ರಾಷ್ಟ್ರೀಯ ಭದ್ರತೆ ಹಾಗೂ ವಾಹನಗಳ ಸುರಕ್ಷತೆ ಮತ್ತು ಮತ್ತಿತರ ಸದ್ದುದ್ದೇಶಗಳಿಂದ ಕೇಂದ್ರ ಸರ್ಕಾರವು ಎಲ್ಲಾ ದ್ವಿಚಕ್ರ ಹಾಗು ವಾಹನ ಚಕ್ರಗಳಿಗೆ HSRP ನಂಬರ್ ಪ್ಲೇಟ್ ಕಡ್ಡಾಯಗೊಳಿಸಿದೆ. 2019ರ ನಂತರ ಖರೀದಿಸಿರುವ ಎಲ್ಲಾ ವಾಹನಗಳಿಗೂ ಕೂಡ ಸ್ವಾಭಾವಿಕವಾಗಿ HSRP ನಂಬರ್ ಪ್ಲೇಟ್ ಅಳವಡಿಕೆಯಾಗಿದೆ ಆದರೆ ಅದಕ್ಕೂ ಮುನ್ನ ವಾಹನಗಳನ್ನು ಕೊಂಡುಕೊಂಡಿದ್ದವರು ಈಗ ತಮ್ಮ ವಾಹನಗಳ ನಂಬರ್ ಪ್ಲೇಟ್ HSRP ಗೆ ಬದಲಾಯಿಸಿಕೊಳ್ಳಬೇಕು.
ನವೆಂಬರ್ 17 2023 ಇದಕ್ಕೆ ವಾಯಿದೆಯಾಗಿತ್ತು ಆದರೆ ಸರ್ಕಾರ ಮತ್ತೊಮ್ಮ ಫೆಬ್ರವರಿ 17, 2024 ವರೆಗೆ ಈ ಕಾಲಾವಧಿ ವಿಸ್ತರಿಸಿದೆ. ಒಂದು ವೇಳೆ ಈಗ ನೀಡಿರುವ ಅವಧಿಯೊಳಗೆ ಪ್ರಕ್ರಿಯೆ ಪೂರ್ತಿಗೊಳಿಸದಿದ್ದರೆ ಸಂಚಾರಿ ವಾಹನ ನಿಯಮ ಉಲ್ಲಂಘನೆಯಡಿ ದಂಡ ಬೀಳುತ್ತದೆ. ನೀವು ನಿಮ್ಮ ಮೊಬೈಲ್ ನಲ್ಲಿಯೇ ಬುಕ್ಕಿಂಗ್ ಮಾಡಿ ಈ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಬಹುದು ಹೇಗೆ ಎನ್ನುವುದರ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
* ಮೊದಲಿಗೆ ಗೂಗಲ್ ನಲ್ಲಿ SAIM ಎಂದು ಟೈಪ್ ಮಾಡಿ ಸರ್ಚ್ ಕೊಡಿ.
* Society of Indian Automobile manufactures ಎನ್ನುವ ಲಿಂಕ್ ಕಾಣುತ್ತದೆ ಅದನ್ನು ಕ್ಲಿಕ್ ಮಾಡಿ.
* SIAM ನ ವೆಬ್ಸೈಟ್ ಅಧಿಕೃತ ಪೇಜ್ ಓಪನ್ ಆಗುತ್ತದೆ.
* ಮುಖಪುಟದ ಬಲಭಾಗದಲ್ಲಿ ಹಲವಾರು ಆಪ್ಷನ್ ಗಳು ಇರುತ್ತದೆ. ಅದರಲ್ಲಿ Book HSRP ಆಪ್ಷನ್ ಸೆಲೆಕ್ಟ್ ಮಾಡಿ.
* HSRP Registration ಫಾರಂ ಓಪನ್ ಆಗುತ್ತದೆ.
* Full Name, Vehicle Reg. No, email, mobile no, state, district ಈ ಮಾಹಿತಿಯನ್ನು ನಿಮ್ಮ RC Cardನಲ್ಲಿ ಇರುವಂತೆಯೇ ಭರ್ತಿ ಮಾಡಿ, ಕೊನೆಯಲ್ಲಿ ಇರುವ Authentication ಓದಿ, I agree ಕ್ಲಿಕ್ ಮಾಡಿ Submit ಕೊಡಿ.
* Please select your Vehicle brand for booking HSRP ಎನ್ನುವ ಪೇಜ್ ಓಪನ್ ಆಗುತ್ತದೆ. ಅದರಲ್ಲಿಯೂ ಸಹಾ State, District ಸೆಲೆಕ್ಟ್ ಮಾಡಿ, Select your Vehicle type ಎನ್ನುವ ಆಯ್ಕೆ ಇರುತ್ತದೆ. ಅದರಲ್ಲಿ ನಿಮ್ಮದು ದ್ವಿಚಕ್ರ ವಾಹನವೋ, ತ್ರಿಚಕ್ರ ವಾಹನವೋ ಅಥವಾ ನಾಲ್ಕು ಚಕ್ರದ ವಾಹನವೋ ಎನ್ನುವ ಆಪ್ಷನ್ ನೋಡಿ ನಿಮ್ಮ ವಾಹನ ಯಾವುದು ಅದನ್ನು ಸೆಲೆಕ್ಟ್ ಮಾಡಿ.
ಅದರ ಕೆಳಗೆ ಭಾರತದಲ್ಲಿರುವ ಎಲ್ಲಾ ಕಂಪನಿಗಳ ಬ್ರಾಂಡ್ ಇರುತ್ತದೆ. ನಿಮ್ಮ ಯಾವ ಕಂಪನಿಯ ವಾಹನ ಖರೀದಿಸಿದ್ದೀರಿ ಆ ಬ್ರಾಂಡ್ ಸೆಲೆಕ್ಟ್ ಮಾಡಿ, ಆಗ ಆ ಬ್ರಾಂಡ್ ನ HSRP ನಂಬರ್ ಪ್ಲೇಟ್ ಬುಕ್ಕಿಂಗ್ ಪೇಜ್ ಓಪನ್ ಆಗುತ್ತದೆ.
* ಆ ಪೇಜ್ ನಲ್ಲಿ High Security Number Plate with Color Sticker ಎನ್ನುವ ಆಪ್ಷನ್ ಇರುತ್ತದೆ, ಅದನ್ನು ಸೆಲೆಕ್ಟ್ ಮಾಡಿ.
* bookmyhsrp.com ವೆಬ್ಸೈಟ್ ಪೇಜ್ ಓಪನ್ ಆಗುತ್ತದೆ details ನಲ್ಲಿ Vehicle Information ಮತ್ತು Contact information ಕೇಳಲಾಗಿರುತ್ತದೆ ಸರಿಯಾಗಿ ಭರ್ತಿ ಮಾಡಿ. ಇದರಲ್ಲಿ ತಪ್ಪಿದ್ದರೆ ನಿಮ್ಮ ಬುಕಿಂಗ್ ಕ್ಯಾನ್ಸಲ್ ಆಗುತ್ತದೆ ಮತ್ತು ಒಮ್ಮೆ ನೀವು ಕಟ್ಟಿದ ಶುಲ್ಕವು ಯಾವುದೇ ಕಾರಣಕ್ಕೂ ಮರುಪಾವತಿಯಾಗುವುದಿಲ್ಲ ಹಾಗಾಗಿ ಬಹಳ ಎಚ್ಚರಿಕೆಯಿಂದ ಮತ್ತೊಮ್ಮೆ ಪರಿಶೀಲನೆ ಮಾಡಿ ಮುಂದುವರೆಯಿರಿ. ಎಲ್ಲಾ ಮಾಹಿತಿ ಸರಿ ಇದ್ದರೆ ನೀವು ನೀಡಿರುವ ಮೊಬೈಲ್ ಸಂಖ್ಯೆಗೆ OTP ಬರುತ್ತದೆ, OTP ಹಾಕಿ next ಕ್ಲಿಕ್ ಮಾಡಿ ಮುಂದಿನ ಹಂತಕ್ಕೆ ಹೋಗಿ.
* ಮುಂದಿನ ಹಂತದಲ್ಲಿ ಮನೆಯಲ್ಲಿ ನೀವೇ ಅಳವಡಿಸಿಕೊಳ್ಳುವುದಾದರೆ Home delivery ಆಪ್ಷನ್ ಕ್ಲಿಕ್ ಮಾಡಿ ನಿಮ್ಮ ಮನೆ ವಿಳಾಸಕ್ಕೆ ನಂಬರ್ ಪ್ಲೇಟ್ ಡೆಲಿವರಿ ಆಗುತ್ತದೆ ನೀವೇ ಹಾಕಿಕೊಳ್ಳಬಹುದು. ಅಥವಾ dealer appointment ಕ್ಲಿಕ್ ಮಾಡಿ ಹತ್ತಿರದಲ್ಲಿರುವ ಡೀಲರ್ ಮೂಲಕ ಕೂಡ ಅಳವಡಿಸಿಕೊಳ್ಳಬಹುದು.
* dealer appointment ಆಪ್ಷನ್ ಕ್ಲಿಕ್ ಮಾಡಿದರೆ ನಿಮ್ಮ ಹತ್ತಿರದಲ್ಲಿರುವ ಎಲ್ಲಾ ಶೋರೂಮ್ ಹಾಗೂ ಡೀಲರ್ಸ್ ಹೆಸರು ಬರುತ್ತದೆ ನಿಮಗೆ ಬೇಕಾದನ್ನು ಸೆಲೆಕ್ಟ್ ಮಾಡಿ ಅಪಾಯಿಂಟ್ಮೆಂಟ್ ಫಿಕ್ಸ್ ಮಾಡಿ ನಿಮಗೆ ಬೇಕಾದ ದಿನಾಂಕ ಮತ್ತು ಸಮಯವನ್ನು ಕೂಡ ಸೆಲೆಕ್ಟ್ ಮಾಡಿ. ಆ ದಿನಾಂಕದಂದು ಹೋಗಿ ನಿಮ್ಮ ವಾಹನಕ್ಕೆ HSRP ನಂಬರ್ ಪ್ಲೇಟ್ ಅಳವಡಿಸಿಕೊಳ್ಳಿ.
* ದಿನಾಂಕ ಹಾಗೂ ಸಮಯ ನಿಗದಿಯಾದ ನಂತರ ಮುಂದಿನ ಹಂತದಲ್ಲಿ ನಿಮ್ಮVerify details and Pay ಆಪ್ಷನ್ ಇರುತ್ತದೆ ಅದನ್ನು ಕ್ಲಿಕ್ ಮಾಡಿ. ಪೂರ್ತಿ ನಿಮ್ಮ booking Summary ಬರುತ್ತದೆ. HSRP ಹೇಗಿರುತ್ತದೆ ಎನ್ನುವುದರ ಡೀಟೇಲ್ಸ್ ಸ್ಕ್ರೀನ್ ಮೇಲೆ ಬರುತ್ತದೆ ಮತ್ತು ನಿಮ್ಮ ವೈಯುಕ್ತಿಕ ಇಂಫಾರ್ಮೇಷನ್ಗಳು ಕೂಡ ಬರುತ್ತವೆ.
ಅದರಲ್ಲಿ ವ್ಯತ್ಯಾಸಗಳಿದ್ದರೆ ಬದಲಾಯಿಸಬಹುದು. ಕೊನೆಯಲ್ಲಿ ಇದಕ್ಕೆ ಎಷ್ಟು ಶುಲ್ಕವಾಗಬಹುದು ಎನ್ನುವುದರ ಲಿಸ್ಟ್ ಡೀಟೇಲ್ಸ್ ಸಮೇತ ಬರುತ್ತದೆ ಕೆಳಗೆ pay online ಆಪ್ಷನ್ ಇರುತ್ತದೆ ಅದನ್ನು ಕ್ಲಿಕ್ ಮಾಡುವ ಮೂಲಕ ಆನ್ಲೈನಲ್ಲಿ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಸಿ ಇ-ರಸೀದಿ (e-receipt ) ಮತ್ತು ಅರ್ಜಿ ಸ್ವೀಕೃತಿ ಪತ್ರ (acknowledgement) ಪಡೆಯಿರಿ.