ಒಂದು ಆಸ್ತಿಯ ಮೇಲಿರುವ ಹಕ್ಕನ್ನು ಒಬ್ಬ ವ್ಯಕ್ತಿಯು ದಾನ, ಕ್ರಯ, ವಿಭಾಗ ಹಾಗೂ ವಿಲ್ ಮಾಡುವ ಮೂಲಕ ಮತ್ತೊಬ್ಬರಿಗೆ ವರ್ಗಾಯಿಸಬಹುದು. ಸುಲಭವಾಗಿ ಅರ್ಥೈಸಬೇಕು ಎಂದರೆ ಕ್ರಯ ಎಂದು ಬಂದಾಗ ಆಸ್ತಿ ಮಾರಾಟವಾಗಿ ಮತ್ತೊಬ್ಬರ ಹೆಸರಿಗೆ ಹೋಗುತಿದೆ ಎಂದು ಅರ್ಥ ಮಾಡಿಕೊಳ್ಳಬಹುದು.
ವಿಭಾಗ ಎಂದು ಬಂದಾಗ ಒಂದು ಕುಟುಂಬದ ಆಸ್ತಿಯನ್ನು ಅದರ ವಾರಸುದಾರರೆಲ್ಲರೂ ಕೂಡಿ ಭಾಗ ಮಾಡಿಕೊಂಡು ಅವರ ಹೆಸರಿಗೆ ಮಾಡಿಕೊಳ್ಳುತ್ತಿದ್ದಾರೆ ಎಂದು ಅರ್ಥ ಮಾಡಿಕೊಳ್ಳಬಹುದು. ದಾನ ಎನ್ನುವುದು ಕೆಲವೊಮ್ಮೆ ತಂದೆಯಿಂದ ಮಕ್ಕಳಿಗೆ ಆಸ್ತಿ ವರ್ಗಾವಣೆ ಮಾಡುವ ಯಾಕೆಂದರೆ ಖರ್ಚು ಕಡಿಮೆ ಆಗುತ್ತದೆ ಎಂದು. ಆದರೆ ಕೆಲವೊಮ್ಮೆ ತಾತ ಅಥವಾ ದೊಡ್ಡಪ್ಪ ಈ ರೀತಿ ಸಂಬಂಧಿಕರಿಂದ ಕೂಡ ಆಸ್ತಿ ಬರುತ್ತದೆ.
ಹೀಗೆ ಮಾವ ಅಥವಾ ಕುಟುಂಬದ ಮತ್ಯಾರೋ ಸದಸ್ಯರು ಅವರಿಗೆ ಮಕ್ಕಳಿರಾದ ಕಾರಣ ಅಥವಾ ಬಹಳ ಪ್ರೀತಿ ಪಾತ್ರರಾದ ಕಾರಣ ನಿಮ್ಮ ಹೆಸರಿಗೆ ಅವರ ಆಸ್ತಿಯನ್ನು ಕೊಡುತ್ತಿದ್ದಾರೆ ಎಂದಾಗ ಅದನ್ನು ದಾನ ಪತ್ರದ (gift deed) ಮೂಲಕ ಪಡೆದುಕೊಳ್ಳಬೇಕೆ ಅಥವಾ ವಿಲ್ ಮಾಡಿಸಿ (will deed) ಪಡೆದುಕೊಳ್ಳಬೇಕೆ ಎನ್ನುವ ಅನುಮಾನ ಹಲವರಿಗೆ ಇರುತ್ತದೆ.
ಸಾಮಾನ್ಯವಾಗಿ ಆಸ್ತಿ ಕೊಡುವವರಿಗೆ ಈ ಗೊಂದಲ ಹೆಚ್ಚಿರುತ್ತದೆ. ಯಾವ ರೂಪದಲ್ಲಿ ಆಸ್ತಿ ಕೊಟ್ಟರೆ ಒಳ್ಳೆಯದು ಎನ್ನುವುದು ಬಹುತೇಕರ ಪ್ರಶ್ನೆ. ಇದರ ಕುರಿತು ಸುಲಭವಾಗಿ ಕೆಲ ಅಂಶಗಳನ್ನು ತಿಳಿಸಿ ಅರ್ಥೈಸುವ ಪ್ರಯತ್ನವನ್ನು ಈ ಅಂಕಣದಲ್ಲಿ ಮಾಡುತ್ತಿದ್ದೇವೆ. ಇದರಲ್ಲಿ ಗಿಫ್ಟ್ ಡಿಡ್ ಹಾಗೂ ವಿಲ್ ಡಿಡ್ ನಡುವಿನ ಕೆಲ ಪ್ರಮುಖ ವ್ಯತ್ಯಾಸಗಳ ಬಗ್ಗೆ ಹೇಳುತ್ತಿದ್ದೇವೆ.
ಆಸ್ತಿಯ ಮಾಲೀಕತ್ವದ ಮೇಲೆ ಇದು ನಿರ್ಧಾರವಾಗುತ್ತದೆ ಆಸ್ತಿಯ ಮಾಲೀಕ ಅವರ ಮ’ರ’ಣ’ದ ನಂತರವಷ್ಟೇ ಆಸ್ತಿಯನ್ನು ಕೊಡಲು ಇಚ್ಚಿಸಿದ್ದರೆ ಆಗ ಅದನ್ನು ವಿಲ್ ಪತ್ರ ಮಾಡಿಸಬಹುದು ಅಥವಾ ಅವರು ಜೀವಂತ ಇರುವಾಗಲೇ ಆಸ್ತಿಯ ಸಂಪೂರ್ಣ ಅಧಿಕಾರವನ್ನು ಬಿಟ್ಟು ಕೊಡುವುದಾದರೆ, ಗಿಫ್ಟ್ ಡಿಡ್ ಮಾಡಿಸಬಹುದು.
ವಿಲ್ ಡಿಡ್ ಮಾಡಿಸುವುದರಿಂದ ಬಹಳ ಕಡಿಮೆ ಖರ್ಚಾಗುತ್ತದೆ ಒಂದು ಬಿಳಿ ಪತ್ರದ ಮೇಲೆ ವಿಷಯ ಹಾಗೂ ಆಸ್ತಿ ವಿವರ ಮತ್ತು ಅವರ ವಿವರ ಸರಿಯಾಗಿ ಬರೆದು ದಿನಾಂಕ ಬರೆದು ಸಾಕ್ಷಿಯ ಸಹಿ ಪಡೆದುಕೊಂಡರೆ ವಿಲ್ ಮುಗಿಯುತ್ತದೆ. ಆದರೆ ಗಿಫ್ಟ್ ಡಿಡ್ ಗೆ ರಿಜಿಸ್ಟರ್ ಚಾರ್ಜ್, ಸ್ಟ್ಯಾಂಪ್ ಚಾರ್ಜ್ ಮತ್ತು ರಿಜಿಸ್ಟರ್ ಆಗುವಾಗ ಆಸ್ತಿ ವ್ಯಾಲ್ಯೂ ಮೇಲೆ ಸರ್ಕಾರದಿಂದ ಕೆಲವೊಂದು ಶುಲ್ಕವನ್ನು ಕಟ್ಟಬೇಕಿರುತ್ತದೆ ಹಾಗಾಗಿ ವಿಲ್ ಗೆ ಹೋಲಿಸಿಕೊಂಡರೆ ಖರ್ಚು ಹೆಚ್ಚು.
ಆದರೆ ವಿಲ್ ಗೆ ಬರೀ ರಿಜಿಸ್ಟರ್ ಚಾರ್ಜ್ ಮಾತ್ರ ಆಗುತ್ತದೆ, ಆಸ್ತಿಯ ವ್ಯಾಲ್ಯೂ ಕನ್ಸಿಡರ್ ಮಾಡಿ ಶುಲ್ಕ ವಿಧಿಸುವುದಿಲ್ಲ. ಒಂದು ಬಾರಿ ವಿಲ್ ಮಾಡಿದ ಮೇಲೆ ಅದನ್ನು ಎಷ್ಟು ಬಾರಿ ಬೇಕಾದರೂ ಬದಲಾಯಿಸಲು ಮಾಲೀಕರಿಗೆ ಅಧಿಕಾರ ಇರುತ್ತದೆ, ಆದರೆ ಗಿಫ್ಟ್ ಡಿಡ್ ಆ ರೀತಿ ಆಗುವುದಿಲ್ಲ. ಒಂದು ಸಾರಿ ಗಿಫ್ಟ್ ಡೀಡ್ ಮಾಡಿ ಅದನ್ನು ರಿಜಿಸ್ಟರ್ ಮಾಡಿದ ಮೇಲೆ ರ’ದ್ದುಪಡಿಸಲು ಬಹಳ ಕಷ್ಟ ಸಾಧ್ಯ.
ಕಾನೂನಿನ ಮೂಲಕವೇ ಹೋಗಬೇಕು. ಆಗಲು ಕೂಡ ಹೆಚ್ಚಿಗೆ ಹಣವ್ಯಯವಾಗುವ ಸಾಧ್ಯತೆ ಇರುತ್ತದೆ ವಿಲ್ ಪತ್ರ ಮಾಡಿಸುವಾಗ ಅನೇಕ ಬಾರಿ ಫಲಾನುಭವಿಗಳಿಗೆ ಮಾಹಿತಿ ಗೊತ್ತಿರುವುದಿಲ್ಲ. ಒಂದು ವೇಳೆ ಮಾಹಿತಿ ಗೊತ್ತಿದ್ದರೂ ಬರೆಯುವಾಗ ಅಥವಾ ರಿಜಿಸ್ಟರ್ ಮಾಡುವಾಗ ಆ ವ್ಯಕ್ತಿ ಇರಬೇಕಾದ ಅವಶ್ಯಕತೆ ಇರುವುದಿಲ್ಲ.
ಆದರೆ ಗಿಫ್ಟ್ ಡಿಡ್ ಅದನ್ನು ರಿಜಿಸ್ಟರ್ ಮಾಡುವಾಗ ಮತ್ತು ರ’ದ್ದು ಮಾಡುವಾಗಲು ಮಾಲೀಕರು ಮತ್ತು ಫಲಾನುಭವಿಗಳು ಹಾಜರಿರಬೇಕಾಗುತ್ತದೆ. ಹಾಗಾಗಿ ಆಸ್ತಿಯ ಮಾಲೀಕತ್ವ, ನಂಬಿಕೆ ಮತ್ತು ಹಣಕಾಸಿನ ವಿಚಾರ ಇತ್ಯಾದಿಗಳನ್ನೆಲ್ಲ ಗಮನದಲ್ಲಿಟ್ಟುಕೊಂಡು ನಿರ್ಧಾರ ತೆಗೆದುಕೊಳ್ಳುವುದು ಒಳ್ಳೆಯದು.