Deprecated: strtolower(): Passing null to parameter #1 ($string) of type string is deprecated in /home/u302298408/domains/rishithepower.com/public_html/wp-content/plugins/taboola/simple_html_dom.php on line 712
ಸ್ನೇಹಿತರೆ ಮುಂದಿನ ದಿನಗಳಲ್ಲಿ ಚುನಾವಣೆ ಎದುರಾಗುತ್ತಿದ್ದು ವೋಟರ್ ಐಡಿಗಳನ್ನು ಮಾಡಿಸುವವರ ಪಟ್ಟಿಯು ಹೆಚ್ಚಾಗಿರುವುದಿಲ್ಲ ಇನ್ನೂ ಕೆಲವರಿಗೆ ನಮ್ಮ ವೋಟರ್ ಐಡಿ ಕಾರ್ಡ್ ಗಳನ್ನು ಎಲ್ಲಿ ಪಡೆಯಬೇಕು ಅದಕ್ಕೆ ಅರ್ಜಿಯನ್ನು ಹೇಗೆ ಸಲ್ಲಿಸಬೇಕು ಎಂದು ಹುಡುಕುತ್ತಾ ಇರುತ್ತಾರೆ ಅಂತವರಿಗೆ ನಾವು ಇಂದು ಒಂದು ಉತ್ತಮವಾದ ಪುಟವನ್ನು ಇಲ್ಲಿ ತಂದಿದ್ದೇವೆ ಅದರಲ್ಲೂ ಈಗಷ್ಟೇ 18 ತುಂಬಿರುವವರ ನಮ್ಮ ಭಾರತೀಯ ಯುವ ಜನತೆಗೆ ಇದು ಬಹಳ ಉಪಯುಕ್ತವಾಗಿದೆ ಹಾಗಾದರೆ ಬನ್ನಿ ಸ್ನೇಹಿತರೆ ನಮ್ಮ ಹಕ್ಕನ್ನು ಚಲಾಯಿಸಲು ವೋಟರ್ ಐಡಿ ಕಾರ್ಡ್ ಬಹಳ ಮುಖ್ಯವಾದ ಆಧಾರ.
ಇನ್ನೂ ಇದೆ ವೋಟರ್ ಐ ಡಿ ಕಾರ್ಡಲ್ಲಿ ನಮ್ಮ ಊರು, ಜನನ ದಿನಾಂಕ, ಫೋಟೋ, ಲಿಂಗ, ಪತಿ ಅಥವಾ ತಂದೆಯ ಹೆಸರು ವಿಳಾಸ ದ ಬದಾಲಾವಣೆ ಆಗಬೇಕು ಎಂದರೆ ರಾಷ್ಟ್ರೀಯ ಚುನಾವಣಾ ಆಯೋಗದ ಅಡಿಯಲ್ಲಿ ಬದಲಾಯಿಸಬಹುದು. ಇಲ್ಲವಾದಲ್ಲಿ ನಿಮ್ಮ ಮೊಬೈಲ್ನಲ್ಲಿಯೇ ವೋಟರ್ ಐಡಿಯ ಬದಲಾವಣೆ ಬಹಳ ಸರಳವಾದ ಪ್ರಕ್ರಿಯೆ ಆಗಿದೆ. ಮೊದಲನೆಯದಾಗಿ ಭಾರತ ಸರ್ಕಾರವು ಬಿಟ್ಟಿರುವ ಈ ಅಪ್ಲಿಕೇಶನ್ ಅನ್ನು ಆಂಡ್ರಾಯ್ಡ್ ಮೊಬೈಲ್ ಗಳು ಅಥವಾ ಐ ಫೋನ್ಗಳಿಗೆ ಡೌನ್ಲೋಡ್ ಮಾಡಿಕೊಳ್ಳಬಹುದು.
ಈ ಅಪ್ಲಿಕೇಶನ್ ಹೆಸರು ವೋಟರ್ ಹೆಲ್ಪ್ ಲೈನ್ ಎಂದು ಇದೆ ಇದನ್ನು ಮೊಬೈಲ್ಗೆ ಮೊದಲು ಡೌನ್ಲೋಡ್ ಮಾಡಬೇಕು ನಂತರ ನಾವು ನಮ್ಮ ಹೆಸರು ಹಾಗೂ ಮೊಬೈಲ್ ಸಂಖ್ಯೆಯ ಮೂಲಕ ರಿಜಿಸ್ಟರ್ ಮಾಡಿಕೊಳ್ಳಬೇಕು. ಒಮ್ಮೆ ಅಕೌಂಟ್ ಕ್ರಿಯೇಟ್ ಆದಮೇಲೆ ಪಾಸ್ವರ್ಡ್ ಅನ್ನು ಹಾಕಿ ಲಾಗ್ ಇನ್ ಆಗಬೇಕು ನಂತರ ಅಲ್ಲಿ ಫಾರ್ಮ್ಸ್ ಎಂಬ ಆಯ್ಕೆಯನ್ನು ಒತ್ತಬೇಕು. ಅಲ್ಲಿ ನೀವು ಹೊಸದಾಗಿ ಆದರೂ ಅಥವಾ ಹಳೆಯ ವೋಟರ್ ಐಡಿಯಲ್ಲಿ ತಿದ್ದುಪಡಿ ಮಾಡಬಹುದು. ಇನ್ನೂ ಹೊಸದಾಗಿ ಅರ್ಜಿಯನ್ನು ಸಲ್ಲಿಸಲು ಮೊದಲನೆಯ ಆಯ್ಕೆಯನ್ನು ಒತ್ತಬೇಕು.
ಇನ್ನೂ ನಿಮ್ಮ ವೋಟರ್ ಐಡಿ ಕಾರ್ಡ್ ನಲ್ಲಿ ಯಾವುದಾದರೂ ಬದಲಾವಣೆ ಆಗಬೇಕಾದರೆ ಅಲ್ಲಿ ನಾಲ್ಕನೇ ಆಯ್ಕೆಯಾದ ಕರೆಕ್ಷನ್ ಆಫ್ ಎಂಟರೀಸ್ ಫಾರ್ಮ್ 8 ಎಂಬ ಆಯ್ಕೆಯನ್ನು ಒತ್ತಿ ಅಲ್ಲಿ ನಿಮ್ಮ ವೋಟರ್ ಐಡಿ ನ ತಿದ್ದುಪಡಿ ಮಾಡಬಹುದು. ಇವುಗಳ ನಂತರ ಕಂಟಿನ್ಯೂ ಮೇಲೆ ಒತ್ತಿದರೆ ನಿಮ್ಮ ಪ್ರದೇಶವನ್ನು ಆಯ್ದುಕೊಂಡು, ನಂತರ ಇನ್ನು ನಿಮ್ಮ ಹೆಸರು, ನಿಮ್ಮ ವೋಟರ್ ಐಡಿ ಸಂಖ್ಯೆ ಎಲ್ಲವನ್ನು ತುಂಬಿಸಬೇಕು
ಇವೆಲ್ಲವೂ ಆದ ನಂತರ ನೆಕ್ಸ್ಟ್ ಬಟನ್ ಅನ್ನು ಒತ್ತಬೇಕು. ಮುಂದಿನ ಫಾರ್ಮ್ ನಲ್ಲಿ ನಿಮ್ಮ ವೋಟರ್ ಐಡಿ ಯಲ್ಲಿ ಯಾವ ವಿವರವನ್ನು ಬದಲಾಯಿಸಬೇಕಾದ ಆಯ್ಕೆಯನ್ನು ಟಿಕ್ ಮಾಡಿ. ಒಂದು ಬಾರಿಗೆ ನೀವು ಮೂರು ಆಯ್ಕೆಯನ್ನು ಮಾಡಬಹುದು.ತಿದ್ದುಪಡಿಯು ಆದಮೇಲೆ ನೆಕ್ಸ್ಟ್ ಬಟನ್ ಮೇಲೆ ಒತ್ತಿ ಆಗ ನಮಗೆ ನಾವು ಬದಲಾಯಿಸಿರುವ ಹಾಗೂ ನಮಗೆ ಬೇಕಾದ ವಿವರವೂ ಇದೆಯಾ ಎಂದು ನೋಡಿ ನಂತರ ನೆಕ್ಸ್ಟ್ ಬಟನ್ ಅನ್ನು ಒತ್ತಿ. ನಂತರ ವಯಸ್ಸಿನ ಸಾಕ್ಷಿಗೆ ಎಸೆಸೆಲ್ಸಿ ಮಾರ್ಕ್ಸ್ ಕಾರ್ಡ್ ಅಥವಾ ಬರ್ತ್ ಸರ್ಟಿಫಿಕೇಟ್ ಹಾಗೂ ವಿಳಾಸದ ಸಾಕ್ಷಿಗೆ ಪಡಿತರ ಚೀಟಿ ಅಥವಾ
ಆಧಾರ್ ಕಾರ್ಡ್ ಅನ್ನು ಫೋಟೋ ತೆಗೆದು ಅಪ್ಲೋಡ್ ಮಾಡಬೇಕು. ಇದಕ್ಕೆ ಮುಖ್ಯವಾದ ವಿಷಯ ಎಂದರೆ ಫೋಟೋಗಳು jpg ಅಥವಾ img ಫಾರ್ಮೇಟ್ ನಲ್ಲಿ ಇರಬೇಕು. ಇದೆಲ್ಲ ಆದ ನಂತರ ದಿಕ್ಲಾರೇಷನ್ ಗೆ ಟಿಕ್ ಮಾರ್ಕ್ ಹಾಕಿ ದಿನಾಂಕ ಹಾಗೂ ಸ್ಥಳವನ್ನು ಧೃಡಿಕಾರಿಸಬೇಕು. ಇನ್ನು ನಾವು ಹಾಕಿರುವ ಅರ್ಜಿಯು ಸರಿಯಾಗಿ ಇದೆ ಎಂದು ಒಮ್ಮೆ ಪರಿಶೀಲಿಸಿ ನಂತರ ಕಂಫರ್ಮ್ ಕೊಟ್ಟರೆ ನಮಗೆ ಒಂದು ಅಪ್ಲಿಕೇಶನ್ ನಂಬರ್ ಬರುತ್ತದೆ. ಈ ಸಂಖ್ಯೆಯನ್ನು ಇಟ್ಟುಕೊಂಡು ಟ್ರ್ಯಾಕ್ ಎಂಬ ಆಯ್ಕೆಯನ್ನು ಆಯ್ದುಕೊಂಡು,ಅಪ್ಲಿಕೇಶನ್ ಟ್ರಾಕ್ ಮಾಡಬಹುದು.