ಕರ್ನಾಟಕ ಸರ್ಕಾರ (Government) ನೀಡಿದ ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆ (Gruhalakshmi Scheme) ಕೂಡ ಒಂದು. ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿರುವ ಕರ್ನಾಟಕದ ಕುಟುಂಬದ ಯಜಮಾನ ಮಹಿಳೆ ಖಾತೆಗೆ ಹಣ ವರ್ಗಾವಣೆ ಮಾಡಲು ಆಗಸ್ಟ್30 ರಿಂದಲೇ ಚಾಲನೆ ನೀಡಲಾಗಿದೆ.
ಅರ್ಜಿ ಸಲ್ಲಿಸಿದ 70%-80% ಮಹಿಳೆಯರು ಈಗಾಗಲೇ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪಡೆದಿದ್ದಾರೆ ಹಣ ಪಡೆಯಲಾಗದವರಿಗೆ ಯಾವ ಕಾರಣದಿಂದ ಸಮಸ್ಯೆಯಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಇಲಾಖೆ ಮಾಹಿತಿ ನೀಡಿದೆ. ಈ ತಪ್ಪುಗಳನ್ನು ಸರಿಪಡಿಸಿಕೊಂಡವರು ಖಂಡಿತವಾಗಿಯೂ ಒಟ್ಟಿಗೆ ಎರಡು ಕಂತುಗಳ ಹಣವನ್ನು ಪಡೆಯಲಿದ್ದಾರೆ.
ಆದರೆ ಇನ್ನೂ ಅನೇಕರಿಗೆ ತಮ್ಮ ಗೃಹಲಕ್ಷ್ಮಿ ಯೋಜನೆಗೆ ಸ್ಟೇಟಸ್ (application status) ಏನಾಗಿದೆ ಎಂದು ತಿಳಿದುಕೊಳ್ಳಲು ಆಗುತ್ತಿಲ್ಲ ಹಾಗಾಗಿ ಸುಲಭವಾಗಿ ಹೇಗೆ ಗೃಹಲಕ್ಷ್ಮಿ ಯೋಜನೆ ಸ್ಟೇಟಸ್ ತಿಳಿದುಕೊಳ್ಳಬಹುದು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಸಿ ಕೊಡುತ್ತಿದ್ದೇವೆ.
● ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಇರುವ ಸೇವಾ ಸಿಂಧು ಪೋರ್ಟಲ್ ಗೆ (Sevasindhu portal) ಭೇಟಿ ನೀಡುವ ಮೂಲಕ ನೀವು ಗೃಹಲಕ್ಷ್ಮಿ ಯೋಜನೆ ಸ್ಟೇಟಸ್ ತಿಳಿದುಕೊಳ್ಳಬಹುದುಹ
● ಮೊದಲಿಗೆ ನೇರವಾಗಿ
https://sevasindhugs.karnataka.gov.in/ ಲಿಂಕ್ ಕ್ಲಿಕ್ ಮಾಡಿ ನೇರವಾಗಿ ವೆಬ್ಸೈಟ್ ಗೆ ಹೋಗಬಹುದು. ಮುಖಪುಟದಲ್ಲಿ ಗ್ಯಾರಂಟಿ ಯೋಜನೆಗಳ ಆಪ್ಷನ್ ಇರುತ್ತದೆ ಅದರಲ್ಲಿ ಗೃಹಲಕ್ಷ್ಮಿ ಯೋಜನೆ ಸೆಲೆಕ್ಟ್ ಮಾಡಿ, ರೇಷನ್ ಕಾರ್ಡ್ ಸಂಖ್ಯೆಯನ್ನು ಕೇಳಲಾಗುತ್ತದೆ. RD ನಂಬರ್ ಹಾಕಿ ಸಬ್ಮಿಟ್ ಕೊಟ್ಟರೆ ರೇಷನ್ ಕಾರ್ಡ್ ನಂಬರ್ ಫಲಾನುಭವಿಯ ಹೆಸರು ಅರ್ಜಿ ಸ್ಥಿತಿ, ಪಾವತಿ ಸ್ಥಿತಿ ಇತ್ಯಾದಿ ಸಂಪೂರ್ಣ ವಿವರ ಬರುತ್ತದೆ.
ತವರು ಮನೆಯಿಂದ ಈ ವಸ್ತುಗಳನ್ನು ತಂದರೆ ಗಂಡನಿಗೆ ಕಷ್ಟ ತಪ್ಪಿದ್ದಲ್ಲ.! ಯಾವ್ಯಾವ ವಸ್ತುಗಳು ಗೊತ್ತಾ.?
ಅರ್ಜಿ ಸ್ಥಿತಿಯಲ್ಲಿ ಅಪ್ಲಿಕೇಶನ್ ರಿಸೀವ್ಡ್ ಎಂದು ಬಂದಿದ್ದರೆ ನಿಮ್ಮ ಅರ್ಜಿ ಸಲ್ಲಿಕೆ ಯಶಸ್ವಿಯಾಗಿದೆ ಎಂದರ್ಥ. ಒಂದು ವೇಳೆ ಈ ರೀತಿ ಬರದೇ ಇದ್ದರೆ ನೀವು ಮತ್ತೊಂದೇ ಬಾರಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಪಾವತಿ ಸ್ಥಿತಿಯಲ್ಲಿ Pending, push to DBT, Payment in Processing ಎನ್ನುವ ಆಪ್ಷನ್ ಇರುತ್ತದೆ. Pending ಎಂದು ಇದ್ದರೆ ಅರ್ಜಿಯನ್ನು ಪರಿಶೀಲನೆ ಮಾಡಲಾಗುತ್ತಿದೆ ಎಂದರ್ಥ, Push to DBT ಎಂದಿದ್ದರೆ ನಿಮ್ಮ ಹಣವನ್ನು DBT ಗೆ ವರ್ಗಾಯಿಸಲಾಗಿದೆ ಎಂದರ್ಥ, Payment in processing ಎಂದು ಇದ್ದರೆ ಶೀಘ್ರದಲ್ಲೇ ನಿಮ್ಮ ಖಾತೆಗೆ ಹಣ ಬರಲಿದೆ ಆ ಪ್ರಕ್ರಿಯೆಯಲ್ಲಿದೆ ಎಂದರ್ಥ.
● ನೀವು ಗೃಹಲಕ್ಷ್ಮಿ ಯೋಜನೆಯ ಸಹಾಯವಾಣಿ ಸಂಖ್ಯೆಯಾದ 8147500500, 8277000555 ಈ ಸಂಖ್ಯೆಗೆ ಫಲಾನುಭವಿಯ ಆಧಾರ್ ಕಾರ್ಡ್ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯಿಂದ ಪಡಿತರ ಚೀಟಿ ಸಂಖ್ಯೆಯನ್ನು SMS ಮಾಡಿ ಕಳುಹಿಸುವ ಮೂಲಕ ನಿಮ್ಮ ಅರ್ಜಿ ಸಲ್ಲಿಕೆ ಯಶಸ್ವಿಯಾಗಿದೆಯೇ ಇಲ್ಲವೇ ಎನ್ನುವುದನ್ನು ತಿಳಿದುಕೊಳ್ಳಬಹುದು.
ಹಿರಿಯ ನಾಗರಿಕರಿಗೆ ಪ್ರತಿ ತಿಂಗಳು 25,000 ರೂಪಾಯಿ ನೀಡುವ ಪಿಂಚಣಿ ಯೋಜನೆ ಜಾರಿ.!
● ನೀವು SMS ಮಾಡಿದ ತಕ್ಷಣ ನಿಮ್ಮ ಅರ್ಜಿ ಸಲ್ಲಿಕೆ ಯಶಸ್ವಿಯಾಗಿದೆ ಎನ್ನುವ ರಿಪ್ಲೈ ಬರುತ್ತದೆ ಅರ್ಜಿ ಸಲ್ಲಿಕೆ ಯಶಸ್ವಿಯಾಗದೆ ಇದ್ದರೆ ಕೂಡಲೇ ಹತ್ತಿರದ ಸೇವಾಕೇಂದ್ರಕ್ಕೆ ಭೇಟಿ ಕೊಡಿ ಎಂದು ಬರುತ್ತದೆ.
● ಸೇವಾ ಸಿಂಧು ಪೋರ್ಟಲ್ ಹೆಚ್ಚು ಜನ ಉಪಯೋಗಿಸುವುದರಿಂದ ಒತ್ತಡವಾಗಿ ಅಥವಾ ಸರ್ವರ್ ಸಮಸ್ಯೆಯಿಂದ ಬಹಳ ಜನರಿಗೆ ಸ್ಟೇಟಸ್ ತಿಳಿದುಕೊಳ್ಳಲಾಗುತ್ತಿಲ್ಲ. ಅವರಿಗೆ ಮತ್ತೊಂದು ಆಯ್ಕೆಯನ್ನು ಸರ್ಕಾರ ನೀಡಿದೆ. ಹತ್ತಿರದಲ್ಲಿರುವ ಯಾವುದೇ ಸೇವಾಕೇಂದ್ರಕ್ಕೆ ಭೇಟಿ ಕೊಡುವ ಮೂಲಕ ನಿಮ್ಮ ಗೃಹಲಕ್ಷ್ಮಿ ಯೋಜನೆಯ ಸ್ಥಿತಿ ಏನಾಗಿದೆ ಎಂದು ತಿಳಿದುಕೊಳ್ಳಬಹುದು.