ಒಂದು ಕಾಲದಲ್ಲಿ ರವಿಚಂದ್ರನ್ ಅವರ ಸಿನಿಮಾಗಳು ಕನ್ನಡ ಚಿತ್ರರಂಗವೇ ಹಿಂತಿರುಗಿ ನೋಡುವಂತಹ ಅಂತಹ ಹಿಟ್ ಸಿನಿಮಾಗಳನ್ನು ನೀಡಿದಂತಹ ರವಿಚಂದ್ರನ್ ಇತ್ತೀಚೆಗೆ ಇವರ ನಟನೆಯ ಸಿನಿಮಾಗಳು ಸೋಲುತ್ತಿವೆ, ಅವರು ಮನೆಯನ್ನು ಬದಲಾಯಿಸಿದ್ದಾರೆ. ಜೀ ಕನ್ನಡ ವಾಹಿನಿಯ ಕಾರ್ಯಕ್ರಮ ಒಂದರಲ್ಲಿ ತಿಳಿಸಿದ್ದಾರೆ. ಕಾಮಿಡಿ ಕಿಲಾಡಿಗಳು, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸರಿಗಮಪ ಮಹಾಸಂಚಿಕೆಯಲ್ಲಿ ರವಿಚಂದ್ರನ್ ಅವರು ಭಾವುಕರಾಗಿ ಸಿನಿಮಾ ಮಾಡಿ ಹಣ ಕಳೆದುಕೊಂಡ ಬಗ್ಗೆ, ಸಿನಿಮಾಗಳು ಸೋಲುತ್ತಿರುವ ಬಗ್ಗೆ, ಮನೆ ಬದಲಾಯಿಸಿದ ಬಗ್ಗೆ ಮಾತನಾಡಿದ್ದಾರೆ. ಪ್ರೇಮಲೋಕ, ರಣಧೀರ ಸಿನಿಮಾಗಳು ನಮ್ಮನ್ನು ಎಲ್ಲೋ ಕರೆದುಕೊಂಡು ಹೋಗುತ್ತವೆ. ಇತ್ತೀಚೆಗೆ ನನ್ನ ಸಿನಿಮಾಗಳನ್ನು ಜನರು ನೋಡುತ್ತಿಲ್ಲವೋ ಇಷ್ಟಪಡುತ್ತಿಲ್ಲವೋ ಎಂದು ತಿಳಿಯುತ್ತಿಲ್ಲ.
20 ವರ್ಷದಿಂದ ನನ್ನ ಮನಸ್ಸಿಗೆ ಬಂದದ್ದನ್ನು ನಾನು ಮಾಡಿದ್ದೇನೆ. ನಾನು ಈ ವೇದಿಕೆಗೆ ಬಂದಿರೋದು ನನ್ನನ್ನು ಬದಲಾಯಿಸಿಕೊಳ್ಳೋಕೆ. ನಾನು ಇನ್ನು ಏಕಾಂಗಿ ಪಾತ್ರ ಮಾಡೋದಿಲ್ಲ, ಒಬ್ಬರೇ ಖುಷಿಯಾಗಿರಿ ಎನ್ನುತ್ತಿದ್ದೆವು, ಈಗ ಎಲ್ಲರೂ ಖುಷಿಯಾಗಿರೋಣ ಅಂತ ಹೇಳುತ್ತೇನೆ. ಒಂದು ತಿಂಗಳ ಹಿಂದೆ ನಾನು ಮನೆ ಖಾಲಿಯಾದಾಗ, ದುಡ್ಡು ಕಳೆದುಕೊಂಡೆ, ಮನೆ ಖಾಲಿ ಮಾಡಿದ ಅಂತ ಕೆಲವರು ಹೇಳಿದರು. ನಾನು ಈಗ ದುಡ್ಡು ಕಳೆದುಕೊಂಡೆ, 30 ವರ್ಷದಿಂದ ನಿಮಗೋಸ್ಕರ, ನಿಮ್ಮನ್ನು ಮೆಚ್ಚಿಸಲು ದುಡ್ಡು ಕಳೆದುಕೊಂಡೆ. ಇಂದು ಏನೇ ಆದರೂ ರವಿಚಂದ್ರನ್, ರವಿಚಂದ್ರನ್ ಅವರನ್ನು ಗೆಲ್ಲೋಕೆ ಆಗ್ತಿಲ್ಲ. ನಾನು ಯಾರಿಗೂ ಕಾಂಪಿಟೇಟರ್ ಅಲ್ಲ ನನ್ನನ್ನು ನಾನು ಗೆಲ್ಲಬೇಕು. ಎಲ್ಲರೂ ಮೆಚ್ಚುವಂತ ಸಿನಿಮಾವನ್ನು ನಾನು ಮಾಡುತ್ತೇನೆ ಎನ್ನುವ ನಂಬಿಕೆ ನನಗಿದೆ. ದುಡ್ಡಿಗಾಗಿ ನಾನು ದುಡಿಯಲಿಲ್ಲ.
ನಾನು ಇಂದು ಸಂಪಾದನೆ ಮಾಡುತ್ತಿದ್ದೇನೆ ಯಾಕೆ ಇಲ್ಲಿಗೆ ಬಂದು ಕೂರುತ್ತೀನಿ ಅಂದರೆ ಹಣ ಬೇಕು, ನಾನು ಐಷಾರಾಮಿಯಾಗಿ ಬದುಕಬೇಕು ಅಂತ ಸಂಪಾದನೆ ಮಾಡುತ್ತಿಲ್ಲ, ಅದ್ದೂರಿಯಾಗಿ ಸಿನಿಮಾ ಮಾಡಲು ದುಡಿಯುತ್ತಿದ್ದೇನೆ ಎಂದು ವೇದಿಕೆ ಮೇಲೆ ಕಣ್ಣೀರು ಹಾಕಿದ್ದಾರೆ. ರವಿಚಂದ್ರನ್ ಅವರು ಯಾವಾಗಲೂ ಸಹ ಈ ರೀತಿಯಾದಂತಹ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಯಾರೊಂದಿಗೂ ಹಂಚಿಕೊಂಡಿರಲಿಲ್ಲ ಆದರೆ ಜೀ ಕನ್ನಡ ವಾಹಿನಿ ಯಾವುದು ಕಾರ್ಯಕ್ರಮ ಒಂದರಲ್ಲಿ ತಮ್ಮ ಮನಸ್ಸನಲ್ಲಿ ಇರುವಂತಹ ಎಲ್ಲಾ ನೋವುಗಳನ್ನು ಹೊರ ಹಾಕಿಕೊಂಡಿದ್ದಾರೆ ಇದನ್ನು ನೋಡಿದಂತಹ ಚಿತ್ರರಂಗದಲ್ಲಿ ಇರುವ ಸಾಕಷ್ಟು ನಟರು ಇವರಿಗೆ ಸಮಾಧಾನವನ್ನು ತಿಳಿಸಿದ್ದಾರೆ.
ಅದರಲ್ಲಿ ನಟ ದರ್ಶನ್ ಅವರು ಸಹ ರವಿಚಂದ್ರನ್ ಅವರಿಗೆ ಸಾಂತ್ವನದ ಮಾತುಗಳನ್ನು ಹೇಳಿದ್ದಾರೆ ನಿಮ್ಮ ಜೊತೆಯಲ್ಲಿ ನಾವು ಇದ್ದೇವೆ ಕನ್ನಡ ಚಿತ್ರರಂಗ ಎಂದು ನಿಮ್ಮನ್ನು ಕೈ ಬಿಡುವುದಿಲ್ಲ. ನಿಮಗೆ ಯಾವುದೇ ರೀತಿಯಾದಂತಹ ತೊಂದರೆಗಳು ಬಂದರೂ ಅದನ್ನು ನಾವು ನೋಡಿಕೊಳ್ಳುತ್ತೇವೆ ಎಂದು ದರ್ಶನ್ ಅವರು ತಿಳಿಸಿದ್ದಾರೆ. ಈಗ ರವಿಚಂದ್ರನ್ ಅವರು ಸೋತಿರಬಹುದು ಆದರೆ ಮುಂದಿನ ದಿನಗಳಲ್ಲಿ ರವಿಚಂದ್ರನ್ ಅವರ ಸಿನಿಮಾಗಳು ಗೆದ್ದೇ ಗೆಲ್ಲುತ್ತವೆ ಆ ಒಂದು ದಿನ ಬಂದೇ ಬರುತ್ತದೆ ಆ ದಿನಕ್ಕಾಗಿ ಎಲ್ಲರೂ ಕಾಯುತ್ತಿರಿ ಎಂದು ಹೇಳಿದ್ದಾರೆ. ಈ ರೀತಿಯಾದಂತಹ ಸಮಾಧಾನದ ಮಾತುಗಳನ್ನು ನಟ ದರ್ಶನ ಹಾಗೂ ಯಶ್, ಸುದೀಪ್ ಇನ್ನಿತರ ನಟರುಗಳು ರವಿಚಂದ್ರನ್ ಅವರಿಗೆ ಸಮಾಧಾನವಾದಂತಹ ಮಾತುಗಳನ್ನು ತಿಳಿಸಿದ್ದಾರೆ. ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ಕಮೆಂಟ್ಸ್ ಮೂಲಕ ತಿಳಿಸಿ.