ರಾಜ್ಯ ಸರ್ಕಾರಕ್ಕೆ ಈಗ ಮೂರು ವರ್ಷ ತುಂಬಿದ ಸಂಭ್ರಮ ಅದರಲ್ಲೂ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿ ಅಧಿಕಾರ ವಹಿಸಿಕೊಂಡು ವರ್ಷ ಕಳೆದಿದೆ. ಬಿಜೆಪಿ ಪಕ್ಷ ಈಗ ಆ ಸಂಭ್ರಮವನ್ನು ಆಚರಿಸುವದರ ಜೊತೆಗೆ ಈ ಬಾರಿ ಅವರು ಅಧಿಕಾರ ವಹಿಸಿಕೊಂಡಾಗಲಿಂದ ಜನರಿಗೆ ನೀಡಿರುವ ಎಲ್ಲಾ ಭಾಗ್ಯಗಳ ಮನನ ಮಾಡುತ್ತಿದೆ. ಹೇಳೋದಕ್ಕೆ ತಕ್ಕಂತೆ ಬಿಜೆಪಿ ಸರ್ಕಾರವು ಕೂಡ ಕರ್ನಾಟಕದ ಜನತೆಗೆ ಹಲವಾರು ರೀತಿಯ ಭಾಗ್ಯಗಳು ನೀಡಿದೆ ಯೋಜನೆಗಳನ್ನು ನೀಡಿದೆ ಮತ್ತು ಎಲ್ಲಾ ಕ್ಷೇತ್ರದಲ್ಲೂ ಕೂಡ ಜನರಿಗೆ ಸಹಾಯ ಆಗುವಂತಹ ಕೆಲಸಗಳನ್ನು ಮಾಡಿದೆ. ಕೋವಿಡ್ ಅಂತಹ ಬಿಕ್ಕಟ್ಟಿನ ಪರಿಸ್ಥಿತಿಯಲ್ಲೂ ಕೂಡ ರಾಜ್ಯ ಸರ್ಕಾರವು ತನ್ನಿಂದ ಮೀರಿದ ಪ್ರಯತ್ನವನ್ನು ಮಾಡಿ ಪರಿಸ್ಥಿತಿಯನ್ನು ಸುಧಾರಿಸಲು ಹೋರಾಡಿದೆ ಹಾಗೂ ಮತ್ತೆ ಎಲ್ಲವೂ ಸಹಜ ಸ್ಥಿತಿಗೆ ಬರುವವರೆಗೆ ತನ್ನ ಹೆಗಳಿಗೆ ಹಾಕಿಕೊಂಡು ನಿಭಾಯಿಸಿದೆ.
ಸದ್ಯಕ್ಕೆ ಸಾರ್ವಜನಿಕರೂ ಕೂಡ ಮೊದಲಿನಂತೆ ಎಲ್ಲದಕ್ಕೂ ಹೊಂದಿಕೊಳ್ಳುತ್ತಿದ್ದಾರೆ. ಈಗ ಸರ್ಕಾರವು ಅವರ ಬೆನ್ನಿಗೆ ನಿಂತು ಮತ್ತಷ್ಟು ಮೇಲೆ ತರಲು ಪ್ರಯತ್ನ ಮಾಡುತ್ತಿದೆ. ಈಗಾಗಲೇ ಸರ್ಕಾರದಿಂದ ಹಲವಾರು ರೀತಿಯ ಸಹಾಯಧನಗಳು ಹಾಗೂ ಸಾಲ ಸೌಲಭ್ಯಗಳು ಜನರಿಗೆ ಸಿಗುತ್ತಿದೆ. ಈ ನಿಟ್ಟಿನಲ್ಲಿ ಇದೀಗ ಹೊಸ ಯೋಜನೆ ಯನ್ನು ಸರ್ಕಾರ ಕೈಗೆತ್ತಿಕೊಂಡಿದೆ. ಈ ಬಾರಿ ದ್ವಿಚಕ್ರ ವಾಹನ ಖರೀದಿದಾರರಿಗೆ ಸಹಾಯ ಮಾಡುವ ಯೋಜನೆ ಮಾಡಿದೆ ಆದರೆ ಇದಕ್ಕಾಗಿ ಇರುವ ಮಾನದಂಡಗಳು ಏನೇನು? ಸರ್ಕಾರ ಕೈಗೊಂಡಿರುವ ಈ ಯೋಜನೆ ಹಿಂದಿರುವ ಕಾರಣಗಳು ಏನು? ಮತ್ತು ಯಾರು ಈ ಸಾಲ ಸೌಲಭ್ಯ ಪಡೆಯಲು ಅರ್ಹರು ಮತ್ತು ಅದಕ್ಕಾಗಿ ಫಲಾನುಭವಿಗಳು ಅನುಸರಿಸಬೇಕಾದ ನಿಯಮಗಳೇನು? ಇನ್ನು ಮುಂತಾದ ಈ ವಿಷಯದ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಈ ಅಂಕಣವನ್ನು ಕೊನೆಯ ತನಕ ಓದಿ.
2022-23ರ ಸಾಲಿನಲ್ಲಿ ಸ್ವಯಂ ಉದ್ಯೋಗ ಯೋಜನೆ ಅಡಿಯಲ್ಲಿ 50,000 ಸಹಾಯವನ್ನು ದ್ವಿ ಚಕ್ರ ವಾಹನ ಖರೀದಿದಾರರಿಗೆ ನೀಡಲು ಸರ್ಕಾರ ನಿರ್ಧರಿಸಿದೆ ಹಾಗಾಗಿ ಇದಕ್ಕಾಗಿ ಅರ್ಹ ಫಲಾನುಭವಿಗಳಿಂದ ಅರ್ಜಿ ಕೂಡ ಆಹ್ವಾನಿಸಿದೆ. ಸರ್ಕಾರದ ಈ ಕಾರ್ಯಕ್ರಮದ ಉದ್ದೇಶ ಏನೆಂದರೆ ಇತ್ತೀಚೆಗೆ ಎಲ್ಲಾ ಕಡೆ ಇ-ಕಾಮರ್ಸ್ ವ್ಯವಹಾರಗಳು ಹೆಚ್ಚಾಗಿರುವುದರಿಂದ ಇದರ ಸ್ಟಾರ್ಟ್ ಅಪ್ ಗಳು ಮೆಲ್ಲಮೆಲ್ಲನೆ ತಲೆ ಎತ್ತುತ್ತಿವೆ. ಇದರಿಂದಾಗಿ ಕರ್ನಾಟಕದಲ್ಲಿ ಕೂಡ ಲಕ್ಷಾಂತರ ಸಂಖ್ಯೆಯಲ್ಲಿ ಉದ್ಯೋಗ ಸೃಷ್ಟಿ ಆಗಿದೆ. ಈ ಮೂಲಕ ಸರಕುಗಳನ್ನು ನೇರವಾಗಿ ಮನೆ ಬಾಗಿಲಿಗೆ ತಲುಪಿಸಲು ಇವಿ ಮತ್ತು ದ್ವಿಚಕ್ರ ವಾಹನ ಹೊಂದಿರುವ ಯುವಕರಿಗೆ ಉದ್ಯೋಗಾವಕಾಶಗಳು ಸಿಗಲಿವೆ. ಈ ಕೆಲಸಕ್ಕಾಗಿ ದ್ವಿಚಕ್ರ ವಾಹನ ಹೊಂದಿರುವುದು ಕಡ್ಡಾಯ ನಿಯಮವಾಗಿದೆ ಹಾಗಾಗಿ ಸರ್ಕಾರ ಈ ಬಾರಿ ಯುವಕರಿಗೆ ದ್ವಿಚಕ್ರ ವಾಹನ ತಯಾರಿಸಲು ಸಹಾಯ ಮಾಡುವ ಮನಸ್ಸು ಮಾಡಿದೆ.
ಈ ನಿಟ್ಟಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ವಿದ್ಯಾರ್ಥಿಗಳು ಈ ಯೋಜನೆಯಿಂದ ಲಾಭ ಪಡೆಯಲಿದ್ದಾರೆ. ಜೊತೆಗೆ ಡಾ. ಬಿ ಅಂಬೇಡ್ಕರ್ ಅಭಿವೃದ್ಧಿ ನಿಗಮ, ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ, ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮ, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ ಮತ್ತು ಕರ್ನಾಟಕ ರಾಜ್ಯ ಸಫಾಯಿ ಕರ್ಮಾಚಾರಿ ಅಭಿವೃದ್ಧಿ ನಿಗಮದ ಅಡಿಯಲ್ಲಿ ಬರುವ ಎಲ್ಲಾ ಫಲಾನುಭವಿಗಳು ಕೂಡ ಅರ್ಜಿ ಸಲ್ಲಿಸಬಹುದಾಗಿದೆ. ಈ ಯೋಜನೆಯಲ್ಲಿ ದ್ವಿಚಕ್ರ ವಾಹನ ಖರೀದಿ ಮಾಡುವವರಿಗೆ 50,000 ಸಹಾಯಧನ ಮತ್ತು ಉಳಿದ ಹಣಕ್ಕೆ ಕಡಿಮೆ ಬಡ್ಡಿಯಲ್ಲಿ ಬ್ಯಾಂಕ್ ಇಂದ ಸಾಲ ಒದಗಿಸಿ ಕೊಡಲಾಗುವುದು. ದ್ವಿಚಕ್ರ ವಾಹನದ ಜೊತೆಗೆ ಸರಕು ಸಾಗಣೆ ವಾಹನ ಖರೀದಿಗೆ 3 ಲಕ್ಷ ರೂಗಳ ವರೆಗೆ ಸಹಾಯಧನ ಮತ್ತು ಉಳಿದ ಮೊತ್ತಕ್ಕೆ ಕಡಿಮೆ ಬಡ್ಡಿ ದರದಲ್ಲಿ ಬ್ಯಾಂಕ್ ಸಾಲ ನೀಡಲಾಗುವುದು.
ನೇರ ಸಾಲ ಯೋಜನೆ ಅಡಿಯಲ್ಲಿ ಸಣ್ಣ ಆದಾಯ ಗಳಿಸುವ ಯಾವುದಾದರೂ ಘಟಕದ ವೆಚ್ಚಕ್ಕೆ ಒಂದು ಲಕ್ಷ ಹಣವನ್ನು ನೀಡಲಾಗುವುದು ಇದರಲ್ಲಿ ಅರ್ಧದಷ್ಟು ಸಹಾಯ ಧನ ಹಾಗೂ ಆದಷ್ಟು ಕಡಿಮೆ ಬಡ್ಡಿಯಲ್ಲಿ ಸಾಲ ಸೌಲಭ್ಯ ನೀಡಲಾಗುವುದು. ಈ ಎಲ್ಲವನ್ನು ಪಡೆಯಲು ಮೇಲೆ ಹೇಳಲಾದ ಫಲಾನುಭವಿಗಳು ಸರ್ಕಾರವು ಈಗಾಗಲೇ ತಿಳಿಸಿರುವ ವೆಬ್ಸೈಟ್ ಮೂಲಕ ಆನ್ಲೈನ್ ಅಲ್ಲಿ ಅರ್ಜಿ ಸಲ್ಲಿಸಬೇಕಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ಆಗಸ್ಟ್ 20ರವರೆಗೆ ವಿಸ್ತರಿಸಲಾಗಿದ್ದು ನಂತರ ಬಂದ ಅರ್ಜಿಯನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ ಎಂದು ತಿಳಿಸಲಾಗಿದೆ. ಈ ಕುರಿತಾದ ಹೆಚ್ಚಿನ ಮಾಹಿತಿ ಬೇಕಾದಲ್ಲಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಛೇರಿ ನಿಗಮದ ವೆಬ್ಸೈಟ್ ಅಥವಾ ಕಲ್ಯಾಣ ಮಿತ್ರ ಏಕಿಕೃತ ಎಸ್ ಸಿ ಎಸ್ ಟಿ ಸಹಾಯವಾಣಿ ನಂಬರ್ 9482300400 ಕರೆ ಮಾಡಿ ಮಾಹಿತಿ ಪಡೆದು ಕೊಳ್ಳಬಹುದಾಗಿದೆ.
ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳೆಂದರೆ ಪರಿಶಿಷ್ಟ ಜಾತಿ ಹಾಗೂ ಪಂಗಡಕ್ಕೆ ಸೇರಿದವರಾಗಿರಬೇಕು. ಕರ್ನಾಟಕ ರಾಜ್ಯದ ನಿವಾಸಿ ಆಗಿರಬೇಕು, ಹಿಂದೆ ನಿಗಮದಿಂದ ಯಾವುದೇ ಸೌಲಭ್ಯ ಪಡೆದಿರಬಾರದು, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಸಲ್ಲಿಸಬೇಕು. ಆದಾಯದ ಮಿತಿ ಹಳ್ಳಿಯವರಿಗೆ ಒಂದುವರೆ ಲಕ್ಷ ಹಾಗೂ ನಗರ ಪ್ರದೇಶದವರಿಗೆ 2ಲಕ್ಷ ಆದಾಯ ಮೀರಿರಬಾರದು. ವಯೋಮಿತಿ 18 ರಿಂದ 51 ವರ್ಷದ ಒಳಗಿರಬೇಕು. ಫಲಾನುಭವಿಗಳು ಸಹಾಯವನ್ನು ನೇರವಾಗಿ ಬ್ಯಾಂಕ್ ಖಾತೆಯ ಮೂಲಕ ಪಡೆಯಬಹುದಾಗಿದೆ. ಅರ್ಜಿಯನ್ನು ಸುವಿಧಾ ತಂತ್ರಾಂಶದ ಮೂಲಕ ಅಥವಾ ಹತ್ತಿರದ ಸಿಎಸ್‌ಸಿ ಸೆಂಟರ್ ಗೆ ಭೇಟಿ ನೀಡುವ ಮೂಲಕ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವಾಗ ಇತ್ತೀಚಿನ ಭಾವಚಿತ್ರ ಆಧಾರ್ ಕಾರ್ಡ್ ಆರ್ ಡಿ ನಂಬರ್ ಇರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹಾಗೂ ಬ್ಯಾಂಕ್ ಪಾಸ್ ಬುಕ್ ಪ್ರತಿಯನ್ನು ಕೂಡ ಸಲ್ಲಿಸಬೇಕು. ಈ ಮಾಹಿತಿಯನ್ನು ತಪ್ಪದೆ ಶೇರ್ & ಲೈಕ್ ಮಾಡಿ.