಷವಾದಂತಹ ಆಸಕ್ತಿ ಇದ್ದು ಇವರನ್ನು ಕನ್ನಡದ ಮೈಕಲ್ ಜಾಕ್ಸನ್ ಎಂದೆ ಸಹ ಕರೆಯುತ್ತಾರೆ ಕೆಲವೊಂದಷ್ಟು ಸಿನಿಮಾಗಳಲ್ಲಿ ನಟಿಸಿದ ನಂತರ ವಿನೋದ್ ರಾಜ್ ಅವರು ಚಿತ್ರರಂಗದಿಂದ ದೂರ ಸರಿದು ಬಿಡುತ್ತಾರೆ.

ವಿನೋದ್ ರಾಜ್ ಅವರಿಗೆ ಸಾಕಷ್ಟು ಅನಾರೋಗ್ಯ ಸಮಸ್ಯೆಗಳು ಉಂಟಾದಂತಹ ಕಾರಣದಿಂದಾಗಿ ಅವರು ಸಿನಿಮಾಗಳಲ್ಲಿ ನಟಿಸುವುದನ್ನು ಬಿಟ್ಟು ಬಿಡುತ್ತಾರೆ. ಇನ್ನು ಕೆಲವು ಮೂಲಗಳ ಪ್ರಕಾರ ವಿನೋದ್ ರಾಜ್ ಅವರ ತಾಯಿ ವಿರೋಧ ಮಾಡಿದ್ದರಿಂದ ಚಿತ್ರರಂಗದಿಂದ ದೂರಸರಿದರೂ ಎಂದು ಸಹ ಹೇಳಲಾಗುತ್ತಿದೆ ಅಷ್ಟೇ ಅಲ್ಲದೆ ವಿನೋದ್ ರಾಜ್ ಅವರ ವೈಯಕ್ತಿಕ ಜೀವನದಲ್ಲಿ ಕೆಲವೊಂದು ಕಾರಣಗಳಿಂದಾಗಿ ಇವರು ಸಿನಿ ರಂಗದಿಂದ ದೂರ ಉಳಿದುಕೊಂಡರು. ಸದ್ಯದಲ್ಲಿ ನಟ ವಿನೋದ್ ರಾಜ್ ಅವರು ತಮ್ಮ ತಾಯಿಯ ಜೊತೆಯಲ್ಲಿ ನಗರದ ಹೊರಗಡೆ ತೋಟದ ಹಳ್ಳಿ ಮನೆಯಲ್ಲಿ ವಾಸವಾಗಿದ್ದಾರೆ ಅಷ್ಟೇ ಅಲ್ಲದೆ ಇವರು ಕೃಷಿಯನ್ನು ಮಾಡುತ್ತ ತಮ್ಮ ಜೀವನವನ್ನು ಸಾಗಿಸುತ್ತಾ ಹೋಗುತ್ತಿದ್ದಾರೆ. ವಿನೋದ್ ರಾಜ್ ಅವರು ತಮ್ಮ ತಾಯಿಯನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ ಅವರ ಆರೋಗ್ಯದ ಸಮಸ್ಯೆ ಇರುವುದರಿಂದ ಯಾವಾಗಲೂ ಅವರ ಜೊತೆಯಲ್ಲಿಯೇ ಇರುತ್ತಾರೆ.

ಸಾಕಷ್ಟು ಜನರಲ್ಲಿ ಈ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ ವಿನೋದ್ ರಾಜ್ ಅವರಿಗೆ ಡಾನ್ಸ್ ಚೆನ್ನಾಗಿ ಬರುವುದರಿಂದ ಅವರನ್ನು ಡಾನ್ಸ್ ಕಾರ್ಯಕ್ರಮಗಳಿಗೆ ತೀರ್ಪುಗಾರರಾಗಿ ಕರೆಯಬೇಕು ಎನ್ನುವಂತಹ ಒಂದಷ್ಟು ಚರ್ಚೆಗಳು ನಡೆದವು. ವಿನೋದ್ ರಾಜ್ ರವರು ಬೆಂಗಳೂರನ್ನು ಬಿಟ್ಟು ಹಳ್ಳಿಯಲ್ಲಿ ಇರುವುದರಿಂದ ಇವರಿಗೆ ಅವಕಾಶಗಳು ಸಿಗುತ್ತಿಲ್ಲ ಎಂದು ಕೇಳಿ ಬರುತ್ತಿದೆ ಅಷ್ಟೇ ಅಲ್ಲದೆ ಇವರು ಕೃಷಿಯ ಮೇಲೆ ಹೆಚ್ಚಿನ ಒಲವನ್ನು ತೋರಿಸುತ್ತಾರೆ‌. ತಮ್ಮಷ್ಟಕ್ಕೆ ತಾವು ಜೀವನವನ್ನು ನಡೆಸುತ್ತಿರುವಂತಹ ನಟಿ ಲೀಲಾವತಿ ಹಾಗೂ ಅವರ ಮಗ ವಿನೋದ್ ರಾಜ್ ಅವರಿಗೆ ಕೆಲವು ಕಿಡಿಗೇಡಿಗಳು ತೊಂದರೆಯನ್ನು ಮಾಡಲು ಹೊರಟಿದ್ದರು. ವಿನೋದ್ ರಾಜ್ ಅವರ ಕಾರನ್ನು ಅಟ್ಯಾಕ ಮಾಡಲಾಗಿತ್ತು ಅಲ್ಲದೆ ಅವರ ತೋಟಕ್ಕೆ ಬೆಂಕಿಯನ್ನು ಸಹ ಇಟ್ಟಿದ್ದರು ಆದರೆ ಇವರು ಯಾವುದಕ್ಕೂ ಹೆದರಿಕೊಳ್ಳದೆ ತಮ್ಮ ಜೀವನವನ್ನು ಸಾಗಿಸಿಕೊಂಡು ಹೋಗುತ್ತಿದ್ದಾರೆ. ಜನರ ಹಿತ ದೃಷ್ಟಿಯಿಂದ ಒಂದು ಆಸ್ಪತ್ರೆಯನ್ನು ಸಹ ನಿರ್ಮಿಸಿದ್ದಾರೆ. ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ಸ್ ಮೂಲಕ ತಿಳಿಸಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now