ಸಮಾಜ ಕಲ್ಯಾಣ ಇಲಾಖೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ವಿವಿಧ ನಿಗಮಗಳ ವತಿಯಿಂದ 2023-24ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆರ್ಥಿಕ ಅಭಿವೃದ್ಧಿಗಾಗಿ ಹಲವಾರು ಕಲ್ಯಾಣ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಈ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ನೀಡಿದ್ದ ಕಾಲವಕಾಶವನ್ನು ಸರ್ಕಾರ ಈಗ ಮತ್ತಷ್ಟು ಅವಧಿಗೆ ವಿಸ್ತರಿಸಿದೆ.
ಯಾವ ಯೋಜನೆಯಡಿ ಏನು ಸೌಲಭ್ಯ ಸಿಗಲಿದೆ ಮತ್ತು ಅರ್ಜಿ ಸಲ್ಲಿಸುವ ವಿಧಾನ ಹೇಗೆ? ಎಲ್ಲಿ ಅರ್ಜಿ ಸಲ್ಲಿಸಬೇಕು ಮತ್ತು ಕಡೆಯ ದಿನಾಂಕ ಯಾವುದು ಎನ್ನುವುದರ ಕುರಿತು ಪ್ರಮುಖ ವಿಷಯವನ್ನು ಈ ಅಂಕಣದಲ್ಲಿ ಹಂಚಿಕೊಳ್ಳುತ್ತಿದ್ದೇವೆ.
ಯೋಜನೆಗಳ ವಿವರ:-
1. ಸ್ವಯಂ ಉದ್ಯೋಗ ನೇರ ಸಾಲ ಯೋಜನೆ:
* ಈ ಯೋಜನೆಗೆ ಅರ್ಜಿ ಸಲ್ಲಿಸಿ ನಿಗಮದ ವತಿಯಿಂದ ಗರಿಷ್ಠ 1 ಲಕ್ಷದವರೆಗೆ ಸಬ್ಸಿಡಿ ರೂಪದ ಸಾಲ ಸೌಲಭ್ಯ ಪಡೆದುಕೊಳ್ಳಬಹುದು.
* ರೂ.50,000 ಉಚಿತವಾಗಿದ್ದು ಉಳಿದ ರೂ.50000 ವನ್ನು ವಾರ್ಷಿಕವಾಗಿ 4% ಬಡ್ಡಿದರದಲ್ಲಿ ಹಿಂತಿರುಗಿಸಬೇಕು.
2. ಮೈಕ್ರೋ ಕ್ರೆಡಿಟ್ (ಪ್ರೇರಣಾ) ಯೋಜನೆ:-
ಈ ಯೋಜನೆಗೆ ಆಯಾ ನಿಗಮಗಳ ವ್ಯಾಪ್ತಿಗೆ ಬರುವ ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಿದ್ದು, ಯೋಜನೆಯಡಿ 2.50 ಲಕ್ಷ ಸಾಲ ಸಿಗಲಿದೆ ಇದರಲ್ಲಿ 1.50 ಲಕ್ಷ ಸಬ್ಸಿಡಿ ಹಣವಾಗಿದ್ದು 1 ಲಕ್ಷಕ್ಕೆ ಕನಿಷ್ಠ ಬಡ್ಡಿ ದರವನ್ನು ವಿಧಿಸಲಾಗುತ್ತದೆ.
3. ಉದ್ಯಮಶೀಲತಾ ಅಭಿವೃದ್ಧಿ ಯೋಜನೆ (ಬ್ಯಾಂಕ್ ಗಳ ಸಹಯೋಗದೊಂದಿಗೆ):-
ನಿರುದ್ಯೋಗಿ ಯುವಕ, ಯುವತಿಯರಿಗೆ ಈ ಯೋಜನೆಯಡಿ ವಾಣಿಜ್ಯ ಉದ್ದೇಶದಿಂದ ಖರೀದಿಸುವ 4 ಚಕ್ರದ ವಾಹನಗಳ ಖರೀದಿಗೆ ಘಟಕ ವೆಚ್ಚದ ಶೆ.75% ರಷ್ಟು ಅಥವಾ ಗರಿಷ್ಟ ರೂ. 4.00 ಲಕ್ಷಗಳವರೆಗೆ ಸಹಾಯಧನವನ್ನು ಮಂಜೂರು ಮಾಡಿ ಬ್ಯಾಂಕ್ ಸಹಯೋಗದೊಂದಿಗೆ ಯೋಜನೆಯನ್ನು ಅನುಷ್ಟಾನಗೊಳಿಸಲಾಗುತ್ತಿದೆ.
4. ಭೂ ಒಡೆತನ ಯೋಜನೆ:-
ಈ ಯೋಜನೆ ನಿಗಮದ ವ್ಯಾಪ್ತಿಗೆ ಬರುವ ಭೂ ರಹಿತ ರೈತರಿಗೆ ಭೂಮಿ ಖರೀದಿಗೆ 50% ಸಹಾಯಧನ ಹಾಗೂ 50% ಸಾಲವನ್ನು ಶೇ. 6ರ ಬಡ್ಡಿ ದರದಲ್ಲಿ ನಿಗಮದಿಂದಲೇ ನೀಡಲಾಗುವುದು.
5. ಗಂಗಾ ಕಲ್ಯಾಣ ಯೋಜನೆ:-
* ಈ ಯೋಜನೆಯಡಿ 01 ಎಕರೆ 20 ಗುಂಟೆಯಿಂದ 5 ಎಕರೆ ಭೂಮಿಯನ್ನು ಹೊಂದಿರುವ ಅರ್ಹ ಫಲಾನುಭವಿಗೆ ಕೊಳವೆಬಾವಿ ಕೊರೆಯಿಸಿ ಅದಕ್ಕೆ ನಿಗಮದಿಂದ ಪಂಪ್ಸೆಟ್ನ್ನು ಅಳವಡಿಸಲಾಗುವುದು.
* ಪಂಪ್ಸೆಟ್ ಮತ್ತು ವಿದ್ಯುದ್ದೀಕರಣ ಸೇರಿ ಒಟ್ಟು ವೆಚ್ಚ ರೂ. 1.50 ಲಕ್ಷವಾಗಿದೆ.
* ಈ ಕೆಳಗೆ ತಿಳಿಸುವ ನಿಗಮಗಳ ವ್ಯಾಪ್ತಿಗೆ ಬರುವ ಫಲಾನುಭವಿಗಳು ಅರ್ಜಿ ಸಲ್ಲಿಸಬಹುದು
1. ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ
2. ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ
3. ಕರ್ನಾಟಕ ತಾಂಡ ಅಭಿವೃದ್ಧಿ ನಿಗಮ ನಿಯಮಿತ
4. ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮ
5. ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮ
6. ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ
7. ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ.
* ಎಲ್ಲಿ ಅರ್ಜಿ ಸಲ್ಲಿಸಬೇಕು:-
1. ಹತ್ತಿರದ ಯಾವುದೇ ಗ್ರಾಮ ಒನ್, ಕರ್ನಾಟಕ ಒನ್ ಅಥವಾ ಬೆಂಗಳೂರು ಒನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು.
2. https://sevasindhu.karnataka.gov.in/ ಅಥವಾ
Sevasindhu/DepartmentServices ವೆಬ್ಸೈಟ್ ಲಿಂಕ್ ಮೂಲಕ ಅರ್ಜಿ ಸಲ್ಲಿಸಬಹುದು.
* ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:-
1. ಸೇವಾ ಸಿಂಧು ಸಿಟಿಜನ್ ಲಾಗಿನ್ ಮೂಲಕ ಅರ್ಜಿ ಸಲ್ಲಿಸಬಹುದು
2. ಸೇವಾ ಸಿಂಧು ಅಕೌಂಟ್ ಕ್ರಿಯೇಟ್ ಮಾಡಿಕೊಂಡು log in ಆಗಿ
3. ಮುಖಪುಟದಲ್ಲಿ ಕಾಣುವ apply for services ಕ್ಲಿಕ್ ಮಾಡಿ, view all services ಸೆಲೆಕ್ಟ್ ಮಾಡಿ.
4. ಅದರಲ್ಲಿ ಸರ್ವಿಸ್ ಗಳ ವಿವರ ಇರುತ್ತದೆ ಈ ಮೇಲೆ ತಿಳಿಸಿದ ಯಾವ ಸರ್ವಿಸ್ ಗೆ ಅಪ್ಲೈ ಮಾಡಬೇಕು ಆ ಹೆಸರನ್ನು ಟೈಪ್ ಮಾಡಿ search ಮಾಡಿ, ಆ ಯೋಜನೆಗಳ ವಿವರವನ್ನು ಓದಿಕೊಳ್ಳಿ.
5. ನೀವು ಯಾವ ನಿಗಮದ ವ್ಯಾಪ್ತಿಗೆ ಸೇರುತ್ತೀರಾ ಅದನ್ನು ಸೆಲೆಕ್ಟ್ ಮಾಡಿ ಅರ್ಜಿ ಫಾರಂ ಭರ್ತಿ ಮಾಡಿ ಕೇಳಲಾಗುವ ಪೂರಕ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ ಅರ್ಜಿ ಸಲ್ಲಿಕೆ ಪೂರ್ತಿ ಆದ ಬಳಿಕ ತಪ್ಪದೇ ಅರ್ಜಿ ಸ್ವೀಕೃತಿ ಪತ್ರ ಪಡೆದುಕೊಳ್ಳಿ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:- 15 ಡಿಸೆಂಬರ್, 2023.