ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ONGC ಸಂಸ್ಥೆಯಿಂದ ಸಿಗಲಿದೆ 48 ಸಾವಿರ ಉಚಿತ ವಿದ್ಯಾರ್ಥಿ ವೇತನ ಈಗಲೇ ಅರ್ಜಿ ಸಲ್ಲಿಸಿ.

ಜಾಹೀರಾತು

ಉನ್ನತ ಶಿಕ್ಷಣ ಅಭ್ಯಾಸ ಮಾಡುವುದು, ದೇಶದ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳಿಂದ ಪದವಿಗಳನ್ನು ಹೊಂದುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಕನಸು. ಆದರೆ ಈ ದುಬಾರಿ ದುನಿಯಾದಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೂ ಈ ಕನಸು ಸಾಕಾರಗೊಳ್ಳುವುದಿಲ್ಲ, ಕುಟುಂಬದ ಆರ್ಥಿಕ ಪರಿಸ್ಥಿತಿಯಿಂದ ಅನೇಕ ಜನರು ಇಂತಹ ಕನಸುಗಳನ್ನು ಮುರಿದು ಕೊಳ್ಳುತ್ತಾರೆ. ಓದಲು ಆಸಕ್ತಿ ಮತ್ತು ಅರ್ಹತೆ ಇದ್ದರೂ ಶಿಕ್ಷಣದಿಂದ ವಂಚಿತರಾಗುತ್ತಾರೆ.

ಅದಕ್ಕಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಹಲವಾರು ಯೋಜನೆಗಳನ್ನು ತಂದು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲ ಆಗುವಂತೆ ಅನೇಕ ರೀತಿಯಾಗಿ ಅನುಕೂಲತೆ ಮಾಡಿ ಕೊಡುತ್ತಿದೆ. ಇದರೊಂದಿಗೆ ಕೆಲವು ಖಾಸಗಿ ಸಂಸ್ಥೆಗಳು ಕೂಡ ಇಂತಹ ಅರ್ಹ ವಿದ್ಯಾರ್ಥಿಗಳಿಗೆ ಸಹಾಯಧನ ರೂಪದಲ್ಲಿ ಸಹಾಯ ಮಾಡಿ ಪ್ರತ್ಯಕ್ಷವಾಗಿ ವಿದ್ಯಾರ್ಥಿಗಳ ಹೇಳಿಕೆಗೆ ಹಾಗೂ ಪರೋಕ್ಷವಾಗಿ ದೇಶ ಕಟ್ಟುವಲ್ಲಿ ತಮ್ಮ ಕೈಲಾದ ಅಳಿಲು ಸೇವೆ ಮಾಡುತ್ತಿದ್ದಾರೆ.

ಸದ್ಯಕ್ಕೆ ದೇಶದ ಅಂತಹದೇ ಒಂದು ಪ್ರತಿಷ್ಠಿತ ಕಂಪನಿ ಆದ ಓಎನ್ಜಿಸಿ (ONGC Scholorship) ಎನ್ನುವ ತೈಲ ಕಂಪನಿಯು ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಕರೆದಿದೆ. ಈ ವಿದ್ಯಾರ್ಥಿ ವೇತನವನ್ನು ಪಡೆಯಲು ಕೆಲವು ಅರ್ಹತೆಗಳನ್ನು ಸಹ ಕಡ್ಡಾಯಗೊಳಿಸಿದೆ. ಅದರ ನಿಯಮಗಳು ಈ ರೀತಿ ಇದೆ. ವಿದ್ಯಾರ್ಥಿಗಳು ಕಡ್ಡಾಯವಾಗಿ ಭಾರತೀಯ ನಾಗರಿಕರಾಗಿರಬೇಕು,.ಈ ವಿದ್ಯಾರ್ಥಿಗಳು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಒಬಿಸಿ, ಸಾಮಾನ್ಯ ವರ್ಗದ ಆರ್ಥಿಕವಾಗಿ ಹಿಂದುಳಿದವರು ಮತ್ತು ದುರ್ಬಲ ವರ್ಗದವರಿಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಟ್ಟಿದೆ.

ಇದರೊಂದಿಗೆ ವಿದ್ಯಾರ್ಥಿಗಳು 12ನೇ ತರಗತಿಯ ಪರೀಕ್ಷೆಯಲ್ಲಿ ಕಡ್ಡಾಯವಾಗಿ ಶೇಕಡ 60ರಷ್ಟು ಗಳನ್ನು ಪಡೆದಿರಬೇಕು ಮತ್ತು ಅವರ ಶಿಕ್ಷಣ ಸಂಸ್ಥೆಯು ಎಐಸಿಟಿಇ, ಯುಸಿಸಿ, ಎಐಯು, ರಾಜ್ಯ ಶೈಕ್ಷಣಿಕ ಮಂಡಳಿ, ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಸಂಸ್ಥೆಗಳಿಗೆ ಅನುಮೋದನೆ ನೀಡಬೇಕು. ಅರ್ಜಿ ಸಲ್ಲಿಸುವವರ ಗರಿಷ್ಠ ವಯಸ್ಸಿನ ಮಿತಿ 30 ವರ್ಷ ಎಂದು ನಿಗದಿಯಾಗಿದೆ.

ಕುಟುಂಬದ ಆದಾಯವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ವರ್ಷಕ್ಕೆ ನಾಲ್ಕೂವರೆ ಲಕ್ಷ ಗಳನ್ನು ಮೀರಿರಬಾರದು ಮತ್ತು ತಿಂಗಳಿಗೆ 37500 ಗಳನ್ನು ಮೀರಿರಬಾರದು. ಸಾಮಾನ್ಯ ಹಾಗೂ ಒಬಿಸಿ ವರ್ಗದ ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯ ಎರಡು ಲಕ್ಷವನ್ನು ಮೀರಿರಬಾರದು. ಈ ಅರ್ಹತೆಗಳು ನಿಮ್ಮಲ್ಲಿ ಇದ್ದರೆ ಆನ್ಲೈನ್ ಮತ್ತು ಆಫ್ಲೈನ್ ಮೂಲಕ ನೀವು ಅರ್ಜಿ ಸಲ್ಲಿಸಬಹುದು. ಇದರೊಂದಿಗೆ ಕೇಳುವ ದಾಖಲಾತಿಗಳು ಈ ರೀತಿ ಇವೆ.

ಇದರ ಪಾಸ್ಪೋರ್ಟ್ ಸೈಜ್ ಫೋಟೋ, ಜಾತಿ ಪ್ರಮಾಣ ಪತ್ರ, ಪದವಿಯ ದಾಖಲಾತಿ ಸಂಖ್ಯೆ, ಹನ್ನೆರಡನೇ ತರಗತಿ ಅಂಕಪಟ್ಟಿ ಮತ್ತು ವಯಸ್ಸಿನ ಪ್ರಮಾಣ ಪತ್ರ, ಬ್ಯಾಂಕ್ ವಿವರಗಳು, ಬ್ಯಾಂಕ್ ಪಾಸ್ ಬುಕ್, ifsc ಕೋಡ್, ಪಾನ್ ಕಾರ್ಡ್, ವಿಳಾಸದ ಪುರಾವೆ ಮತ್ತು ಅರ್ಜಿದಾರರ ಆಧಾರ್ ಕಾರ್ಡ್ ಇವುಗಳನ್ನು ಇಟ್ಟುಕೊಂಡು ಓಎನ್‌ಜಿಸಿ ಯ ವೆಬ್ಸೈಟ್ ಗೆ ಭೇಟಿ ಕೊಡಿ.

ಅಲ್ಲಿ ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಸಲ್ಲಿಸುವ ಆಯ್ಕೆಯನ್ನು ಕ್ಲಿಕ್ ಮಾಡಿ ಕೇಳಲಾದ ಆಪ್ಷನ್ಗಳನ್ನು ಜಾಗೃತಿಯಾಗಿ ಕ್ಲಿಕ್ ಮಾಡುವ ಮೂಲಕ ಅಪ್ಲೋಡ್ ಮಾಡಿ ನಂತರ ಕೇಳಲಾದ ಎಲ್ಲಾ ದಾಖಲಾತಿಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ ಕೊನೆಯಲ್ಲಿ ಸಬ್ಮಿಟ್ ಕೊಟ್ಟರೆ ಕಂಪ್ಯೂಟರ್ ಪರದೆ ಮೇಲೆ ಅಪ್ಲಿಕೇಶನ್ಸ್ ಸಲ್ಲಿಕೆಯು ಪ್ರಕ್ರಿಯೆ ಯಶಸ್ವಿ ಆಗಿರುವ ಸೂಚನೆ ಸಿಗುತ್ತದೆ. ಒಂದು ವೇಳೆ ಆಫ್ ಲೈನ್ ಅಲ್ಲಿ ಅರ್ಜಿ ಸಲ್ಲಿಸಲು ಬಯಸಿದರೆ ಅಧಿಕೃತ ವೆಬ್ಸೈಟ್ ಗೆ ಭೇಟಿಕೊಟ್ಟು ಅರ್ಜಿ ಫಾರಂ ಪ್ರಿಂಟ್ ಔಟ್ ತೆಗೆದುಕೊಂಡು ನಂತರ ಅದನ್ನೆಲ್ಲ ತುಂಬಿಸಿ ಅಗತ್ಯ ದಾಖಲಾತಿಗಳನ್ನು ಲಗತ್ತಿಸಿ ಓಎನ್ಜಿಸಿ ಕಂಪನಿಗೆ ಭೇಟಿ ಕೊಡುವ ಮೂಲಕ ಸಲ್ಲಿಸಬಹುದಾಗಿದೆ.

Leave a Comment

%d bloggers like this: