ರಾಜ್ಯದಲ್ಲಿ ಈ ಬಾರಿ ಬರದ ಪರಿಸ್ಥಿತಿ (drought) ಉಂಟಾಗಿರುವುದರಿಂದ ರೈತರಿಗೆ (farmers) ಹೆಚ್ಚು ನ’ಷ್ಟ ಉಂಟಾಗಿದೆ ಮತ್ತು ರೈತರು ಈಗ ತಮ್ಮ ಕೃಷಿ ಸಾಲ ಮನ್ನಾ (Loan Waiver) ಮಾಡುವಂತೆ ಮನವಿ ಸಲ್ಲಿಸುತ್ತಿದ್ದಾರೆ ಹಾಗೂ ಪ್ರತಿಪಕ್ಷಗಳು ಕೂಡ ಈ ವಿಷಯದ ಕುರಿತಾಗಿ ಸರ್ಕಾರಕ್ಕೆ ಒತ್ತಡ ಹೇರುತ್ತಿವೆ.
ಈ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರು (CM Siddaramaih) ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಸಭೆಯಲ್ಲಿ ಒಂದು ಮಹತ್ವದ ಘೋಷಣೆಯನ್ನು ಮಾಡಿದ್ದಾರೆ. ಬರದ ಪರಿಸ್ಥಿತಿಯಿಂದ ರೈತರಿಗೆ ಕ’ಷ್ಟವಾಗಿರುವುದು ನಿಜ ಆದರೆ ರೈತರ ಸಾಲ ಮನ್ನಾ ಮಾಡಲು ಈ ವರ್ಷ ಸಾಧ್ಯವಾಗುತ್ತಿಲ್ಲ ಆದರೆ ರೈತರ ಸಾಲಗಳ ಮೇಲಿನ ಬಡ್ಡಿಮನ್ನ ಮಾಡಲಾಗುವುದು, ಇದಕ್ಕೆ ಕಂಡಿಶನ್ ಗಳಿವೆ ಎನ್ನುವಂತಹ ಉತ್ತರವನ್ನು ನೀಡಿದ್ದಾರೆ.
ಇದರ ವಿವರದ ಬಗ್ಗೆ ಈ ಅಂಕಣದಲ್ಲಿ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದೇವೆ ಮುಂಗಾರು ಮಳೆ ಕೈಕೊಟ್ಟ ಬಳಿಕ ಈ ವರ್ಷ ವ್ಯವಸಾಯ ನೆಲಕಚ್ಚುತ್ತದೆ ಎನ್ನುವ ಸುಳಿವು ಸಿಕ್ಕುತ್ತಿದ್ದಂತೆ ಮಾನ್ಯ ಮುಖ್ಯಮಂತ್ರಿಗಳು ಕಳೆದ ಮೂರು ನಾಲ್ಕು ತಿಂಗಳು ಬರಪೀಡಿತ ತಾಲೂಕುಗಳ ಪ್ರದೇಶದಲ್ಲಿರುವ ಬ್ಯಾಂಕ್ ಗಳು ಸಂಘ-ಸಂಸ್ಥೆಗಳು ಮತ್ತು ದೇವಾ ದೇವಿಗಳ ಬಳಿ ರೈತರು ಸಾಲ ಮಾಡಿದ್ದರೆ ಅವರಿಗೆ ಸಾಲ ಮರುಪಾವತಿ ಮಾಡುವುದಕ್ಕೆ ಒತ್ತಡ ಹೇರಬಾರದು ಮತ್ತು ಸಮಯಾವಕಾಶವನ್ನು ಇನ್ನಷ್ಟು ವಿಸ್ತರಿಸಬೇಕು ಎಂದು ಆಜ್ಞಾಪಿಸಿದ್ದರು.
ಈಗ ಮುಂದುವರೆದು ವಿಧಾನ ಸೌಧದ ಅಂಗಳದಲ್ಲಿ ಕೂಡ ರೈತರ ಸಾಲ ಮನ್ನಾ ಬಗ್ಗೆ ಹೆಚ್ಚು ಚರ್ಚೆ ಆಗುತ್ತಿದೆ ಮತ್ತು ರೈತರ ಪರವಾಗಿ ಸಾಲ ಮನ್ನಾ ಮಾಡುವಂತೆ ಪತಿಪಕ್ಷಗಳಿಂದ ಕೂಗು ಕೇಳಿ ಬರುತ್ತಿದೆ. ಸಹಕಾರಿ ಸಂಘಗಳಲ್ಲಿ (Co-operative bank loan) ಸಾಮಾನ್ಯವಾಗಿ ರೈತರು ಕೃಷಿ ಸಾಲ ಪಡೆಯುತ್ತಾರೆ. ಸಹಕಾರಿ ಸಂಘಗಳಲ್ಲಿ ಅಲ್ಪಾವಧಿ ಮಾಧ್ಯಮಾವತಿ ಹಾಗೂ ದೀರ್ಘಾವಧಿ ಸಾಲಗಳನ್ನು ನೀಡಲಾಗುತ್ತದೆ.
ಮತ್ತು ರಾಜ್ಯದಲ್ಲಿ ಬರಗಾಲದ ಪರಿಸ್ಥಿತಿ ಉಂಟಾದಾಗ ಅಥವಾ ಚುನಾವಣೆ ಸಮಯದಲ್ಲಿ ಪ್ರಣಾಳಿಕೆಯಲ್ಲಿ ಸಹಕಾರಿ ಸಂಘಗಳ ಸಾಲ ಮನ್ನಾ ಮಾಡುವ ಬಗ್ಗೆ ಘೋಷಣೆಗಳ ನಿರೀಕ್ಷೆ ಮಾಡಲಾಗುತ್ತದೆ. ರಾಜ್ಯದಲ್ಲಿ ನೂತನ ಸರ್ಕಾರ ಸ್ಥಾಪನೆಯಾದ ಮೇಲೆ ಮುಖ್ಯಮಂತ್ರಿಗಳಿಂದ ಮಂಡನೆಯಾದ ಬಜೆಟ್ ನಲ್ಲಿ ಸಹಕಾರಿ ಸಂಘಗಳಲ್ಲಿನ ಅಲ್ಪಾವಧಿ ಸಾಲದ ಮೊತ್ತವನ್ನು 3 ಲಕ್ಷದಿಂದ 5 ಲಕ್ಷಕ್ಕೆ ಮತ್ತು ಮಧ್ಯಮಾವತಿ ಸಾಲವನ್ನು 10 ರಿಂದ 20 ಲಕ್ಷಕ್ಕೆ ಏರಿಸಿದ್ದಾರೆ.
ಈ ಅನುಕೂಲದ ಬಗ್ಗೆ ಕೂಡ ಮಾತನಾಡಿದ ಅವರು ಈ ಹಿಂದೆ BJP ಸರ್ಕಾರವು ಅಧಿಕಾರಿಗಳಿದ್ದಾಗ ರೈತ ಸಹಕಾರಿ ಸಂಘಗಳ 1 ಲಕ್ಷದವರೆಗೆ ಸಾಲ ಮನ್ನಾ ಮಾಡುವ ಬಗ್ಗೆ ಘೋಷಣೆ ಕೊಟ್ಟಿದ್ದರು ಆದರೆ ಹಣ ಬಿಡುಗಡೆ ಮಾಡಲೇ ಇಲ್ಲ ಎನ್ನುವ ವಿಷಯ ಪ್ರಸ್ತಾಪಿಸಿ ಪ್ರತಿಪಕ್ಷಗಳಿಗೆ ಉತ್ತರ ಕೊಟ್ಟು ಸದ್ಯದ ಪರಿಸ್ಥಿತಿಯಲ್ಲಿ ಸಾಲ ಮನ್ನಾ ಮಾಡುವ ಪ್ರಶ್ನೆ ಸರ್ಕಾರದ ಮುಂದಿಲ್ಲ ಆದರೆ ರೈತರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ರೈತರ ಸಾಲ ಮನ್ನಾ ಮಾಡುತ್ತೇವೆ.
ಅಲ್ಪಾವಧಿ ಸಾಲ ಪಡೆಯುವ ರೈತರಿಗೆ ಬಡ್ಡಿ ರಹಿತವಾಗಿ ಸಾಲ ನೀಡಲಾಗುತ್ತಿದೆ, ಇಂತಹ ಸಾಲಗಳನ್ನು ಸಣ್ಣ ರೈತರು ಪಡೆಯುತ್ತಾರೆ. ದೀರ್ಘಾವಧಿ ಹಾಗೂ ಮಾಧ್ಯಮಾವತಿ ಸಾಲ ಪಡೆಯುವ ರೈತರಿಗೆ 3% ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತದೆ. ಈಗ ಆ ಸಾಲದ ಮೇಲಿನ ಬಡ್ಡಿಗಳನ್ನು (loan intrest waiver) ಮನ್ನ ಮಾಡಲಿದ್ದೇವೆ. ಆದರೆ ಯಾವ ರೈತರು ಸಾಲ ತೆಗೆದುಕೊಂಡು ಅದನ್ನು ನಿಗದಿತ ಗಡಿಯ ಒಳಗೆ ಹಿಂತಿರುಗಿಸುತ್ತಾರೋ ಅಂತಹ ರೈತರಿಗೆ ಮಾತ್ರ ಇದು ಅನ್ವಯವಾಗಲಿದೆ ಎನ್ನುವ ಕಂಡೀಶನ್ ಕೂಡ ಹಾಕಿದ್ದಾರೆ.