ಸೈಟ್ ಗಳಲ್ಲಿ ಕೆಲವೊಂದು ಮರಗಳು ಬೆಳೆದಿರುತ್ತವೆ. ನಾವು ಆ ಜಾಗದಲ್ಲಿ ಮನೆ ಕಟ್ಟಬೇಕಾಗಿ ಬಂದಾಗ ಕೆಲವರು ಸೇಫ್ಟಿ ಕಾರಣದಿಂದ ಇನ್ನು ಕೆಲವರು ಮನೆಗೆ ಚೆನ್ನಾಗಿರುವುದಿಲ್ಲ ಎನ್ನುವ ಕಾರಣ ಕೊಟ್ಟು ಮರ ತೆಗೆಸಿ ಮನೆ ಕಟ್ಟಲು ಇಷ್ಟಪಡುತ್ತಾರೆ. ಆದರೆ ಅದಕ್ಕೂ ಮುನ್ನ ನೀವು ಕೆಲವು ಅಂಶಗಳನ್ನು ತಿಳಿದುಕೊಂಡಿರಲೇಬೇಕು.
ಸಾಮಾನ್ಯವಾಗಿ ಬೆಂಗಳೂರಿನಲ್ಲಿ ಸೈಟ್ ಇದ್ದು ಮನೆ ಕಟ್ಟುತ್ತೀರ ಎಂದರೆ ನಿಮ್ಮ ಸೈಟ್ ನಲ್ಲಿ ಇರುವ ಮರ ತೆಗೆಸುವುದು ಅಷ್ಟು ಸುಲಭದ ಕೆಲಸವಲ್ಲ, ಇದಕ್ಕೆ ಸಾಕಷ್ಟು ಪರ್ಮಿಷನ್ ಗಳನ್ನು ನೀವು ಪಡೆದುಕೊಳ್ಳಬೇಕು. ಬೆಂಗಳೂರು ಹೊರತುಪಡಿಸಿ ಬೇರೆ ಹಳ್ಳಿಗಳ ಕಡೆ ಇದ್ದಾಗ ಅಷ್ಟೇನೂ ಪರ್ಮಿಷನ್ ಬಗ್ಗೆ ಯಾರು ತಲೆ ಕೆಡಿಸಿಕೊಳ್ಳುವುದಿಲ್ಲ ತೆಗೆಸಿ ಹಾಕಿಬಿಡುತ್ತಾರೆ.
ಆದರೆ ಮಾನವೀಯತೆ ದೃಷ್ಟಿಯಿಂದ ನೋಡುವುದಾದರೆ ಈ ರೀತಿ ಮಾಡುವುದು ತಪ್ಪು. ನಮಗೆ ಆ ಮರದಿಂದ ಏನು ತೊಂದರೆ ಆಗುತ್ತಿಲ್ಲ ಸ್ವಲ್ಪ ದೂರದಲ್ಲಿಯೇ ಇದೆ ಎಂದರೆ ತೆಗೆಯುವ ಅವಶ್ಯಕತೆ ಇಲ್ಲ. ಒಂದು ವೇಳೆ ನೀವು ತೆಗೆದಿದ್ದೆ ಆದರೆ ಎಲ್ಲರೂ ಈ ರೀತಿ ಮರ ತೆಗೆಯುತ್ತಾ ಹೋದರೆ ನಮಗೆ ಮತ್ತು ನಮಗಿಂತ ಹೆಚ್ಚಾಗಿ ಮುಂದಿನ ನಮ್ಮ ಪೀಳಿಗೆಗೆ ಬಹಳ ತೊಂದರೆ ಆಗುತ್ತದೆ.
ಈ ಸುದ್ದಿ ಓದಿ:- ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ನಲ್ಲಿ ಉದ್ಯೋಗವಕಾಶ, ಬ್ಯಾಂಕ್ ಸಹಾಯಕರ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ ವೇತನ 87,125/-
ಪರಿಸರದ ಮೇಲೆ ಬಹಳ ದುಷ್ಪರಿಣಾಮ ಬೀರುತ್ತದೆ ಹಾಗಾಗಿ ಮರ ಉಳಿಸಬೇಕು ಈ ಕಾರಣಕ್ಕಾಗಿಯೇ ಇಷ್ಟು ಕಠಿಣ ನಿಯಮಗಳನ್ನು ತರಲಾಗಿರುವುದು. ಜನರು ಬೇರೆ ಕಡೆಗಳಲ್ಲಿ ಪಂಚಾಯಿತಿಗೆ ಒಂದು ಅರ್ಜಿ ಕೊಟ್ಟು ಪರ್ಮಿಷನ್ ಪಡೆದು ತೆಗೆದುಬಿಡುತ್ತಾರೆ ಇನ್ನು ಕೆಲವರು ಹಾಗೆಯೇ ರಾತ್ರೋ ರಾತ್ರಿ ತೆಗೆದುಬಿಡುತ್ತಾರೆ.
ಹೀಗೆ ಮಾಡಬೇಡಿ ಒಂದು ವೇಳೆ ಅವಶ್ಯಕತೆ ತೆಗೆಯಲೇಬೇಕಾದ ಪರಿಸ್ಥಿತಿ ಇದ್ದರೆ ಅದರ ಬದಲು ಬೇರೆ ಕಡೆ ಒಂದು ಮರ ನೆಟ್ಟು ನಂತರ ತೆಗೆಯಿರಿ. ಒಂದು ವೇಳೆ ನೀವು ಬೆಂಗಳೂರಿನ ವ್ಯಾಪ್ತಿಯಲ್ಲಿರುವ ನಿಮ್ಮ ಸೈಟ್ ನಲ್ಲಿದ್ದ ಮರವನ್ನು ಈ ರೀತಿ ಹೇಳದೆ ಕೇಳದೆ ತೆಗೆದುಬಿಟ್ಟರೆ ನಿಮಗೆ ಮನೆ ಕಟ್ಟಲು ಸಾಧ್ಯವಾಗುವುದಿಲ್ಲ.
ಅಷ್ಟೊಂದು ತೊಂದರೆಗಳನ್ನು ನೀವು ಅನುಭವಿಸಬೇಕಾಗುತ್ತದೆ ಯಾಕೆಂದರೆ ಅಷ್ಟು ಕಟ್ಟುನಿಟ್ಟಾದ ನಿಯಮಗಳಿವೆ ಬೆಂಗಳೂರಿನಲ್ಲಿರುವ ನಿಮ್ಮ ಸೈಟ್ ನಲ್ಲಿ ಮರ ಕಡಿಯಬೇಕು ಎಂದರೆ ಮಲ್ಲೇಶ್ವರಂ ನಲ್ಲಿರುವ ಅರಣ್ಯ ಇಲಾಖೆಗೆ ನೀವು ಮೊದಲಿಗೆ ಪರ್ಮಿಷನ್ ಗಾಗಿ ಅರ್ಜಿ ಹಾಕಬೇಕು.
ಈ ಸುದ್ದಿ ಓದಿ:-ಇನ್ಮುಂದೆ ಬಡವರಿಗೆ 6 ತಿಂಗಳಲ್ಲಿ ನ್ಯಾಯ ಸಿಗುತ್ತೆ, ಸಿವಿಲ್ ಪ್ರೊಸೀಜರ್ ಕೋಡ್ ತಿದ್ದುಪಡಿ, ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!
e-permit ಪೋರ್ಟೆಲ್ ಮೂಲಕ ಆನ್ಲೈನಲ್ಲಿಯೂ ಹಾಕಬಹುದು, ಅರ್ಜಿ ಸಲ್ಲಿಸುವಾಗಲೇ ಯಾವ ಕಾರಣಕ್ಕಾಗಿ ತೆಗೆಯುತ್ತಿದ್ದೀರಾ ಎನ್ನುವ ಜಸ್ಟಿಫಿಕೇಶನ್ ಕೊಡಬೇಕು. ಅಧಿಕಾರಿಗಳು ಬಂದು ಸ್ಥಳ ಪರಿಶೀಲನೆ ಮಾಡಿ ನಿಜವಾಗಲೂ ತೊಂದರೆ ಆಗುವ ರೀತಿ ಇದ್ದರೆ ಅನುಮತಿ ನೀಡುತ್ತಾರೆ, ಅದಕ್ಕೆ ನೀವು ಶುಲ್ಕವನ್ನು ಪಾವತಿ ಮಾಡಿ ನಂತರ ನೀವು ತೆಗೆಸಬಹುದು ಅಥವಾ BBMP ಅವರೇ ಬಂದು ಕಡಿದು ತೆಗೆದುಕೊಂಡು ಹೋಗುತ್ತಾರೆ.
ಪರ್ಮಿಷನ್ ಇಷ್ಟೇ ದಿನಕ್ಕೆ ಸಿಗುತ್ತದೆ ಎಂದು ಹೇಳಲು ಆಗುವುದಿಲ್ಲ ತುಂಬಾ ದೊಡ್ಡ ದೊಡ್ಡ ಮರಗಳು, ವಯಸ್ಸಾದ ಮರಗಳು ಇದ್ದರೆ 15 ದಿನಕ್ಕಿಂತ ಹೆಚ್ಚಿನ ಕಾಲವು ಆಗಬಹುದು. ಮನೆ ಕಟ್ಟಿಸುವಾಗ ಮಾತ್ರವಲ್ಲದೆ ಮನೆ ಕಟ್ಟಿದ ಮೇಲೆ ಮನೆ ಅಕ್ಕ ಪಕ್ಕ ಅಥವಾ ಈಗಾಗಲೇ ಮನೆಗಳಿಗೆ ಕಾಂಪೌಂಡ್ ಒಳಗೆ ಸೇರಿಸಿಕೊಂಡಿರುವ ಮರಗಳನ್ನು ಯಾವುದಾದರೂ ಕಾರಣದಿಂದ ತೆಗೆದು ಹಾಕಬೇಕು ಎಂದರು.
ಈ ರೀತಿಯ ಕ್ರಮ ಕೈಗೊಳ್ಳಬೇಕು ಜೊತೆಗೆ ತೆಗೆಸಿ ಹಾಕುವುದು ಅಷ್ಟು ಸುಲಭವಲ್ಲ ಆ ಸಮಯದಲ್ಲಿ ತುಂಬಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಯಾರ ಮೇಲೂ ಬಿಡಬಾರದು, ಯಾರ ಮನೆಗಳ ಮೇಲೂ ಬೀಳಬಾರದು ಮತ್ತು ತೆಗೆಯುವ ವ್ಯಕ್ತಿಯ ಸೇಫ್ಟಿಯೂ ಅಷ್ಟೇ ಮುಖ್ಯ ಇಷ್ಟೆಲ್ಲ ಜಾಗೃತೆ ವಹಿಸಿ ತೆಗೆಯಬೇಕು ಮತ್ತು ಇದಕ್ಕೆ ಇನ್ನೇನು ನಿಯಮಗಳು ಸೇರುತ್ತವೆ ಎನ್ನುವ ಎಲ್ಲಾ ಮಾಹಿತಿ ತಿಳಿದುಕೊಳ್ಳಲು ವಿಡಿಯೋವನ್ನು ಪೂರ್ತಿಯಾಗಿ ನೋಡಿ.